• Home
  • »
  • News
  • »
  • entertainment
  • »
  • Bigg Boss OTT: ತಾಯಿಯ ಸಾವಿಗೆ ತಾವೇ ಕಾರಣರಾದರಾ ಸ್ಫೂರ್ತಿ ಗೌಡ? ನಟಿ ಗದ್ಗದ

Bigg Boss OTT: ತಾಯಿಯ ಸಾವಿಗೆ ತಾವೇ ಕಾರಣರಾದರಾ ಸ್ಫೂರ್ತಿ ಗೌಡ? ನಟಿ ಗದ್ಗದ

ಸ್ಫೂರ್ತಿ ಗೌಡ

ಸ್ಫೂರ್ತಿ ಗೌಡ

ಬಿಗ್ ಬಾಸ್ ಮನೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಸ್ಫೂರ್ತಿ ಗೌಡ ಹಂಚಿಕೊಂಡಿದ್ದಾರೆ. ನನ್ನ ತಾಯಿ ಸಾವಿಗೆ ನಾನೇ ಕಾರಣ ಎಂದು ಜನ ಮಾತನಾಡುತ್ತಿದ್ದರು ಎಂದು ಹೇಳಿ ನಟಿ ಗದ್ಗದಿತರಾದರು.

  • Share this:

ಬಿಗ್​ಬಾಸ್ ಸಖತ್ ಇಂಟ್ರೆಸ್ಟಿಂಗ್ ರೀತಿಯಲ್ಲಿ ಮುಂದುವರಿಯುತ್ತಿದೆ. ಪ್ರೇಕ್ಷಕರ ಗಮನ ಸೆಳೆಯುವ ರೀತಿಯಲ್ಲಿ ರಿಯಾಲಿಟಿ ಶೋ ನಡೆಯುತ್ತಿದ್ದು ಅದ್ಭುತ ಪ್ರತಿಕ್ರಿಯೆಯನ್ನು ಗಳಿಸುತ್ತಿದೆ. ಲವ್ ಲೈಫ್, ಪರ್ಸನಲ್ ಲೈಫ್, ನೋವು, ಖುಷಿ ಹಳೆಯ ಮೆಲುಕು ಎಲ್ಲವೂ ರಿಯಾಲಿಟಿ ಶೋ (Reality Show) ಮೂಲಕ ಜನರನ್ನು ತಲುಪುತ್ತಿದೆ. ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಒಟಿಟಿ (Bigg Boss OTT) ಕನ್ನಡ ಅದ್ದೂರಿಯಾಗಿ ಆರಂಭವಾಗಿದೆ. ಹಿಂದಿಯಲ್ಲಿ ಒಟಿಟಿ ಬಿಗ್​ಬಾಸ್ ನಡೆಸಿದಾಗ ಭಾರೀ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿತ್ತು. ಹಾಗೆಯೇ ಕನ್ನಡದಲ್ಲಿಯೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆಗಸ್ಟ್​ 6ರಂದು ಬಿಗ್ ಬಾಸ್ ಒಟಿಟಿ ಗ್ರ್ಯಾಂಡ್​ ಓಪನಿಂಗ್ ಮಾಡಲಾಗಿದೆ. ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep)​ ಬಿಗ್ ಬಾಸ್ ನಡೆಸಿಕೊಡುತ್ತಿದ್ದು ಸ್ಪರ್ಧಿಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ.


ಇತ್ತೀಚೆಗೆ ಕಾರ್ಯಕ್ರಮದಲ್ಲಿ ಕಿರುತೆರೆ ನಟಿ ಸ್ಫೂರ್ತಿ ಗೌಡ (Spoorthi Gowda) ಭಾವುಕರಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಸ್ಫೂರ್ತಿ ಗೌಡ ಹಂಚಿಕೊಂಡಿದ್ದಾರೆ. ನನ್ನ ತಾಯಿ ಸಾವಿಗೆ ನಾನೇ ಕಾರಣ ಎಂದು ಜನ ಮಾತನಾಡುತ್ತಿದ್ದರು ಎಂದು ಹೇಳಿ ನಟಿ ಗದ್ಗದಿತರಾದರು.


ಸ್ಪರ್ಧಿಗಳ ಜೀವನ ಪರಸ್ಪರ ಪರಿಚಯವಾಗಲು ನೆರವಾಗುವಂತೆ ‘ಬಿಗ್ ಬಾಸ್’ ಟಾಸ್ಕ್ ಒಂದನ್ನು ನೀಡಿದ್ದರು. ಅದರ ಹೆಸರು ‘ನಾನು ಯಾರು?’. ಇದರ ಅನುಸಾರ ಸ್ಪರ್ಧಿಗಳು ತಮ್ಮ ತಮ್ಮ ಜೀವನದ ಕುರಿತು ಮಾತನಾಡಬೇಕಾಗಿತ್ತು. ಇದೇ ಟಾಸ್ಕ್‌ನಲ್ಲಿ ಸ್ಫೂರ್ತಿ ಗೌಡ ತಮ್ಮ ತಾಯಿಯ ಬಗ್ಗೆ ಮಾತನಾಡಿ, ಅವರ ಘಟನೆಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.


ಸ್ಫೂರ್ತಿ ಗೌಡ ಹೇಳಿದ್ದೇನು?


ನಾನು ನನ್ನ ಮನೆಯಲ್ಲಿ ಪ್ಯಾಂಪರ್ಡ್ ಕಿಡ್. ಕಷ್ಟ ಅನ್ನೋದನ್ನೇ ನಾನು ನೋಡಿರಲಿಲ್ಲ. ಟಿವಿ ಮುಂದೆ ಕೂತುಕೊಂಡು ಊಟ ಮಾಡಿದ್ರೂ, ತಟ್ಟೆಯನ್ನ ತಗೊಂಡು ಹೋಗಿ ಇಡುತ್ತಿರಲಿಲ್ಲ. ಅಷ್ಟು ಚೆನ್ನಾಗಿ ನನ್ನಮ್ಮ ನನ್ನನ್ನ ಸಾಕಿದ್ದರು. ಏಕಾಏಕಿ ನನ್ನ ತಾಯಿ ಹಾಸಿಗೆ ಹಿಡಿದುಬಿಟ್ಟರು. ಅವರಿಗೆ ಥೈರಾಯಿಡ್ ಕ್ಯಾನ್ಸರ್ ಆಗಿತ್ತು. ಬರ್ತಾ ಬರ್ತಾ ಅವರ ಮಾತು ನಿಂತುಹೋಯ್ತು. ನಡೆದಾಡುವುದನ್ನು ನಿಲ್ಲಿಸಿದರು ಎಂದು ಘಟನೆಗಳನ್ನು ಎಳೆ ಎಳೆಯಾಗಿ ನೆನಪಿಸಿಕೊಂಡಿದ್ದಾರೆ ಸ್ಫೂರ್ತಿ ಗೌಡ.


ಇದನ್ನೂ ಓದಿ: Bigg Boss OTT: ಬಿಗ್​ ಬಾಸ್ ಮನೆಯಲ್ಲಿ ಬಿಗ್ ಫೈಟ್; ಆರ್ಯವರ್ಧನ್ ಗುರೂಜಿ ಕಿರಿಕ್!


ಒಂದೇ ಸಲ ಬೀದಿಗೆ ಬಂದಿದ್ರಂತೆ ನಟಿ


’ನಮಗೆ ದುಡ್ಡಿನ ಕೊರತೆ ಇರಲಿಲ್ಲ. ವೆಲ್ ಸೆಟಲ್ಡ್ ಆಗಿದ್ವಿ. ಆದರೆ, ಒಂದೇ ಬಾರಿ ಬೀದಿಗೆ ಬಂದ್ವಿ. ನನ್ನ ತಾಯಿಯ ಬೆಲೆ ನನಗೆ ಗೊತ್ತಾಗಿದ್ದು ಅವಾಗ. ಅದೇ ಟೈಮ್‌ನಲ್ಲಿ ನನಗೆ ರಿಯಾಲಿಟಿ ಶೋ ಆಫರ್ ಬಂತು. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು. ಆ ಟೈಮ್‌ನಲ್ಲೇ ಅಮ್ಮನಿಗೆ ಆಪರೇಶನ್ ಆಗಿದ್ದು. ಜನ ಹೇಗೆ ಮಾತನಾಡೋಕೆ ಶುರು ಮಾಡಿದರು ಅಂದ್ರೆ ನಾನು ಇಂಡಸ್ಟ್ರಿಗೆ ಬಂದಿದ್ದಕ್ಕೆ ಅಮ್ಮನಿಗೆ ಶಾಕ್ ಆಗಿದ್ದು, ನನ್ನಿಂದಲೇ ಅಮ್ಮನಿಗೆ ಈ ಪರಿಸ್ಥಿತಿ ಬಂದಿದ್ದು, ಅಮ್ಮನ ಸಾವಿಗೆ ನಾನೇ ಕಾರಣ ಅಂತೆಲ್ಲಾ ಮಾತುಗಳು ಬಂದಿದ್ದವು. ಇದನ್ನೆಲ್ಲಾ ನನಗೆ ಸಹಿಸಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ.


ಇದನ್ನೂ ಓದಿ: Bigg Boss OTT: ಮದುವೆಯಾಗಿ ಮಗು ಇದ್ದವನ ಜೊತೆ ರಿಲೇಷನ್​​ಶಿಪ್​ನಲ್ಲಿ ಇದ್ದ ಮಾರಿಮುತ್ತು ಮೊಮ್ಮಗಳು


ಬಹಳಷ್ಟು ಜನರು ತಮ್ಮ ಪರ್ಸನಲ್ ವಿಚಾರಗಳನ್ನು ಈ ಟಾಸ್ಕ್ ಸಂದರ್ಭ ರಿವೀಲ್ ಮಾಡಿದ್ದು ವೀಕ್ಷಕರೂ ಭಾವುಕರಾಗಿದ್ದಾರೆ.

Published by:Divya D
First published: