Bigg Boss OTT: ಮನೆಯ ಮೊದಲ ಕ್ಯಾಪ್ಟನ್‌ ಆದ ಅರ್ಜುನ್‌ ರಮೇಶ್‌

ಬಿಗ್​ಬಾಸ್ ಮನೆಯೊಳಗೆ ಈಗ ರಿಯಲ್ ಗೇಮ್ ಸ್ಟಾರ್ಟ್ ಆಗಲಿದೆ. ಬಿಗ್​ಬಾಸ್ ಒಟಿಟಿ ಮನೆಗೆ ಹೊಸ ಕ್ಯಾಪ್ಟನ್ ಆಯ್ಕೆಯಾಗಿದ್ದಾರೆ.

ಅರ್ಜುನ್ ರಮೇಶ್

ಅರ್ಜುನ್ ರಮೇಶ್

  • Share this:
ಬಿಗ್​ಬಾಸ್ ಕನ್ನಡ ಒಟಿಟಿ ರಿಯಾಲಿಟಿ ಶೋ (Reality Show) ಆರಂಭವಾಗಿದ್ದು ತುಂಬಾ ಇಂಟ್ರೆಸ್ಟಿಂಗ್ ರೀತಿಯಲ್ಲಿ ಮುಂದುವರಿದಿದೆ. ಪ್ರೇಕ್ಷಕರ ಮನಸು ಗೆದ್ದಿರುವ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನು ಯಾರು ಎಂಬ ಟಾಸ್ಕ್ ಮೂಲಕ ಸ್ಪರ್ಧಿಗಳ ಪರಿಚಯ ಜನರಿಗೆ ಸಿಕ್ಕಿದೆ. ಈಗ ಮನೆಗೆ ಮೊದಲ ಕ್ಯಾಪ್ಟನ್  (Captain) ಆಯ್ಕೆಯಾಗಿದ್ದಾರೆ. ಮನೆಯ ಕ್ಯಾಪ್ಟನ್‌ ಅನ್ನು ಆಯ್ಕೆ ಮಾಡಲು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌ ಒಂದನ್ನು ನೀಡಿದ್ದರು. ಈ ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಲು ಮನೆಮಂದಿಗೆ ವೋಟ್‌ ಮಾಡುವಂತೆ ಬಿಗ್‌ ಬಾಸ್‌ (Bigg Boss) ಹೇಳಿದ್ದರು. ಆ ಪ್ರಕಾರ ಸ್ಪರ್ಧೆಗಳ ಆಯ್ಕೆಯ ಪ್ರಕಾರ, ಅರ್ಜುನ್‌ ರಮೇಶ್‌, ಸೋಮಣ್ಣಮಾಚಿಮಾಡ, ಚೈತ್ರಾ ಹಳ್ಳಿಕೇರಿ ಮತ್ತು ನಂದು ಕ್ಯಾಪ್ಟೆನ್ಸಿ ಟಾಸ್ಕ್‌ ಆಡಲು ಆಯ್ಕೆಯಾದರು. ಬಳಿಕ ನಡೆದ ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ (Task) ಹೆಚ್ಚು ಆಟಗಳಲ್ಲಿ ಗೆದ್ದ ಕಿರುತೆರೆ ನಟ ಅರ್ಜುನ್ ರಮೇಶ್ (Arjun Ramesh) ಮನೆಯ ಮೊದಲ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ.

ಇಂತಿ ನಿಮ್ಮ ಆಶಾ ಧಾರವಾಹಿಯಲ್ಲಿ ಮಿಂಚಿದ ಕಿರುತೆರೆ ನಟ ಅರ್ಜುನ್ ರಮೇಶ್​ 13ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾಗಿದ್ದಾರೆ. ಧಾರಾವಾಹಿ ಪ್ರಿಯರಿಗೆ ಬಹಳ ಅಚ್ಚುಮೆಚ್ಚಿನ ನಟ ಮಹಾಕಾಳಿ, ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿ ಖ್ಯಾತರಾಗಿದ್ದರು. ಇದಲ್ಲದೇ, ಜನರ ಮೆಚ್ಚಿನ ಧಾರಾವಾಹಿಯಾಗಿದ್ದ ಅಗ್ನಿಸಾಕ್ಷಿಯಲ್ಲಿಯೂ ಸಹ ಅರ್ಜುನ್ ಅವರು ಶೌರ್ಯ ಎಂಬ ಪಾತ್ರ ಮಾಡಿದ್ದರು. ನಂತರ ನಾಗಿಣಿ ಧಾರಾವಾಹಿಯಲ್ಲಿ ಅರ್ಜುನ್ ಅವರು ರುದ್ರ ಪಾತ್ರ ಮಾಡಿದ್ದಾರೆ.

ಸಿನಿಮಾದಲ್ಲಿಯೂ ನಟನೆ

ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್‌ಮ್ಯಾನ್ ಸಿನಿಮಾದಲ್ಲಿ ಅರ್ಜುನ್ ನಟಿಸಿದ್ದಾರೆ. 'ಕೌಟಿಲ್ಯ' ಚಿತ್ರದಲ್ಲಿ ಅರ್ಜುನ್ ರಮೇಶ್ ನಾಯಕ ನಟನಾಗಿದ್ದಾರೆ. ತಮ್ಮ ನಟನೆಯ ಮೂಲಕ ಜನರಿಗೆ ಹತ್ತಿರವಾಗಿರುವ ಅರ್ಜುನ್‌ ರಮೇಶ್‌ ಕೇವಲ ನಟ ಮಾತ್ರವಲ್ಲ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: 30 ವರ್ಷಗಳ ನಂತರ ಮತ್ತೆ ಬರ್ತಿದೆ ಬೆಳ್ಳಿ ಕಾಲುಂಗುರ! ರಾಜ್ ಮೊಮ್ಮಗಳು ಹೀರೋಯಿನ್

ಮನೆಯೊಳಗೊಂದು ಪ್ರೇಮಕಥೆ

ರಾಕೇಶ್ ಅಡಿಗ (Rakesh Adiga) ಸ್ವತಃ ಸಾನ್ಯಾ ಅಯ್ಯರ್​ (Sanya Iyer) ಮೇಲೆ ಆಕರ್ಷಣೆ (Crush) ಇದೆ ಎನ್ನುವುದನ್ನು ಹೇಳಿದ್ದಾರೆ. ನಾನು ನಿಮ್ಮನ್ನ ನೋಡಿ ಎಷ್ಟು ಚೆನ್ನಾಗಿ ಇದ್ದಾಳಲ್ಲಾ. ಎಷ್ಟು ಸ್ಪಿರಿಚ್ಯುವಲ್ ಹುಡುಗಿ ಅಂತ ಅಟ್ರ್ಯಾಕ್ಷನ್ ಆಗಿತ್ತು. ತುಂಬಾ ಚೆನ್ನಾಗಿ ಕವನ ಹೇಳಿದ್ದಿರಿ. ಆ ತರಹ ಬರೆಯುತ್ತೀರಾ ಅಂತ ನಿಮ್ಮನ್ನ ನೋಡಿದರೆ ಹಾಗೆ ಕಾಣೋದೇ ಇಲ್ಲ. ಡ್ರೆಸ್ಸಿಂಗ್ ನೋಡಿದ್ರೆ. ಹೀಗೆ ಅಂತ ಕಲ್ಪನೆ ಮಾಡಿಕೊಳ್ಳೋಕೆ ಆಗಲ್ಲ ಅಂತ ಸಾನ್ಯ ಅಯ್ಯರ್‌ಗೆ ರಾಕೇಶ್ ಅಡಿಗ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಸಾನ್ಯಾ ಅಯ್ಯರ್ ಆರ್ಯವರ್ಧನ್ ಗುರೂಜಿಗೆ ಲವ್ ಪ್ರಪೋಸಲ್ ಮಾಡಿದ್ದರು. ಈ ಪ್ರೀತಿ ನಿವೇದನೆ ಫುಲ್ ಸುದ್ದಿಯಾಗಿತ್ತು.

ಇದನ್ನೂ ಓದಿ: Bigg Boss OTT: ಬಹಳ ಮುದ್ದಾಗಿದ್ದೀರಿ, ನನ್ನ ಬಾಳಿಗೆ ಬರುತ್ತೀರಾ? ಗುರೂಜಿಗೆ ಪ್ರಪೋಸ್ ಮಾಡಿದ 22 ವರ್ಷದ ಸಾನ್ಯಾ!

ಇದೀಗ ಬಿಗ್​​ಬಾಸ್ ಮನೆಯೊಳಗೆ ಗುರೂಜಿ ಮನೆಯೊಳಗಿರುವ ಇತರ ಸ್ಪರ್ಧಿಗಳೊಂದಿಗೆ ಜಾಲಿಯಾಗಿ ಗೇಮ್ ಆಡುತ್ತಿದ್ದಾರೆ. ಗುರೂಜಿ ಹೀಗೂ ಇರ್ತಾರಾ ಎನ್ನುವಷ್ಟು ಜಾಲಿಯಾಗಿ ಟಾಸ್ಕ್ ಆಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ರೊಮ್ಯಾಂಟಿಕ್ ಆಗಿ ನೀವು ಮಾತನಾಡಬೇಕು ಅಂತ ಸ್ಪರ್ಧಿಗಳು ಗುರೂಜಿಗೆ ಹೇಳಿದ್ದರು. ಆಗ ಆರ್ಯವರ್ಧನ್ ಗುರೂಜಿ ಹಾಗೂ ಸಾನ್ಯಾ ನಡುವೆ ನಡೆದ ಸಂಭಾಷಣೆ ಎಲ್ಲೆಡೆ ಸುದ್ದಿಯಾಗಿದೆ.
Published by:Divya D
First published: