Bigg Boss OTT: ಗುರೂಜಿ ಹೊಟ್ಟೆಯ ಮೇಲೆ ನೆಟ್ಟಿಗರ ಕಣ್ಣು! ಮೊದಲು ಫ್ಯಾಟ್ ಕರಗಿಸಿ ಎಂದ ಜನ

ತಳ್ಳಿದ್ದಕ್ಕೋ ಎಳೆದಿದ್ದಕ್ಕೋ ಬಿಗ್​ ಬಾಸ್ ಮನೆಯೊಳಗೆ ಬಿಗ್ ಫೈಟ್ ಶುರುವಾಗಿದೆ. ಆರ್ಯವರ್ಧನ್ ಗುರೂಜಿ ಹಾಗೂ ಉದಯ್ ಕಿರುಚಾಡಿದ್ದು ಕೈ ಕೈ ಮಿಲಾಯಿಸಿದ್ದಾರೆ.

ಆರ್ಯವರ್ಧನ್ ಗುರೂಜಿ

ಆರ್ಯವರ್ಧನ್ ಗುರೂಜಿ

  • Share this:
ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಒಟಿಟಿ (Bigg Boss OTT) ಕನ್ನಡ ಅದ್ದೂರಿಯಾಗಿ ಆರಂಭವಾಗಿದೆ. ಹಿಂದಿಯಲ್ಲಿ ಒಟಿಟಿ ಬಿಗ್​ಬಾಸ್ ನಡೆಸಿದಾಗ ಭಾರೀ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿತ್ತು. ಹಾಗೆಯೇ ಕನ್ನಡದಲ್ಲಿಯೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆಗಸ್ಟ್​ 6ರಂದು ಬಿಗ್ ಬಾಸ್ ಒಟಿಟಿ ಗ್ರ್ಯಾಂಡ್​ ಓಪನಿಂಗ್ ಮಾಡಲಾಗಿದೆ. ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep)​ ಬಿಗ್ ಬಾಸ್ ನಡೆಸಿಕೊಡುತ್ತಿದ್ದು ಸ್ಪರ್ಧಿಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಬಿಗ್ ಬಾಸ್ ಒಟಿಟಿಗೆ 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಸಲಿ ಆಟ ಪ್ರಾರಂಭಿಸಿದ್ದಾರೆ. ಇತ್ತೀಚಿನ ಎಪಿಸೋಡ್ ನಲ್ಲಿ ಸ್ಪರ್ಧಿಗಳು ತಮ್ಮ ಕಷ್ಟದ ದಿನಗಳನ್ನು ನೆನೆದು ಅದನ್ನು ಮುಕ್ತವಾಗಿ ಹಂಚಿಕೊಂಡು ಹಗುರಾಗಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪರ್ಧಿಗಳ ಎಮೋಷನಲ್ ಅತ್ತಿದ್ದರೂ ಅದರಲ್ಲಿರುವ ನೈಜ್ಯತೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

ನಾನು ಎನ್ನುವ ಟಾಸ್ಕ್ ನಂತರ ಪ್ರತಿ ಸ್ಪರ್ಧಿಯ ಕೆಲವೊಂದು ಪರ್ಸನಲ್ ವಿಚಾರಗಳು ಈಗಾಗಲೇ ಜನರಿಗೆ ತಲುಪಿ ಆಗಿದೆ. ಮದುವೆ, ಲವ್, ಕಪಲ್, ಮೋಸ ಎನ್ನುತ್ತಾ ಒಬ್ಬೊಬ್ಬರೂ ತಮ್ಮ ನೋವಿನ ಕಥೆ ಬಿಚ್ಚಿಟ್ಟಿದ್ದಾರೆ.

ಕೈ ಕೈ ಮಿಲಾಯಿಸಿ ಜಗಳ

ಆದರೆ ಈಗ ಬಿಗ್​ಬಾಸ್ ಮನೆಯೊಳಗೆ ಮೊದಲ ಫೈಟ್ ಸೂಚನೆ ಸಿಕ್ಕಿದೆ. ಉದಯ್ ಹಾಗೂ ಆರ್ಯವರ್ಧನ್ ಗುರೂಜಿ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ನೀನು ತಳ್ಳಿದ್ದಿ, ತಳ್ಳಿಲ್ಲ ಎಂಬ ವಾಗ್ವಾದ ಜೋರಾಗಿ ನಂತರ ಈ ಜಗಳ ಕೈ ಕೈ ಮಿಲಾಯಿಸುವ ಸ್ಥಿತಿಗೆ ತಲುಪಿದೆ.


View this post on Instagram


A post shared by Voot Select (@vootselect)


ವೂಟ್ ಸೆಲೆಕ್ಟ್ ಕಾರ್ಯಕ್ರಮದ ಪ್ರೋಮೋ ಶೇರ್ ಮಾಡಿಕೊಂಡಿದ್ದು ಇದರಲ್ಲಿ ಗುರೂಜಿ ಹಾಗೂ ಉದಯ್ ನಡುವಿನ ಜಗಳ ಸ್ಪಷ್ಟವಾಗಿ ಕಾಣಬಹುದು, ಇಬ್ಬರೂ ಸ್ವಲ್ಪವೂ ಬಿಟ್ಟು ಕೊಡದೆ ಪರಸ್ಪರ ಕಿತ್ತಾಡಿದ್ದು ಸಹ ಸ್ಪರ್ಧಿಗಳು ಮಧ್ಯೆ ಬರದಿದ್ದರೆ ಪಕ್ಕಾ ಹೊಡೆದಾಟ ನಡೆಯುತ್ತಿತ್ತು. ಈ ಪ್ರೋಮೋಗೆ 33,106 ರಷ್ಟು ವ್ಯೂಸ್ ಕೂಡಾ ಲಭ್ಯವಾಗಿದೆ.

ಫ್ಯಾಟ್ ಕರಗಿಸಿ ಎಂದ ಅಭಿಮಾನಿ

ವಿಡಿಯೋಗೆ ಜನರು ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡಿದ್ದು ಒಬ್ಬ ವ್ಯಕ್ತಿ ಗುರೂಜಿಯವರು ಮೊದಲು ತಮ್ಮ ಬಾಡಿಯಲ್ಲಿರೋ ಪ್ಯಾಟ್ ಕರಗಿಸುವಂತೆ ಬಿಟ್ಟಿ ಉಪದೇಶ ಕೊಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada OTT: ಒಂಟಿ ಮನೆಯಲ್ಲಿ 16 ಮಂದಿ ಲಾಕ್​, ಇಲ್ಲಿದೆ ನೋಡಿ ಫೋಟೋಸ್​

ನೋವು ಹೇಳಿಕೊಂಡ ಜಯಶ್ರೀ

ರಾಕೇಶ್, ಅರ್ಜುನ್, ಸ್ಫೂರ್ತಿ ಗೌಡ, ಸೋಮಣ್ಣ ಮಾಜಿಮಾಡ ಎಲ್ಲರೂ ಕುಳಿತ್ತಿದ್ದರು. ಆ ವೇಳೆ ಜಯಶ್ರೀ (Jayashree Aradhya) ಅರ್ಜುನ್ ಬಳಿ ಮಾತನಾಡಿ 'ನಿನ್ನ ಕಷ್ಟ ನನಗೂ ಅರ್ಥವಾಗುತ್ತದೆ. ಯಾಕೆಂದರೆ ನಾನು ಕೂಡ ಮದುವೆಯಾದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದೆ' ಎಂದು ಹೇಳಿದರು. 'ಮದುವೆಯಾಗಿ ಆತನಿಗೆ ಮಗು ಕೂಡ ಇತ್ತು ಆದರೂ ಅವರ ಜೊತೆ ಸಂಬಂಧದಲ್ಲಿ ಇದ್ದೆ.

ಬಳಿಕ ಮನೆಯವರಿಗೆಲ್ಲ ಗೊತ್ತಾಯಿತು ದೊಡ್ಡ ಜಗಳವೆ ಆಯಿತು' ಎಂದು ಜಯಶ್ರೀ ತನ್ನ ಹಳೆಯ ಕಥೆ ವಿವರಿಸಿದರು. ತನ್ನ ಮತ್ತು ಸಂಬಂಧ ಹೊಂದಿದ ವ್ಯಕ್ತಿಯ ಮನೆಯವರಿಗೆ ವಿಷಯ ಗೊತ್ತಾದ ಬಳಿಕ ತುಂಬಾ ದೊಡ್ಡ ಸಮಸ್ಯೆ ಆಯಿತು. ಬಳಿಕ ನಾನು ಮನೆಬಿಟ್ಟು ಹೊರಬರಬೇಕಾಯಿತು ಎಂದು ಜಯಶ್ರೀ ಹೇಳಿದರು.

ಇದನ್ನೂ ಓದಿ: Bigg Boss OTT: ತಾಯಿಯ ಸಾವಿಗೆ ತಾವೇ ಕಾರಣರಾದರಾ ಸ್ಫೂರ್ತಿ ಗೌಡ? ನಟಿ ಗದ್ಗದ

ಕೈಹಿಡಿದದ್ದು ಬ್ಯುಸಿನೆಸ್

ಮನೆಬಿಟ್ಟು ಬಂದ ನಂತರವೂ ಆತನ ಜೊತೆ ಇದ್ದೆ ಎಂದು ಜಯಶ್ರೀ ಹೇಳಿದರು. ಬಳಿಕ ಬ್ಯುಸಿನೆಸ್ ಮಾಡಲು ಪ್ರಾರಂಭಿಸಿದೆ ಎಂದರು. ಅಂದಹಾಗೆ ಜಯಶ್ರೀ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಸಿನಿಮಾ ಅವರ ಕೈ ಹಿಡಿಲಿಲ್ಲ. ಪುಟ್ಟರಾಜು ಲವರ್ ಆಫ್ ಶಶಿಕಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಜಯಶ್ರಿಗೆ ಯಶಸ್ಸು ಸಿಕ್ಕಿದ್ದು ಬ್ಯುಸಿನೆಸ್‌ನಲ್ಲಿ.
Published by:Divya D
First published: