Bigg Boss OTT: ಉದಯ್ ಸೂರ್ಯ ಅವರ ತಬ್ಬಿಕೊಳ್ಳೋ ಅಭ್ಯಾಸದಿಂದ ಮನೆ ಮಂದಿ ಸುಸ್ತು!

Bigg Boss OTT Kannada: ಬಿಗ್​​ಬಾಸ್ ಮನೆಯೊಳಗೆ ಪ್ರತಿಬಾರಿಯೂ ಯಾವುದಾದರೂ ಒಬ್ಬ ಸ್ಪರ್ಧಿಯ ವರ್ತನೆ, ಸ್ವಭಾವ ಬಹಳ ವಿಚಿತ್ರ ಎಂದು ಸಹಸ್ಪರ್ಧಿಗಳಿಗೆ ಅನಿಸುವ ಸಂದರ್ಭಗಳಿರುತ್ತವೆ. ಈ ಬಾರಿಯ ಬಿಗ್​ಬಾಸ್ ಒಟಿಟಿಯಲ್ಲಿ ಉದಯ್ ಅವರದ್ದು ಹೆಚ್ಚೂ ಕಡಿಮೆ ಇದೇ ಕಥೆಯಾಗಿದೆ.

ಉದಯ್ ಸೂರ್ಯ

ಉದಯ್ ಸೂರ್ಯ

  • Share this:
ಬಿಗ್​ಬಾಸ್ (Bigg Boss) ಮನೆಯೊಳಗೆ ಇರುವಾಗ ಅಲ್ಲಿದ್ದವರ ಮಧ್ಯೆಯೇ ಫ್ರೆಂಡ್​ಶಿಪ್, ಲವ್, ಕ್ರಶ್ ಎಲ್ಲವೂ ಶುರುವಾಗುತ್ತದೆ. ಒಂದಷ್ಟು ಜನರ ಮಧ್ಯೆ ಕೋಪ, ದ್ವೇಷಗಳೂ ಬೆಳೆಯುತ್ತವೆ. ಆದರೆ ಬಿಗ್​ ಬಾಸ್ ಮನೆಯೊಳಗೆ ಕೆಲವರ ಹೆಚ್ಚು ಮಾತನಾಡುವ, ಹೆಚ್ಚು ಗದ್ದಲ ಮಾಡುವ, ಹೆಚ್ಚು ಹೊತ್ತು ಸ್ನಾನ ಮಾಡುವ, ಹೆಚ್ಚು ತಿನ್ನುವ ಇಂಥಹ ಕೆಲವು ಸ್ವಭಾವ ಇತರ ಸದಸ್ಯರಿಗೆ ಭಾರೀ ಸಮಸ್ಯೆ ತಂದೊಡ್ಡುತ್ತದೆ. ಇದೀಗ ಬಿಗ್​ಬಾಸ್ ಒಟಿಟಿ (Bigg Boss OTT) ಕನ್ನಡದಲ್ಲಿ ಉದಯ್ ಸೂರ್ಯ (Uday Surya) ಅವರ ತಬ್ಬಿಕೊಳ್ಳುವ ಸ್ವಭಾವದಿಂದ ಮನೆ ಮಂದಿ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಹುಡುಗಿಯರಂತೂ ಈ ಹಗ್ಗಿಂಗ್ (Hugging) ಹುಡುಗನ ಕಾಟಕ್ಕೆ ಬೇಸತ್ತಿದ್ದಾರೆ.

ಉದಯ್ ಸೂರ್ಯ ಅವರು ಬಿಗ್ ಬಾಸ್ ಕನ್ನಡ ಒಟಿಟಿ ಶೋ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಾಗಿನಿಂದಲೂ ಹೆಚ್ಚೇನೂ ಮಾತನಾಡುಲ್ಲ. ಆರ್ಯವರ್ಧನ್ ಗುರೂಜಿ ಜೊತೆ ಆಟದ ವಿಚಾರವಾಗಿ ಅವರು ಕೂಗಾಡಿದ್ದನ್ನು ಬಿಟ್ಟರೆ ಬೇರೆ ಯಾವ ರೀತಿಯಲ್ಲಿಯೂ ಅವರು ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗಿಲ್ಲ. ಉದಯ್ ಬಗ್ಗೆ ಅಷ್ಟಾಗಿ ಯಾರೂ ಕೂಡ ಮಾತನಾಡಲ್ಲ. ಆದರೆ ಉದಯ್ ವರ್ತನೆ ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳಿಗೆ ಕಿರಿ ಆಗಿದೆ. ಇದನ್ನು ಅವರು ವ್ಯಕ್ತಪಡಿಸಿದ್ದಾರೆ ಕೂಡಾ.

ಹಗ್ ಮಾಡಿದಾಗ ಕಿರಿಕಿರಿ

ಉದಯ್ ಅವರು ಅಕ್ಷತಾ ಅವರನ್ನು ಫ್ರೆಂಡ್ಲೀ ಆಗಿ ತಬ್ಬಿಕೊಂಡಿದ್ದರು. ಇದು ಅಕ್ಷತಾಗೆ ಇಷ್ಟ ಆಗಿಲ್ಲ. ನಮ್ಮನ್ನು ಬೇರೆಯವರು ಬೇರೆ ತರ ನೋಡೋದು ನಂಗೆ ಇಷ್ಟ ಆಗಲ್ಲ. ಪ್ಲೀಸ್ ಈ ರೀತಿ ಮಾಡಬೇಡಿ ಎಂದು ಅಕ್ಷತಾ ಅವರು ಉದಯ್‌ಗೆ ಹೇಳಿದ್ದಾರೆ. ಉದಯ್ ಕೂಡ ಅಕ್ಷತಾ ಮಾತಿಗೆ ಓಕೆ ಎಂದು ಹೇಳಿದ್ದಾರೆ ಕೂಡಾ.

ಆದರೂ ಈ ಅಪ್ಪಿಕೊಳ್ಳುವ ಚರ್ಚೆ ಮಾತ್ರ ಜೋರಾಗಿದೆ. ಉದಯ್ ಸೂರ್ಯ ಅವರ ಫ್ರೆಂಡ್ಲೀ ಹಗ್​ನಿಂದ ಮನೆ ಮಂದಿಗೆ ನಿಜಕ್ಕೂ ಕಿರಿಕಿರಿಯಾಗುತ್ತಿದ್ದು ಈ ಬಗ್ಗೆ ಒಂದಿಬ್ಬರು ಮಾತನಾಡಿಕೊಂಡಿದ್ದಾರೆ ಕೂಡಾ.

ಇದನ್ನೂ ಓದಿ: Bigg Boss OTT: ಮನೆಯೊಳಗೆ ಫ್ಲರ್ಟ್ ಮಾಡೋ ರಾಕೇಶ್, 7 ವರ್ಷ ಮದ್ವೆಯಾಗಲ್ಲ ಎಂದ ಸೋನು ಶ್ರೀನಿವಾಸ್ ಗೌಡ

ಸಾನ್ಯಾ ಅಯ್ಯರ್, ನಂದಿನಿ ಕೂಡ ಉದಯ್ ಬಗ್ಗೆ ಮಾತನಾಡಿಕೊಂಡಿದ್ದಾರೆ. ಉದಯ್ ಬಂದು ಹಗ್ ಮಾಡೋದು, ಕಿವಿ ಹತ್ರ ಕಿಸ್ ಮಾಡೋದು ಇಷ್ಟ ಆಗಲ್ಲ ಅಂತ ಸಾನ್ಯಾ ಹೇಳಿದರೆ, ಜಶ್ವಂತ್ ಮುಂದೆ ಬಂದು ಹಗ್ ಮಾಡೋದು ನನಗೆ ಸರಿ ಕಾಣುತ್ತಿಲ್ಲ, ಸುಮಾರು ಸಲ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ. ಉದಯ್‌ ಜೊತೆ ಈ ಬಗ್ಗೆ ನೇರವಾಗಿ ಮಾತನಾಡುತ್ತೇನೆ ಎಂದು ಸಾನ್ಯಾ ಕೂಡ ಹೇಳಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರೇ ಹೈಲೈಟ್

ಸೋನು ಶ್ರೀನಿವಾಸ್ ​ಗೌಡ ಬಿಗ್ ಬಾಸ್ ಮನೆಯಲ್ಲಿ ಸಖತ್ ಹೈಲೈಟ್ ಆಗುತ್ತಿದ್ದಾರೆ. ಅವರು ಕೆಲ ವಿಚಾರಕ್ಕೆ ಈಗಲೂ ಟ್ರೋಲ್ ಆಗುತ್ತಿದ್ದಾರೆ. ರಾಕೇಶ್ ಜೊತೆ ಫ್ರೆಂಡ್ಲೀಯಾಗಿ ಜಾಲಿಯಾಗಿದ್ದಾರೆ. ಅವರು ಸಣ್ಣ ಮಕ್ಕಳಂತೆ ಆಡುತ್ತಾರೆ ಎಂಬುದು ಹಲವರ ಆರೋಪ.

ಇದನ್ನೂ ಓದಿ: Salman Khan Bigg Boss 16: ಸಲ್ಲೂ ಭಾಯ್​ಗೆ ಸಾವಿರ ಕೋಟಿ! ಬಿಗ್​ಬಾಸ್ ಈ ಬಾರಿಯ ಸೀಸನ್​ಗೆ ಭರ್ಜರಿ ಸಂಭಾವನೆ

ಆದರೆ ಇದನ್ನು ಸಾಮಾನ್ಯವಾಗಿ ಸ್ವೀಕರಿಸಿದ ಕೆಲವರಿಂದ ಅವರಿಗೆ ಬೆಂಬಲ ಕೂಡಾ ಸಿಗುತ್ತಿದೆ. ಈಗ ಸೋನು ಅವರು ಮದುವೆ ವಿಚಾರ ಮಾತನಾಡಿದ್ದಾರೆ. ಮುಂದಿನ ಆರೇಳು ವರ್ಷ ಮದುವೆ ಆಗುವುದಿಲ್ಲ ಎಂಬುದನ್ನು ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರ ಕೇಳಿ ಸ್ಫೂರ್ತಿ ಗೌಡ ಅವರು ನಕ್ಕಿದ್ದಾರೆ.

ಸೋನು ಫ್ರೆಂಡ್ ರೀತಿಯೇ ಇದ್ದಾರಂತೆ ರಾಕೇಶ್

‘ನಿನಗೆ ರಾಕೇಶ್ ಮೇಲೆ ಪ್ರೀತಿ ಇದೆಯಾ’ ಎಂದು ಸೋನುಗೆ ಸ್ಫೂರ್ತಿ ಪ್ರಶ್ನೆ ಮಾಡಿದರು. ಇದಕ್ಕೆ ಸೋನು ನೇರವಾಗಿ ಉತ್ತರಿಸಿದರು. ‘ರಾಕೇಶ್ ಒಳ್ಳೆಯ ಗೆಳೆಯ. ಹಾಗಂತ ನಾನು ಅವನ ಜತೆ ಟೈಮ್​ಪಾಸ್ ಮಾಡುತ್ತಿಲ್ಲ. ನನಗೆ ಒಬ್ಬ ಫ್ರೆಂಡ್ ಇದ್ದಾನೆ. ಅವನ ರೀತಿಯೇ ರಾಕೇಶ್​ ಕಾಣುತ್ತಿದ್ದಾನೆ. ಹೀಗಾಗಿ ಅವನ ಜತೆ ಕ್ಲೋಸ್ ಆಗಿದ್ದೀನಿ. ನಾನು ಇಷ್ಟು ಬೇಗ ಮದುವೆ ಆಗಲ್ಲ. ಇನ್ನೂ ಏಳು ವರ್ಷ ವಿವಾಹ ಆಗಲ್ಲ. ನಾನು ಇಂಡಸ್ಟ್ರೀಲಿ ಬೆಳೆಯಬೇಕು’ ಎಂದರು ಸೋನು.
Published by:Divya D
First published: