• Home
 • »
 • News
 • »
 • entertainment
 • »
 • Bigg Boss Kannada-Kichcha Sudeep: ವೈಟ್​ & ವೈಟ್​ ಔಟ್​ಫಿಟ್​ನಲ್ಲಿ ಕಿಚ್ಚನ ಕ್ಲಾಸೀ ಲುಕ್

Bigg Boss Kannada-Kichcha Sudeep: ವೈಟ್​ & ವೈಟ್​ ಔಟ್​ಫಿಟ್​ನಲ್ಲಿ ಕಿಚ್ಚನ ಕ್ಲಾಸೀ ಲುಕ್

ಕಿಚ್ಚ ಸುದೀಪ್

ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರ ಫಿನಾಲೆ ಲುಕ್ ವೈಟ್ & ವೈಟ್ ಆಗಿತ್ತು. ಕಂಪ್ಲೀಟ್ ವೈಟ್​ನಲ್ಲಿ ಸ್ಟೈಲ್ ಐಕಾನ್ ಆಗಿ ಕಾಣಿಸಿದ್ದಾರೆ ನಟ.

 • News18 Kannada
 • 3-MIN READ
 • Last Updated :
 • Bangalore, India
 • Share this:

ಕನ್ನಡ ಬಿಗ್​ ಬಾಸ್ ಸೀಸನ್ 9ರ (Bigg boss) ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇಂದು ಫಿನಾಲೆ ನಡೆಯಲಿದ್ದು ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಹಾಗೂ ದೀಪಿಕಾ ದಾಸ್ ಮನೆಯೊಳಗಿದ್ದಾರೆ. ದಿವ್ಯಾ ಉರುಡುಗ (Divya Uruduga) ಬಿಗ್​ಬಾಸ್ ಮನೆಯಲ್ಲಿ 99 ದಿನಗಳನ್ನು ಮುಗಿಸಿ ಹೊರಗೆ ಬಂದಿದ್ದಾರೆ. ಈಗಾಗಲೇ ಭಾರೀ ಕ್ರೇಜ್ ಸೃಷ್ಟಿಸಿರೋ ಫಿನಾಲೆ ರೌಂಡ್ ಬಗ್ಗೆ ಪ್ರೇಕ್ಷಕರು ಸಿಕ್ಕಾಪಟ್ಟೆ ಕುತೂಹಲದಿಂದ ಕಾಯುತ್ತಿದ್ದಾರೆ. ಅದೇ ರೀತಿ ಸ್ಪರ್ಧಿಗಳ ಸೂಪರ್ ಲುಕ್, ವಿಶೇಷ ಪರ್ಫಾಮೆನ್ಸ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅದೇ ರೀತಿ ಕಿಚ್ಚ ಸುದೀಪ್ (Kichcha Sudeep) ಅವರ ಫಿನಾಲೆ ಲುಕ್ ಬಗ್ಗೆಯೂ ಕುತೂಹಲವಿದೆ.


ವೈಟ್ & ವೈಟ್​ನಲ್ಲಿ ಕಿಚ್ಚ ಸುದೀಪ್


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಿರೂಪಣೆಗಾಗಿ ಬಿಗ್​ ಬಾಸ್ ನೋಡುವ ಜನರ ಗುಂಪೇ ಇದೆ. ಕಿಚ್ಚ ಸುದೀಪ್ ಅವರು ಸ್ಟೈಲಿಷ್ ಡ್ರೆಸ್​ನಲ್ಲಿ ಬಂದಾಗ ಅವರ ಲುಕ್ ಯಾವಾಗಲೂ ಪ್ರೇಕ್ಷಕರ ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ. ನಟನ ಟ್ರೆಂಡೀ ಬಟ್ಟೆಗಳನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ.
ಕಿಚ್ಚ ಸುದೀಪ್ ಕಂಪ್ಲೀಟ್ ವೈಟ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವೈಟ್ ಪ್ಯಾಂಟ್ ವೈಟ್ ಶರ್ಟ್, ವೈಟ್ ಸ್ನೀಕರ್ಸ್ ಧರಿಸಿದ ನಟ ಸ್ಟೈಲಿಷ್ ಗಾಗಲ್ಸ್ ಧರಿಸಿ ಫ್ಯಾಷನ್ ಗೋಲ್ಸ್ ತೋರಿಸಿದ್ದಾರೆ. ನಟನ ಈ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ.


31 ಸಾವಿರಕ್ಕೂ ಹೆಚ್ಚು ಲೈಕ್ಸ್


ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ಕಿಚ್ಚ ಸುದೀಪ್ ಅವರ ಫೋಟೋವನ್ನು ಶೇರ್ ಮಾಡಲಾಗಿದೆ. ಈ ಫೋಟೋಗೆ 31 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೆಟ್ಟಿಗರು ಕಿಚ್ಚ ಸುದೀಪ್ ಅವರ ವೈಟ್ ಕಲರ್ ಔಟ್​ಫಿಟ್ ಇಷ್ಟಪಟ್ಟಿದ್ದಾರೆ.
ಪಾಕೆಟ್​ನಲ್ಲಿ ಕೈ ಇಟ್ಟು ಸ್ಟೈಲಿಷ್ ಲುಕ್


ಕಿಚ್ಚ ಸುದೀಪ್ ತಮ್ಮೆರಡು ಕೈಗಳನ್ನು ಪಾಕೆಟ್​​ನಲ್ಲಿಟ್ಟು ಸ್ಟೈಲಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟನ ಈ ಲುಕ್ ಕ್ಲಾಸೀಯಾಗಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Bigg Boss Kannada-Kichcha Sudeep: ಕಿಚ್ಚನ ಫಿನಾಲೆ ಲುಕ್​ಗೋಸ್ಕರ ಕಾಯ್ತಿದ್ದಾರೆ ಫ್ಯಾನ್ಸ್


ಸ್ಯಾಂಡಲ್​ವುಡ್ ಸ್ಟೈಲ್ ಐಕಾನ್


ಫೋಟೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿ ಕಿಚ್ಚ ಸುದೀಪ್ ಅವರನ್ನು ಸ್ಯಾಂಡಲ್​ವುಡ್​ ಸ್ಟೈಲ್ ಐಕಾನ್ ಎಂದು ಕರೆದಿದ್ದಾರೆ. ಇನ್ನು ಕೆಲವರು ಕಾಮೆಂಟ್ ಬಾಕ್ಸ್​ನಲ್ಲಿ ವಿನ್ನರ್ ಕುರಿತು ಚರ್ಚೆ ಮಾಡಿದ್ದಾರೆ.


ಕಪ್ ಗೆಲ್ಲೋದು ಯಾರು?


ಬಿಗ್​ಬಾಸ್ ಸೀಸನ್ 9ರ ಕಪ್ ಗೆಲ್ಲೋದು ಯಾರು ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ದಿವ್ಯಾ ಉರುಡುಗ ಔಟ್ ಆದ ಕಾರಣ ಒಬ್ಬ ಮಹಿಳಾ ಸ್ಪರ್ಧಿ ಮಾತ್ರ ಮನೆಯೊಳಗೆ ಇದ್ದಾರೆ. ನಟಿ ದಿಪಿಕಾ ದಾಸ್ ಅವರು ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಕೆಲವರಲ್ಲಿದೆ. ಆದರೆ ವಿನ್ನರ್ ಕುರಿತು ಮಾತನಾಡುವಾಗ ರೂಪೇಶ್ ಶೆಟ್ಟಿ ಅವರೇ ವಿನ್ನರ್ ಎಂಬ ಸುದ್ದಿ ಹರಿದಾಡುತ್ತಿದೆ.


ರೂಪೇಶ್ ರಾಜಣ್ಣ ಹಾಗೂ ರಾಕೇಶ್ ಅಡಿಗ ಅವರು ರನ್ನರ್ ಅಪ್ ಆಗಲಿದ್ದಾರೆ ಎನ್ನಲಾಗಿದೆ. ಅಂತೂ ಇಂತೂ ಬಿಗ್​ಬಾಸ್ 100 ದಿನಗಳ ಕಾಲ ಮನೆಯಲ್ಲಿ ಉಳಿಯುವ ಕ್ರೆಡಿಟ್ ನಾಲ್ವರು ಸ್ಪರ್ಧಿಗಳಿಗೆ ಸಿಗಲಿದೆ. ದಿವ್ಯಾ ಮಾತ್ರ 99 ದಿನಗಳ ಪ್ರಯಾಣ ಮುಗಿಸಿ ಮನೆಯಿಂದ ಹೊರಬಂದಿದ್ದಾರೆ. ಅವರಿಗಾಗಿ ವೇದಿಕೆಯಲ್ಲಿ ಶುಭಾ ಪೂಂಜಾ ಅವರು ಡ್ಯಾನ್ಸ್ ಕೂಡಾ ಮಾಡಿದ್ದರು.

Published by:Divya D
First published: