Bigg Boss OTT: ಬಿಗ್​ ಬಾಸ್​ ಮನೆಯಿಂದ ಸ್ಪೂರ್ತಿ ಗೌಡ ಔಟ್, ಕಿರಿಕ್​ ಮಾಡುವವರಿಗೆ ಕಿಚ್ಚನ ಕ್ಲಾಸ್​​!

ಮೊದಲು ರಾಕೇಶ್ ಸೇಫ್ ಎಂದು ಸುದೀಪ್ ಘೋಷಿಸಿದರು. ನಂತರ ಆರ್ಯವರ್ಧನ್, ಸಾನ್ಯಾ, ಸೋಮಣ್ಣ, ನಂದಿನಿ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ, ಅಕ್ಷತಾ ಸೇಫ್ ಎಂದು ಸುದೀಪ್ ಘೋಷಿಸಿದರು. ಬಳಿಕ ಸ್ಫೂರ್ತಿ ಹೊರ ಹೋಗುತ್ತಿರುವ ಬಗ್ಗೆ ತಿಳಿಸಿದ್ರು.

ಸ್ಫೂರ್ತಿ ಗೌಡ

ಸ್ಫೂರ್ತಿ ಗೌಡ

  • Share this:
ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್ (Bigg Boss OTT)​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಎಲ್ಲೆಲ್ಲೂ ಬಿಗ್​​ ಬಾಸ್​ ಚರ್ಚೆಗಳು ಶುರುವಾಗಿದೆ.  ಎರಡನೇ ವಾರದ (2nd Week) ಎಲಿಮಿನೇಷನ್​ನಲ್ಲಿ (Elimination) ಸ್ಪೂರ್ತಿ ಗೌಡ ಹೊರ ಹೋಗಿದ್ದಾರೆ. ಈ ಬಾರಿ 9 ಸ್ಪರ್ಧಿಗಳು ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದರು . ಈ ಪೈಕಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು, ಅತಿ ಕಡಿಮೆ ವೋಟ್ ಪಡೆದು ಸ್ಫೂರ್ತಿ ಗೌಡ (Spoorthi Gowda) ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ಎರಡನೇ ಎಲಿಮಿನೇಷನ್ ಆಗಿದೆ.

ಗೇಮ್​ನಲ್ಲಿ ಪರ್ಫಾರ್ಮೆನ್ಸ್  ತೋರದ ಸೋನುಗೌಡ

ಈ ವಾರ ಸೋನು ಗೌಡ, ನಂದು, ಅಕ್ಷತಾ, ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್​ ಅಡಿಗ, ಆರ್ಯವರ್ಧನ್ ಗುರೂಜಿ ಮೇಲೆ ನಾಮಿನೇಟ್​ ಆಗಿದ್ರು. ಇವರಲ್ಲಿ ಎಲ್ಲರೂ ಟಾಸ್ಕ್​ನನ್ನು ಉತ್ತಮವಾಗಿ ಆಡಿದ್ರು. ಆದ್ರೆ ಸ್ಫೂರ್ತಿ ಗೌಡ ನೀಡಿದ ಪರ್ಫಾರ್ಮೆನ್ಸ್ ಕಡಿಮೆ ಹೀಗಾಗಿ ಅವರಿಗೆ ಹೆಚ್ಚು ವೋಟ್​ ಬಿದ್ದಿಲ್ಲ.

ಸ್ಪೂರ್ತಿ ಗೌಡಗೆ ಅತಿ ಕಡಿಮೆ ವೋಟ್​

ಮೊದಲು ರಾಕೇಶ್ ಸೇಫ್ ಎಂದು ಸುದೀಪ್ ಘೋಷಿಸಿದರು. ನಂತರ ಆರ್ಯವರ್ಧನ್, ಸಾನ್ಯಾ, ಸೋಮಣ್ಣ, ನಂದಿನಿ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ, ಅಕ್ಷತಾ ಸೇಫ್ ಎಂದು ಸುದೀಪ್ ಘೋಷಿಸಿದರು. ಬಳಿಕ ಸ್ಫೂರ್ತಿ ಹೊರ ಹೋಗುತ್ತಿರುವ ಬಗ್ಗೆ ತಿಳಿಸಿದ್ರು.

ಸೋನುಗೆ ಕಿಚ್ಚ ಸುದೀಪ್​ ಕ್ಲಾಸ್​

ಟಾಸ್ಕ್​ ವಿಚಾರದಲ್ಲಿ ನೀವು ತಪ್ಪು ಮಾಡಿದ್ರಿ ಎಂದು ಸುದೀಪ್​ ಹೇಳಿದ್ದಾರೆ. ನಿಮಗೆ ಆಟವಾಡಲು ಚಾನ್ಸ್​ ಸಿಕ್ಕಿದ್ರು ಬಳಸಿಕೊಳ್ಳಲಿಲ್ಲ ಯಾಕೆ? ಉದಾಸೀನಾ ತೋರಿದ್ರಿ ಎಂದು ಸುದೀಪ್​ ಕಿಡಿಕಾರಿದ್ರು.

Bigg Boss OTT 2022 Spoorthi Gowda gets emotional remembering her mothers death
ಸ್ಫೂರ್ತಿ ಗೌಡ


ಬಿಗ್​ ಬಾಸ್​ ಮನೆಯಿಂದ ಸ್ಪೂರ್ತಿ ಗೌಡ 

ಸ್ಫೂರ್ತಿ ಗೌಡ ಅವರು ಈ ವಾರದ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ತೋರಿಸಿಲ್ಲ. ಚಿಕ್ಕ ವಿಚಾರಕ್ಕೆ ದೊಡ್ಡದಾಗಿ ಕೂಗಾಡಿದ್ದರು. ಅಲ್ಲದೆ, ಬಿಗ್ ಬಾಸ್ ಮನೆಯಲ್ಲಿ ತಮಗೆ ಉಳಿದುಕೊಳ್ಳಲು ಆಸಕ್ತಿ ಇಲ್ಲ ಎಂಬುದನ್ನು ಪದೇಪದೇ ಹೇಳಿದ್ದರು. ಈ ವಿಚಾರಕ್ಕೆ ಅವರಿಗೆ ಕಡಿಮೆ ವೋಟ್ ಬಿದ್ದಿದೆ.

ಅರ್ಜುನ್​ ರಮೇಶ್​ ಸೇಫ್​

ಈ ಮಧ್ಯೆ ಕಳೆದ ವಾರ ಕ್ಯಾಪ್ಟನ್ ಆಗಿದ್ದ ಅರ್ಜುನ್ ರಮೇಶ್ (Arjun Ramesh) ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗ್ತಿತ್ತು.  ಟಾಸ್ಕ್​ ವೇಳೆ ಗಾಯಗೊಂಡಿದ್ದ ಅರ್ಜುನ್​ ರಮೇಶ್​, ಕೆಲ ದಿನಗಳಿಂದ ನೋವಿನಿಂದ ಬಳಲುತ್ತಿದ್ದಾರೆ. ಆದ್ರೆ ಅವರು ಕೂಡ ಸೇಪ್​ ಆಗಿದ್ದಾರೆ.

ಹೊಸ ಲುಕ್ ನಲ್ಲಿ ಸುದೀಪ್​

ಈ ವಾರ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಹೊಸ ರೀತಿಯಲ್ಲೇ ಕಾಣಿಸಿಕೊಂಡಿದ್ದಾರೆ. ಕ್ಲೀನ್ ಶೇವ್ ಮಾಡಿರೋ ಕಿಚ್ಚ ಸುದೀಪ್, ಇನ್ನಷ್ಟು ಯಂಗ್ ಅಂಡ್​ ಹ್ಯಾಂಡ್ಸಮ್​ ಆಗಿ ಕಾಣುತ್ತಿದ್ದಾರೆ. ಕ್ಲೀನ್ ಶೇವ್​ ಲುಕ್​ನಲ್ಲಿ ಸುದೀಪ್​ ವೇದಿಕೆ ಮೇಲಿರೋ ಫೋಟೋವನ್ನು ಕಲರ್ಸ್​ ಸೂಪರ್ ವಾಹಿನಿಯವರು ತಮ್ಮ ಫೇಸ್​ಬುಕ್ ಪೇಜ್​​ನಲ್ಲಿ ಹಾಕಿದ್ದಾರೆ.

ಅಭಿಮಾನಿಗಳು ಫಿದಾ

ಸುದೀಪ್​ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಕ್ಲೀನ್ ಶೇವ್ ಮಾಡಿಸಿಕೊಂಡಿರೋ ಸುದೀಪ್ ಮತ್ತಷ್ಟು ಯಂಗ್​​ ಆಗಿ ಕಾಣ್ತಿರೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೂಪರ್​ ಲುಕ್​, ಅಣ್ಣನ ಲುಕ್ ಸಖತ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bigg Boss OTT: ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ಸ್ಪರ್ಧಿಗಳ ಸರ್ಕಸ್, ಪ್ರೇಕ್ಷಕರಿಗೆ ಮಜವೋ ಮಜ!

ಹೊಸ ಚಿತ್ರಕ್ಕೆ ಕಿಚ್ಚನ ಹೊಸ ಗೆಟಪ್

ಸುದೀಪ್​ಗೆ ಇಷ್ಟು ದಿನ ಗಡ್ಡ ಇತ್ತು. ‘ವಿಕ್ರಾಂತ್ ರೋಣ’ ಸಿನಿಮಾದಲ್ಲೂ ಅವರಿಗೆ ಅದೇ ರೀತಿಯ ಲುಕ್ ಇತ್ತು. ಅದನ್ನೇ ಸುದೀಪ್ ಮುಂದುವರಿಸಿದ್ದರು. ಈಗ ಅವರು ಏಕಾಏಕಿ ಕ್ಲೀನ್​ ಶೇವ್ ಮಾಡಿಸಿದ್ದಾರೆ. ಕಿಚ್ಚನ ಹೊಸ ಗೆಟಪ್ ಫ್ಯಾನ್ಸ್​ಗೆ ಸಖತ್ ಖುಷಿ ನೀಡಿದೆ.
Published by:Pavana HS
First published: