Bigg Boss OTT: ಕಿಚ್ಚನ ಮುಂದೆಯೇ ಜಂಬ ತೋರಿದ ಸೋನು ಗೌಡ! ನಗುಮುಖದಲ್ಲೇ ಖಡಕ್​ ವಾರ್ನಿಂಗ್​ ಕೊಟ್ಟ ಸುದೀಪ್

ಕಿಚ್ಚನ ಪ್ರಶ್ನೆಗೆ ಉತ್ತರಿಸಿದ ಸಾನಿಯಾ ಹೌದು ಸರ್, ಸೋನು ಗೌಡ ಆರ್ಯವರ್ಧನ ಅವರ ಅಸಿಸ್ಟೆಂಟ್ ರೀತಿಯಲ್ಲಿ ಇದ್ದಾರೆ ಎಂದು ಹೇಳಿದರು. ಇಷ್ಟಕ್ಕೆ ಕೋಪಗೊಂಡ ಸೋನು ಹೇಯ್​ ಆ ರೀತಿ ಹೇಳಬೇಡ, ನನಗೆ ಇಷ್ಟವಾಗುವುದಿಲ್ಲ ಎಂದು ಜಂಬ ತೋರಿದ್ದಾರೆ.

ಸೋನು ಗೌಡ, ಕಿಚ್ಚ ಸುದೀಪ್​

ಸೋನು ಗೌಡ, ಕಿಚ್ಚ ಸುದೀಪ್​

  • Share this:
ಒಂದೇ ಮನೇಲಿ ದೊಡ್ಡ ದೊಡ್ಡ ಮಂದಿ ಅಡ್ಡಡ್ಡ ಉದ್ದುದ್ದ ಮಲಗವ್ರೆ, ನೋಡೋವ್ರು ನೀವು, ಆಡವ್ರು ಅವ್ರು. ಊರೆಲ್ಲಾ ಕ್ಯಾಮರಾ ಮಡಗ್ವರೆ. ಬಿಗ್​ಬಾಸ್​ (Big Boss) ಮತ್ತೆ ಶುರುವಾಗಿದೆ. ಆದರೆ, ಈ ಬಾರಿ ಕೊಂಚ ವಿಭಿನ್ನ. ಈ  ಬಾರಿ ಬಿಗ್​ಬಾಸ್​ ಟಿವಿಯಲ್ಲಿ ಪ್ರಸಾರವಾಗುತ್ತಿಲ್ಲ. ಬದಲಾಗಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. OTTಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್​ (Bigg Boss OTT)  ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್​ ಬಾಸ್ (Bigg Boss Contestant)​ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ ಕುರಿತ ಚರ್ಚೆಗಳು ಹೆಚ್ಚಾಗಿದೆ. ಆರ್ಯವರ್ಧನ್ (Aryavardhan Guruji)​ ಗುರೂಜಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮೊದಲ ವಾರವೇ ಕಿರಣ ಎಲಿಮನೆಟ್ (Elimanate)​ ಆಗಿ ಹೊರ ನಡೆದಿದ್ದಾರೆ. 

ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸಿಕ್ಕಾಪಟ್ಟೆ ಕ್ಲಾಸ್​!


ಬಿಗ್​ಬಾಸ್​ ಒಟಿಟಿ ಸೀಸನ್​ ಶುರುವಾಗಿ ಇಂದಿಗೆ ಒಂಬತ್ತನೇ ದಿನ. ವಾರದ ಕಥೆ ಕಿಚ್ಚ ಜೊತೆ ಮೊದಲ ವಾರರದ ಕಾರ್ಯಕ್ರಮ ಕೂಡ ಸೂಪರ್ ಆಗಿ ಮೂಡಿಬಂದಿತ್ತು. ಶನಿವಾರ ಕಿರಣ ಯೋಗೇಶ್ವರ್​ ಬಿಗ್​ ಬಾಸ್​ ಮನೆಯಿಂದ  ಹೊರನಡೆದರು. ಸೂಪರ್​ ಸಂಡೇ ವಿತ್​ ಕಿಚ್ಚ ಕಾರ್ಯಕ್ರಮ ನಡೀತು. ಮನೆಯವರೊಂದಿಗೆ ಕಿಚ್ಚ ಸುದೀಪ್​ ಮಾತನಾಡಿದರು. ಭಾನುವಾರ ಕಿಚ್ಚ ಎಲ್ಲರ ಅಭಿಪ್ರಾಯ ಪಡೆದುಕೊಂಡರು. ಈ ವೇಳೆ ಕಿಚ್ಚನ ಮುಂದೆಯೇ ಖಾರವಾಗಿ ಮಾತನಾಡಿದ  ಸೋನು ಶ್ರೀನಿವಾಸ್​ ಗೌಡ ರವರಿಗೆ ನಗುಮುಖದಲ್ಲೇ ಅವರಿಗೆ ಕ್ಲಾಸ್​ ತೆಗೆದುಕೊಂಡರು. ಕೊನೆಗೂ ತನ್ನನ್ನು ಸಮರ್ಥಿಸಿಕೊಂಡು ಜಂಭ ತೋರಿದ್ದಾರೆ.

ಸೋನು ಶ್ರೀನಿವಾಸ್​ ಗೌಡ


ನಗುಮುಖದಲ್ಲೇ ಕ್ಲಾಸ್​ ತೆಗೆದುಕೊಂಡ ಕಿಚ್ಚ!

ಕಿಚ್ಚ ಸುದೀಪ್​  ಹೌದು ಅಥವಾ ಇಲ್ಲ ಎಂಬ ಆಟವನ್ನು ಮನೆಯ ಸದಸ್ಯರಿಗೆ ನೀಡಿದ್ದರು. ಈ ವೇಳೆ ಮನೆಯ ಎಲ್ಲ ಸದಸ್ಯರು ಆರ್ಯವರ್ಧನ್​ ಅವರ ಕಾಲೆಳೆದರು. ಸೋನು ಶ್ರೀನಿವಾಸ ಗೌಡ ಕೂಡ ಸುದೀಪ್​ ಸರ್​ ಎನ್ನುತ್ತಾ ಸಖತ್​ ಮಜಾ ಮಾಡಿದರು. ಇದೇ ವೇಳೆ ಸುದೀಪ್​ ಅವರು ಸೋನು ಗೌಡ ಅವರ ಬಗ್ಗೆ ಮನೆಯ ಸದಸ್ಯರಿಗೆ ಪ್ರಶ್ನೆ ಕೇಳಿದರು. ಸೋನು ಗೌಡ ಕೂಡ ಆರ್ಯವರ್ಧನ್​ ಅವರ ರೀತಿಯಲ್ಲೇ ಮಾತನಾಡುವ ಮತ್ಯಾವುದೋ ವಿಚಾರಕ್ಕೆ ಹೋಗುತ್ತಾರೆ. ಎಂದು ಕಿಚ್ಚ ಕೇಳಿದರು. ಇದಕ್ಕೆ ಮನೆಯ ಸದಸ್ಯರೆಲ್ಲ ಹೌದು ಎಂಬ ಬೋರ್ಡ್​ ಹಿಡಿದುಕೊಂಡರು.

ಸೋನು, ಕಿಚ್ಚ ಸುದೀಪ್​


ಇದನ್ನೂ ಓದಿ: ರೂಪೇಶ್ ಬರ್ತ​ಡೇಗೆ ಸಾನ್ಯಾ ಕೊಟ್ರು ಸರ್ಪ್ರೈಸ್ ಗಿಫ್ಟ್; ತುಳು ನಟನ ಹಾರ್ಟ್​ನಲ್ಲಿ ತಕಧಿಮಿತ

ಸುದೀಪ್​ ಮುಂದೆಯೇ ಜಂಬ ತೋರಿದ ಸೋನು ಗೌಡ!

ಈ ಪ್ರಶ್ನೆಗೆ ಉತ್ತರಿಸಿದ ಸಾನಿಯಾ ಹೌದು ಸರ್, ಸೋನು ಗೌಡ ಆರ್ಯವರ್ಧನ ಅವರ ಅಸಿಸ್ಟೆಂಟ್ ರೀತಿಯಲ್ಲಿ ಇದ್ದಾರೆ ಎಂದು ಹೇಳಿದರು. ಇಷ್ಟಕ್ಕೆ ಕೋಪಗೊಂಡ ಸೋನು ಹೇಯ್​ ಆ ರೀತಿ ಹೇಳಬೇಡ, ನನಗೆ ಇಷ್ಟವಾಗುವುದಿಲ್ಲ ಎಂದು ಜಂಬ ತೋರಿದ್ದಾರೆ. ರೂಪೇಶ್​ ಮೇಲೂ ಕೂಡ ಕೋಪಗೊಂಡಿದ್ದಾರೆ. ಇದನೆಲ್ಲಾ ಗಮನಿಸಿದ ಕಿಚ್ಚ ಸುದೀಪ್​ ಸರಿಯಾಗಿ ಸೋನು ಗೌಡ ಅವರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಕಿಚ್ಚ ಸುದೀಪ್​, ಸೋನು ಗೌಡ


ಇದನ್ನೂ ಓದಿ: ರಾಕೇಶ್ ನನ್ನ ಗಂಡ ಎಂದ ಸ್ಫೂರ್ತಿ ಹಳೆ ಫೋಟೋ ವೈರಲ್​, ಇಷ್ಟ್ ದಿನ ಎಲ್ಲಿದ್ರಿ ಎಂದ ಪಡ್ಡೆ ಹೈಕ್ಳು!

ಮನೆಯವರೆಲ್ಲ ಸಾರಿ ಕೇಳಿದ್ರೂ, ಸೋನು ಕೇಳಿಲ್ಲ!

ಇನ್ನೂ ಮಾತು ಮುಗಿದ ಬಳಿಕ ಕಿಚ್ಚ, ನೋಡಿ ಸೋನು ಗೌಡ ಅವರೇ ಎಲ್ಲರಿಗೂ ನೀವು ಕಾಲೆಳೆಯುತ್ತಿದ್ದೀರಾ.  ಆದರೆ, ನಿಮ್ಮ ವಿಚಾರಕ್ಕೆ ಬಂದರೆ ಮಾತ್ರ ಎಲ್ಲರಿಗೂ ಬೈಯುತ್ತಿದ್ದೀರಾ. ಆರ್ಯವರ್ಧನ್​ ಅವರನ್ನು ನೋಡಿ ನೀವು ಸ್ವಲ್ಪ ಕಲಿತುಕೊಳ್ಳಿ. ಎಲ್ಲರಿಗೂ ಕಾಮಿಡಿ ಮಾಡುವ ನೀವು, ನಿಮ್ಮ ವಿಚಾರಕ್ಕೆ ಬಂದ ಕೂಡಲೇ ಈ ರೀತಿ ವರ್ತಿಸುವುದು ಸರಿಯಿಲ್ಲ. ಇದು ಒಳ್ಳೆಯ ಗುಡಣ
Published by:Vasudeva M
First published: