Bigg Boss OTT: ಬಿಗ್​ ಬಾಸ್​ಗೆ 4ನೇ ಸ್ಪರ್ಧಿಯಾಗಿ ಸ್ಫೂರ್ತಿ ಗೌಡ ಅದ್ಧೂರಿ ಎಂಟ್ರಿ, ಹೇಗಿದ್ದಾರೆ ನೋಡಿ ಮಲೆನಾಡ ಹುಡುಗಿ

ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ ಗೌಡ ಮತ್ತು ರೂಪೇಶ್​ ಶೆಟ್ಟಿ ಬಳಿಕ ಇದೀಗ ಕನ್ನಡ ಕಿರುತೆರೆಯ ಸೀರಿಯಲ್ ನಟಿ ಸ್ಫೂರ್ತಿ ಗೌಡ ಅವರು ಬಿಗ್​ ಬಾಸ್​ ಒಟಿಟಿಗೆ ಎಂಟ್ರಿ ನೀಡಿದ್ದಾರೆ. 

ಬಿಗ್​ ಬಾಸ್​ ಓಟಿಟಿ

ಬಿಗ್​ ಬಾಸ್​ ಓಟಿಟಿ

  • Share this:
ಕನ್ನಡ ಬಿಗ್ ಬಾಸ್ ಒಟಿಟಿ (Bigg Boss OTT) ಇಂದಿನಿಂದ ಅದ್ಧೂರಿಯಾಗಿ ಪ್ರಾರಂಬವಾಗಿದೆ. ಈಗಾಗಲೇ ಆರಂಭವಾಗಿರುವ ಕಾರ್ಯಕ್ರಮದಲ್ಲಿ 3 ಜನ ಸ್ಪರ್ಧಿಗಳು ಬಿಗ್​ ಬಾಸ್​ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಇದೀಗ ದೊಡ್ಮನೆಗೆ 4ನೇ ಸ್ಪರ್ಧಿಯ ಪ್ರವೇಶ ಆಗಿದೆ. ಹೌದು, ಕನ್ನಡದ ಸೀರಿಯಲ್​​ ನಟಿ ಸ್ಫೂರ್ತಿ ಗೌಡ (Spoorthi Gowda) ಅವರು ಬಿಗ್​ ಬಾಸ್​ ಒಟಿಟಿ ಸೀಸನ್ ್ಒಂದರಲ್ಲಿ 4ನೇ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಇನ್ನು, ಇಂದಿನಿಂದ ಪ್ರಾರಂಭವಾಗಿರುವ ಶೋ ವೂಟ್‌ ಆ್ಯಪ್‌ನಲ್ಲಿ (Voot App)   ಸ್ಟ್ರೀಮಿಂಗ್ (Streaming) ಆಗಲಿದೆ.  ಈ ಬಾರಿಯ ಸ್ಪರ್ಧಿಗಳನ್ನು ನೋಡುತ್ತಿದ್ದಲ್ಲಿ ಬಿಗ್​ ಬಾಸ್​ ಎಲ್ಲಾ ಸೀಸನ್​ ನಂತೆಯೇ ಈ ಬಾರಿಯೂ ಪ್ರೇಕ್ಷಕರಿಗೆ ಸಖತ್ ಮಜ ಸಿಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ದೊಡ್ಮನೆಗೆ ಕಾಲಿಟ್ಟ ಕಿರುತೆರೆ ನಟಿ ಸ್ಫೂರ್ತಿ ಗೌಡ:

ಹೌದು, ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ ಗೌಡ ಮತ್ತು ರೂಪೇಶ್​ ಶೆಟ್ಟಿ ಬಳಿಕ ಇದೀಗ ಕನ್ನಡ ಕಿರುತೆರೆಯ ಸೀರಿಯಲ್ ನಟಿ ಸ್ಫೂರ್ತಿ ಗೌಡ ಅವರು ಬಿಗ್​ ಬಾಸ್​ ಒಟಿಟಿಗೆ ಎಂಟ್ರಿ ನೀಡಿದ್ದಾರೆ. ಮಲೆನಾಡ ಮೂಲದ ಸ್ಪೂರ್ತಿ ಗೌಡ ಅವರು ವೇದಿಕೆ ಮೇಳೆ ತಮ್ಮ ಕನಸನ್ನು ಹೇಳಿಕೊಂಡಿದ್ದು, ತಮಗೆ ನಟಿಯಾಗಬೇಕು ಎಂದು ಕನಸಿತ್ತು ಆದರೆ ಅದು ಇದೀಗ ಈಡೇರಿದೆ ಎಂದು ಹೇಳಿದ್ದಾರೆ.

ಸ್ಪೂರ್ತಿ ಗೌಡ


ಮುಂಗಾರು ಮಳೆ ನೋಡಿ ನಟಿಯಾಗಬೇಕೆಂದು ನಿರ್ಧರಿಸಿದೆ:

ಇನ್ನು, 4ನೇ ಸ್ಪರ್ಧಿಯಾಗಿ ವೇದಿಕೆ ಮೇಲೆ ಬಂದ ಮಲೆನಾಡ ಹುಡುಗಿ ಸ್ಪೂರ್ತಿ ಗೌಡ, ತಮ್ಮ ಕನಸಿನ ಬಗ್ಗೆ ಹೇಳಿಕೊಡಿದ್ದಲ್ಲದೇ ಬೆಂಗಳೂರು ಒಂದು ಮಾಯಾನಗರಿ ಎಂದು ಹೇಳಿದ್ದಾರೆ. ಇದಲ್ಲದೇ ತಾನು  ‘ಮುಂಗಾರು ಮಳೆ’ ಸಿನಿಮಾ ನೋಡಿದ ಮೇಲೆ ನಾನು ನಟಿ ಆಗಬೇಕು ಎಂದು ಕನಸು ಕಂಡೆ. ನನಗೆ ಈ ಜೀವನದಲ್ಲಿ ಏನೇನು ಬೇಕು ಎನ್ನುವುದು ಚನ್ನಾಗಿ ಗೊತ್ತು. ಆದರೆ ಒಂದೇ ಒಂದು ನನ್ನಲ್ಲಿರುವ ದೌರ್ಭಲ್ಯ ಎಂದರೆ ಅದು ನಾನು ವೀಕ್ ಆಗಿದ್ದೀನಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನನ್ನಲ್ಲಿರು ನಗು ಎಲ್ಲದ್ದಕ್ಕಿಂತ ಹೆಚ್ಚು ಶಕ್ತಿಯುತವಾಗಿದೆ ಎಂದು ನಾನು ತಿಳಿದುಕೊಂಡಿರುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bigg Boss OTT: ಈ ಮೂರು ಸಂಖ್ಯೆಯ ಕ್ಯಾಂಡಿಡೇಟ್ ಗಳು ಗೆಲ್ತಾರಂತೆ, ಆರ್ಯವರ್ಧನ್ ಗುರೂಜಿ ಭವಿಷ್ಯ ನಿಜವಾಗುತ್ತಾ?

ಅಲ್ಲದೇ ನನ್ನ ತಾಯಿ ತೀರಿಕೊಂಡು ಒಂದು ವರ್ಷವಾಗಿದೆ. ಆದರೆ ಅವರು ನನಗೆ  ಯಾವುದೇ ಕಾರಣಕ್ಕೂ ಕುಗ್ಗಬಾರದು ಎಂದು ಹೇಳಿಕೊಟ್ಟಿದ್ದಾರೆ. ಹಾಗೆಯೇ ನಾನು ಇದ್ದು ತೋರಿಸುತ್ತೇನೆ ಎಂದು ಹೇಳಿದ್ದಾರೆ.
 ಈ ನಂಬರ್​ನವರೇ ಈ ಬಾರಿ ಬಿಗ್​ ಬಾಸ್​ ವಿನ್ನರಂತೆ:



ಹೌದು, ನಾನು ಅಂದ್ರೆ ನಂಬರ್​, ನಂಬರ್ ಅಂದ್ರೆ ನಾನು ಎಂದು ಭವಿಷ್ಯ ಹೇಳುವ ಆರ್ಯವರ್ಧನ್​ ಗುರೂಜಿ ಅವರು ಇದೀಗ ಬಿಗ್​ ಬಾಸ್​ ವೇದಿಕೆ ಮೂಲಕ ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಈ ವೇಳೆ ಬಿಗ್​ ಬಾಸ್​ ಒಟಿಟಿ ವೇದಿಕೆಗೆ ಅವರನ್ನು ಕಿಚ್ಚ ಸುದೀಪ್​ ಅವರು ಅದ್ಧೂರಿಯಾಗಿ ವೆಲ್​ಕಮ್ ಮಾಡಿಕೊಂಡರು. ಅಲ್ಲದೇ ಗುರೂಜಿ ಅವರು ಇಲ್ಲಿಯೂ ತಮ್ಮ ನಂಬರ್ ಭವಿಷ್ಯ ಹೇಳಿದ್ದು, ಈ ಬಾರಿ ಯಾರು ಬಿಗ್​ ಬಾಸ್​ ವಿನ್​ ಆಗಿಲಿದ್ದಾರೆ ಎಂದು ಹೇಳಿದ್ದಾರೆ. ಆರ್ಯವರ್ಧನ್​ ಗುರೂಜಿ ಪ್ರಕಾರ 3, 5, 6 ನಂಬರ್‌ನ ಸ್ಪರ್ಧಿಗಳು ಈ ಸಲ ಬಿಗ್​ ಬಾಸ್​ ಒಟಿಟಿ ವಿನ್ನರ್ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಾಗಳೇ 3ನೇ ಸ್ಪರ್ಧಿಯಾಗು ತುಳು ನಟ ರೂಪೇಶ್​ ಶೆಟ್ಟಿ ಮನೆಯನ್ನು ಪ್ರವೇಶಿಸಿದ್ದಾರೆ.

Published by:shrikrishna bhat
First published: