Bigg Boss Malayalam: ಲಾಕ್‌ಡೌನ್ ನಿಯಮ ಉಲ್ಲಂಘನೆ: ಮಲಯಾಳಂ ಬಿಗ್ ಬಾಸ್ ಮನೆಗೆ ಬೀಗ..!

ಚೆಂಬರಂಬಕ್ಕಂನ ಸೆಟ್‌ನಲ್ಲಿ ಎಂಟು ಜನರಿಗೆ ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿತ್ತು. ಇಂಗ್ಲಿಷ್​ ಪತ್ರಿಕೆಯ ವರದಿಯ ಪ್ರಕಾರ, ಕೊರೋನಾ ಎರಡನೇ ಅಲೆಯ ನಂತರ ಲಾಕ್‌ಡೌನ್ ವಿಧಿಸಲಾಯಿತು. ಚಿತ್ರೀಕರಣದ ಮೇಲೆ ನಿಷೇಧ ಹೇರಿದ್ದರೂ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ಚಿತ್ರೀಕರಣ ಮುಂದುವರೆಸಲಾಗಿತ್ತು. ಬಿಗ್ ಬಾಸ್ ಮಲಯಾಳಂ ಚಿತ್ರೀಕರಣ ಮುಂದುವರೆದಿದ್ದರಿಂದ ಚೆಂಬರಂಬಕ್ಕಂನ ಇವಿಪಿ ಫಿಲ್ಮ್​ ಸಿಟಿಯನ್ನು ಬುಧವಾರ ಸೀಲ್‌ ಮಾಡಲಾಗಿದೆ.

ಮಲಯಾಳಂ ಬಿಗ್​ ಬಾಸ್​ ಕಾರ್ಯಕ್ರಮ

ಮಲಯಾಳಂ ಬಿಗ್​ ಬಾಸ್​ ಕಾರ್ಯಕ್ರಮ

  • Share this:
ಕೊರೋನಾ ಎರಡನೇ ಅಲೆಯ ಮೂಲಕ ದೇಶದಲ್ಲಿ ಕರಾಳತೆಯನ್ನು ಸೃಷ್ಟಿಸಿದೆ. ನಿಯಂತ್ರಣಕ್ಕೆ ಸಿಗದೇ ಜನತೆಯ ಜೀವನವನ್ನ ಹಿಂಡುತ್ತಿರುವ ಕೊರೋನಾ ಸೋಂಕು ಉಲ್ಭಣಗೊಳ್ಳುತ್ತಾ ಮುಂದುವರೆದಿದೆ. ಪರಿಣಾಮ ಕೊರೋನಾ ಸೋಂಕು ಹೆಚ್ಚಾಗಿರುವ ರಾಜ್ಯಗಳಲ್ಲಿ ಕರ್ಫ್ಯೂ, ಲಾಕ್‌ಡೌನ್‌ ವಿಧಿಸಲಾಗುತ್ತಿದೆ. ಈಗಾಗಲೇ ತಮಿಳುನಾಡು ಸರ್ಕಾರದ ಸೂಚನೆಯ ಮೇರೆಗೆ ಚೆನ್ನೈನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಚಿತ್ರೀಕರಣ ನಿಲ್ಲಿಸಲಾಗಿದೆ. ಮೋಹನ್ ಲಾಲ್ ಅವರು ಪ್ರಸ್ತುತಪಡಿಸಿದ ಕಾರ್ಯಕ್ರಮದ  95ನೇ ದಿನದಂದು ಚಿತ್ರೀಕರಣ ಕೊನೆಗೊಂಡಿತು. ತಮಿಳುನಾಡು ಸರ್ಕಾರದ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಪ್ರದರ್ಶನವನ್ನು ನಿಲ್ಲಿಸಲಾಯಿತು. ಚೆನ್ನೈನಲ್ಲಿ ಇವಿಪಿ ಸ್ಥಳ ಫಿಲ್ಮ್ ಸಿಟಿ ಆಗಿತ್ತು. ಕನ್ನಡದಲ್ಲೂ ಸಹ 72ನೇ ದಿನಕ್ಕೆ ಕನ್ನಡ ಬಿಗ್​ ಬಾಸ್​ ಸೀಸನ್​ 8 ಅನ್ನು ಅರ್ಧಕ್ಕೆ ರದ್ದು ಮಾಡಲಾಯಿತು. ಎಲ್ಲ ಸ್ಪರ್ಧಿಗಳನ್ನು ಸುರಕ್ಷಿತವಾಗಿ ಮನೆಗಳಿಗೆ ಕಳುಹಿಸಲಾಯಿತು. 

ಚೆಂಬರಂಬಕ್ಕಂನ ಸೆಟ್‌ನಲ್ಲಿ ಎಂಟು ಜನರಿಗೆ ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿತ್ತು. ಇಂಗ್ಲಿಷ್​ ಪತ್ರಿಕೆಯ ವರದಿಯ ಪ್ರಕಾರ, ಕೊರೋನಾ ಎರಡನೇ ಅಲೆಯ ನಂತರ ಲಾಕ್‌ಡೌನ್ ವಿಧಿಸಲಾಯಿತು. ಚಿತ್ರೀಕರಣದ ಮೇಲೆ ನಿಷೇಧ ಹೇರಿದ್ದರೂ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ಚಿತ್ರೀಕರಣ ಮುಂದುವರೆಸಲಾಗಿತ್ತು. ಬಿಗ್ ಬಾಸ್ ಮಲಯಾಳಂ ಚಿತ್ರೀಕರಣ ಮುಂದುವರೆದಿದ್ದರಿಂದ ಚೆಂಬರಂಬಕ್ಕಂನ ಇವಿಪಿ ಫಿಲ್ಮ್​ ಸಿಟಿಯನ್ನು ಬುಧವಾರ ಸೀಲ್‌ ಮಾಡಲಾಗಿದೆ.

ಮಲಯಾಳಂ ಬಿಗ್​ ಬಾಸ್​ ಕಾರ್ಯಕ್ರಮ


ನಿಷೇಧದ ಹೊರತಾಗಿಯೂ ಶೂಟಿಂಗ್ ಮುಂದುವರೆಸಲಾಗಿತ್ತು. ಆದ್ದರಿಂದ, ಕೊರೋನಾ ಸೋಂಕು ಉಲ್ಭಣಗೊಂಡ ಪರಿಸ್ಥಿತಿಯಲ್ಲಿ ಚಿತ್ರೀಕರಣವನ್ನು ನಿಷೇಧಿಸಿದ್ದ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಾವು ಸ್ಥಳವನ್ನು ಸೀಲ್​ ಮಾಡಿದ್ದೇವೆ. ಅಲ್ಲಿದ್ದ ಸ್ಪರ್ಧಿಗಳು, ತಂತ್ರಜ್ಙರು ಹಾಗೂ ಇತರೆ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಲಾಯಿತು ಎಂದು ತಿರುವಲ್ಲೂರ್​ನ ರೆವೆನ್ಯೂ ವಿಭಾಗೀಯ​ ಅಧಿಕಾರಿ ಪ್ರೀತಿ ಪಾರ್ಕವಿ ತಿಳಿಸಿದ್ದಾರೆ.

ಬಿಗ್ ಬಾಸ್ ಸೆಟ್ ಹೊರಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಮತ್ತು ಅವರು ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: Anushka Shetty: ವೈರಲ್​ ಆಗುತ್ತಿರುವ ಅನುಷ್ಕಾ ಶೆಟ್ಟಿಯ ಈ ಫೋಟೋಗಳ ಹಿಂದಿದೆ ಒಂದು ಕಾರಣ..!

ಮಲಯಾಳಂ ಬಿಗ್​ ಬಾಸ್​ ಕಾರ್ಯಕ್ರಮದ ಪ್ರದರ್ಶನವು ಫೆಬ್ರವರಿ 14, 2021 ರಂದು 14 ಸ್ಪರ್ಧಿಗಳೊಂದಿಗೆ ಪ್ರಾರಂಭವಾಗಿತ್ತು. ಪ್ರದರ್ಶನದಿಂದ ಹೊರಹಾಕಲ್ಪಟ್ಟವರನ್ನು ಹೊರತುಪಡಿಸಿ, ಚಿತ್ರೀಕರಣ ಮುಗಿದ ನಂತರ ಅವರನ್ನು ಹೋಟೆಲ್‌ಗೆ ಕಳುಹಿಸಿಕೊಡಲಾಗಿದೆ. ಸದ್ಯಕ್ಕೆ 7 ಮಂದಿ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಉಳಿದುಕೊಂಡಿದ್ದರು. ಕೊರೋನಾ ಏಕಾಏಕಿ ಹೆಚ್ಚಾದ ನಂತರ ಬಿಗ್ ಬಾಸ್ ಮಲಯಾಳಂನ ಎರಡನೇ ಸಂಚಿಕೆಯು ಕೊನೆಗೊಂಡಿದೆ.

ಮೂಲಗಳ ಪ್ರಕಾರ, ಬಿಗ್ ಬಾಸ್ ವಿಶೇಷ ಸೆಟ್ ಅನ್ನು ನಿರ್ಮಿಸಲಾಗಿತ್ತು. 14 ಸ್ಪರ್ಧಿಗಳೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭವಾಗಿತ್ತು. ಇದೇ ಬುಧವಾರವರೆಗೆ ಏಳು ಸ್ಪರ್ಧಿಗಳೊಂದಿಗೆ 95 ನೇ ದಿನವೂ ಮುಂದುವರೆದಿತ್ತು. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಮಿಳುನಾಡು ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ರಾಜಕುಮಾರ್ ಅವರ ಯೋಗ ಗುರು ಕೊರೋನಾಗೆ ಬಲಿ: ಹೊನ್ನಪ್ಪ ಫಕೀರಪ್ಪ ನಾಯ್ಕರ್ ಇನ್ನಿಲ್ಲ

ಈಗಾಗಾಲೇ ಕರ್ನಾಟಕದಲ್ಲಿ ಲಾಕ್ ಡೌನ್ ವಿಧಿಸಿದ್ದರಿಂದ ಚಿತ್ರಿಕರಣಗಳನ್ನು ತಡೆಹಿಡಿಯಲಾಗಿತ್ತು. ಹಾಗೆಯೇ ಬಿಗ್ ಬಾಸ್ ಕನ್ನಡ ಕಾರ್ಯಕ್ರಮವನ್ನು ರದ್ದುಗೊಂಡಿತ್ತು. ಈಗ ಬಿಗ್ ಬಾಸ್ ಮಲಯಾಳಂ ಮನೆಗೆ ಬೀಗ ಹಾಕಲಾಗಿದ್ದು, ಬಿಗ್ ಬಾಸ್ ಅಭಿಮಾನಿಗಳಿಗೆ ನಿರಾಸೆಯಾಗಿರುವುದಂತೂ ಸುಳ್ಳಲ್ಲ.
Published by:Anitha E
First published: