ಬೇತಾಳದ ಹಿಂದೆ ಬಿದ್ದ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್​​!

ಕಸ್ತೂರಿ ಜಗನ್ನಾಥ್ ಬೇತಾಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕಸ್ತೂರಿ ಜಗನ್ನಾಥ ಈ ಹಿಂದೆ ಸಮಾಗಮ ಹಾಗೂ ದೇವಯಾನಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದು ಮೂರನೇ ಚಿತ್ರ.

news18-kannada
Updated:September 14, 2020, 4:06 PM IST
ಬೇತಾಳದ ಹಿಂದೆ ಬಿದ್ದ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್​​!
ಸ್ಮೈಲ್ ಶಿವು-ಸೋನು ಪಾಟೀಲ್
  • Share this:
ಒಟಿಟಿ ಫ್ಲಾಟ್ ಫಾರಂನಲ್ಲಿ ಹಾರರ್ ಕಾಮಿಡಿ ಕಥಾಂಶಗಳು‌ ಇರೋ ಚಿತ್ರಗಳು ಹೆಚ್ಚಾಗಿ‌ ಕ್ಲಿಕ್ ಆಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಇಂತಹ ಚಿತ್ರಗಳ ತಯಾರಿಕೆ ಜಾಸ್ತಿಯಾಗಿದೆ. ಅದರಲ್ಲೂ ಹೊಸಬರು ಹಾರರ್ ಜಾನರ್ ನತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಅದಕ್ಕೆ ಮತ್ತೊಂದು ಸೇರ್ಪಡೆಯಾಗಿ ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ‘ಬೇತಾಳ’ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗುತ್ತಿದೆ. ಕಸ್ತೂರಿ ಜಗನ್ನಾಥ್ ಬೇತಾಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕಸ್ತೂರಿ ಜಗನ್ನಾಥ ಈ ಹಿಂದೆ ಸಮಾಗಮ ಹಾಗೂ ದೇವಯಾನಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದು ಮೂರನೇ ಚಿತ್ರ.

ನಿರ್ದೇಶಕರೇ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ನಾಯಕ ಶಿವು ಒಬ್ಬ ಸಾಪ್ಟ್ ವೇರ್ ಎಂಜಿನಿಯರ್, ತನ್ನ ಮನೆಯಲ್ಲಿ ಆಗಾಗ ಕೆಟ್ಟ ಕನಸುಗಳು ಬೀಳುತ್ತಿದ್ದವೆಂದು ಆತ ಮನೆ ಬದಲಿಸಲು ಮುಂದಾಗುತ್ತಾನೆ. ಆ ಹುಡುಕಾಟದಲ್ಲಿ ಆತನಿಗೆ ಕೊನೆಗೂ ಒಂದು ಮನೆ ಸಿಗುತ್ತದೆ. ಆ ಮನೆಗ ಬಂದ ನಂತರ ಅಲ್ಲೊಂದು ದೆವ್ವ ಇರುವುದು ಗೊತ್ತಾಗುತ್ತದೆ. ಆ ದೆವ್ವಕ್ಕೆ ಒಂದು ಆಸೆ ಇರುತ್ತದೆ, ಅದನ್ನು ಪೂರೈಸಿದರೆ ತಾನು ಮನೆ ಬಿಟ್ಟು ಹೋಗುವುದಾಗಿ ಶಿವುಗೆ ತಿಳಿಸುತ್ತದೆ. ಶಿವು ಅದರ ಆಸೆ ಪೂರೈಸಿದತ್ತಾನೋ  ಇಲ್ಲವೋ ಎನ್ನುವುದೇ ‘ಬೇತಾಳ’ ಚಿತ್ರದ ಒನ್‌ ಲೈನ್ ಕಥಾನಕವಂತೆ.

ಬಿಗ್‍ಬಾಸ್ ಖ್ಯಾತಿಯ ಸೋನು ಪಾಟೀಲ್


ಬಿಗ್‍ಬಾಸ್ ಖ್ಯಾತಿಯ ಸೋನು ಪಾಟೀಲ್


ನಾಯಕ ದೆವ್ವದ ಆಸೆ ಪೂರೈಸಲು ಏನೆಲ್ಲಾ ಕಸರತ್ತು ಮಾಡಿದ ಎಂಬುದನ್ನು ಹಾಸ್ಯಮಿಶ್ರಿತವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರಂತೆ. ಯುವನಟ ಸ್ಮೈಲ್ ಶಿವು ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರೆ, ಮತ್ತೊಬ್ಬ ನಟ ಅನಿಕ್ ಸೆಕೆಂಡ್ ಹೀರೋ ಆಗಿದ್ದಾರೆ. ಬಿಗ್‍ಬಾಸ್ ಖ್ಯಾತಿಯ ಸೋನು ಪಾಟೀಲ್ ಹಾಗೂ ಕಾವ್ಯಗೌಡ ಇಬ್ಬರು ನಾಯಕಿಯರಾಗಿ ಅಭಿನಯಿಸಿದ್ದಾರೆ.
Published by: Harshith AS
First published: September 14, 2020, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading