Bigg Boss OTT: ಬಿಗ್ ಬಾಸ್ ಮನೆಯಿಂದ ಅರ್ಜುನ್ ಔಟ್!​? ಕಾರಣ ಏನು?

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅರ್ಜುನ್ ಹಾಗೂ ಮೊದಲಾದವರು ರೇಸ್​ನಲ್ಲಿದ್ದರು. ಈ ವೇಳೆ ಅರ್ಜುನ್ ಅವರ ಭುಜಕ್ಕೆ ತೀವ್ರ ಪೆಟ್ಟಾಗಿತ್ತು. ನೋವು ಕಡಿಮೆ ಆಗಿಲ್ಲ. ಈ ಕಾರಣಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಅರ್ಜುನ್ ರಮೇಶ್

ಅರ್ಜುನ್ ರಮೇಶ್

  • Share this:
ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್ (Bigg Boss OTT)​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಎಲ್ಲೆಲ್ಲೂ ಬಿಗ್​​ ಬಾಸ್​ ಚರ್ಚೆಗಳು ಶುರುವಾಗಿದೆ.  ಎರಡನೇ ವಾರದ (2nd Week) ಎಲಿಮಿನೇಷನ್​ಗೆ (Elimination) ಸಕಲ ಸಿದ್ಧತೆ ನಡೆದಿದೆ. ಈ ಬಾರಿ 9 ಸ್ಪರ್ಧಿಗಳು ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದಾರೆ. ಆ ಪೈಕಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಕಳೆದ ವಾರ ಕ್ಯಾಪ್ಟನ್ ಆಗಿದ್ದ ಅರ್ಜುನ್ ರಮೇಶ್ (Arjun Ramesh) ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗ್ತಿದೆ.  ಟಾಸ್ಕ್​ ವೇಳೆ ಗಾಯಗೊಂಡಿದ್ದ ಅರ್ಜುನ್​ ರಮೇಶ್​, ಕೆಲ ದಿನಗಳಿಂದ ನೋವಿನಿಂದ ಬಳಲುತ್ತಿದ್ದಾರೆ.

ಟಾಸ್ಕ್​​ನಲ್ಲಿ ಗಾಯಗೊಂಡಿದ್ದೆ ಅರ್ಜುನ್

ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅರ್ಜುನ್ ಹಾಗೂ ಮೊದಲಾದವರು ರೇಸ್​ನಲ್ಲಿದ್ದರು. ಈ ವೇಳೆ ಅರ್ಜುನ್ ಅವರ ಭುಜಕ್ಕೆ ತೀವ್ರ ಪೆಟ್ಟಾಗಿತ್ತು. ಅವರು ಹ್ಯಾಂಗಿಂಗ್ಸ್ ಹಾಕಿಕೊಂಡೇ ಒಂದು ವಾರ ಕಳೆದಿದ್ದಾರೆ. ದಿನ ಕಳೆದ್ರು ಅವರಿಗೆ ನೋವು ಕಡಿಮೆ ಆಗಿಲ್ಲ. ಈ ಕಾರಣಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.

Bigg Boss OTT Kannada Arjun Ramesh elected as first captain of house
ಅರ್ಜುನ್ ರಮೇಶ್


ಗಾಯದ ಸಮಸ್ಯೆಯೇ ಕಾರಣವಾಯ್ತಾ?

ಈ ವಾರ ಜಶ್ವಂತ್ ಅವರು ಬಿಗ್ ಬಾಸ್​ನ ಕ್ಯಾಪ್ಟನ್ ಆಗಿದ್ದಾರೆ. ಈ ಕಾರಣಕ್ಕೆ ಅರ್ಜುನ್ ಅವರು ಟಾಸ್ಕ್​ಗಳನ್ನು ಆಡಲೇಬೇಕಿದೆ. ಆದರೆ, ಗಾಯದ ಸಮಸ್ಯೆ ಇಟ್ಟುಕೊಂಡು ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ಅರ್ಜುನ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.

ಅರ್ಜುನ್​ ರಮೇಶ್​ ನಿಜಕ್ಕೂ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದಾರಾ ಅನ್ನೋದು ಇಂದು (ಆಗಸ್ಟ್ 20) ಸಂಜೆ ನಡೆವ ಎಲಿಮಿನೇಷನ್​ ಎಪಿಸೋಡ್​ನಲ್ಲಿ ಗೊತ್ತಾಗಲಿದೆ. ಕಳೆದ ವಾರ ಕಿರಣ್ ಯೋಗೇಶ್ವರ್​ ಅವರು ಬಿಗ ಬಾಸ್​ ಮನೆಯಿಂದ ಹೊರಗೆ ಹೋಗಿದ್ದಾರೆ.

ಶುರುವಾಗಿದೆ ಕ್ಯಾಪ್ಟನ್ ಪಟ್ಟಕ್ಕಾಗಿ ಸರ್ಕಸ್

ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್ ಬರುವ ವಾರದ ಸಮಯ ಇದು. ಬಿಗ್ ಬಾಸ್ ಮನೆಯೊಳಗೆ ನಾಯಕನ ಜವಾಬ್ದಾರಿಗಾಗಿ ಪ್ರತಿಬಾರಿ ಸ್ಪರ್ಧಿಗಳು ಸಾಕಷ್ಟು ಪ್ರಯತ್ನ ಮಾಡುವುದನ್ನು ಕಾಣಬಹುದು. ಜಸ್ವಂತ್ ಬೋಪಣ್ಣ (Jashwanth Bopanna) ಬಿಗ್ ಬಾಸ್ ಕನ್ನಡ OTT ನ ಹೊಸ ನಾಯಕನಾಗಲಿದ್ದಾರೆ.

ಇದನ್ನೂ ಓದಿ: Bigg Boss OTT: ಇವ್ರೆಲ್ಲ ಇನ್ನೂ ಬಿಗ್​ಬಾಸ್​ ಮನೆಯಲ್ಲಿ ಅಸಲಿ ಮುಖ ತೋರಿಸಿಲ್ವಂತೆ! ಕಿರಣ್​ ಕಥೆ, ನ್ಯೂಸ್​ 18 ಜೊತೆ

ನಾಯಕತ್ವದ ಟಾಸ್ಕ್​ಗಳೇ ಈ ಬಾರಿಯ ಹೈಲೈಟ್

ನಾಯಕತ್ವಕ್ಕಾಗಿ ನೀಡಲಾದ ಟಾಸ್ಕ್ ಅನ್ನು ಜಸ್ವಂತ್ ಹೇಗೆ ನಿಭಾಯಿಸಿದ್ದಾರೆ, ಅದರಲ್ಲಿ ಹೇಗೆ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಿಗ್ ಬಾಸ್ ಕನ್ನಡ OTT ಯ ಮುಂದಿನ ಸಂಚಿಕೆ ನಾಯಕತ್ವದ ಯುದ್ಧವನ್ನು ತೋರಿಸಲಿದ್ದು ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.

ಹೊಸ ಲುಕ್ ನಲ್ಲಿ ಸುದೀಪ್​
 ಈ ವಾರ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಹೊಸ ರೀತಿಯಲ್ಲೇ ಕಾಣಿಸಿಕೊಂಡಿದ್ದಾರೆ. ಕ್ಲೀನ್ ಶೇವ್ ಮಾಡಿರೋ ಕಿಚ್ಚ ಸುದೀಪ್, ಇನ್ನಷ್ಟು ಯಂಗ್ ಅಂಡ್​ ಹ್ಯಾಂಡ್ಸಮ್​ ಆಗಿ ಕಾಣುತ್ತಿದ್ದಾರೆ. ಕ್ಲೀನ್ ಶೇವ್​ ಲುಕ್​ನಲ್ಲಿ ಸುದೀಪ್​ ವೇದಿಕೆ ಮೇಲಿರೋ ಫೋಟೋವನ್ನು ಕಲರ್ಸ್​ ಸೂಪರ್ ವಾಹಿನಿಯವರು ತಮ್ಮ ಫೇಸ್​ಬುಕ್ ಪೇಜ್​​ನಲ್ಲಿ ಹಾಕಿದ್ದಾರೆ.



ಸುದೀಪ್​ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಕ್ಲೀನ್ ಶೇವ್ ಮಾಡಿಸಿಕೊಂಡಿರೋ ಸುದೀಪ್ ಮತ್ತಷ್ಟು ಯಂಗ್​​ ಆಗಿ ಕಾಣ್ತಿರೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೂಪರ್​ ಲುಕ್​, ಅಣ್ಣನ ಲುಕ್ ಸಖತ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೊಸ ಚಿತ್ರಕ್ಕೆ ಕಿಚ್ಚನ ಹೊಸ ಗೆಟಪ್

ಸುದೀಪ್​ಗೆ ಇಷ್ಟು ದಿನ ಗಡ್ಡ ಇತ್ತು. ‘ವಿಕ್ರಾಂತ್ ರೋಣ’ ಸಿನಿಮಾದಲ್ಲೂ ಅವರಿಗೆ ಅದೇ ರೀತಿಯ ಲುಕ್ ಇತ್ತು. ಅದನ್ನೇ ಸುದೀಪ್ ಮುಂದುವರಿಸಿದ್ದರು. ಈಗ ಅವರು ಏಕಾಏಕಿ ಕ್ಲೀನ್​ ಶೇವ್ ಮಾಡಿಸಿದ್ದಾರೆ. ಕಿಚ್ಚನ ಹೊಸ ಗೆಟಪ್ ಫ್ಯಾನ್ಸ್​ಗೆ ಸಖತ್ ಖುಷಿ ನೀಡಿದೆ.

Published by:Pavana HS
First published: