ರಸ್ತೆ ಬದಿಯಲ್ಲಿ ಸೊಪ್ಪು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ ಕನ್ನಡದ ಈ ಬಿಗ್​ ಬಾಸ್​ ಸ್ಪರ್ಧಿ!

ದಿವಾಕರ್​ ಅವರು ‘ಗುಲಾಲ್​​ ಡಾಟ್​​ ಕಾಂ‘ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಲಾಕ್​ಡೌನ್​ ನಂತರ ತೆರೆ ಮೇಲೆ ಬರಲಿದೆ. ಸದ್ಯ ಲಾಕ್​ಡೌನ್​ನಿಂದ ಸಮಯದಲ್ಲಿ ತರಕಾರಿ ಮಾರುವ ಕೆಲಸ ಮಾಡುತ್ತಿದ್ದಾರೆ.

news18-kannada
Updated:May 24, 2020, 9:50 PM IST
ರಸ್ತೆ ಬದಿಯಲ್ಲಿ ಸೊಪ್ಪು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ ಕನ್ನಡದ ಈ ಬಿಗ್​ ಬಾಸ್​ ಸ್ಪರ್ಧಿ!
ದಿವಾಕರ್​
  • Share this:
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​​ ಬಾಸ್​ ಸೀಸನ್​ 5ರಲ್ಲಿ ಕಾಮನ್​ ಮ್ಯಾನ್​​ ಆಗಿ ಕಾಣಿಸಿಕೊಂಡಿದ್ದ  ದಿವಾಕರ್​ ರಸ್ತೆ ಸದ್ಯ ಬದಿಯಲ್ಲಿ ಸೊಪ್ಪು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ದಿವಾಕರ್​ ಬಿಗ್​ ಬಾಸ್​ ಮನೆಗೆ ಕಾಲಿಟ್ಟ ನಂತರ ಅದರ ಜೀವನವೇ ಬದಲಾಯಿ ಹೋಯಿತು. ಹಲವಾರು ಸಿನಿಮಾಗಳಿಂದ ಆಫರ್​ ಕೂಡ ಬಂತು. ಕೆಲವು ಸಿನಿಮಾದಲ್ಲಿ ನಟನೆ ಕೂಡ ಮಾಡಿದ್ದಾರೆ. ಆದರೀಗ ಕೊರೋನಾ ಲಾಕ್​ಡೌನ್​ನಿಂದಾಗಿ ಸೊಪ್ಪುತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.

ಮೊದಲಿನಿಂದಲೂ ದಿವಾಕರ್​ ಸೇಲ್ಸ್​ ಮ್ಯಾನ್​ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ. ಬಿಗ್​ಬಾಸ್ ಮನೆಗೆ ಹೋದ ನಂತರ ಬಣ್ಣದ ಬದುಕಿನತ್ತ ಆಫರ್​ಗಳು ಬಂದವು. ಆದರೂ ದಿವಾಕರ್​ ತಮ್ಮ ವೃತ್ತಿಯನ್ನು ಮಾತ್ರ ಮರೆಯಲಿಲ್ಲ.

ಸದ್ಯ ಲಾಕ್​ಡೌನ್​ ಸಮಯದಲ್ಲಿ ಯಲಹಂಕ ಮಾರ್ಕೆಟ್​​ ಬಳಿ ಸೊಪ್ಪು ತರಕಾರಿ ಮಾರುತ್ತಿದ್ದಾರೆ. ಒಂದುವರೆ ತಿಂಗಳಿನಿಂದ ದಿವಾಕರ್​​ ಈ ವೃತ್ತಿಯನ್ನು ಮಾಡುತ್ತಿದ್ದಾರೆ. ಜೊತೆಗೆ ಕೊರೋನಾ ವಿರುದ್ಧ ಹೋರಾಡಲು ಜನರಿಗೆ ಅಗತ್ಯವಾಗಿ ಬೇಕಾಗಿರುವ ಮಾಸ್ಕ್​​ ಹಾಗೂ ಸ್ಯಾನಿಟೈಸರ್​​ ಮಾರಾಟವನ್ನು ಮಾಡುತ್ತಿದ್ದಾರೆ.

ದಿವಾಕರ್

ದಿವಾಕರ್​ ಅವರು ‘ಗುಲಾಲ್​​ ಡಾಟ್​​ ಕಾಂ‘ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಲಾಕ್​ಡೌನ್​ ನಂತರ ತೆರೆ ಮೇಲೆ ಬರಲಿದೆ. ಸದ್ಯ ಲಾಕ್​ಡೌನ್​ನಿಂದ ಸಮಯದಲ್ಲಿ ತರಕಾರಿ ಮಾರುವ ಕೆಲಸ ಮಾಡುತ್ತಿದ್ದಾರೆ.

ವಿಶ್ವವಿಖ್ಯಾತ ಅಂಬೇಗಾಲು ಕೃಷ್ಣನಿಗೂ ಕೊರೋನಾ ಕಂಟಕ; ಆದಾಯದಲ್ಲಿ ಭಾರೀ ಇಳಿಕೆ
First published: May 24, 2020, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading