• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Bigg Boss OTT: ಬಿಗ್‌ಬಾಸ್‌ ಮನೆಗೆ ಬಂದ್ರು ರಾಜಸ್ಥಾನ ಹುಡುಗಿ, ಸೂಪರ್​ ಎಂಟ್ರಿ ಕೊಟ್ಟ ಉದಯ್‌ ಸೂರ್ಯ

Bigg Boss OTT: ಬಿಗ್‌ಬಾಸ್‌ ಮನೆಗೆ ಬಂದ್ರು ರಾಜಸ್ಥಾನ ಹುಡುಗಿ, ಸೂಪರ್​ ಎಂಟ್ರಿ ಕೊಟ್ಟ ಉದಯ್‌ ಸೂರ್ಯ

ಉದಯ್ ಸೂರ್ಯ

ಉದಯ್ ಸೂರ್ಯ

ರಾಜಸ್ಥಾನಿ ಬೆಡಗಿ ಕಿರಣ್ ಯೋಗೇಶ್ವರ್ (Kiran Yogeshwar) ಹಾಗೂ ರಾಮಾಚಾರಿ (Ramachary) ಸೀರಿಯಲ್‌ ನಟ ಉದಯ್ ಸೂರ್ಯ (Uday Surya)  ಎಂಟ್ರಿ ನೀಡಿದ್ದಾರೆ. 

 • Share this:

‘ಬಿಗ್ ಬಾಸ್​ ಒಟಿಟಿ’ (Bigg Boss OTT) ಭರ್ಜರಿಯಾಗಿ ಆರಂಭವಾಗಿದ್ದು, ವಿಭಿನ್ನ ಪ್ರತಿಭೆಗಳು ಮನೆಯೊಳಗೆ ಲಾಕ್​ ಆಗುತ್ತಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Big Boss OTT) ಈ ಬಾರಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗಲಿದೆ. ಈ ರಿಯಾಲಿಟಿ ಶೋಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.  ಹೌದು, ರಾಜಸ್ಥಾನಿ ಬೆಡಗಿ ಕಿರಣ್ ಯೋಗೇಶ್ವರ್ (Kiran Yogeshwar) ಹಾಗೂ ರಾಮಾಚಾರಿ (Ramachaari) ಸೀರಿಯಲ್‌ ನಟ ಉದಯ್ ಸೂರ್ಯ (Uday Surya)  ಎಂಟ್ರಿ ನೀಡಿದ್ದಾರೆ. 


ಕನ್ನಡದಲ್ಲಿ ಮಾತನಾಡಿದ ಕಿರಣ್ ಯೋಗೇಶ್ವರ್:


ಕನ್ನಡ ಬಿಗ್​ ಬಾಸ್​ ಒಟಿಟಿ ಸೀಸನ್​ 1ರ 7ನೇ ಸ್ಪರ್ಧಿಯಾಗಿ ರಾಜಸ್ಥಾನದ ಬೆಡಗಿ ಕಿರಣ್ ಯೋಗೇಶ್ವರ್​ ಎಂಟ್ರಿ ನೀಡಿದ್ದಾರೆ. ರಾಜಸ್ಥಾನ್ ಮೂಲದವರಾದ ಅವರು, ವೇದಿಕೆ ಮೇಲೆ ಕನ್ನಡದಲ್ಲಿ ಮಾತನಾಡುವ ಮೂಲಕ ಲಿಚ್ಚ ಸುದೀಪ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು, ಇವರು ಡ್ಯಾನ್ಸ್ ಮತ್ತು ಯೋಗವನ್ನು ಹೇಳಿಕೊಡುವವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.ಹೀಗಾಗಿ ಇವರು ಅನೇಕರಿಗೆ ಚಿರಪರಿಚಿತರು. vಏದಿಕೆ ಮೇಲೆ ಮಾತನಾಡಿದ ಅವರು, ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಅದಕ್ಕೆ ನಾನು ಈಗ ಇಲ್ಲಿಗೆ ಬಂದಿದ್ದೇನೆ. ನಮ್ಮ ಮನೆಯವರೆಲ್ಲರೂ ಹಳ್ಳಿಯವರು. ನನಗೂ ಮೊದಲಿಗೆ ಸಿಟಿ ಜೀವನ ಕಷ್ಟವಾಗಿತ್ತು. ನನ್ನ ಫ್ಯಾಮಿಲಿ ಟಿಪಿಕಲ್ ರಾಜಸ್ಥಾನಿಯವರು. ನನಗೆ ಚಿಕ್ಕವಳಿದ್ಆಗಲೇ ಮದುವೆ ಮಾಡ್ತಿನಿ ಅಂದಿದಕ್ಕೆ ಮನೆ ಬಿಟ್ಟು ಬಂದಿದ್ದೆ ಎಂದು ಹೇಳಿದ್ದಾರೆ.
ಬಿಗ್​ ಬಾಸ್​ ಮನೆಗೆ ರಾಮಾಚಾರಿ ಎಂಟ್ರಿ:


ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್​ನ ನಟ ಉದಯ್ ಸೂರ್ಯ ಅವರು ಇದೀಗ ಬಿಗ್​ ಬಾಸ್​ಗೆ ಎಂಟ್ರಿ ನೀಡಿದ್ದಾರೆ. ಉದಯ್ ಅಲಿಯಾಸ್‌ ವಿವೇಕ್‌ ಕೆಲ ಸಮಯದಿಂದ ಕಿರುತೆರಯಿಂದ ದೂವಾಗಿದ್ದರು. ಆದರೆ ಇದೀಗ ಮತ್ತೆ ರಾಮಾಚಾರಿ ಸೀರಿಯಲ್​ ಮೂಲಕ ಸೂಪರ್ ಎಂಟ್ರಿ ನೀಡಿದ್ದಾರೆ. ಸೀರಿಯಲ್​ ನಲ್ಲಿ ಸೌಮ್ಸಯ ಸ್ವಭಾವದ ಉದಯ್​ ಇಂದು ವೇದಿಕೆಗೆ ಡೇರಿಂಗ್​ ಎಂಟ್ರಿ ಕೊಟ್ಟಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆಯ ಮಟ್ಟ ದುಪ್ಪಟ್ಟಾಗಿದೆ.
ಇನ್ನು, ನಾಗಕನ್ನಿಕೆ ಎಂಬ ಧಾರವಾಹಿಯಲ್ಲಿ ಖಳನಾಯಕನಾಗಿ ಮಿಂಚಿದ್ದ ಉದಯ್ ಅವರು, ನಂತರ ಕಿರಣ್ ರಾಜ್​ ಅಭಿನಯದ ಬಡ್ಡೀಸ್​ ಸಿನಿಮಾದ ಮೂಲಕ ಸ್ಟಾಂಡಲ್​ವುಡ್​ಗೂ ಎಂಟ್ರಿ ನೀಡಿದ್ದಾರೆ. ಕಿರಣ್ ರಾಜ್​ ಬೆಸ್ಟ್ ಪ್ರೇಂಡ್​ ಆಗಿರುವ ಉದಯ್​ ಬಡ್ಡೀಸ್​ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು. ಇದಕ್ಕಾಗಿಯೇ ಸ್ನೇಹಿತನನ್ನು ಬಿಟ್ಟುಕೊಡಲು ಸ್ವತಃ ಕಿರಣ್ ಆಗಮಿಸಿದ್ದರು. ಇವರಿಬ್ಬರ ರೀಲ್ಸ್ ಗಳು ಸೋಶಿಯಲ್ ಮೀಡಿಐಆದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ.


ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಗೆ ‘ಜೋಶ್​‘ ಹುಡುಗನ ಎಂಟ್ರಿ, ಸಖತ್ ಕಾಂಪಿಟೇಶನ್​​ ಕೊಡ್ತಾರಾ ರಾಕೇಶ್‌ ಅಡಿಗ?


ಬಿಗ್​ ಬಾಸ್​ ಮನೆಯೊಳಗೆ ಇವರೆಲ್ಲಾ ಇದ್ದಾರೆ:

top videos


  ಇನ್ನು, ಈಗಾಗಲೇ ಕೆಲ ಸ್ಪರ್ಧಿಗಳು ಇಗ್​ ಬಾಸ್​ ಮನೆಯೊಳಗೆ ಪ್ರವೇಶಿಸಿದ್ದಾರೆ. ಅವರುಗಳೆಂದರೆ, ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ಥಿ ಗೌಡ, ಲೋಕೇಶ್ ಕುಮಾರ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ನಟ ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ ಅವರು ಇವರುಗಳ ಜೊತೆ ಸದ್ಯ ಮನೆಯ ಸದ್ಯರಾಗಿದ್ದಾರೆ. ಬಿಗ್​ ಬಾಸ್​ ಒಟಿಟಿ 40 ದಿನಗಳವರೆಗೆ ಇರಲಿದೆ. ನಂತರ 100 ದಿನ ನಡೆಯುವ ಬಿಗ್​ ಬಾಸ್​ ಸೀಸನ್​ 9ಕ್ಕೆ ಇಲ್ಲಿನ ಅಂತಿಮ ಹಂತದಲ್ಲಿ ಉಳಿದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ.

  First published: