Bigg Boss OTT: ಎಷ್ಟು ಚೆನ್ನಾಗಿದ್ದಾಳಲ್ಲಾ ಹುಡುಗಿ? ಸಾನ್ಯಾ ಮೇಲೆ ರಾಕೇಶ್​ಗೆ ಕ್ರಶ್! ಮನೆಯೊಳಗೆ ಕುಚ್ ಕುಚ್

ರಾಕೇಶ್ ಅಡಿಗ (Rakesh Adiga) ಸ್ವತಃ ಸಾನ್ಯಾ ಅಯ್ಯರ್​ (Sanya Iyer) ಮೇಲೆ ಆಕರ್ಷಣೆ  (Crush) ಇದೆ ಎನ್ನುವುದನ್ನು ಹೇಳಿದ್ದಾರೆ. 

ಸಾನ್ಯಾ ಅಯ್ಯರ್ - ರಾಕೇಶ್ ಅಡಿಗ

ಸಾನ್ಯಾ ಅಯ್ಯರ್ - ರಾಕೇಶ್ ಅಡಿಗ

  • Share this:
ಆರ್ಯವರ್ಧನ್ ಗುರೂಜಿಗೆ ಪ್ರಪೋಸ್ ಮಾಡಿದ ನಂತರ ಈಗ ಮತ್ತೊಂದು ಲವ್​ ಸುದ್ದಿ ಬಿಗ್​ ಬಾಸ್ (Bigg Boss) ಮನೆಯಿಂದ ಹೊರಬಿದ್ದಿದೆ. ಹೌದು. ರಾಕೇಶ್ ಅಡಿಗ (Rakesh Adiga) ಸ್ವತಃ ಸಾನ್ಯಾ ಅಯ್ಯರ್​ (Sanya Iyer) ಮೇಲೆ ಆಕರ್ಷಣೆ  (Crush) ಇದೆ ಎನ್ನುವುದನ್ನು ಹೇಳಿದ್ದಾರೆ. ನಾನು ನಿಮ್ಮನ್ನ ನೋಡಿ ಎಷ್ಟು ಚೆನ್ನಾಗಿ ಇದ್ದಾಳಲ್ಲಾ. ಎಷ್ಟು ಸ್ಪಿರಿಚ್ಯುವಲ್ ಹುಡುಗಿ ಅಂತ ಅಟ್ರ್ಯಾಕ್ಷನ್ ಆಗಿತ್ತು. ತುಂಬಾ ಚೆನ್ನಾಗಿ ಕವನ ಹೇಳಿದ್ದಿರಿ. ಆ ತರಹ ಬರೆಯುತ್ತೀರಾ ಅಂತ ನಿಮ್ಮನ್ನ ನೋಡಿದರೆ ಹಾಗೆ ಕಾಣೋದೇ ಇಲ್ಲ. ಡ್ರೆಸ್ಸಿಂಗ್ ನೋಡಿದ್ರೆ. ಹೀಗೆ ಅಂತ ಕಲ್ಪನೆ ಮಾಡಿಕೊಳ್ಳೋಕೆ ಆಗಲ್ಲ ಅಂತ ಸಾನ್ಯ ಅಯ್ಯರ್‌ಗೆ ರಾಕೇಶ್ ಅಡಿಗ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಸಾನ್ಯಾ ಅಯ್ಯರ್ ಆರ್ಯವರ್ಧನ್ ಗುರೂಜಿಗೆ ಲವ್ ಪ್ರಪೋಸಲ್ ಮಾಡಿದ್ದರು. ಈ ಪ್ರೀತಿ ನಿವೇದನೆ ಫುಲ್ ಸುದ್ದಿಯಾಗಿತ್ತು.

ಇದೀಗ ಬಿಗ್​​ಬಾಸ್ ಮನೆಯೊಳಗೆ ಗುರೂಜಿ ಮನೆಯೊಳಗಿರುವ ಇತರ ಸ್ಪರ್ಧಿಗಳೊಂದಿಗೆ ಜಾಲಿಯಾಗಿ ಗೇಮ್ ಆಡುತ್ತಿದ್ದಾರೆ. ಗುರೂಜಿ ಹೀಗೂ ಇರ್ತಾರಾ ಎನ್ನುವಷ್ಟು ಜಾಲಿಯಾಗಿ ಟಾಸ್ಕ್ ಆಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ರೊಮ್ಯಾಂಟಿಕ್ ಆಗಿ ನೀವು ಮಾತನಾಡಬೇಕು ಅಂತ ಸ್ಪರ್ಧಿಗಳು ಗುರೂಜಿಗೆ ಹೇಳಿದ್ದರು. ಆಗ ಆರ್ಯವರ್ಧನ್ ಗುರೂಜಿ ಹಾಗೂ ಸಾನ್ಯಾ ನಡುವೆ ನಡೆದ ಸಂಭಾಷಣೆ ಎಲ್ಲೆಡೆ ಸುದ್ದಿಯಾಗಿದೆ.

ನನ್ನ ಮನಸಿಗೂ ನೀವೇ ಕಾಲಿಡಿ

ಆರ್ಯವರ್ಧನ್ ಮಾತು ಆರಂಭಿಸಿ ಸಖತ್ ಆಗಿ ಹೇಳುತ್ತೇನೆ, ಕಳೆದು ಹೋಗುತ್ತೀರಿ ಆರಾಮವಾಗಿರಿ, ನೀವೆಲ್ಲ ಬೆಚ್ಚಿ ಬೀಳುತ್ತೀರಿ, ಆಗಿದ್ದು ಆಗಲಿ, ಮಾತನಾಡುತ್ತೇನೆ ಎಂದಿದ್ದಾರೆ. ಸಾನ್ಯಾ ಅಯ್ಯರ್ ಪ್ರತಿಕ್ರಿಯಿಸಿ ಬಿಗ್ ಬಾಸ್ ಮನೆಗೆ ಮೊದಲ ಕಂಟೆಸ್ಟೆಂಟ್ ಆಗಿ ಬಂದಿದ್ದೀರಿ. ಹಾಗೆ ನನ್ನ ಮನಸಿಗೂ ನೀವೇ ಮೊದಲು ಕಾಲಿಡಬೇಕು ಎಂದಿದ್ದಾರೆ.

ಇದನ್ನೂ ಓದಿ: Bigg Boss OTT: ಗುರೂಜಿ ಹೊಟ್ಟೆಯ ಮೇಲೆ ನೆಟ್ಟಿಗರ ಕಣ್ಣು! ಮೊದಲು ಫ್ಯಾಟ್ ಕರಗಿಸಿ ಎಂದ ಜನ

ಆರ್ಯವರ್ಧನ್ ಗುರೂಜಿ ಪ್ರತಿಕ್ರಿಯಿಸಿ ಈ ಮನೆಗೆ ಬಂದೆ, ಈ ಮನೆ ಸುಂದರವಾಗಿ, ಈ ಮನೆಯಲ್ಲಿ ದೀಪ ಹಚ್ಚುವವರಿಲ್ಲ, ಅಡುಗೆ ಮಾಡುವವರಿಲ್ಲ. ಆ ಸ್ಥಾನ ನಿಮಗೆ ಕೊಡುತ್ತೇನೆ ಎಂದಿದ್ದಾರೆ. ಸಾನ್ಯಾ ಅಯ್ಯರ್ ಉತ್ತರಿಸಿ ನಾನು ಕೆಲಸದವಳಾ ಗುರೂಜಿ ಎಂದು ತಮಾಷೆ ಮಾಡಿದ್ದಾರೆ. ಆರ್ಯವರ್ಧನ್ ಉತ್ತರಿಸಿ ಬೇರೆ ತರ ಪ್ರಶ್ನೆಯನ್ನು ಕೇಳಿ, ಇದು ಬೇಡ ಎಂದರೆ, ಸಾನ್ಯಾ ಅಯ್ಯರ್ ನೀವು ಕಂದನಂತೆ ಇದ್ದೀರಿ, ಬಹಳ ಮುದ್ದಾಗಿದ್ದೀರಾ, ನನ್ನ ಬಾಳಲ್ಲಿ ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಹಾಸ್ಯಾಸ್ಪದವಾಗಿ ಉತ್ತರ

ಇದಕ್ಕೆ ಹಾಸ್ಯಾಸ್ಪದವಾಗಿ ಉತ್ತರಿಸಿದ ಆರ್ಯವರ್ಧನ್ ನಾನು ಮುದ್ದಾಗಿದ್ದೀನಿ ಅಂತ ನೀವು ಹೇಳಿದ್ದೀರಿ, ಅದನ್ನು ಒಪ್ಪಿಕೊಳ್ಳೋಕೆ ಎರಡು ದಿನ ಟೈಮ್ ಕೊಡಿ ಎಂದಾಗ ಮನೆಯವರೆಲ್ಲ ನಕ್ಕಿದ್ದಾರೆ.

Actress Sanya Iyer entered the house of Big Boss pvn
ಸಾನ್ಯ ಅಯ್ಯರ್


ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಒಟಿಟಿ (Bigg Boss OTT) ಕನ್ನಡ ಅದ್ದೂರಿಯಾಗಿ ಆರಂಭವಾಗಿದೆ. ಹಿಂದಿಯಲ್ಲಿ ಒಟಿಟಿ ಬಿಗ್​ಬಾಸ್ ನಡೆಸಿದಾಗ ಭಾರೀ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿತ್ತು. ಹಾಗೆಯೇ ಕನ್ನಡದಲ್ಲಿಯೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆಗಸ್ಟ್​ 6ರಂದು ಬಿಗ್ ಬಾಸ್ ಒಟಿಟಿ ಗ್ರ್ಯಾಂಡ್​ ಓಪನಿಂಗ್ ಮಾಡಲಾಗಿದೆ. ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ.

16 ಸ್ಪರ್ಧಿಗಳು ಮನೆಯೊಳಗೆ

ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep)​ ಬಿಗ್ ಬಾಸ್ ನಡೆಸಿಕೊಡುತ್ತಿದ್ದು ಸ್ಪರ್ಧಿಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಬಿಗ್ ಬಾಸ್ ಒಟಿಟಿಗೆ 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಸಲಿ ಆಟ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: Bigg Boss Kannada OTT: ಒಂಟಿ ಮನೆಯಲ್ಲಿ 16 ಮಂದಿ ಲಾಕ್​, ಇಲ್ಲಿದೆ ನೋಡಿ ಫೋಟೋಸ್​

ಇತ್ತೀಚಿನ ಎಪಿಸೋಡ್ ನಲ್ಲಿ ಸ್ಪರ್ಧಿಗಳು ತಮ್ಮ ಕಷ್ಟದ ದಿನಗಳನ್ನು ನೆನೆದು ಅದನ್ನು ಮುಕ್ತವಾಗಿ ಹಂಚಿಕೊಂಡು ಹಗುರಾಗಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪರ್ಧಿಗಳ ಎಮೋಷನಲ್ ಅತ್ತಿದ್ದರೂ ಅದರಲ್ಲಿರುವ ನೈಜ್ಯತೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.
Published by:Divya D
First published: