Bigg Boss OTT: ಮುಂದಿನ ವಾರ ಡಬಲ್ ಎಲಿಮಿನೇಷನ್!? ಕಿಚ್ಚ ಸುದೀಪ್ ಕೊಟ್ರು​ ವೈಲ್ಡ್​ ಕಾರ್ಡ್​ ಎಂಟ್ರಿ ಸುಳಿವು!

ಬಿಗ್ ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳೆಲ್ಲಾ ಶಾಕ್ ಆಗಿದ್ದಾರೆ, ಬಳಿಕ ಹೌದಾ ಅಥವಾ ಇಲ್ವಾ, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಗೊಂದಲಕ್ಕೀಡಾದ್ರು. ಬಳಿಕ ಕೆಲವರು ಹೌದು ಎಂದ್ರೆ ಇನ್ನು ಕೆಲವರು ಇಲ್ಲ ಎಂದು ಹೇಳಿದ್ದಾರೆ.

ಬಿಗ್​ ಬಾಸ್​ ಓಟಿಟಿ

ಬಿಗ್​ ಬಾಸ್​ ಓಟಿಟಿ

  • Share this:
ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್ (Bigg Boss OTT)​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಎಲ್ಲೆಲ್ಲೂ ಬಿಗ್​​ ಬಾಸ್​ ಚರ್ಚೆಗಳು ಶುರುವಾಗಿದೆ.  3ನೇ ವಾರದ (2nd Week) ಎಲಿಮಿನೇಷನ್​ನಲ್ಲಿ (Elimination) ಉದಯ್​ ಸೂರ್ಯ ಹೊರ ಹೋಗಿದ್ದಾರೆ. ಈ ಬಾರಿ 7ಸ್ಪರ್ಧಿಗಳು ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದರು . ಈ ಪೈಕಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು,  ಬಾಸ್​ ಮನೆಯಲ್ಲಿ3ನೇ ಎಲಿಮಿನೇಷನ್ ಆಗಿದೆ.  ನಿನ್ನೆ (ಆಗಸ್ಟ್​ 28 ) ಸುದೀಪ್ ಅವರ ಮೂರನೇ ವಾರದ ಸಂಚಿಕೆಯಲ್ಲಿ ಸಂಚಿಕೆಗೆ 'ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್​ನಲ್ಲಿ ಮುಂದಿನ ವಾರ ನಡೆಯೋ ಡಬಲ್ ಎಲಿಮಿನೇಷನ್ ಬಗ್ಗೆ ಸುದೀಪ್​ ಸುಳಿವು ನೀಡಿದ್ದಾರೆ. 

ಮುಂದಿನ ವಾರ ನಡೆಯುತ್ತಾ ಡಬಲ್ ಎಲಿಮಿನೇಷನ್?​​

ವಾರದ ಕಥೆ ಕಿಚ್ಚನ ಜೊತೆಯಲಿ ಸಂಚಿಕೆಯಲ್ಲಿ ಸುದೀಪ್​, ಬಿಗ್ ಬಾಸ್​ ಮನೆಯಲ್ಲಿ ನಡೆದ ಸ್ವಾರಸ್ಯಕರ ಘಟನೆ ಬಗ್ಗೆ ಚರ್ಚೆ ನಡೆಸುತ್ತಿದ್ರು. ಸುದೀಪ್​ ಕೇಳೋ ಪ್ರಶ್ನೆಗಳಿಗೆ ಸ್ಪರ್ಧಿಗಳು ಹೌದು, ಇಲ್ಲ ಅನ್ನೋ ಉತ್ತರ ನೀಡುತ್ತಿದ್ದರು. ಈ ವೇಳೆ ಸುದೀಪ್​ ಮುಂದಿನ ವಾರ ಡಬಲ್​ ಎಲಿಮಿನೇಷನ್​ ಆಗುತ್ತಾ ಅನ್ನೋ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

kichcha sudeep clean shave look in bigg boss ott weekend season pvn
ಕಿಚ್ಚ ಸುದೀಪ್


ಕಕ್ಕಾಬಿಕ್ಕಿಯಾದ ಸ್ಪರ್ಧಿಗಳು!

ಸುದೀಪ್ ಅವರ ಡಬಲ್​ ಎಲಿಮಿನೇಷನ್​ ಪ್ರಶ್ನೆ ಕೇಳಿ ಬಿಗ್​ ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳೆಲ್ಲಾ ಶಾಕ್ ಆಗಿದ್ದಾರೆ, ಬಳಿಕ ಹೌದಾ ಅಥವಾ ಇಲ್ವಾ, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಗೊಂದಲಕ್ಕೀಡಾದ್ರು. ಬಳಿಕ ಕೆಲವರು ಹೌದು ಎಂದ್ರೆ ಇನ್ನು ಕೆಲವರು ಇಲ್ಲ ಎಂದು ಹೇಳಿದ್ದಾರೆ. ಇಲ್ಲ ಎಂದ ಸ್ಪರ್ಧಿಗಳು ಡಬಲ್ ಎಲಿಮಿನೇಷ್​ನನ್ನು OTT ಸೀಸನ್‌ಗೆ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಮುಂದಿನ ವಾರ ಡಬಲ್​ ಎಲೆಕ್ಷನ್​

ಓಟಿಟಿ ಸೀಸನ್ ಕೇವಲ 42 ದಿನಗಳವರೆಗೆ ಇರುತ್ತದೆ ಎಂಬ ಅಂಶವನ್ನು ಪರಿಗಣಿಸಿ, ಡಬಲ್ ಎಲಿಮಿನೇಷನ್ ಶೀಘ್ರದಲ್ಲೇ ನಡೆಯುವ ಸಾಧ್ಯತೆಯಿದೆ ಎಂದು ಕೆಲವು ಸ್ಪರ್ಧಿಗಳು ಅಭಿಪ್ರಾಯಪಟ್ಟಿದ್ದಾರೆ. ಬಿಗ್ ಬಾಸ್ ಮನೆಯೊಳಗಿರುವ ಸ್ಪರ್ಧಿಗಳ ಸಂಖ್ಯೆಯನ್ನು ಸಹ ಅವರು ಲೆಕ್ಕ ಹಾಕಿ ಬಳಿಕ ಅದನ್ನು ತಮ್ಮ ಅಭಿಪ್ರಾಯಕ್ಕೆ ಸೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss OTT: ಸೋನು ಗೌಡ ಹುಚ್ಚಾಟಕ್ಕೆ ಬಾತ್ ರೂಂನಲ್ಲಿ ಕುಸಿದು ಬಿದ್ದ ಆರ್ಯವರ್ಧನ್; ಟ್ರೋಲ್ ರಾಣಿಗೆ ಮತ್ತೆ ಕಿಚ್ಚನ ವಾರ್ನಿಂಗ್!

ಬಿಗ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ

ಮತ್ತೊಂದೆಡೆ, ಇದೇ ವಿಷಯದ ಬಗ್ಗೆ ಸ್ಪರ್ಧಿಗಳೊಂದಿಗೆ ಮಾತನಾಡುವಾಗ, ಸುದೀಪ್ ವೈಲ್ಡ್ ಕಾರ್ಡ್ ಪ್ರವೇಶದ ಸುಳಿವನ್ನು ಸಹ ಬಿಟ್ಟು ಕೊಟ್ಟಿದ್ದಾರೆ. ವೈಲ್ಡ್ ಕಾರ್ಡ್ ಪ್ರವೇಶದ ಸಾಧ್ಯತೆ ಇದೆ ಎಂದು ಸುದೀಪ್ ತಿಳಿಸಿದ್ದಾರೆ. ಉಲ್ಲೇಖಿಸಿದ್ದಾರೆ. ಇದು ಸ್ಪರ್ಧಿಗಳಿಗೆ ಸುಳಿವು ನೀಡಿದ್ದಾರೆ.

ಕಳೆದ ವಾರ ಉದಯ್​ ಔಟ್!


ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೊಮಣ್ಣ ಮೇಲೆ ಕಳೆದ ವಾರದ ನಾಮಿನೇಷನ್ ತೂಗುಗತ್ತಿ ಇತ್ತು. ಆ ಪೈಕಿ ಆರ್ಯವರ್ಧನ್ ಗುರೂಜಿ ಮೊದಲು ಸೇವ್ ಆದರು. ಆ ಬಳಿಕ ರೂಪೇಶ್​ ಶೆಟ್ಟಿ, ಸೋಮಣ್ಣ, ಅಕ್ಷತಾ, ಚೈತ್ರಾ, ಜಯಶ್ರೀ ಉಳಿದುಕೊಂಡರು. ಕೊನೆಯಲ್ಲಿ ಉದಯ್ ಎಲಿಮಿನೇಟ್ ಆಗಿದ್ದಾರೆ.

ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಯ ಲವ್​​ ಬರ್ಡ್ಸ್​​ಗೆ ಕಿಚ್ಚನ ವಾರ್ನಿಂಗ್​! ಹೀಗೆ ಮಾಡ್ತಿದ್ರೆ ಗೇಟ್​ ಪಾಸ್​ ಫಿಕ್ಸ್!​

ಉದಯ್​ ಮೇಲಿತ್ತು ಹಲವು ಆರೋಪಗಳು


ಬಿಗ್ ಬಾಸ್ ಮನೆಯಲ್ಲಿ ಉದಯ್​ ಸೂರ್ಯ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದರು. ಕೆಲವರ ಬಗ್ಗೆ ಅವರು ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆ, ಹೆಣ್ಣು ಮಕ್ಕಳನ್ನು ಕೀಳಾಗಿ ನೋಡಿದ್ದಾರೆ ಎಂಬ ಆರೋಪ ಅವರ ಮೇಲಿತ್ತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಇಡೀ ಮನೆಯವರು ಉದಯ್ ವಿರುದ್ಧ ತಿರುಗಿ ಬಿದ್ದರು. ಇನ್ನು, ಮನೆಯಲ್ಲಿ ಅವರು ಡಬಲ್​ಗೇಮ್ ಆಡುತ್ತಿದ್ದರು ಎಂಬ ಆರೋಪ ಕೂಡ ಇದೆ. ಇದರಿಂದ ಕೂಡ ಅವರಿಗೆ ಹಿನ್ನಡೆ ಆಗಿದೆ.
Published by:Pavana HS
First published: