ಬಹು ನಿರೀಕ್ಷಿತ ಕಿರುತೆರೆಯ ರಿಯಾಲಿಟಿ ಷೋ ಹಿಂದಿ ಬಿಗ್ ಬಾಸ್ ಇನ್ನೇನು ಆರಂಭವಾಗಲಿದೆ. ಬಿಗ್ ಬಾಸ್ ಸೀಸನ್ 15 ಅನ್ನೂ ಸಹ ನಟ ಸಲ್ಮಾನ್ ಖಾನ್ ಅವರೇ ನಿರೂಪಣೆ ಮಾಡಲಿದ್ದಾರೆ. ಆಗಸ್ಟ್8ರಂದು ವೂಟ್ ಆ್ಯಪ್ನಲ್ಲಿ ಒಟಿಟಿ ಮೂಲಕ ಲಾಂಚ್ ಮಾಡಲು ಎಲ್ಲ ಸಿದ್ಧತೆ ನಡೆದಿದೆ. ಈ ಸಲ ಕಾರ್ಯಕ್ರಮದ ಪ್ರಸಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆಯಂತೆ. ಹೌದು, ಮೊದಲ ಆರು ವಾರಗಳ ಸಂಚಿಕೆಯನ್ನು ಒಟಿಟಿ ವೇದಿಕೆಯಲ್ಲಿ ಪ್ರಸಾರ ಮಾಡಲಾಗುವುದಂತೆ. ಇಲ್ಲಿಂದ ಸ್ಪರ್ಧಿಗಳು ಸಲ್ಮಾನ್ ಖಾನ್ ಅವರು ನಿರೂಪಣೆ ಮಾಡಲಿರುವ ಮುಖ್ಯ ಕಾರ್ಯಕ್ರಮಕ್ಕೆ ಎಂಟ್ರಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಈ ಸಲ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ನಟಿ ರಿಯಾ ಚಕ್ರವರ್ತಿಯಿಂದ ಹಿಡಿದು ಕಿರುತೆರೆ ನಟ ಅರ್ಜುನ್ ಬಿಜ್ಲಾನಿ ಅವರು ಇರಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಹಿಂದಿ ಬಿಗ್ ಬಾಸ್ ಸೀಸನ್ 15 ಅನ್ನು ಈ ಸಲ ಒಟಿಟಿ ವೇದಿಕೆ ಮೂಲಕ ಲಾಂಚ್ ಮಾಡಲಾಗುತ್ತಿದೆ. ಅದಕ್ಕಿಂತ ದೊಡ್ಡ ಬದಲಾವಣೆ ಎಂದರೆ, ಕಾರ್ಯಕ್ರಮದ ಮೊದಲ ಆರು ವಾರಗಳು ಒಟಿಟಿ ಮೂಲಕ ವೂಟ್ ಆ್ಯಪ್ನಲ್ಲಿ ಪ್ರಸಾರವಾಗಲಿದೆ. ಒಟಿಟಿಯಲ್ಲಿ ಈ ಕಾರ್ಯಕ್ರಮವನ್ನು ಬಾಲಿವುಡ್ನ ಮೂವಿ ಮೇಕರ್ ಕರಣ್ ಜೋಹರ್ ನಿರೂಪಣೆ ಮಾಡಲಿದ್ದಾರೆ.
ಹೌದು, ವೂಟ್ ಆ್ಯಪ್ನಲ್ಲಿ ಪರಸರವಾಗಲಿರುವ ಸಂಚಿಕೆಗಳನ್ನು ಕರಣ್ ಜೋಹರ್ ನಿರೂಪಣೆ ಮಾಡಲಿದ್ದಾರಂತೆ. ಈ ಸಲ ಒಟಿಟಿ ಪ್ರೇಕ್ಷಕರನ್ನು ಆಕರ್ಷಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ. ಇನ್ನು ತಾವು ನಿರೂಪಣೆ ಮಾಡುವ ಕುರಿತಾಗಿ ಖುದ್ದು ಕರಣ್ ಜೋಹರ್ ಅವರೇ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇದು ಅಮ್ಮನ ಕನಸು ನನಸಾಯಿತು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada Season 8: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಶುಭಾ ಪೂಂಜಾ: ಏನಿದು ಮಿಡ್ ವೀಕ್ ಟ್ವಿಸ್ಟ್..!
ಕರಣ್ ಜೋಹರ್ ಈಗಾಗಲೇ ಕಿರುತೆರೆಯಲ್ಲಿ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ. ಅಂತೆಯೇ ಈಗ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಇನ್ನು ಕರಣ್ ಜೋಹರ್ ಹಾಗೂ ಅವರ ತಾಯಿ ಬಿಗ್ ಬಾಸ್ ಕಾರ್ಯಕ್ರಮದ ಅಭಿಮಾನಿಗಳಂತೆ. ಒಂದೂ ದಿನವೂ ಅವರು ಮಿಸ್ ಮಾಡದೆ ಕಾರ್ಯಕ್ರಮ ನೋಡುತ್ತಾರಂತೆ. ಇದರಿಂದಾಗಿ ಕರಣ್ ಈ ಅವಕಾಶವನ್ನು ಬಿಟ್ಟು ಕೊಡಲು ಮನಸ್ಸಾಗಲಿಲ್ಲ ಎಂದು ಕರಣ್ ಜೋಹರ್ ಹೇಳಿಕೊಂಡಿದ್ದಾರೆ.
ಇನ್ನು ಹಿಂದಿ ಬಿಗ್ ಬಾಸ್ ಸೀಸನ್ 15ರಲ್ಲಿ ಸುಶಾಂತ್ ಸಿಂಗ್ ಗರ್ಲ್ ಫ್ರೆಂಢ್ ರಿಯಾ ಚಕ್ರವರ್ತಿ ಅವರು ಸಹ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಟಿಆರ್ಪಿ ಸಲುವಾಗಿ ರಿಯಾ ಚಕ್ರವರ್ತಿ ಅವರನ್ನು ಮನೆಗೆ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆಯಂತೆ. ಇನ್ನು ರಿಯಾ ಈ ಕಾರ್ಯಕ್ರಮಕ್ಕೆ ಬಂದರೆ ಸುಶಾಂತ್ ವಿಷಯದಲ್ಲಿ ತಮ್ಮ ಪರವಾದ ವಿಷಯಗಳನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಲಿದ್ದಾರಾ ರಿಯಾ ಎಂದು ಕಾದು ನೋಡಬೇಕಿದೆ. ರಿಯಾ ಚಕ್ರವರ್ತಿ ಹೊರತಾಗಿ ಇಂಡಿಯಲ್ ಐಡಲ್ ವಿನ್ನರ್ ಆಗಿದ್ದ ಗಾಯಕ ಅಬಿಜೀತ್ ಸಾವಂತ್ ದಿಶಾ ಪರ್ಮಾರ್, ದಿವ್ಯಾ ಅಗರ್ವಾಲ್ ಸೇರಿದಂತೆ ಇನ್ನು ಸಾಕಷ್ಟು ಮಂದಿಯ ಹೆಸರುಗಳು ಕೇಳಿ ಬರುತ್ತಿದೆ.
ಇದನ್ನೂ ಓದಿ: Bigg Boss Kannada Season 8: ನ್ಯಾಚುರಲ್ ಸ್ಟಾರ್ ಆಗಿ ಹೊರಹೊಮ್ಮಿದ ಪ್ರಶಾಂತ್ ಸಂಬರಗಿಗೆ ಸಿಕ್ತು ಕಿಚ್ಚನ ಚಪ್ಪಾಳೆ..!
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ