ಬಿಗ್ ಬಾಸ್ ಮನೆಯೊಳಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. ಇದೀಗ ದೊಡ್ಮನೆ ಒಳಗೆ ಕಾಮಿಡಿ ಕಿಲಾಡಿ ಲೋಕೇಶ್ ಕುಮಾರ್ (Lokesh Kumar) ಎಂಟ್ರಿ ನೀಡಿದ್ದಾರೆ. ಮೊದಲೇ ಹಾಸ್ಯ ನಟರಾಗಿರುವ ಇವರು ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹಾಸ್ಯದ ಹೊಳೆಯನ್ನೇ ಹರಿಸಲಿದ್ದಾರೆ. ಇನ್ನು, ಕನ್ನಡ (Kannada) ಬಿಗ್ ಬಾಸ್ ಒಟಿಟಿ (Bigg Boss OTT) ಇಂದಿನಿಂದ ಪ್ರಾರಂಭವಾಗಿದೆ. ವೂಟ್ ಆ್ಯಪ್‌ನಲ್ಲಿ (Voot App) ಇಂದಿನಿಂದ ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ (Streaming) ಆಗಲಿದೆ.
ಬಿಗ್‌ಬಾಸ್ ಮನೆಗೆ ಲೋಕಿ ಎಂಟ್ರಿ:
ಹೌದು, ಬಿಗ್‌ಬಾಸ್ ಮನೆಗೆ ಲೋಕಿ ಎಂಟ್ರಿ ಕೊಟ್ಟಾಗಿದೆ ಇನ್ಮೇಲೆ ನೀವು ನಗುವುದು ಮಾತ್ರ ಬಾಕಿ ಉಳಿದಿದೆ. ಹೌದು, ಕಾಮಿಡಿ ಕಿಲಾಡಿಗಳು ಶೋ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಲೋಕಿ ಅಲಿಯಾಸ್ ಲೋಕೇಶ್ ಕುಮಾರ್ ಇದೀಗ ಬಿಗ್ ಬಾಸ್ಗೆ ಎಂಟ್ರಿ ನೀಡಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್:
ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಲೋಕೇಶ್ ಕುಮಾರ್ ಇದೀಗ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಅವರ ಈ ಜರ್ನಿಯಲ್ಲಿ ಹಾಸ್ಯ ತುಂಬಿರುತ್ತದೆಯೇ? ಏನಾಗಲಿದೆ ಎಂದು ಕಾದು ನೋಡಬೇಕಿದೆ. ಇನ್ನು, ಜೋಗಿ' ಪ್ರೇಮ್ ಅವರನ್ನು ಅನುಕರಣೆ ಮಾಡಿದ ಲೋಕೇಶ್ ಕುಮಾರ್ ಇಡೀ ಕರ್ನಾಟಕಕ್ಕೆ ಚಿರಪರಿಚಿತರಾದರು. ತಮ್ಮದೇ ವಿಭಿನ್ನ ಶೈಲಿಯ ಕಾಮಿಡಿಗೆ ಲೋಕಿ ಸಖತ್ ಫೇಮಸ್.
ಇದನ್ನೂ ಓದಿ: Bigg Boss OTT: ಬಿಗ್‌ಬಾಸ್ ಮನೆಗೆ 'ಪುಟ್ಟಗೌರಿ' ಸಾನ್ಯ ಅಯ್ಯರ್ ಗ್ರ್ಯಾಂಡ್ ಎಂಟ್ರಿ
ಬಿಗ್ ಬಾಸ್ ವೇದಿಕೆ ಮೇಲೆ ಮಾತನಾಡಿದ ಲೋಕಿ, ತಮ್ಮದ ಕಷ್ಟದ ದಿನಗಳನ್ನು ನೆನದು ಭಾವುಕರಾದರು. ತಮ್ಮ ಕಥೆಯನ್ನು ಹೇಳಿಕೊಂಡಿರುವ ಅವರು, ‘ನನ್ನ ಅಪ್ಪನ ಮೊದಲ ಹೆಂಡತಿ ತೀರಿಕೊಂಡ ನಂತರ ಅವರು ಮತ್ತೊಂದು ಮದುವೆ ಆದರಂತೆ. ಆ ತಾಯಿಗೆ ಹುಟ್ಟಿದವನು ನಾನು. ನಾನು ಚಿಕ್ಕ ವಯಸ್ಸಿನಲ್ಲಿಯೇ ಅಂದ್ರೆ 9ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದೆ. ಆಗೆಲ್ಲಾ ನನ್ನನ್ನು ಕಂದರೆ ಎಲ್ಲರೂ ನೆಗ್ಲೆಟ್ ಮಾಡುತ್ತಿದ್ದರು. ಈಗ ಸೆಲ್ಫೀ ಕೇಳುತ್ತಾರೆ‘ ಎಂದು ಹೇಳಿದ್ದಾರೆ.
ಬಿಕ್ಷೆ ಬೇಡಿಕೊಂಡು ಬದುಕಿದ್ದೆ:
ಅಲ್ಲದೇ ಮೊದಲಿಗೆ ನಾನು ಭಿಕ್ಷೆ ಬೇಡಿಕೊಂಡು, ಪೇಪರ್ ಆಯ್ದುಕೊಂಡು ಜೀವನ ಮಾಡಿದ್ದೇನೆ. ಅಲ್ಲದೇ ಎಷ್ಟೋ ಸಲ ನಾನೊಬ್ಬ ಮಾತು ಬರದವನು ಎಂದು ದುಡ್ಡು ಕೇಳಿದ್ದೇನೆ. ಆದರೆ ಹೀಗೇ ಮಾಡಿದ ನಟನೆ ಮುಂದೆ ನನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿತು. ಆದರೆ ಬಿಕ್ಷೆ ಬೇಡುತ್ತಿದ್ದ ವೇಳೆ ಒಂದು ಟ್ರಸ್ಟ್ನವರು ನನ್ನನ್ನು ಕರೆದುಕೊಂಡು ಹೋಗಿ ಆಶ್ರಯ ಕೊಟ್ಟರು. ಅವರಿರದಿದ್ದರೆ ನಾಣು ಇಂದು ಇಲ್ಲಿ ಇರುತ್ತಿರಲಿಲ್ಲ ಎಂದು ಹೇಳಿ ಬಾವುಕರಾದರು. ಅಲ್ಲದೇ ಸೆಲೆಬ್ರಿಟಿ ಲೈಫ್ ಕೆಲವೊಮ್ಮೆ ಚುಚ್ಚುತ್ತೆ. ಯಾವ ಪಾತ್ರ ಸಿಕ್ಕರೂ ಮಾಡುತ್ತೇನೆ. ಈ ಒಂದು ಬಿಗ್ ಬಾಸ್ ಅವಕಾಶದಿಂದ ನನ್ನ ಜೀವನ ಬದಲಾಗಬಹುದು ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss OTT: ಬಿಗ್ ಬಾಸ್ಗೆ 4ನೇ ಸ್ಪರ್ಧಿಯಾಗಿ ಸ್ಫೂರ್ತಿ ಗೌಡ ಅದ್ಧೂರಿ ಎಂಟ್ರಿ, ಹೇಗಿದ್ದಾರೆ ನೋಡಿ ಮಲೆನಾಡ ಹುಡುಗಿ
ಬಿಗ್‌ಬಾಸ್ ಮನೆಗೆ 'ಪುಟ್ಟಗೌರಿ' ಸಾನ್ಯ ಅಯ್ಯರ್:
ಸಾನ್ಯ ಅವರು ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಕೆಲ ವರ್ಷಗಳ ಹಿಂದೆ ಮಲಯಾಳಂನ 'ಆರಾರೋ..ನೀಯಾರೋ' ಎಂಬ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. 'ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಾನ್ಯ ಅವರು 'ಗುಲಾಬ್ ಜಾಮೂನ್' ಎಂಬ ಮೈಕ್ರೋ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ