Bigg Boss OTT-Shamita Shetty: ಬಿಗ್‌ಬಾಸ್‌ ಸ್ಪರ್ಧಿ ಬಳಿ ಮುತ್ತು ಕೇಳಿದ ಶಮಿತಾ ಶೆಟ್ಟಿ..!

ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್

ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್

  • Share this:
ಯಾವುದೇ ಭಾಷೆಯಾಗಿರಲಿ ಪ್ರತಿ ಬಿಗ್‌ಬಾಸ್‌ ಸೀಸನ್‌ನಲ್ಲಿ ಯಾವುದಾದರೊಂದು ಜೋಡಿ ಪ್ರೀತಿಯಲ್ಲಿ ಬಿದ್ದವರಂತೆ ಇರುತ್ತಾರೆ ಅಥವಾ ಯಾವಾಗಲೂ ಜೊತೆಯಲ್ಲಿರುತ್ತಾರೆ. ಈ ಕ್ಷಣಗಳನ್ನು ಪ್ರೇಕ್ಷಕರು ಸಹ ಕುತೂಹಲದಿಂದ ನೋಡುತ್ತಿರುತ್ತಾರೆ. ಇವರಿಬ್ಬರ ನಡುವೆ ನಿಜವಾಗಿಯೂ ಪ್ರೀತಿ ಮೂಡುತ್ತಾ ಎಂದು ತಿಳಿದುಕೊಳ್ಳುವ ಹಂಬಲವೂ ಕೆಲವರಲ್ಲಿರುತ್ತೆ. ಇದರ ಜತೆಗೆ ಡ್ರಾಮಾ, ಎಮೋಷನ್​, ಮನರಂಜನೆ ಮತ್ತು ಜಗಳಗಳಿಗೇನೂ ಕೊರತೆ ಇರುವುದಿಲ್ಲ. ಇದೇ ರೀತಿ ಬಿಗ್ ಬಾಸ್ (ಹಿಂದಿ) ಒಟಿಟಿ ಸಹ ತನ್ನ ಪ್ರೇಕ್ಷಕರನ್ನು ಈ ಕಾರಣಗಳಿಂದ ಸೆಳೆಯುತ್ತಿದೆ. ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ ಬಂಧನ ಪ್ರಕರಣದ ಬಳಿಕ ಬಿಗ್‌ ಮನೆಗೆ ಪ್ರವೇಶ ಪಡೆದಿರುವ ಶಿಲ್ಪಾ ಶೆಟ್ಟಿ ಸಹೋದರಿ ಹಾಗೂ ನಟಿ ಶಮಿತಾ ಶೆಟ್ಟಿ ಹಲವು ಕಾರಣಗಳಿಗೆ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೊಂದು ಶಮಿತಾ ಶೆಟ್ಟಿ ಮತ್ತು ಬಿಗ್‌ಬಾಸ್‌ ಸಹ ಸ್ಪರ್ಧಿ ರಾಕೇಶ್ ಬಾಪಟ್​ ಪ್ರತಿ ದಿನ ಕಳೆದಂತೆ ಇಬ್ಬರೂ ತುಂಬಾ ಹತ್ತಿರವಾಗುತ್ತಿರುವುದು. ಇದು ಬಿಗ್‌ಬಾಸ್‌ ಒಟಿಟಿ ಪ್ರೇಕ್ಷಕರು ಈ ಜೋಡಿಯ ಮೇಲೆ ಕಣ್ಣಿಡುವಂತೆ ಮಾಡಿದೆ.

ಈ ಜೋಡಿಗಳ ನಡುವೆ ಕೆಲವು ಮುದ್ದಾದ ಕ್ಷಣಗಳಿಗೆ ಅಭಿಮಾನಿಗಳು ಈಗಾಗಲೇ ಸಾಕ್ಷಿಯಾಗಿದ್ದರೆ. ಇತ್ತೀಚಿನ ಸಂಚಿಕೆಯಲ್ಲಿ ಇವರಿಬ್ಬರ ನಡುವೆ ಹಂಚಿಕೊಂಡ ಅಂತಹ ಇನ್ನೊಂದು ಕ್ಷಣದ ನೋಟವನ್ನು ನೀಡಿತು. ರಾಕೇಶ್ ಕಿಚನ್‌ನಲ್ಲಿ ಅಡುಗೆ ಬಿಸಿ ಮಾಡುತ್ತಿದ್ದಾಗ ಶಮಿತಾ ಶೆಟ್ಟಿ ರಾಕೇಶ್‌ಗೆ ಒಂದು ಸಲಹೆ ನೀಡಿದ್ದಾರೆ. ಅ ವೇಳೆ ರಾಕೇಶ್‌ ತನ್ನ ಕೈ ಹಿಂದೆ ಕಟ್ಟಿಕೊಂಡು ಇನ್ನೇನಾದರೂ ಇದೆಯಾ..? ( "ಔರ್ ಕುಚ್?" ) ಎಂದು ನಟಿ ಶಮಿತಾಗೆ ಕೇಳಿದ್ದಾರೆ.


ಆದರೆ, ರಾಕೇಶ್‌ ಅವರ ಆ ನಡವಳಿಕೆ ಶಮಿತಾಗೆ ಯಾಕೋ ಸರಿ ಹೋಗಲಿಲ್ಲ. ಅಲ್ಲದೆ, ನಿಮಗೆ ಏನಾದರೂ ಸಮಸ್ಯೆ ಇದ್ದರೆ, ನಾನು ಏನನ್ನೂ ಹೇಳುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಇದಕ್ಕೆ ಉತ್ತರಿಸಿದ ರಾಕೇಶ್‌, ಆ ರೀತಿ ಏನೂ ಇಲ್ಲ. ನಾನು ನಿಮ್ಮೊಂದಿಗೆ ತುಂಬಾ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದು, ಬೇರೆ ಯಾವುದನ್ನಾದರೂ ಪರಿಶೀಲಿಸಬೇಕೆಂದು ನೀವು ಬಯಸುತ್ತೀರಾ ಎಂದು ಕೇಳಿದೆ ಅಂತ ಸ್ಪಷ್ಟಪಡಿಸುತ್ತಾರೆ.

ಇದನ್ನೂ ಓದಿ: Janmashtami 2021: ಯಶೋಧೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಖ್ಯಾತಿಯ ನಟಿ ಸಪ್ತಾ ಪಾವೂರು

ಆದರೂ, ಶಮಿತಾ ಕೋಪದಿಂದ ರಾಕೇಶ್‌ ಅವರನ್ನು ನೋಡುತ್ತಾರೆ. ಆದರೆ, ನಂತರ ಆಕೆಯ ಮುಂದಿನ ಹೇಳಿಕೆಯು ಸ್ವತ: ರಾಕೇಶ್‌ಗೂ ಆಶ್ಚರ್ಯವನ್ನುಂಟು ಮಾಡಿತು. ಕಟ್ಟುನಿಟ್ಟಾದ ಸ್ವರ ಮತ್ತು ನೇರವಾಗಿ ಶಮಿತಾ ಶೆಟ್ಟಿ ರಾಕೇಶ್‌ಗೆ, ''ಇಲ್ಲಿಗೆ ಬಂದು ಈಗಲೇ ನನಗೆ ಒಂದು ಮುತ್ತು ಕೊಡು" ಎಂದು ಹೇಳುತ್ತಾರೆ.

ಆಕೆಯ ಬೇಡಿಕೆಯಿಂದ ರಾಕೇಶ್‌ಗೆ ಆಶ್ಚರ್ಯವಾಯಿತಾದರೂ, ಆಕೆಯ ಬಳಿಗೆ ಬಂದು ಶಮಿತಾ ಕೆನ್ನೆಯ ಮೇಲೆ ಒಂದು ಮುತ್ತು ಕೊಡುತ್ತಾರೆ. ಅಲ್ಲದೆ, "ಇದು ಶಾಶ್ವತವಾಗಿ" ಎಂದು ಮುತ್ತು ಕೊಟ್ಟ ಬಳಿಕ ರಾಕೇಶ್‌ ಹೇಳಿದರು. ಆದರೆ, ತಮ್ಮ ಬೇಡಿಕೆಗೆ ಸಮರ್ಥನೆ ನೀಡಿದ ಶಮಿತಾ, "ನೀವು ಮುದ್ದಾಗಿ ಕಾಣುತ್ತಿರುವುದೇ ಇದಕ್ಕೆ ಕಾರಣ" ಎಂದು ಹೇಳುತ್ತಾರೆ.

ಇದನ್ನೂ ಓದಿ: Drone Prathap: ಅಪೂರ್ವ ಸಂಗಮ: ತಮ್ಮ ಡ್ರೋನ್ ಪ್ರತಾಪನ ಭೇಟಿಯಾದ ಡ್ರೋನ್ ಪ್ರಥಮ್​..!

ವೂಟ್‌ನಲ್ಲಿ ಇತ್ತೀಚೆಗೆ ಈ ಸಂಚಿಕೆಯ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಲಾಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಮತ್ತಷ್ಟು ಆಶ್ಚರ್ಯರಾಗಿದ್ದಾರೆ ಹಾಗೂ ಹಲವರು ಇವರಿಬ್ಬರ ಕೆಮಿಸ್ಟ್ರಿಯನ್ನು ನೋಡುತ್ತಿದ್ದಾರೆ. ಇನ್ನು ಸಣ್ಣ ವಿಷಯಗಳಿಗೆ ಮಾತು ಬಿಡುವ ಈ ಜೋಡಿ ಅಷ್ಟೇ ಬೇಗನೆ ಮತ್ತೆ ಒಂದಾಗುತ್ತಾರೆ. ಇದೇ ಈ ಜೋಡಿಯ ವಿಷೇಶತೆ.
Published by:Anitha E
First published: