Bigg Boss OTT: ಮೊದಲ ದಿನವೇ ಆರ್ಯವರ್ಧನ್ ಗುರೂಜಿ ಲುಕ್ ಚೇಂಜ್; ಇದೇನಪ್ಪಾ ನಿನ್ನ ಅವತಾರ ಅಂತಿದ್ದಾರೆ ನೆಟ್ಟಿಗರು

ಮನೆಗೆ ಬಂದ ಮರುದಿನವೇ ಆರ್ಯವರ್ಧನ್​ ಗುರೂಜಿ ಅವರ ಲುಕ್ ಬದಲಾಗಿದೆ. ತಲೆ ಹಾಗೂ ಮೀಸೆ ಬೋಳಿಸಿಕೊಂಡು ಭಿನ್ನರೀತಿಯಲ್ಲಿ ಆರ್ಯವರ್ಧನ್ ಗುರೂಜಿ ಕಾಣಿಸಿಕೊಂಡಿದ್ದಾರೆ.  ಈ ಮಧ್ಯೆ ಅವರ ಹೊಸ ಲುಕ್ ವೈರಲ್ ಆಗಿದೆ.

ಆರ್ಯವರ್ಧನ್​ ಗುರೂಜಿ

ಆರ್ಯವರ್ಧನ್​ ಗುರೂಜಿ

  • Share this:
OTTಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್​ನಲ್ಲಿ (Bigg Boss OTT) ಆರ್ಯವರ್ಧನ್ (Aryavardhan Guruji)​ ಗುರೂಜಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಖಾಸಗಿ ಮಾಧ್ಯಮಗಳಲ್ಲಿ ಸಂಖ್ಯಾಶಾಸ್ತ್ರ (Numerology) ಹಾಗೂ ಭವಿಷ್ಯದ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಜನಪ್ರಿಯರಾಗಿದ್ದ ಆರ್ಯವರ್ಧನ್​ ಬಿಗ್​ ಬಾಸ್​ ರಿಯಾಲಿಟಿ ಶೋಗೆ (Reality Show) ಎಂಟ್ರಿ ಕೊಟ್ಟಿದ್ದಾರೆ. ಅನೇಕ ಬಾರಿ ಸೋಶಿಯಲ್ ಮಿಡಿಯಾದಲ್ಲಿ (Social Media) ಟ್ರೋಲ್ ಆಗಿದ್ದ ಆರ್ಯವರ್ಧನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಮನೆಗೆ ಬಂದ ಮರುದಿನವೇ ಅವರ ಲುಕ್ ಬದಲಾಗಿದೆ. ತಲೆ ಹಾಗೂ ಮೀಸೆ ಬೋಳಿಸಿಕೊಂಡು ಭಿನ್ನರೀತಿಯಲ್ಲಿ ಆರ್ಯವರ್ಧನ್ ಗುರೂಜಿ ಕಾಣಿಸಿಕೊಂಡಿದ್ದಾರೆ.  ಈ ಮಧ್ಯೆ ಅವರ ಹೊಸ ಲುಕ್ ವೈರಲ್ ಆಗಿದೆ.

ಆರ್ಯವರ್ಧನ್ ಗುರೂಜಿ ಹೊಸ ಲುಕ್ ವೈರಲ್

ಬಿಗ್​ಬಾಸ್​ ಮನೆಯಲ್ಲಿ ಬೆಳಗ್ಗೆ ನಟ, ರಾಜಕಾರಣಿ ಅರ್ಜುನ್ ರಮೇಶ್ ಅವರು ಆರ್ಯವರ್ಧನ್​ ಅವರ ಗಡ್ಡ ಬೋಳಿಸಿದ್ದಾರೆ. ಮೀಸೆ ಕತ್ತರಿಸಬೇಡಿ. ಕೆಂಪೇಗೌಡ ಸುದೀಪ್ ರೀತಿ ಕಾಣುತ್ತಿದ್ದೀರಿ ಎಂದು ಬಾಯ್ತುಂಬ ಹೊಗಳಿದ್ದಾರೆ. ಪ್ರೋಮೋದಲ್ಲಿ ಇಷ್ಟೇ ವಿಚಾರ ತೋರಿಸಲಾಗಿದೆ. ನಂತರದ ವಿಡಿಯೋದಲ್ಲಿ ಗುರೂಜಿ ಅವರು ಮೀಸೆ ಹಾಗೂ ತಲೆ ಕೂದಲು ಇಲ್ಲದೆ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್ ಸಾಕಷ್ಟು ವೈರಲ್ ಆಗುತ್ತಿದೆ.

ಆರ್ಯವರ್ಧನ್ ಅವರು ಹಲವು ವಿಚಾರಗಳಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾರೆ. ತಾವು ನಿಜ ಜೀವನದಲ್ಲಿ ದೆವ್ವ ನೋಡಿರುವ ಬಗ್ಗೆ ಅವರು ಹೇಳಿದ್ದರು. ಜತೆಗೆ ಅವರ ಆಸ್ತಿ ಮೌಲ್ಯ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದರು. ಹಾಸನ ಮತ್ತು ಬೇಲೂರು ಮಧ್ಯೆ ನಮ್ಮದು 40 ಎಕರೆ ಜಮೀನು ಇದೆ.

ಇದನ್ನೂ ಓದಿ: Sonu Gowda: ನಾನು ಸಿಗರೇಟ್ ಸೇದುತ್ತೇನೆ, ತಪ್ಪೇನು? ಬಿಗ್​ಬಾಸ್​ ಮನೆಯಲ್ಲಿ ಸೋನು ಗೌಡ ಪ್ರಶ್ನೆ

ಸುತ್ತಲೂ ಕಾಡು-ಬೆಟ್ಟ ಇದೆ. ಮೂರು ಕೆರೆ ಇದೆ. ಸುತ್ತ ಮುತ್ತ ಯಾವುದೇ ಮನೆ ಇಲ್ಲ. ಇಂದು ಎಲ್ಲರೂ ಸಿಟಿಯಲ್ಲಿ ದುಡ್ಡು ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದವರು. ನಮಗೆ ಹಳ್ಳಿ ಎಂದರೆ ಬೋರು. ಸಾಕಷ್ಟು ಜಮೀನು ನಮಗೆ ಇದೆ. ನಾನು ಸುಳ್ಳು ಹೇಳಲ್ಲ. ನಮ್ಮ ಅಜ್ಜನ ಆಸ್ತಿ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ.

 ಐಪಿಎಲ್​ ಭವಿಷ್ಯದ ಮೂಲಕ ಗುರೂಜಿ ಟ್ರೋಲ್​

ಕಳೆದ ಬಾರಿಯ ಐಪಿಎಲ್ ಸಮಯದಲ್ಲಿ ಇವರು ಹೇಳಿತ್ತಿದ್ದ ಭವಿಷ್ಯ ಬಹಳಷ್ಟು ಸದ್ದು ಮಾಡಿತ್ತು. ಏಕೆಂದರೆ ತಮ್ಮ ಸಂಖ್ಯಾಶಾಸ್ತ್ರದ ಮೂಲಕವೇ ಯಾವ ತಂಡ ಪಂದ್ಯ ಗೆಲ್ಲಲಿದೆ ಯಾವ ಆಟಗಾರರು ಅಂದು ಚೆನ್ನಾಗಿ ಆಡಲಿದ್ದಾನೆ ಎನ್ನುವ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು.

ಯಡಿಯೂರಪ್ಪನವರ ರಾಜೀನಾಮೆ ಕುರಿತು ಭವಿಷ್ಯ
 ರಾಜಕೀಯ ವಲಯದ ಬಗ್ಗೆ ಸಹ ನಿಖರ ಭವಿಷ್ಯ ನುಡಿದು ಸಂಚಲನ ಮೂಡಿಸಿದ್ದರು ಆರ್ಯವರ್ಧನ ಗುರೂಜಿ. ಅಂದಹಾಗೆ ಯಡಿಯೂರಪ್ಪನವರ ರಾಜೀನಾಮೆ ಕುರಿತು ನುಡಿದ ಭವಿಷ್ಯ ಹೇಳಿದ್ದಂತೆ ನಿಜವಾಗಿತ್ತು, ಇದು ನಿಜಕ್ಕೂ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆಗಷ್ಟ್​ ವೇಳೆಗೆ ಯಡಿಯೂರಪ್ಪನವರ ರಾಜೀನಾಮೆ ನೀಡುತ್ತಾರೆ ಎಂದಿದ್ದ ಗುರೂಜಿಯವರ ಮಾತಿನಂತೆ ಯಡಿಯೂರಪ್ಪನವರು ಕಳೆದ ವರ್ಷ ಜುಲೈ 16ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.






ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್​

ಆರ್ಯವರ್ಧನ್ ಅವರು ಸದಾ ಟ್ರೋಲ್ ಆಗುವ ಮೂಲಕವೇ ಹೆಚ್ಚು ಸುದ್ದಿ ಆಗಿದ್ದಾರೆ. ಅವರು ಜ್ಯೋತಿಷ್ಯ ಶಾಸ್ತ್ರವನ್ನೂ ಹೇಳುತ್ತಾರೆ. ಐಪಿಎಲ್ ಸಂದರ್ಭದಲ್ಲಿ ಅವರು ನೀಡುತ್ತಿದ್ದ ಪ್ರಿಡಿಕ್ಷನ್ ಸಾಕಷ್ಟು ಸುದ್ದಿ ಆಗುತ್ತಿತ್ತು. ಈ ವಿಚಾರವಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು. ಈಗ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆ ಸೇರಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಆಟಗಾರನ ಜರ್ಸಿ ಸಂಖ್ಯೆ ಆಧಾರದಲ್ಲೂ ಭವಿಷ್ಯ ನುಡಿದ್ರು!

ಆಟಗಾರನ ಜರ್ಸಿ ಸಂಖ್ಯೆ ಆಧಾರದ ಮೇಲೂ ಆ ಆಟಗಾರ ಎಷ್ಟು ರನ್ ಹೊಡೆಯುತ್ತಾರೆ  ಎನ್ನುವ ವಿಚಾರಗಳ ಬಗ್ಗೆ ಅವರು ಭವಿಷ್ಯ ನುಡಿಯುತ್ತಿದ್ದರು. ಆದರೆ, ಈ ಭವಿಷ್ಯ ತಪ್ಪಾಗಿದ್ದೇ ಹೆಚ್ಚು. ಈ ಕಾರಣದಿಂದ ಅವರು ಸಾಕಷ್ಟು ಟ್ರೋಲ್ ಆಗುತ್ತಿದ್ದರು.

Published by:Pavana HS
First published: