Bigg Boss OTT: ಖಾಲಿ ಕ್ಯಾನ್​​ಗೆ ಬಾಲ್ಸ್ ಹಾಕೋ ಆಟ! ಗುರೂಜಿ ಟಾಸ್ಕ್ ಗೆಲ್ತಾರಾ?

Bigg Boss OTT Kannada: ಬಿಗ್​ಬಾಸ್ ಒಟಿಟಿ ಕನ್ನಡ ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಇದೀಗ ಮನೆಯೊಳಗೆ ಸ್ಪರ್ಧಿಗಳಿಗೆ ಹೊಸದೊಂದು ಟಾಸ್ಕ್ ನೀಡಲಾಗಿದ್ದು ಖಾಲಿ ಕ್ಯಾನ್​ಗೆ ಬಾಲ್ಸ್ ತುಂಬಿಸೋ ಆಟ ಸಖತ್ ಮಜವಾಗಿ ಮೂಡಿ ಬಂದಿದೆ.

ಬಾಲ್ಸ್ ಗೇಮ್

ಬಾಲ್ಸ್ ಗೇಮ್

  • Share this:
ಬಿಗ್​ಬಾಸ್ ಒಟಿಟಿ 2022 (Bigg Boss OTT 2022) ಕನ್ನಡ ಸುಂದರವಾಗಿ ಮೂಡಿ ಬರುತ್ತಿದೆ. ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿರುವ ರಿಯಾಲಿಟಿ ಶೋ (Reality Show) ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ನಾನು ಯಾರು ಟಾಸ್ಕ್​ನಿಂದ ಆರಂಭವಾದ ಶೋನಲ್ಲಿ ಆ ನಂತರ ಹಲವು ಟಾಸ್ಕ್​ಗಳು (Task) ಬಂದಿವೆ. ಡಿಫರೆಂಟ್ ಆಗಿರುವ ಟಾಸ್ಕ್​ಗಳಲ್ಲಿ ಗೆಲ್ಲಲು ಸ್ಪರ್ಧಿಗಳು ನಡೆಸುತ್ತಿರುವ ಸರ್ಕಸ್ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದೀಗ ಮತ್ತೊಂದು ಟಾಸ್ಕ್ ನೀಡಲಾಗಿದ್ದು ಇದರಲ್ಲಿ ಸ್ಪರ್ಧಿಗಳು ಹೊಸ ಆಟವನ್ನು ಆಡಿದ್ದಾರೆ. ಗುರೂಜಿ, ಸೋಮಣ್ಣ ಸೇರಿ ಇನ್ನು ಹಲವು ಸ್ಪರ್ಧಿಗಳು ಖಾಲಿ ಕ್ಯಾನ್​​ಗೆ ಬಾಲ್ಸ್ (Balls) ತುಂಬಿಸೋ ಟಾಸ್ಕ್​ನಲ್ಲಿ ಭಾಗವಹಿಸಿದ್ದು ಒಂದು ಕ್ಯಾನ್​ ನಲ್ಲಿರುವಂತಹ ಬಾಲ್​​ಗಳನ್ನು ಪೂರ್ತಿಯಾಗಿ ಇನ್ನೊಂದು ಕ್ಯಾನ್​ಗೆ ತುಂಬಿಸುವ ಟಾಸ್ಕ್ ನೀಡಲಾಗಿತ್ತು. ಬಣ್ಣ ಬಣ್ಣದ ಪುಟ್ಟ ಬಾಲ್​ಗಳನ್ನು (Color Balls) ತುಂಬಿದ ಕ್ಯಾನ್ ಒಂದೇ ಕೈಯಲ್ಲಿ ಹಿಡಿದು ಜೋರಾಗಿ ಶೇಕ್ ಮಾಡಿ ಬಾಲ್​ಗಳು ಇನ್ನೊಂದು ಕ್ಯಾನ್ ಒಳಗೆ ಸೇರುವಂತೆ ಮಾಡಬೇಕಾಗಿರುತ್ತದೆ.

ಗುರೂಜಿ ಸೊಂಟದ ಮೇಲೆ ಕೈ ಇಟ್ಟು ಉತ್ಸಾಹದಲ್ಲಿ ಗೇಮ್ ಆಡಿದ್ದು ದೂರದಲ್ಲಿ ನಿಂತಿದ್ದ ಇತರ ಸ್ಪರ್ಧಿಗಳು ಪ್ರೋತ್ಸಾಹ ಕೊಟ್ಟಿದ್ದಾರೆ. ಅಂತೂ ಗುರೂಜಿ ಸಕ್ಸಸ್​ಫುಲ್ ಆಗಿ ಬಾಲ್ಸ್ ಕ್ಯಾನ್​ ಗೆ ಹಾಕಿದ್ದಾರೆ. ಈ ಟಾಸ್ಕ್ ವಿಭಿನ್ನವಾಗಿದ್ದು ಪ್ರೇಕ್ಷಕರನ್ನು ರಂಜಿಸಿದೆ.

ಡಿಫರೆಂಟ್ ಟಾಸ್ಕ್​ಗಳೇ ಎಂಜಾಯ್​ಮೆಂಟ್

ಬಿಗ್​ಬಾಸ್ ಹೊಸ ಹೊಸ ಟಾಸ್ಕ್ ಕೊಟ್ಟಾಗ ಸ್ಪರ್ಧಿಗಳು  ಭಯಪಟ್ಟರೆ ಪ್ರೇಕ್ಷಕರು ಮಾತ್ರ ಫುಲ್ ಫನ್ ತೆಗೆದುಕೊಳ್ಳುತ್ತಾರೆ. ಇಲ್ಲಿ ಮಜವಿರುವುದೇ ಪ್ರೇಕ್ಷಕರಿಗೆ. ಕುತೂಹಲಕಾರಿಯಾಗಿ ಪ್ರೇಕ್ಷಕನನ್ನು ತುದಿಗಾಲಿನಲ್ಲಿ ನಿಲ್ಲಿಸುವ ಗೇಮ್​ಗಳನ್ನು ಬಿಗ್​ಬಾಸ್ ವಿಶೇಷವಾಗಿ ಪ್ರತಿಬಾರಿಯೂ ನೀಡುತ್ತದೆ. ರಿಯಾಲಿಟಿ ಶೋನಲ್ಲಿ ಇಂಥಹ ಗೇಮ್​ಗಳು ಕೂಡಾ ಮೈನ್ ಆಟ್ರಾಕ್ಷನ್ ಎನ್ನುವುದರಲ್ಲಿ ಎರಡು ಮಾತಿಲ್ಲ.


ಸ್ಪರ್ಧಿಗಳಿಗೆ ಎಲಿಮಿನೇಷನ್ ಭಯ

ಎರಡನೇ ವಾರದ (2nd Week) ಎಲಿಮಿನೇಷನ್​ಗೆ (Elimination) ಸಕಲ ಸಿದ್ಧತೆ ನಡೆದಿದೆ. ಈ ಬಾರಿ 9 ಸ್ಪರ್ಧಿಗಳು ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದಾರೆ. ಆ ಪೈಕಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಕಳೆದ ವಾರ ಕ್ಯಾಪ್ಟನ್ ಆಗಿದ್ದ ಅರ್ಜುನ್ ರಮೇಶ್ (Arjun Ramesh) ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಟಾಸ್ಕ್​ ವೇಳೆ ಗಾಯಗೊಂಡಿದ್ದ ಅರ್ಜುನ್​ ರಮೇಶ್​, ಕೆಲ ದಿನಗಳಿಂದ ನೋವಿನಿಂದ ಬಳಲುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada OTT: ಒಂಟಿ ಮನೆಯಲ್ಲಿ 16 ಮಂದಿ ಲಾಕ್​, ಇಲ್ಲಿದೆ ನೋಡಿ ಫೋಟೋಸ್​

ಟಾಸ್ಕ್​​ನಲ್ಲಿ ಗಾಯಗೊಂಡಿದ್ದೆ ಅರ್ಜುನ್

ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅರ್ಜುನ್ ಹಾಗೂ ಮೊದಲಾದವರು ರೇಸ್​ನಲ್ಲಿದ್ದರು. ಈ ವೇಳೆ ಅರ್ಜುನ್ ಅವರ ಭುಜಕ್ಕೆ ತೀವ್ರ ಪೆಟ್ಟಾಗಿತ್ತು. ಅವರು ಹ್ಯಾಂಗಿಂಗ್ಸ್ ಹಾಕಿಕೊಂಡೇ ಒಂದು ವಾರ ಕಳೆದಿದ್ದಾರೆ. ದಿನ ಕಳೆದ್ರು ಅವರಿಗೆ ನೋವು ಕಡಿಮೆ ಆಗಿಲ್ಲ. ಈ ಕಾರಣಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಶುರುವಾಗಿದೆ ಕ್ಯಾಪ್ಟನ್ ಪಟ್ಟಕ್ಕಾಗಿ ಸರ್ಕಸ್

ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್ ಬರುವ ವಾರದ ಸಮಯ ಇದು. ಬಿಗ್ ಬಾಸ್ ಮನೆಯೊಳಗೆ ನಾಯಕನ ಜವಾಬ್ದಾರಿಗಾಗಿ ಪ್ರತಿಬಾರಿ ಸ್ಪರ್ಧಿಗಳು ಸಾಕಷ್ಟು ಪ್ರಯತ್ನ ಮಾಡುವುದನ್ನು ಕಾಣಬಹುದು. ಜಸ್ವಂತ್ ಬೋಪಣ್ಣ (Jashwanth Bopanna) ಬಿಗ್ ಬಾಸ್ ಕನ್ನಡ OTT ನ ಹೊಸ ನಾಯಕನಾಗಲಿದ್ದಾರೆ.
Published by:Divya D
First published: