Bigg Boss Kannada OTT: ಅಯ್ಯೋ ಈ ಹೊಟ್ಟೆ ನೋಡೋಕಾಗ್ತಿಲ್ಲ, ಅಂಗಾತ ಮಲಗಿ ಹೊಟ್ಟೆ ಅಲುಗಾಡಿಸುತ್ತಿದ್ದಾರೆ ಗುರೂಜಿ!

ಈ ಹೊಟ್ಟೆ ನೋಡೋಕಾಗ್ತಿಲ್ಲ. ಈ ಹೊಟ್ಟೆಯನ್ನು ಹೇಗಾದರೂ ಕರಗಿಸಬೇಕು ಎಂದು ಹೇಳುವುದನ್ನೂ ಕೇಳಬಹುದು, ಗುರೂಜಿ ಅಂಗಾತ ಮಲಗಿ ತಮ್ಮ ದೊಡ್ಡ ಹೊಟ್ಟೆಯನ್ನು ಜೋರಾಗಿ ಅಲ್ಲಾಡಿಸುವುದನ್ನು ಕಾಣಬಹುದು.

ಆರ್ಯವರ್ಧನ್ ಗುರೂಜಿ

ಆರ್ಯವರ್ಧನ್ ಗುರೂಜಿ

  • Share this:
ಬಿಗ್​ಬಾಸ್ ಒಟಿಟಿ 2022 (Bigg Boss OTT 2022) ಕನ್ನಡ ಸುಂದರವಾಗಿ ಮೂಡಿ ಬರುತ್ತಿದೆ. ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿರುವ ರಿಯಾಲಿಟಿ ಶೋ (Reality Show) ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ನಾನು ಯಾರು ಟಾಸ್ಕ್​ನಿಂದ ಆರಂಭವಾದ ಶೋನಲ್ಲಿ ಆ ನಂತರ ಹಲವು ಟಾಸ್ಕ್​ಗಳು (Task) ಬಂದಿವೆ. ಡಿಫರೆಂಟ್ ಆಗಿರುವ ಟಾಸ್ಕ್​ಗಳಲ್ಲಿ ಗೆಲ್ಲಲು ಸ್ಪರ್ಧಿಗಳು ನಡೆಸುತ್ತಿರುವ ಸರ್ಕಸ್ ಪ್ರೇಕ್ಷಕರನ್ನು ರಂಜಿಸುತ್ತಿದೆ. ಆರ್ಯವರ್ಧನ್ ಗುರೂಜಿ ಅವರ ಹೊಟ್ಟೆಯ ಬಗ್ಗೆ ಎಲ್ಲರಿಗೂ ಗೊತ್ತು. ಈಗ ಬಿಗ್​ಬಾಸ್ ಮನೆಯಲ್ಲಿ ಗುರೂಜಿಗೆ ತಮ್ಮ ಹೊಟ್ಟೆ ಕರಗಿಸುವುದು ಒಂದು ತಲೆನೋವಾಗಿ ಬದಲಾಗಿದೆ. ಈ ಬಗ್ಗೆ ಅವರು ಸಹ ಸ್ಪರ್ಧಿಗಳೊಂದಿಗೆ ಚರ್ಚಿಸಿದ್ದಾರೆ.

ಜಿಂಗ ಲಕ ಲಕ ಇವರು ನಂಬರ್ ವನ್ ಎಂದು ಶುರುವಾಗುವ ಪ್ರೋಮೋದಲ್ಲಿ ಗುರೂಜಿ ಅವರ ಹೊಟ್ಟೆಯ ಸೈಝ್​ನದ್ದೇ ಹೈಲೈಟ್. ಆರ್ಯವರ್ಧನ್ ಅವರು ಜಾಲಿಯಾಗಿ ಸಿಕ್ಕ ಸಿಕ್ಕಲ್ಲಿ ಮಲಗಿ ಗೊರಕೆ ಹೊಡೆಯುತ್ತಿರುವುದನ್ನು ಇಲ್ಲಿ ಕಾಣಬಹುದು. ಇದನ್ನು ಹೊರತುಪಡಿಸಿ ಗುರೂಜಿ ಅವರ ಅಕ್ಕ ಪಕ್ಕ ಕುಳಿತು ಸಹ ಸ್ಪರ್ಧಿಗಳು ಕುಳಿತು ಅವರ ಹೊಟ್ಟೆಯನ್ನು ಮುಟ್ಟಿ ಏನ್ ತಮಟೆ ಹಂಗೆ ಮಾಡಿದ್ದೀರಾ ಎಂದು ಹೇಳುವುದನ್ನು ಕೇಳಬಹುದು.

ಈ ಹೊಟ್ಟೆ ನೋಡೋಕಾಗ್ತಿಲ್ಲ! 

ಇನ್ನು ಗುರೂಜಿ ಅವರು ಆಯ್ತಾ ಅಡುಗೆ, ಕಿಚನ್​ಗೆ ಹೋಗಬಹುದಾ ಎಂದು ಆಹಾರಕ್ಕಾಗಿ ಅರ್ಜೆಂಟ್ ಮಾಡುವ ಗುರೂಜಿ, ತುಂಬಾ ಬೇಜಾರಾಗ್ತಿದೆ, ಈ ಹೊಟ್ಟೆ ನೋಡೋಕಾಗ್ತಿಲ್ಲ. ಈ ಹೊಟ್ಟೆಯನ್ನು ಹೇಗಾದರೂ ಕರಗಿಸಬೇಕು ಎಂದು ಹೇಳುವುದನ್ನೂ ಕೇಳಬಹುದು, ಗುರೂಜಿ ಅಂಗಾತ ಮಲಗಿ ತಮ್ಮ ದೊಡ್ಡ ಹೊಟ್ಟೆಯನ್ನು ಜೋರಾಗಿ ಅಲ್ಲಾಡಿಸುವುದನ್ನು ಕಾಣಬಹುದು.

ಹೊಟ್ಟೆ ಎಲ್ಲ ತೊಂದ್ರೇನೇ ಅಲ್ಲ, ಗೇಮ್ಸ್​​ನಲ್ಲಿ ಫುಲ್ ಆ್ಯಕ್ಟಿವ್ ಗುರೂಜಿ

ಹೊಟ್ಟೆ ದೊಡ್ಡದು ಎಂದು ಗುರೂಜಿ ಗೇಮ್​ನಲ್ಲಿ ಹಿಂದೆ ಬಿದ್ದಿಲ್ಲ. ಜಾಲಿಯಾಗಿ ಸಖತ್ ಆ್ಯಕ್ಟಿವ್ ಆಗಿಯೇ ಗುರೂಜಿ ಗೇಮ್ಸ್​ಗಳನ್ನು ಆಡುತ್ತಿದ್ದಾರೆ. ಹೆಚ್ಚಿನ ಟಾಸ್ಕ್​ಗಳಲ್ಲಿ ಜಾಲಿಯಾಗಿ ಸ್ಪರ್ಧಿಸಿದ ಗುರೂಜಿ ಟಾಸ್ಕ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.

ಇದನ್ನೂ ಓದಿ: Bigg Boss OTT: ಖಾಲಿ ಕ್ಯಾನ್​​ಗೆ ಬಾಲ್ಸ್ ಹಾಕೋ ಆಟ! ಗುರೂಜಿ ಟಾಸ್ಕ್ ಗೆಲ್ತಾರಾ?






ಡಿಫರೆಂಟ್ ಆಗಿರುವ ಟಾಸ್ಕ್​ಗಳಲ್ಲಿ ಗೆಲ್ಲಲು ಸ್ಪರ್ಧಿಗಳು ನಡೆಸುತ್ತಿರುವ ಸರ್ಕಸ್ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದೀಗ ಮತ್ತೊಂದು ಟಾಸ್ಕ್ ನೀಡಲಾಗಿದ್ದು ಇದರಲ್ಲಿ ಸ್ಪರ್ಧಿಗಳು ಹೊಸ ಆಟವನ್ನು ಆಡಿದ್ದಾರೆ. ಗುರೂಜಿ, ಸೋಮಣ್ಣ ಸೇರಿ ಇನ್ನು ಹಲವು ಸ್ಪರ್ಧಿಗಳು ಖಾಲಿ ಕ್ಯಾನ್​​ಗೆ ಬಾಲ್ಸ್ (Balls) ತುಂಬಿಸೋ ಟಾಸ್ಕ್​ನಲ್ಲಿ ಭಾಗವಹಿಸಿದ್ದು ಒಂದು ಕ್ಯಾನ್​ ನಲ್ಲಿರುವಂತಹ ಬಾಲ್​​ಗಳನ್ನು ಪೂರ್ತಿಯಾಗಿ ಇನ್ನೊಂದು ಕ್ಯಾನ್​ಗೆ ತುಂಬಿಸುವ ಟಾಸ್ಕ್ ನೀಡಲಾಗಿತ್ತು. ಬಣ್ಣ ಬಣ್ಣದ ಪುಟ್ಟ ಬಾಲ್​ಗಳನ್ನು (Color Balls) ತುಂಬಿದ ಕ್ಯಾನ್ ಒಂದೇ ಕೈಯಲ್ಲಿ ಹಿಡಿದು ಜೋರಾಗಿ ಶೇಕ್ ಮಾಡಿ ಬಾಲ್​ಗಳು ಇನ್ನೊಂದು ಕ್ಯಾನ್ ಒಳಗೆ ಸೇರುವಂತೆ ಮಾಡಬೇಕಾಗಿರುತ್ತದೆ.

ಇದನ್ನೂ ಓದಿ: Shwetha Srivatsav: ಎಲ್ಲಿಗೆ ಬಂತು ಶ್ವೇತಾ ಶ್ರೀವಾತ್ಸವ್ ಪುಸ್ತಕ ಬರೆಯೋ ಕೆಲಸ? ಇಲ್ಲಿದೆ ಅಪ್ಡೇಡ್

ಗುರೂಜಿ ಸೊಂಟದ ಮೇಲೆ ಕೈ ಇಟ್ಟು ಉತ್ಸಾಹದಲ್ಲಿ ಗೇಮ್ ಆಡಿದ್ದು ದೂರದಲ್ಲಿ ನಿಂತಿದ್ದ ಇತರ ಸ್ಪರ್ಧಿಗಳು ಪ್ರೋತ್ಸಾಹ ಕೊಟ್ಟಿದ್ದಾರೆ. ಅಂತೂ ಗುರೂಜಿ ಸಕ್ಸಸ್​ಫುಲ್ ಆಗಿ ಬಾಲ್ಸ್ ಕ್ಯಾನ್​ ಗೆ ಹಾಕಿದ್ದಾರೆ. ಈ ಟಾಸ್ಕ್ ವಿಭಿನ್ನವಾಗಿದ್ದು ಪ್ರೇಕ್ಷಕರನ್ನು ರಂಜಿಸಿದೆ.

ಡಿಫರೆಂಟ್ ಟಾಸ್ಕ್​ಗಳೇ ಎಂಜಾಯ್​ಮೆಂಟ್

ಬಿಗ್​ಬಾಸ್ ಹೊಸ ಹೊಸ ಟಾಸ್ಕ್ ಕೊಟ್ಟಾಗ ಸ್ಪರ್ಧಿಗಳು ಭಯಪಟ್ಟರೆ ಪ್ರೇಕ್ಷಕರು ಮಾತ್ರ ಫುಲ್ ಫನ್ ತೆಗೆದುಕೊಳ್ಳುತ್ತಾರೆ. ಇಲ್ಲಿ ಮಜವಿರುವುದೇ ಪ್ರೇಕ್ಷಕರಿಗೆ. ಕುತೂಹಲಕಾರಿಯಾಗಿ ಪ್ರೇಕ್ಷಕನನ್ನು ತುದಿಗಾಲಿನಲ್ಲಿ ನಿಲ್ಲಿಸುವ ಗೇಮ್​ಗಳನ್ನು ಬಿಗ್​ಬಾಸ್ ವಿಶೇಷವಾಗಿ ಪ್ರತಿಬಾರಿಯೂ ನೀಡುತ್ತದೆ. ರಿಯಾಲಿಟಿ ಶೋನಲ್ಲಿ ಇಂಥಹ ಗೇಮ್​ಗಳು ಕೂಡಾ ಮೈನ್ ಆಟ್ರಾಕ್ಷನ್ ಎನ್ನುವುದರಲ್ಲಿ ಎರಡು ಮಾತಿಲ್ಲ.
Published by:Divya D
First published: