ದಿವ್ಯಾ ಉರುಡುಗ (Divya Uruduga) ಅಂದಾಕ್ಷಣ ನೆನಪಾಗೋದು ಬಿಗ್ ಬಾಸ್ (Bigg Boss) ಕನ್ನಡ. ಅದರಲ್ಲೂ 2 ಸೀಸನ್ಗಳು ನೆನಪಾಗ್ತವೆ. ಬಿಗ್ ಬಾಸ್ ಸೀಸನ್ 08 ಮತ್ತು 09ರಲ್ಲಿ ದಿವ್ಯಾ ಉರುಡುಗ ಸ್ಪರ್ಧಿಯಾಗಿದ್ದರು. ಸೀಸನ್ 8 ರಲ್ಲಿ ಅರವಿಂದ್ ಕೆಪಿ (Aravind K P) ಜೊತೆ ಸದಾ ಇರುತ್ತಿದ್ರು. ಇಬ್ಬರು ಆತ್ಮೀಯರು. ಮದುವೆ (Marriage) ಆಗ್ತಾರೆ ಅನ್ನುವ ಸುದ್ದಿಗಳು ಹಬ್ಬಿವೆ. ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರು ಇಬ್ಬರು ಇದ್ದರು. ಬಿಗ್ ಬಾಸ್ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನ ಪ್ರಿಯತೆಯನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಇವರನ್ನು ಹೆಚ್ಚು ಜನರು ಫಾಲೋ ಮಾಡ್ತಾ ಇದ್ದಾರೆ. ದಿವ್ಯಾ ಉರುಡುಗ ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ಅವಿ ಅಲಿಯಾಸ್ ಅರವಿಂದ ಹುಟ್ಟು ಹಬ್ಬ (Birthday) ಆಚರಿಸಿದ್ದಾರೆ. ಅವಿಗಾಗಿ ಕವನ ಬರೆದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಅರವಿಂದ್ ಕೆಪಿ ಹುಟ್ಟುಹಬ್ಬ
ಡಿಸೆಂಬರ್ 8ಕ್ಕೆ ಬಿಗ್ ಬಾಸ್ ಸೀಸನ್ 8 ರ ರನ್ನರ್ ಅಪ್, ಬೈಕ್ ರೇಸರ್ ಅರವಿಂದ್ ಕೆ.ಪಿ ತಮ್ಮ ಬರ್ತ್ಡೇ ಆಚರಿಸಿಕೊಂಡಿದ್ದರು. ಆಗ ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಅದಕ್ಕೆ ಬಿಗ್ ಬಾಸ್ ನಿಂದ ಬಂದು ವಿಶೇಷವಾಗಿ ಅವಿ ಬರ್ತ್ಡೇ ಆಚರಿಸಿದ್ದಾರೆ. ಅಲ್ಲದೇ ಪ್ರೀತಿಯಿಂದ ಕವಿತೆ ಬರೆದಿದ್ದಾರೆ.
ದಿವ್ಯಾ ಉರುಡುಗ ಕವಿತೆ
ಕಡಲ ಅಲೆಯು ತನ್ನ ಕಾಂತಿ ತೆಯ್ದು ಸುರಿದು
ಬೀಸೋ ಗಾಳಿ ತನ್ನ ವೇಗ ಧಾರೆ ಎರೆದು
ಪ್ರಕೃತಿಯೆ ಪ್ರೀತಿಸುವ ಪುಣ್ಯದ ಸಿರಿ ನೀ
ದೇಶವೆ ಬೆನ್ ತಟ್ಟೋ ಭಾಗ್ಯದ ನಿಧಿ ನೀ
ನೀ ನಗುವಿಗೆ ನಾಯಕ
ಪ್ರೀತಿ ನಗರದ ಮಾಂತ್ರಿಕ
ಹೆತ್ತ ತಾಯಿ ಪುಣ್ಯ
ಜನ್ಮ ಭೂಮಿ ಧನ್ಯ
ನೀ ಕೋಟಿ ಮನಸಿಗೆ ಸ್ಫೂರ್ತಿ
ನೀ ಅರವಿಂದ್ ಕೆಪಿ
View this post on Instagram
ಈ ಕವಿತೆ ನಾನೇ ಬರೆದಿದ್ದು
ಬಿಗ್ ಬಾಸ್ ಸೀಸನ್ 09 ರಲ್ಲಿ ಕವಿತೆ ವಿಚಾರವಾಗಿ ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ಮಧ್ಯೆ ಜಗಳ ಆಗಿತ್ತು. ಆಗ ರಾಜಣ್ಣ ಸಾಂಗ್ ಬರೆಯಲು ನಾನು ಸಹಾಯ ಮಾಡಿದ್ದೆ, ಕ್ರೆಡಿಟ್ ಕೊಡಲಿಲ್ಲ ಎಂದಿದ್ದರು. ಆಗ ದಿವ್ಯಾಗೆ ಬೇಸರ ಆಗಿ ಕಣ್ಣೀರು ಹಾಕಿದ್ದರು. ಅದಕ್ಕೆ ಈಗ ಈ ಕವಿತೆಯನ್ನು ಅರವಿಂದ್ ಗಾಗಿ ನಾನೇ ಬರೆದಿದ್ದು. ಇದರ ಕ್ರೆಡಿಟ್ ನನಗೆ ಮಾತ್ರ ಸಲ್ಲಬೇಕು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bhagya Lakshmi: ಲಕ್ಷ್ಮಿ-ವೈಷ್ಣವ್ ಮದುವೆ ಮಾಡೋ ಹಠ, ದೇವರ ಮೊರೆ ಹೋದ ಕುಸುಮಾ!
ಬಿಗ್ ಬಾಸ್ ಸೀಸನ್ 09ರ 4ನೇ ರನ್ನರ್ ಅಪ್
ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಈ ಬಾರಿ ಬಿಗ್ ಬಾಸ್ ಸೀಸನ್ 08ರಷ್ಟು ಚೆನ್ನಾಗಿ ಆಡಿಲ್ಲ ಎಂಬುದು ಜನರ ಅಭಿಪ್ರಾಯ. ಆದ್ರೂ ಟಾಪ್ 5 ಗೆ ಬಂದಿದ್ದರು. 4ನೇ ರನ್ನರ್ ಅಪ್ ಆಗಿದ್ದಾರೆ. ಈ ಬಾರಿಯೂ ಗೆಲ್ಲುವ ಕನಸು ನನಸಾಗಿಲ್ಲ.
ದಿವ್ಯಾ ಉರುಡುಗ ಬಗ್ಗೆ ನಿಮಗೆಷ್ಟು ಗೊತ್ತು?
ದಿವ್ಯಾ ಉರುಡುಗ ಕಿರುತೆರೆಯಲ್ಲಿ ಕೆಲವು ಸೀರಿಯಲ್ಗಳಲ್ಲಿ ನಟಿಸಿದ್ದರು. ಬಳಿಕ `ಹುಲಿರಾಯ' ಚಿತ್ರದಿಂದ ಹಿರಿತೆರೆಗೆ ಜಂಪ್ ಆದರು. ಕಿರುತೆರೆಯಲ್ಲಿ ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಸೀರಿಯಲ್ಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಉದಯ ಟಿವಿಯಲ್ಲಿ ಪ್ರಸಾರವಾದ `ಸೂಪರ್ ಕಬ್ಬಡ್ಡಿ' ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ: Kannadathi: ಭುವಿಯನ್ನು ಕಾಪಾಡಿದ ಹರ್ಷ, ಮದುವೆಗೆ ಒಪ್ಪಿದ ವರು: ಮುಂದೇನು?
2017 ರಲ್ಲಿ ತೆರೆಕಂಡ ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಚಿತ್ರದಿಂದ ಸಿನಿಪಯಣ ಆರಂಭಿಸಿದ ದಿವ್ಯಾ ಈ ಚಿತ್ರದ ನಟನೆಗಾಗಿ ಸೈಮಾಗೆ ನಾಮ ನಿರ್ದೇಶನಗೊಂಡಿದ್ದರು. ರಾಜಕೀಯ ಆಧಾರಿತ ಧ್ವಜ ಮತ್ತು ಫೇಸ್ 2 ಪೇಸ್ ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದರೆ ದಿವ್ಯಾ ಸಿನಿ ಗ್ರಾಫ್ ಯಾಕೋ ಆರಕ್ಕೇರಲೇ ಇಲ್ಲ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ