• Home
 • »
 • News
 • »
 • entertainment
 • »
 • Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಗಂಡಸರ ಬಾತ್‌ ರೂಂ ಗಲಾಟೆ! ಅಮೂಲ್ಯ ವಿರುದ್ಧ ಪ್ರಶಾಂತ್ ಸಂಬರ್ಗಿ ಕಿಡಿ!

Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಗಂಡಸರ ಬಾತ್‌ ರೂಂ ಗಲಾಟೆ! ಅಮೂಲ್ಯ ವಿರುದ್ಧ ಪ್ರಶಾಂತ್ ಸಂಬರ್ಗಿ ಕಿಡಿ!

ಅಮೂಲ್ಯ ವಿರುದ್ಧ ಪ್ರಶಾಂತ್ ಸಂಬರ್ಗಿ ಕಿಡಿ

ಅಮೂಲ್ಯ ವಿರುದ್ಧ ಪ್ರಶಾಂತ್ ಸಂಬರ್ಗಿ ಕಿಡಿ

ಬಿಗ್ ಬಾಸ್ ಮನೆಯಲ್ಲಿ ಗಂಡಸರ ಬಾತ್‌ ರೂಂ ತೊಳೆಯುವ ವಿಚಾರಕ್ಕೆ ದೊಡ್ಡ ಕಿರಿಕ್ ನಡೆದಿದೆ. "ಗಂಡಸರ ಬಾತ್ ರೂಮ್ ತೊಳೆಯಲು ಯಾಕೆ ಮುಜುಗರ ಪಟ್ಟುಕೊಳ್ಳಬೇಕು? ನಾವು ಎಲ್ಲರ ಬಾತ್ ರೂಮ್ ತೊಳೆಯಲ್ವಾ?" ಎಂದು ಪ್ರಶಾಂತ್ ಸಂಬರ್ಗಿ ಕಿಡಿಕಾರಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಬಿಗ್ ಸೀಸನ್ 09 (Bigg Boss 09) ರಲ್ಲಿ 'ಸೂಪರ್ ಸಂಡೆ ವಿತ್ ಸುದೀಪ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ (Sudeep) ಅವರು ಮನೆಯವರಿಗೆಲ್ಲಾ, "ಇಲ್ಲಿ ಯಾರು ಕಾಳಜಿ ತೋರುತ್ತಾರೆ? ಯಾರು ಸ್ವಾರ್ಥಿಗಳು?" ಎಂದು ಪ್ರಶ್ನೆ ಕೇಳಿರುತ್ತಾರೆ. ಮನೆಯ ಸ್ಪರ್ಧಿಗಳೆಲ್ಲಾ ಯಾರು ತಮ್ಮನ್ನು ಕೇರ್ ಮಾಡ್ತಾರೆ. ಮನೆಯವರ ಬಗ್ಗೆ ಪ್ರೀತಿ ತೋರ್ತಾರೆ. ಯಾರು ಈ ಮನೆಯಲ್ಲಿ ಸ್ವಾರ್ಥಿಗಳು ಎಂದು ತಮ್ಮ ತಮ್ಮ ಅನಿಸಿಕೆ ಹೇಳಿದ್ದರು. ಅಮೂಲ್ಯ ಗೌಡ, ಕೇರ್ ಮಾಡುವವರು ರಾಕೇಶ್, ಸ್ವಾರ್ಥಿ ಆರ್ಯವರ್ಧನ್ ಗುರೂಜಿ ಎಂದು ಹೇಳಿದ್ದಾರೆ. ಗುರೂಜಿ ಊಟ ಕೊಡುವುದರಲ್ಲೂ ತಮ್ಮ ಸ್ವಾರ್ಥತನ ನೋಡ್ತಾರೆ ಎಂದು ಹೇಳಿದ್ದರು. ಅಮೂಲ್ಯ ಗೌಡ, ರಾಕೇಶ್ ಕೇರ್ ಮಾಡೋರು ಅನ್ನೋದಕ್ಕೆ ನೀಡಿದ ಕಾರಣ ಕೇಳಿ ಪ್ರಶಾಂತ್ ಸಂಬರ್ಗಿ ಶಾಕ್ ಆಗಿದ್ದಾರೆ.


  ಅಮೂಲ್ಯ ಗೌಡ ಹೇಳಿದ್ದೇನು?
  "ನಾನು ರಾಕಿಯನ್ನು ಕೇರಿಂಗ್ ವ್ಯಕ್ತಿ ಎಂದು ಹೇಳುತ್ತೇನೆ. ರಾಕಿ ಯಾವಾಗಲೂ ನನಗೆ ಬೆಂಬಲ ನೀಡುತ್ತಾನೆ. ನಾನು ಬೇಸದಲ್ಲಿ ಇದ್ದಾಗ ಸಮಾಧಾನ ಮಾಡ್ತಾನೆ. ಅಲ್ಲದೇ ನಾವು ಮೂವರೇ ಹುಡುಗಿಯರು ಬಾತ್ ರೂಂ ತೊಳೆಯೋದು ಇದ್ದಾಗ, ಗಂಡು ಮಕ್ಕಳ ಬಾತ್ ರೂಂ ಅನ್ನು ಅವನು ತೊಳೆದು ಕೊಟ್ಟಿರುತ್ತಾನೆ. ನಮಗೆ ಮುಜುಗರ ಆಗೋದು ಬೇಡ ಅಂತ" ಈ ಕಾರಣವನ್ನು ಅಮೂಲ್ಯ ಹೇಳಿದ್ದರು.


  ಪ್ರಶಾಂತ್ ಸಂಬರ್ಗಿ ಕಿಡಿ
  "ಗಂಡಸರ ಬಾತ್ ರೂಮ್ ತೊಳೆಯಲು ಯಾಕೆ ಮುಜುಗರ ಪಟ್ಟುಕೊಳ್ಳಬೇಕು? ನಾವು ಎಲ್ಲರ ಬಾತ್ ರೂಮ್ ತೊಳೆಯಲ್ವಾ?" ಎಂದು ಅರುಣ್ ಸಾಗರ್, ವಿನೋದ್, ರೂಪೇಶ್ ಶೆಟ್ಟಿ ಬಳಿ ಮಾತನಾಡುತ್ತಾರೆ. ಅದಕ್ಕೆ ಅರುಣ್ ಸಾಗರ್ ಅವರು "ವೀವ್, ಅದು ಬಿಟ್ಟು ಬಿಡು" ಎನ್ನುತ್ತಾರೆ. ವಿನೋದ್ ಕೆಲಸ ಅಂತ ಬಂದ್ರೆ ಎಲ್ಲಾ ಕೆಲಸವನ್ನೂ ಮಾಡಬೇಕು ಎಂದು ಹೇಳುತ್ತಾನೆ.


  ಇದನ್ನೂ ಓದಿ: Super Queen: ಅಪ್ಪ-ಅಮ್ಮ ಇಲ್ಲದ ಐಶ್ವರ್ಯ ಬಹಳ ಗಟ್ಟಿಗಿತ್ತಿ, ಸೂಪರ್ ಕ್ವೀನ್ ನಲ್ಲಿ ಸ್ಪರ್ಧಿ! 


  ರಾಕಿ ಬಳಿ ಪ್ರಶ್ನೆ ಮಾಡಿದ ಪ್ರಶಾಂತ್
  ಪ್ರಶಾಂತ್ ಸಂಬರ್ಗಿ ಅಷ್ಟಕ್ಕೆ ಬಿಡದೇ ರಾಕೇಶ್ ಬಳಿಯೂ ಹೋಗಿ ಪ್ರಶ್ನೆ ಮಾಡಿದ್ದಾರೆ. ಅವರು ಹೇಳಿದ್ರಾ ಬಾತ್ ರೂಮ್ ತೊಳೆಯೋಕೆ ಅಂತ ಕೇಳ್ತಾರೆ. ಇಲ್ಲ, ನಾನು ನಾನಾಗೇ ಹೋಗಿ ತೊಳೆದು ಕೊಟ್ಟಿದ್ದೆ ಎಂದು ಹೇಳ್ತಾರೆ. ಅವಳಿಗೆ ಗಂಡಸರ ಬಾತ್ ರೂಮ್ ತೊಳೆದ್ರೆ ಏನಾಗುತ್ತೆ ಎಂದು ಕಿಡಿಕಾರಿದ್ದಾರೆ.


  kannada bigg boss, prashanth sambargi talk about amulya gowda bathroom cleaning matter, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಅಮೂಲ್ಯ ವಿರುದ್ಧ ಪ್ರಶಾಂತ್ ಸಂಬರ್ಗಿ ಕಿಡಿ, ಗಂಡಸರ ಬಾತ್ ರೂಮ್ ತೊಳೆಯುವ ವಿಚಾರದಲ್ಲಿ ಕಿರಿಕ್!, kannada news, karnataka news,
  ಅಮೂಲ್ಯ


  ಅಮೂಲ್ಯ ಬಳಿ ರಾಕಿ ಪ್ರಶ್ನೆ
  ಪ್ರಶಾಂತ್ ಸಂಬರ್ಗಿ ಹೋದ ಮೇಲೆ ರಾಕೇಶ್, ಅಮೂಲ್ಯ ಬಳಿ ಅವತ್ತು ನೀನ್ ಏನು ಹೇಳಿದೆ ಅಂತ ಮತ್ತೊಮ್ಮೆ ಕೇಳ್ತಾನೆ. ನಾನು ನಮಗೆ ಮುಜುಗರ ಆಗಬಹುದು ಅಂತ ರಾಕಿ ಸಹಾಯ ಮಾಡಿದ ಅಂತ ಹೇಳಿದೆ ಎಂದು ಹೇಳ್ತಾಳೆ. ಪ್ರಶಾಂತ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ ಎಂದು ಅಮೂಲ್ಯಗೂ ಗೊತ್ತಾಯ್ತು.


  kannada bigg boss, prashanth sambargi talk about amulya gowda bathroom cleaning matter, bigg boss kannada, kannada bigg boss 9, bigg boss kannada season 9, bigg boss kannada 2022, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಅಮೂಲ್ಯ ವಿರುದ್ಧ ಪ್ರಶಾಂತ್ ಸಂಬರ್ಗಿ ಕಿಡಿ, ಗಂಡಸರ ಬಾತ್ ರೂಮ್ ತೊಳೆಯುವ ವಿಚಾರದಲ್ಲಿ ಕಿರಿಕ್!, kannada news, karnataka news,
  ಅಮೂಲ್ಯ


  ಬೇರೆಯವರು ಯಾರಿಗೆ ಕೇರ್ ಅಂದಿದ್ದರು?
  ಪ್ರಶಾಂತ್ ಸಂಬರ್ಗಿ ಕೇರ್ ಮಾಡುವವರು ಕಾವ್ಯಶ್ರೀ. ಆಕೆಗೆ ತಾಯಿ ಗುಣ ಇದೆ. ಆಕೆ ಎಲ್ಲರನ್ನೂ ಕೇರ್ ಮಾಡ್ತಾಳೆ ಎಂದು ಕಣ್ಣೀರು ಹಾಕಿದ್ದರು ರೂಪೇಶ್ ಶೆಟ್ಟಿ ಸ್ವಾರ್ಥಿ ಸುಮ್ಮನೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕೇರಿಂಗ್ ಅನ್ನೋ ಪದವೆ ಗೊತ್ತಿಲ್ಲ ಎಂದು ಹೇಳಿದ್ದರು.


  ಇದನ್ನೂ ಓದಿ: Bhagya Lakshmi: ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ! ಮಾಡದ ತಪ್ಪಿಗೆ ಶಿಕ್ಷೆ ಸರಿನಾ? 


  ದೀಪಿಕಾ ದಾಸ್ ಅವರು ಕೇರ್ ಮಾಡೋರು ಪ್ರಶಾಂತ್ ಸಂಬರ್ಗಿ. ಸ್ವಾರ್ಥಿ ರೂಪೇಶ್ ರಾಜಣ್ಣ. ರಾಜಣ್ಣ ತಮ್ಮ ಬಗ್ಗೆ ಕೆಲವರು ಹೊಗಳಬೇಕು ಎಂದು ನಿರೀಕ್ಷೆ ಮಾಡ್ತಾರೆ ಎಂದು ಹೇಳಿದ್ದರು. ಏನೂ ಮಾಡದೇ ಗುರುತಿಸಲಿ ಎಂದು ಯಾರು ಕೇಳಿಕೊಳ್ಳಲ್ಲ ಸರ್. ಏನಾದ್ರೂ ಮಾಡಿದಾಗ್ಲೇ ಆ ಪ್ರಶಂಸೆ ಸ್ವಲ್ಪನಾದ್ರೂ ಸಿಗಲಿ ಎಂದು ಕೇಳುವುದು ತಪ್ಪೇ ಎಂದು ರೂಪೇಶ್ ರಾಜಣ್ಣ ಸುದೀಪ್ ಬಳಿ ಹೇಳಿದ್ದರು.


  ಕಾವ್ಯಶ್ರೀ ಅವರು ಕೇರ್ ಮಾಡೋರು ಅರುಣ್ ಸಾಗರ್ ಎಂದಿದ್ದಾರೆ. ಸ್ವಾರ್ಥಿ ರೂಪೇಶ್ ರಾಜಣ್ಣ ಎಂದು ಹೇಳಿದ್ದಾರೆ. ಏನೇ ಹೇಳಿದ್ರೂ ಅವರು ಅದನ್ನು ಸ್ವೀಕರಿಸಲ್ಲ ಎಂದು ಎಂದು ಹೇಳಿದ್ದರು.

  Published by:Savitha Savitha
  First published: