Bigg Boss OTT: ಬಿಗ್ ಬಾಸ್​ ಮನೆಯಿಂದ ಉದಯ್​ ಸೂರ್ಯ ಔಟ್!

ಪ್ರತಿ ವಾರವೂ ಮನೆಯಿಂದ ಒಬ್ಬರು ಮನೆಯಿಂದ ಹೊರ ಬರುತ್ತಾರೆ. 6 ವಾರವಿರುವ ಈ ಬಿಗ್ ಬಾಸ್ ಓಟಿಟಿ ಸೀಸನ್‌ನಲ್ಲಿ ಇದೀಗ ಉದಯ್ ಸೂರ್ಯ ಔಟ್ ಆಗಿದ್ದಾರೆ.

ಉದಯ್ ಸೂರ್ಯ

ಉದಯ್ ಸೂರ್ಯ

  • Share this:
ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್ (Bigg Boss OTT)​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಎಲ್ಲೆಲ್ಲೂ ಬಿಗ್​​ ಬಾಸ್​ ಚರ್ಚೆಗಳು ಶುರುವಾಗಿದೆ.  3ನೇ ವಾರದ (2nd Week) ಎಲಿಮಿನೇಷನ್​ನಲ್ಲಿ (Elimination) ಉದಯ್​ ಸೂರ್ಯ ಹೊರ ಹೋಗಿದ್ದಾರೆ. ಈ ಬಾರಿ 7ಸ್ಪರ್ಧಿಗಳು ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದರು . ಈ ಪೈಕಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು, ಅತಿ ಕಡಿಮೆ ವೋಟ್ ಪಡೆದು ಉದಯ್​ ಸೂರ್ಯ (Uday Surya) ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ಎರಡನೇ ಎಲಿಮಿನೇಷನ್ ಆಗಿದೆ.

ಅನೇಕ ಬಾರಿ ಕಿರಿಕ್ ಮಾಡಿಕೊಂಡಿದ್ದ ಉದಯ್

ಪ್ರತಿ ವಾರವೂ ಮನೆಯಿಂದ ಒಬ್ಬೊಬ್ಬರೆ ಮನೆಯಿಂದ ಹೊರ ಬರುತ್ತಾರೆ. 6 ವಾರವಿರುವ ಈ ಬಿಗ್ ಬಾಸ್ ಓಟಿಟಿ ಸೀಸನ್‌ನಲ್ಲಿ ಇದೀಗ ಉದಯ್ ಸೂರ್ಯ ಔಟ್ ಆಗಿದ್ದಾರೆ. ಮನೆಯಲ್ಲಿ ಇರುವಂತಹ ರೀತಿ, ವಾರದ ಪರ್ಫಾಮೆನ್ಸ್, ಆಡಿರುವ ಮಾತು ಎಲ್ಲಾ ಗಣನೆಗೆ ತೆಗೆದುಕೊಂಡು ಓರ್ವ ಸ್ಪರ್ಧಿಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗುತ್ತದೆ. ಈ ವಾರ ಮನೆಯಿಂದ ಉದಯ್ ಸೂರ್ಯ ಹೊರ ನಡೆದಿದ್ದಾರೆ.

ದೊಡ್ಮನೆಯಲ್ಲಿ ಹೆಚ್ಚಾಗಲಿದೆ ಕಾಂಪಿಟೇಷನ್​

ಈ ಮೂಲಕ ದೊಡ್ಮನೆ ಸೇರಿದ್ದ 16 ಮಂದಿಯಲ್ಲಿ ಈಗ 11 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇನ್ನು ಕೇವಲ ಮೂರು ವಾರಗಳ ಕಾಲ ‘ಬಿಗ್ ಬಾಸ್ ಒಟಿಟಿ’ ನಡೆಯುವುದರಿಂದ ಕಾಂಪಿಟೇಷನ್​ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೊಮಣ್ಣ ಮೇಲೆ ಈ ವಾರದ ನಾಮಿನೇಷನ್ ತೂಗುಗತ್ತಿ ಇತ್ತು. ಆ ಪೈಕಿ ಆರ್ಯವರ್ಧನ್ ಗುರೂಜಿ ಮೊದಲು ಸೇವ್ ಆದರು. ಆ ಬಳಿಕ ರೂಪೇಶ್​ ಶೆಟ್ಟಿ, ಸೋಮಣ್ಣ, ಅಕ್ಷತಾ, ಚೈತ್ರಾ, ಜಯಶ್ರೀ ಉಳಿದುಕೊಂಡರು. ಕೊನೆಯಲ್ಲಿ ಉದಯ್ ಎಲಿಮಿನೇಟ್ ಆಗಿದ್ದಾರೆ.

ಉದಯ್​ ಮೇಲಿತ್ತು ಹಲವು ಆರೋಪಗಳು


ಬಿಗ್ ಬಾಸ್ ಮನೆಯಲ್ಲಿ ಉದಯ್​ ಸೂರ್ಯ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದರು. ಕೆಲವರ ಬಗ್ಗೆ ಅವರು ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆ, ಹೆಣ್ಣು ಮಕ್ಕಳನ್ನು ಕೀಳಾಗಿ ನೋಡಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಇಡೀ ಮನೆಯವರು ಉದಯ್ ವಿರುದ್ಧ ತಿರುಗಿ ಬಿದ್ದರು. ಇನ್ನು, ಮನೆಯಲ್ಲಿ ಅವರು ಡಬಲ್​ಗೇಮ್ ಆಡುತ್ತಿದ್ದರು ಎಂಬ ಆರೋಪ ಕೂಡ ಇದೆ. ಇದರಿಂದ ಕೂಡ ಅವರಿಗೆ ಹಿನ್ನಡೆ ಆಗಿದೆ.

ಸಾನ್ಯಾ, ರೂಪೇಶ್​ ಬಗ್ಗೆ ಮಾತಾಡಿದ್ದ ಉದಯ್​ 

ಒಳ ಉಡುಪಿನ ವಿಚಾರಕ್ಕೆ ಸಂಬಂಧಿಸಿ ಸಾನ್ಯಾ ಹಾಗೂ ಉದಯ್ ನಡುವೆ  ಹಾಸ್ಯಮಯ ಸಂಭಾಷಣೆ ನಡೆದಿತ್ತು. ಆ ಸಂದರ್ಭದಲ್ಲಿ ಉದಯ್​ಗೆ ಚೈತ್ರಾ ಕ್ಲೋಸ್ ಇದ್ದರು. ಹಾಸ್ಯದ ರೀತಿಯಲ್ಲಿ ನಡೆದ ಒಳ ಉಡುಪಿನ ವಿಚಾರವನ್ನು ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಚೈತ್ರಾ ಎದುರು ಬಣ್ಣಿಸಿದ್ದರು ಉದಯ್. ಇದು ಚೈತ್ರಾಗೆ ಇಷ್ಟವಾಗಿಲ್ಲ.

ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಯ ಲವ್​​ ಬರ್ಡ್ಸ್​​ಗೆ ಕಿಚ್ಚನ ವಾರ್ನಿಂಗ್​! ಹೀಗೆ ಮಾಡ್ತಿದ್ರೆ ಗೇಟ್​ ಪಾಸ್​ ಫಿಕ್ಸ್!​

‘ಗರ್ಲ್​ಫ್ರೆಂಡ್ ನಂದು ಇದ್ದಾಗ ಜಶ್ವಂತ್ ಒಂದು ರೀತಿಯಲ್ಲಿ ಇರುತ್ತಾನೆ. ಅವಳು ಇಲ್ಲದ್ದಾಗ ಸಾನ್ಯಾ ಬಳಿ ಬೇರೆ ರೀತಿಯಲ್ಲಿ ಇರುತ್ತಾನೆ. ಕ್ಯಾಮೆರಾ ಇಲ್ಲದಿದ್ದರೆ ಇಲ್ಲಿ ಬೇರೆಯದೇ ಆಗುತ್ತಿತ್ತು. ಸಾನ್ಯಾಳನ್ನು ಬೀಳಿಸಿಕೊಳ್ಳಬೇಕು ಎಂಬುದು ರೂಪೇಶ್​ಗೆ ಇದೆ ಎಂಬುದನ್ನೂ ಚೈತ್ರಾ ಎದುರು ಉದಯ್ ಹೇಳಿದ್ದರು ಈ ಮೂಲಕ ಚೈತ್ರ ಹಾಗೂ ಸಾನ್ಯ ಕೆಂಗಣ್ಣಿಗೆ ಗುರಿಯಾಗಿದ್ದ ಉದಯ್ ಸೂರ್ಯ ಇದೀಗ ಮನೆಯಿಂದ ಔಟ್ ಆಗಿದ್ದಾರೆ.
Published by:Pavana HS
First published: