• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bigg Boss OTT: ಬಿಗ್​ ಬಾಸ್​ ಮನೆಗೆ ಸರ್​ಪ್ರೈಸ್ ಎಂಟ್ರಿ ಕೊಟ್ಟ ಪತ್ರಕರ್ತ ಸೋಮಣ್ಣ ಮಾಚಿಮಾಡ

Bigg Boss OTT: ಬಿಗ್​ ಬಾಸ್​ ಮನೆಗೆ ಸರ್​ಪ್ರೈಸ್ ಎಂಟ್ರಿ ಕೊಟ್ಟ ಪತ್ರಕರ್ತ ಸೋಮಣ್ಣ ಮಾಚಿಮಾಡ

ಸೋಮಣ್ಣ ಮಾಚಿಮಾಡ

ಸೋಮಣ್ಣ ಮಾಚಿಮಾಡ

ಬಿಗ್​ ಬಾಸ್​ ಒಟಿಟಿ ಕೊನೆಯ ಸ್ಪರ್ಧಿಯಾಗಿ ಪತ್ರಕರ್ತ ಸೋಮಣ್ಣ ಮಾಚಿಮಾಡ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಮಾಧ್ಯಮ ಲೋಕದ ಮೂಲಕ ಎಚ್ಚರಿಗೂ ಚಿರಪರಿಚಿತರಾಗಿದ್ದ ಸೋಮಣ್ಣ ಅವರು, ಇದೀಗ ಬಿಗ್​ ಬಾಸ್​ಗೆ ಹೋಗಿದ್ದು, ಪ್ರೇಕ್ಷಕರಲ್ಲಿ ಸಖತ್​ ಕ್ರೇಜ್​ ಹೆಚ್ಚಿಸಿದೆ.

  • Share this:

‘ಬಿಗ್ ಬಾಸ್​ ಒಟಿಟಿ’ (Bigg Boss OTT) ಭರ್ಜರಿಯಾಗಿ ಆರಂಭವಾಗಿದ್ದು, ವಿಭಿನ್ನ ಪ್ರತಿಭೆಗಳು ಮನೆಯೊಳಗೆ ಲಾಕ್​ ಆಗುತ್ತಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Big Boss OTT) ಈ ಬಾರಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗಲಿದೆ. ಅಂತೆಯೇ ಬಿಗ್​ ಬಾಸ್​ ಒಟಿಟಿ ಕೊನೆಯ ಸ್ಪರ್ಧಿಯಾಗಿ ಪತ್ರಕರ್ತ ಸೋಮಣ್ಣ ಮಾಚಿಮಾಡ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಮಾಧ್ಯಮ ಲೋಕದ ಮೂಲಕ ಎಚ್ಚರಿಗೂ ಚಿರಪರಿಚಿತರಾಗಿದ್ದ ಸೋಮಣ್ಣ ಮಾಚಿಮಾಡ ಅವರು, ಇದೀಗ ಬಿಗ್​ ಬಾಸ್​ಗೆ ಹೋಗಿದ್ದು, ಪ್ರೇಕ್ಷಕರಲ್ಲಿ ಸಖತ್​ ಕ್ರೇಜ್​ ಹೆಚ್ಚಿಸಿದೆ. ಈಗಾಗಲೇ ಎಲ್ಲಾ ಸ್ಪರ್ಧಿಗಳು ಬಿಗ್​ ಬಾಸ್​ ಹೌಸ್​ ನಲ್ಲಿ ಹೋಗಿ ಲಾಖ್​ ಆಗಿದ್ದು, ನಾಳೆಯಿಂದ ಅಸಲಿ ಆಟ ಆರಂಭವಾಗಲಿದೆ.


ಬಿಗ್​ ಬಾಸ್​ ಮನೆಗೆ ಸರ್​ಪ್ರೈಸ್​ ಎಂಟ್ರಿ ಕೊಟ್ಟ ಸೋಮಣ್ಣ:


ದಶಕಗಳಿಂದ ಕನ್ನಡ ಮಾಧ್ಯಮದಲ್ಲಿ ಚಿರಪರಿಚಿತರಾಗಿರುವ ಕೊಡಗು ಮೂಲದ ಸೋಮಣ್ಣ ಮಾಚಿಮಾಡ ಮೈಸೂರಿನಲ್ಲಿ ಪತ್ರಿಕೋದ್ಯಮ ಪ್ರಾರಂಭಿಸಿ ನಂತರ ಅನೇಕ ಕನ್ನಡದ ಪ್ರತಿಷ್ಠಿತ ಸುದ್ದಿ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ರಾಜಕಾರಣಿಗಳು, ಸಿನಿಮಾ ತಾರೆಯರು ಸಂದರ್ಶನದಲ್ಲಿ ಸೋಮಣ್ಣ ಅವರು ಪ್ರಮುಖವಾಗಿ ನಿಲ್ಲುತ್ತಾರೆ. ಇಂತಹ ಓರ್ವ ಪತ್ರಕರ್ತ ಇದೀಗ ಬಿಗ್​ ಬಾಸ್​ ಒಟಿಟಿಗೆ ಕಾಲಿಟ್ಟಿದ್ದು, ಕಿರುತೆರೆ ಪ್ರೇಕ್ಷಕರಲ್ಲಿ ಬಿಗ್​ ಬಾಸ್​ ಮೇಲೆ ಆಸಕ್ತಿ ಹೆಚ್ಚುವಂತೆ ಮಾಡಿದೆ.




ಇನ್ನು, ಫೇಸ್‌ಬುಕ್‌ನಲ್ಲಿ 114k ಮತ್ತು ಇನ್​ಸ್ಟಾಗ್ರಾಮ್‌ನಲ್ಲಿ 27k ಗೂ ಹೆಚ್ಚು ಫಾಲೋವರ್ಸ್ ಗಳನ್ನು ಸೋಮಣ್ಣ ಮಾಚಿಮಾಡ ಹೊಂದಿದ್ದಾರೆ. ಹೀಗಾಗಿ ಇವರು ಪ್ರತಿ ಮನೆಯವರಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿ ಬಿಗ್​ ಬಾಸ್​ ಹೌಸ್​ಗೆ ಕಾಲಿಟ್ಟಿದ್ದಾರೆ.


ಬಿಗ್ ಬಾಸ್ ಮನೆಗೆ ಬಂದರು ಮಾರಿಮುತ್ತು ಮೊಮ್ಮಗಳು:


ಹೌದು, ಅಚ್ಚರಿ ಆಗ್ತಿದ್ಯಾ, ಇದು ನಿಜಾ ಸ್ವಾಮಿ, ಯಾಕಂದ್ರೆ ಇದು ಬಿಗ್​ ಬಾಸ್​ ಒಟಿಟಿ. ಮಾರಿಮುತ್ತು ಮೊಮ್ಮಗಳಾದ ಅಂದದ ಗೊಂಬೆ ನಟಿ ಜಯಶ್ರೀ ಎಂಟ್ರಿ ನೀಡಿದ್ದಾರೆ. ಬಿಗ್​ ಬಾಸ್​ ಹೇಳುವಂತೆ ಇವರಿಗೆ ಕೋಪ ಬಂದ್ರೆ ಆಗೋದೆ ಬೇರೆ ಅಂತೆ. ಮಸ್ತ್​ ಮಜಾ ಎಂಟ್ರಟೈನ್​ಮೆಂಟ್​ ಪಕ್ಕಾ ನಿಡ್ತಾರೆ ಜಯಶ್ರೀ ಎಂದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಏನಾಗಬಹುದೆಂದು ಕಾದು ನೋಡಬೇಕಿದೆ.




ಬಿಗ್​ ಬಾಸ್​ 12ನೇ ಸ್ಪರ್ಧಿಯಾಗಿ ಬಂದಿರುವ ನಟಿ ಜಯಶ್ರೀ, ಮಾರಿ ಮುತ್ತು ಅವರ ಮೊಮ್ಮಗಳು ಮಾರಿಮುತ್ತು ನಿಜವಾದ ಹೆಸರು ಸರೋಜಾ. ಇವರ ಮೊಮ್ಮಗಳಾದ ಜಯಶ್ರೀ ಅವರು ಪುಟ್ಟರಾಜು ಲವರ್ ಆಫ್ ಶಶಿಕಲಾ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದರು. ಏರೋನಾಟಿಕ್ ಇಂಜಿನಿಯರ್ ಆಗಬೇಕಿದ್ದ ನಟಿ, ನಂತರ ನಟನೆಯ ಕಡೆ ಮುಖ ಮಾಡಿದರಂತೆ. ಆದರೆ ಮನೆಯವರ ವಿರೊಧ ಇತ್ತು ಎಂದು ಹೇಳಿದ್ದಾರೆ. ಅಲ್ಲದೇ  ಮನೆ ಬಿಟ್ಟಿದ್ದಾಗಿ ಹೇಳಿಕೊಂಡಿದ್ದು, ಕಾಸ್ಮೆಟಿಕ್ ರೀಟೆಲ್ ಮಾಡ್ತಾ ಇದೀನಿ. ಯೂತ್​ಗೆ ಏನಾದರು ಇನ್​ಸ್ಪೈರ್ ಮಾಡಬೇಕು ಎಂಬ ಆಸೆ ಇದೆ ಎಂದು ನಟಿ ಜಯಶ್ರೀ ಅವರು ಹೇಳಿದ್ದಾರೆ. ಇದೇ ವೇಳೆ ಅವರು ವೇದಿಕೆ ಮೇಲೆ ಭಾವುಕರಾಗಿದ್ದರು.


ಇದನ್ನೂ ಓದಿ: Bigg Boss OTT: ಖುಷಿ ಖುಷಿಯಾಗಿ ಬಿಗ್​ ಬಾಸ್​ ಮನೆಗೆ ಚೈತ್ರ ಹಳ್ಳಿಕೇರಿ ಎಂಟ್ರಿ


ಬಿಗ್​ ಬಾಸ್​ ಒಟಿಟಿ ಅಂತಿಮ ಸ್ಪರ್ಧಿಗಳು:

top videos


    ಆರ್ಯವರ್ಧನ್​ ಗುರೂಜಿ, ಸೋನು ಗೌಡ, ಸ್ಫೂರ್ತಿ ಗೌಡ, ನಂದು-ಜಸ್ವಂತ್​, ಚೈತ್ರಾ ಹಳ್ಳಿಕೇರಿ , ಅಕ್ಷತಾ ಕುಕ್ಕಿ, ಅರ್ಜುನ್ ರಮೇಶ್, ಕಿರಣ್ ಯೋಗೇಶ್ವರ್, ಜಯಶ್ರೀ ಆರಾಧ್ಯ, ಲೋಕೇಶ್, ಸೋಮಣ್ಣ, ರಾಕೇಶ್ ಅಡಿಗ, ಸಾನ್ಯಾ, ಉದಯ್ ಸೂರ್ಯ ಮತ್ತು ರುಪೇಶ್​ ಶೆಟ್ಟಿ

    First published: