Spoorthi Gowda: ಮಲೆನಾಡ ಸುಂದರಿ ಸ್ಫೂರ್ತಿಗೆ ಸಿಗುತ್ತಾ ಬಿಗ್​ಬಾಸ್​ ಮನೆ ಒಳಗೆ ಕೀರ್ತಿ? ನಟಿಯ ಲೈಫ್​ ಜರ್ನಿ ಇಲ್ಲಿದೆ

Bigg Boss OTT: ಇನ್ನು ತಮ್ಮ ಬಗ್ಗೆ ಮಾತನಾಡಿದ ಅವರು, ನಾನು ಮಲೆನಾಡಿನ ಹುಡುಗಿ, ಆದರೆ ಮಾಯಾನಗರಿ ಬೆಂಗಳೂರು ಎಂದರೆ ಇಷ್ಟ, ಅದರಲ್ಲೂ ಇಲ್ಲಿ ಶಾಪಿಂಗ್ ಮಾಡುವುದು ಎಂದರೆ ಇನ್ನೂ ಇಷ್ಟ ಎಂದು ಹೇಳಿದ್ದಾರೆ.

ಸ್ಫೂರ್ತಿ ಗೌಡ

ಸ್ಫೂರ್ತಿ ಗೌಡ

  • Share this:
ಜನರ ಬಹು ದಿನಗಳ ನಿರೀಕ್ಷೆಗೆ ಈಗ ತೆರೆ ಬಿದ್ದಿದ್ದು, ಬಿಗ್ ಬಾಸ್ ಓಟಿಟಿ (Bigg Boss OTT) ಆರಂಭವಾಗಿದ್ದು, 16 ಸ್ಪರ್ಧಿಗಳು ಮನೆಯ ಒಳಗೆ ಲಾಕ್​ ಆಗಿದ್ದಾರೆ. ಇನ್ನು ಈ ಕಾರ್ಯಕ್ರಮದ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಸ್ಫೂರ್ತಿ ಗೌಡ ನಟಿಯಾಗಿ, ರಿಯಾಲಿಟಿ ಶೋ (Reality Show) ಸ್ಪರ್ಧಿಯಾಗಿ ಹೆಸರು ಪಡೆದವರು. ಈ ನಟಿ ಮೂಲತಃ ಮಲೆನಾಡಿನವರು. ನಟಿಯಾಗಬೇಕು (Actress) ಎಂದು ಕನಸು ಕಂಡು, ಅದನ್ನು ಸಾಧಿಸಿದವರು. ಅವರ ಬದುಕಿನ ಬಗ್ಗೆ, ಅವರ ಜರ್ನಿ ಹೇಗಿತ್ತು ಎನ್ನುವ ಬಗ್ಗೆ ಅವರೇ ಬಿಗ್ ಬಾಸ್ ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ.  

ಮಲೆನಾಡಿನ ಸುಂದರಿ ಇವರು

1997ರ ಏಪ್ರಿಲ್ 1ರಲ್ಲಿ ಜನಿಸಿರುವ ಸ್ಫೂರ್ತಿ ಗೌಡ ಬೆಂಗಳೂರಿನಲ್ಲಿ ವಾಸವಿದ್ದು, ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಸ್ಫೂರ್ತಿ ಗೌಡ ಅವರು ತಾಯಿಯನ್ನು ಇತ್ತೀಚೆಗೆ ಕಳೆದುಕೊಂಡಿದ್ದು, ನಾನು ಯಾರನ್ನೂ ನಂಬೋದಿಲ್ಲ ಎಂದು ಹೆಳಿಕೊಂಡಿದ್ದಾರೆ. ಇವರಿಗೆ ತಂದೆ ಎಂದರೆ ಬಹಳ ಇಷ್ಟ, ತಂದೆಯನ್ನು ಬಿಟ್ಟು ಬೇರೆ ಯಾರ ಮೇಲೂ ನಂಬಿಕೆ ಇಲ್ಲ ಎನ್ನುತ್ತಾರೆ. ಈಗಾಗಲೇ ನಾನು ಹಲವಾರು ರೀತಿಯಲ್ಲಿ ನಂಬಿಕೆ ದ್ರೋಹ ಅನುಭವಿಸಿದ್ದೀನಿ,  ಸಣ್ಣ ವಿಚಾರಗಳಾಗಿರಬಹುದು ಆದರೂ,  ಸ್ನೇಹಿತರು ಮೋಸ ಮಾಡಿರುವ ಕಾರಣ ನಂಬಿಕೆ ಹೊರಟು ಹೋಗಿದೆ ಎನ್ನುತ್ತಾರೆ ನಟಿ.




ಸದ್ಯ ಬಿಗ್​ಬಾಸ್​ ಮನೆಗೆ ಎಂಟ್ರಿಯಾಗಿರುವ ಸ್ಫೂರ್ತಿ ಗೌಡ ಸೀತಾ ವಲ್ಲಭ ಧಾರಾವಾಹಿಯಲ್ಲಿ ನಟಿಸಿ, ನಂತರ ತೆಲುಗು ಧಾರಾವಾಹಿಯಲ್ಲಿಯೂ ಅವರು ಮಿಂಚಿದ್ದರು. ಅಲ್ಲದೇ ಹಳ್ಳಿ ಹೈದ ಪ್ಯಾಟೆ ಹುಡ್ಗೀರ್ ಲೈಫು ಶೋನಲ್ಲಿಯೂ ಸ್ಫೂರ್ತಿ ಕೆಲ ಕಾಲ ಭಾಗವಹಿಸಿದ್ದರು. ಇನ್ನು ಬಿಗ್ ಬಾಸ್ ಎಂದರೆ ತುಂಬ ಇಷ್ಟ, ಅದರಲ್ಲಿಯೂ ಕಿಚ್ಚ ಸುದೀಪ್ ಅವರ ಮುಂದೆ ಶೋನಲ್ಲಿ ಕಾಣಿಸಿಕೊಳ್ಳುವುದು ತುಂಬ ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಗೆ 'ಪುಟ್ಟಗೌರಿ' ಸಾನ್ಯ ಅಯ್ಯರ್ ಗ್ರ್ಯಾಂಡ್​​ ಎಂಟ್ರಿ

ಮೊದಲಿನಿಂದಲೂ ನಟಿಯಾಗಬೇಕು ಎಂಬ ಆಸೆ ಇತ್ತಂತೆ

ಇನ್ನು ತಮ್ಮ ಬಗ್ಗೆ ಮಾತನಾಡಿದ ಅವರು, ನಾನು ಮಲೆನಾಡಿನ ಹುಡುಗಿ, ಆದರೆ ಮಾಯಾನಗರಿ ಬೆಂಗಳೂರು ಎಂದರೆ ಇಷ್ಟ, ಅದರಲ್ಲೂ ಇಲ್ಲಿ ಶಾಪಿಂಗ್ ಮಾಡುವುದು ಎಂದರೆ ಇನ್ನೂ ಇಷ್ಟ ಎಂದು ಹೇಳಿದ್ದಾರೆ. ಹಾಗೆಯೇ ನಾನು ಐದನೇ ಕ್ಲಾಸ್​ನಲ್ಲಿ ಮುಂಗಾರು ಮಳೆ ಸಿನಿಮಾ ನೋಡಿದ್ದು, ಆಗಲೇ  ನಟಿ ಆಗಬೇಕು ಎಂದು ಆಸೆ, ಕನಸು ಶುರುವಾಗಿತ್ತು. ಅದು ಹಾಗೆಯೇ ಬೆಳೆದು ನಂತರ ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದೆ ಎಂದು ತಮ್ಮ ಜರ್ನಿಯ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ.




ಮತ್ತೊಂದು ವಿಶೇಷ ವಿಚಾರ ಎಂದರೆ  ಸ್ಫೂರ್ತಿ  ರಿಯಾಲಿಟಿ ಶೋ, ಧಾರಾವಾಹಿ, ಎಂಜಿನಿಯರಿಂಗ್ ಹೀಗೆ ಎಲ್ಲವನ್ನು ಅರ್ಧಕ್ಕೆ ಬಿಟ್ಟು ಬಂದಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಕೇಳಿದಾಗ, ನನಗೆ ಜೀವನದಲ್ಲಿ ಏನು ಬೇಕು ಎಂಬುದು ಚೆನ್ನಾಗಿ ಗೊತ್ತು. ಆದರೆ, ಕಷ್ಟ ಅಂದಾಗ ಓಡಿ ಬರುತ್ತೀನಿ. ಆದರೆ ಬಿಗ್ ಬಾಸ್ ಮನೆಯಲ್ಲಿ ಈಗ ಲಾಕ್ ಆಗ್ತೀನಿ ಎಂದು ವಿಶ್ವಾಸದಿಂದ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಮನೆಗೆ ಲೋಕಿ ಎಂಟ್ರಿ, ಇನ್ಮೇಲೆ ನೀವು ನಗೋದೊಂದೇ ಬಾಕಿ!

ಇನ್ನು ನೋವಿನ ಘಟನೆಗಳನ್ನು ಸಹ ಹಂಚಿಕೊಂಡಿರುವ ನಟಿ, ನನ್ನ ಅಮ್ಮ ತೀರಿ ಹೋಗಿ ಒಂದು ವರ್ಷ ಆಗಿದೆ. ಎಲ್ಲರು ನಾನು ವೀಕ್ ಅಂತ ತಿಳಿದುಕೊಂಡಿದ್ದಾರೆ. ಪ್ರತಿಯೊಬ್ಬರು ಬೆನಿಫಿಟ್ ತಗಳೋಕೆ ಟ್ರೈ ಮಾಡುತ್ತಾರೆ. ಹಾಗಾಗಿ ಸ್ಮೈಲ್​ ಮಾಡುತ್ತಾ ಇರೋದೆ ಯಾವಾಗಲೂ ಸ್ಟ್ರಾಂಗ್ ಇರಲು ಕಾರಣ ಅಂತ ನನ್ನ ಭಾವನೆ, ಯಾವುದೇ ಕಾರಣಕ್ಕೂ ಕುಗ್ಗಬಾರದು ಎಂದು ನನ್ನ ಅಮ್ಮ ಹೇಳಿಕೊಟ್ಟಿದ್ದಾರೆ ಎಂದಿದ್ದು, ಇವರಿಗೆ ದೊಡ್ಡ ನಟಿಯಾಗಬೇಕು ಎಂಬ ಆಸೆ ಇದೆಯಂತೆ.
Published by:Sandhya M
First published: