Bigg Boss OTT ಗೆ ಬಂದ್ರು ತುಳು ಸಿನಿಮಾ ಸೂಪರ್​ ಸ್ಟಾರ್​ ರೂಪೇಶ್ ಶೆಟ್ಟಿ 

ಬಿಗ್​ ಬಾಸ್​ ಓಟಿಟಿ

ಬಿಗ್​ ಬಾಸ್​ ಓಟಿಟಿ

ಬಿಗ್​ ಬಾಸ್​ ಓಟಿಟಿ ಗೆ ಈಗಾಗಲೇ ಇಬ್ಬರು ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ಇದೀಗ 3ನೇ ಸ್ಪರ್ಧಿ ಎಂಟ್ರಿ ನೀಡಿದ್ದಾರೆ. ಮೂರನೇ ಸ್ಪರ್ಧಿಯಾಗಿ ಕರಾವಳಿಯ ಸೂಪರ್ ಸ್ಟಾರ್​ ತುಳು ನಟ ರೂಪೇಶ್ ಶೆಟ್ಟಿ

  • Share this:

ಬಿಗ್​ ಬಾಸ್​ ಓಟಿಟಿ ಗೆ ಈಗಾಗಲೇ ಇಬ್ಬರು ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ಇದೀಗ 3ನೇ ಸ್ಪರ್ಧಿ ಎಂಟ್ರಿ ನೀಡಿದ್ದಾರೆ. ಮೂರನೇ ಸ್ಪರ್ಧಿಯಾಗಿ ಕರಾವಳಿಯ ಸೂಪರ್ ಸ್ಟಾರ್​ ತುಳು ನಟ ರೂಪೇಶ್ ಶೆಟ್ಟಿ (Roopesh Shetty) ಎಂಟ್ರಿ ಕೊಟ್ಟಿದ್ದಾರೆ.  ಕನ್ನಡ (Kannada)  ಬಿಗ್ ಬಾಸ್ ಒಟಿಟಿ (Bigg Boss OTT) ಇಂದಿನಿಂದ ಪ್ರಾರಂಭವಾಗಲಿದೆ. ವೂಟ್‌ ಆ್ಯಪ್‌ನಲ್ಲಿ (Voot App)  ಇಂದಿನಿಂದ  ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ (Streaming) ಆಗಲಿದೆ. ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ (Kichcha Sudeep) ಅವರೇ ಇದನ್ನು ನಡೆಸಿಕೊಡುತ್ತಿದ್ದಾರೆ. ಇಂದು ಸಂಜೆ 7 ಗಂಟೆಯಿಂದ ಅಧಿಕೃತವಾಗಿ ಬಿಗ್​ ಬಾಸ್​ ಓಟಿಟಿ ಮೊದಲ ಸೀಸನ್​ ಆರಂಭವಾಗಲಿದೆ. 


ಬಿಗ್​ ಬಾಸ್​ಗೆ ಎಂಟ್ರಿ ಕೊಟ್ಟ ಕರಾವಳಿ ಸೂಪರ್ ಸ್ಟಾರ್​:


ಹೌದು, ಬಿಗ್​ ಬಾಸ್​ ಓಟಿಟಿ ಇಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಈಗಾಗಲೇ ಬಿಗ್​ ಬಾಸ್​ ಮನೆಗೆ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್​ ಗುರೂಜಿ ಮತ್ತು 2ನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಕರಾವಳಿ ಸೂಪರ್ ಸ್ಟಾರ್​ ರೂಪೇಶ್ ಶೆಟ್ಟಿ ಎಂಟ್ರಿ ನೀಡಿದ್ದಾರೆ. ತುಳು ನಟ ರೂಪೇಶ್ ಶೆಟ್ಟಿ  ಅವರು ಇದೀಗ ಬಿಗ್​ ಬಾಸ್​ ಓಟಿಟಿ ಗೆ 3ನೇ ಸ್ಪರ್ಧಿಯಾಗಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.



ಯಾರು ಈ ರೂಪೇಶ್ ಶೆಟ್ಟಿ?:


ಕರಾವಳಿ ಭಾಗದ ತುಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೂಪರ್ ಸ್ಟಾರ್​ ಎನಿಸಿಕೊಂಡಿರುವ ನಟ ರೂಪೇಶ್​ ಶೆಟ್ಟಿ ಅವರು ಬಿಗ್​ ಬಾಸ್​ ಓಟಿಟಿ ಮನೆಗೆ 3ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಕೇವಲ ತುಳು ಮಾತ್ರವಲ್ಲದೆ ಇವರು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅಲ್ಲದೇ ನಿರೂಪಕರಾಗಿಯೂ ಗುರುತಿಸಿಕೊಂಡಿರುವ ಇವರು, ಡೇಂಜರ್ ಜೋನ್, ನಿಶಬ್ಧ 2 ಮತ್ತು ಪಿಶಾಚಿ 2 ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯುವ ನಟನಾಗಿ ಮಿಂಚುತ್ತಿರುವ ರೂಪೇಶ್​ ಬಿಗ್​ ಬಾಸ್​ಗೆ ಎಂಟ್ರಿ ನೀಡಿದ್ದು, ದೊಡ್ಮನೆ ಒಳಗೆ ಹೇಗಿರಲಿದ್ದಾರೆ ಎಂದು ಕಾದು ನೋಡಬೇಕಿದೆ. ಈಗಾಗಲೇ ವೂಟ್​ ನಲ್ಲಿ ಕೇವಲ ಸ್ಪರ್ಧಿಗಳ ಪ್ರೋಮೋ ಬಿಡುಗಡೆ ಮಾಡಲಾಗುತ್ತಿದ್ದು, ಸಂಜೆ 7 ಗಂಟೆಯಿಂದ ಅದ್ಧೂರಿ ಓಪನಿಂಗ್​ ಸೆರೆಮನೆ ಪ್ರಸಾರವಾಗಲಿದೆ.


ರೂಪೇಶ್ ಶೆಟ್ಟಿ


ಇನ್ನು, ರೂಪೇಶ್​ ಶೆಟ್ಟಿ ಗಿರ್ಗಿಟ್ ಎಂಬ ತುಳು ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಅಮ್ಮೆರ್ ಪೊಲೀಸ್ ಎಂಬ ತುಳು ಸಿನಿಮಾ ಇವರ ವೃತ್ತಿ ಜೀವನಕ್ಕೆ ಮಹತ್ತರವಾದ ತಿರುವನ್ನು ನೀಡಿತು. ಇದರ ಜೊತೆ ಕೆಲ ದಿನಗಳ ಹಿಂದೆ ತೆರೆಕಂಡ ಸ್ಯಾಂಡಲ್​ವುಡ್​ನ ಗೋವಿಂದ ಗೋವಿಂದ eಂಬ ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ.


ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸ್ ಗೌಡ


ಸೋನು  ಶ್ರೀನಿವಾಸ್ ಗೌಡ ಅದ್ಧೂರಿ ಆಗಮನ:


ಬಿಗ್​ ಬಾಸ್​ ಓಟಿಟಿ ಮೊದಲ ಸೀಸನ್​ನ 2ನೇ ಸ್ಪರ್ಧಿಯಾಗಿ ಸೋನು  ಶ್ರೀನಿವಾಸ್ ಗೌಡ ಅವರು ಎಂಟ್ರಿ ನೀಡಿದ್ದಾರೆ. ಅನೇಕ ಆಲ್ಬಂ ಸಾಂಗ್​, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿರುವ ಸೋನು ಶ್ರೀನಿವಾಸ ಗೌಡ ಅವರು ಎಲ್ಲರ ನಿರೀಕ್ಷೆಯಂತೆ ಈ ಬಾರಿ ಬಿಗ್​ ಬಾಸ್​ ಮನೆಗೆ ಪ್ರವೇಶ ಮಾಡಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು