BBK8 Finale: ದಿವ್ಯಾ ಸುರೇಶ್​ ಎಲಿಮಿನೇಷನ್​: ಗಲ್ಲಿಗೇರಿಸಿದ ಅನುಭವ ನೀಡಿತ್ತು ಎಂದ ಮಂಜು ಪಾವಗಡ..!

Bigg Boss Kannada Season8 Finale: ಬಿಗ್ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್ ಅವರು ಎಲಿಮಿನೇಟ್ ಆಗಿ ಹೊರ ಬಂದ ಕ್ಷಣವನ್ನು ಸುದೀಪ್ ಅವರು ಇಂದಿನ ಸಂಚಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ. ಇದು ಈ ಹಿಂದೆಂದೂ ನಡೆಯದ ಎಲಿಮಿನೇಷನ್​ ಎಂದು ಸುದೀಪ್ ಹೇಳಿದ್ದಾರೆ. ಅದನ್ನು ಟಿವಿಯಲ್ಲಿ ನೋಡುವಾಗ ನನ್ನ ಮನಸ್ಸಿನಲ್ಲೇ ಒಂದು ರೀತಿಯ ಆತಂಕ ಮನೆ ಮಾಡಿತ್ತು ಎಂದಿದ್ದಾರೆ. 

ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ

ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ

  • Share this:
ದಿವ್ಯಾ ಸುರೇಶ್ ಹಾಗೂ ಮಂಜು ಅವರ ನಡುವಿನ ಸ್ನೇಹದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಎಷ್ಟೇ ನಿಂದನೆ ಮಾಡಿದರೂ, ಚುಚ್ಚು ಮಾತುಗಳಿಂದ ಮನಸ್ಸು ನೋಯಿಸಿದರೂ ಬಿಗ್ ಬಾಸ್​ ಮನೆಯಲ್ಲಿ ಇವರನ್ನು ದೂರ ಮಾಡಲು ಯಾರಿಂದಲೂ ಆಗಲಿಲ್ಲ. ಸ್ನೇಹಕ್ಕೆ ಈ ಇಬ್ಬರು ಕೊಟ್ಟ ಗೌರವ ಹಾಗೂ ಕೊನೆಯ ಹಂತದಲ್ಲಿ ದಿವ್ಯಾ ಸುರೇಶ್ ಸ್ನೇಹಿತನಿಗಾಗಿ ಕೊಟ್ಟ ಆ ಕ್ಯೂಟ್​ ಸರ್ಪ್ರೈಸ್​ ನಿಜಕ್ಕೂ ಮನ ಮುಟ್ಟುವಂತಿತ್ತು. ತಾನು ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳಲು ದಿವ್ಯಾ ಸುರೇಶ್​ ಅವರು ತಮಗೆ ಸಿಕ್ಕಿದ್ದ ಒಂದು ಅಪರೂಪದ ಅವಕಾಶವನ್ನು ಮಂಜುಗಾಗಿ ಬಳಸಿಕೊಂಡಿದ್ದರು. ಕೊನೆಗೂ ಈ ಇವರ ಸ್ನೇಹವೇ ಗೆದ್ದಿದ್ದು. ಇಂತಹ ಸ್ನೇಹಿತರು ಬಿಗ್ ಬಾಸ್​ ಮನೆಯಲ್ಲಿ ಇರುವಾಗಲೇ ಎಲಿಮಿನೇಷನ್​ ಇವರನ್ನು ಸ್ವಲ್ಪ ಸಮಯದವರೆಗೆ ದೂರ ಮಾಡಿತ್ತು. ಹೌದು, ಬಿಗ್ ಬಾಸ್​ ಕನ್ನಡ ಸೀಸನ್​ 8ರ  ಕೊನೆಯ ಎಲಿಮಿನೇಷನ್​ ಮನೆಯಲ್ಲಿ ಸಿಕ್ಕಾಪಟ್ಟೆ ಆತಂಕ ಉಂಟು ಮಾಡಿತ್ತು. ಮನೆಯಲ್ಲಿದ್ದ ಸ್ಪರ್ಧಿಗಳ ಎದೆ ಬಡಿತ ಹೆಚ್ಚಿಸಿತ್ತು. 

ಬಿಗ್ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್ ಅವರು ಎಲಿಮಿನೇಟ್ ಆಗಿ ಹೊರ ಬಂದ ಕ್ಷಣವನ್ನು ಸುದೀಪ್ ಅವರು ಇಂದಿನ ಸಂಚಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ. ಇದು ಈ ಹಿಂದೆಂದೂ ನಡೆಯದ ಎಲಿಮಿನೇಷನ್​ ಎಂದು ಸುದೀಪ್ ಹೇಳಿದ್ದಾರೆ. ಅದನ್ನು ಟಿವಿಯಲ್ಲಿ ನೋಡುವಾಗ ನನ್ನ ಮನಸ್ಸಿನಲ್ಲೇ ಒಂದು ರೀತಿಯ ಆತಂಕ ಮನೆ ಮಾಡಿತ್ತು ಎಂದಿದ್ದಾರೆ.






ಇಂತಹ ಎಲಿಮಿನೇಷನ್​ ಪ್ಲಾನ್ ಮಾಡಿದ ತಂಡಕ್ಕೆ ನನ್ನ ಧನ್ಯವಾದ ಎಂದ ಸುದೀಪ್ ಅವರು ಈ ಎಲಿಮಿನೇಷನ್​ ಬಗ್ಗೆ ಮೊದಲು ಮಂಜು ಅವರ ಅನುಭವ ಕೇಳುತ್ತಾರೆ. ಮಂಜು ಅವರು ಮಾತನಾಡಲಾರಂಭಿಸುತ್ತಿದ್ದಂತೆಯೇ ಆ ಎಲಿಮಿನೇಷನ್ ನಿಜಕ್ಕೂ ಗಲ್ಲಿಗೇರಿಸಿದ ಅನುಭವ ನೀಡಿತ್ತು. ಆತ್ಮೀಯವಾಗಿದ್ದ ದಿವ್ಯಾ ಸುರೇಶ್​ ಮನೆಯಿಂದ ಹೊರ ಹೋದಾಗ ಮನಸ್ಸಿಗೆ ನೋವಾಗಿತ್ತು. ಒಂದು ಕೋಣೆಯಲ್ಲಿ ಹೋಗಿ ಅವರು ಮತ್ತೆ ಬೈ ಹೇಳಲೂ ಬರುವುದಿಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Raj Kundra: ತಕ್ಷಣವೇ ಬಿಡುಗಡೆ ಮಾಡಿ ಎಂದು ಮನವಿ ಸಲ್ಲಿಸಿದ್ದ ರಾಜ್​ ಕುಂದ್ರಾ: ಜಾಮೀನು ಅರ್ಜಿ ತಿರಸ್ಕರಿದ ನ್ಯಾಯಾಲಯ

ಇದೇ ಎಲಿಮಿನೇಷನ್​ ಬಗ್ಗೆ ದಿವ್ಯಾ ಸುರೇಶ್​ ಅವರೂ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ದಿವ್ಯಾ ಸುರೇಶ್​ ಎಲಿಮಿನೇಷನ್​ ಎಂದ ಕೂಡಲೇ ಅಬ್ಬಾ ಅದು ಗಲ್ಲಿಗೇರಿಸಿದಂತಾಗಿತ್ತು. ಕೈಗೆ ಬಂದ ತುತ್ತನ್ನು ಯಾರೋ ಕಸಿದಂತೆ ಅನುಭವ ಆಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಐದೂ ಮಂದಿಗೆ ಸಿಗಲಿದೆ ಬಹುಮಾನ

ಬಿಗ್​ ಬಾಸ್​ ಫಿನಾಲೆಗೆ ಬಂದಿರುವ ವೈಷ್ಣವಿ, ಪ್ರಶಾಂತ್ ಸಂಬರಗಿ, ಅರವಿಂದ್​, ದಿವ್ಯಾ ಉರುಡುಗ ಹಾಗೂ ಮಂಜು ಪಾವಗಡ ಅವರಿಗೆ ಈ ಸಲ ಬಹುಮಾನ ಸಿಗಲಿದೆ. ಪ್ರತಿ ಸಲ ಬಿಗ್ ಬಾಸ್​ನಲ್ಲಿ ಗೆದ್ದವರಿಗೆ ಹಾಗೂ ರನ್ನರ್​ ಅಪ್​ಗೆ ಮಾತ್ರ ಬಹುಮಾನ ಸಿಗುತ್ತಿತ್ತು. ಆದರೆ, ಈ ಸಲ ಬಿಗ್ ಬಾಸ್​ ಸೀಸನ್​ 8ರಲ್ಲಿ ಫಿನಾಲೆಗೆ ಬಂದಿರುವ ಐದೂ ಮಂದಿಗೆ ಖುಷಿಯ ಸುದ್ದಿಯೊಂದನ್ನು ಸುದೀಪ್​ ನೀಡಿದ್ದಾರೆ.
ಗೆದ್ದವರಿಗೆ 53 ಲಕ್ಷ, ಎರಡನೇ ಸ್ಥಾನದಲ್ಲಿರುವವರಿಗೆ 11 ಲಕ್ಷ, ಮೂರನೆಯವರಿಗೆ 6 ಲಕ್ಷ, ನಾಲ್ಕನೇ ಸ್ಥಾನಕ್ಕೆ 3.5 ಲಕ್ಷ ಹಾಗೂ 5ನೇ ಸ್ಥಾನಕ್ಕೆ 2.5 ಲಕ್ಷ ಬಹುಮಾನ ಸಿಗಲಿದೆ ಎಂದು ಸುದೀಪ್ ಪ್ರಕಟಿಸಿದ್ದಾರೆ. ಹೀಗಾಗಿ ಸೋತವರು ಬೇಸರದಿಂದ ಖಾಲಿ ಕೈಯಲ್ಲಿ ಹೊರ ಹೋಗುವುದಿಲ್ಲ.

ಇದನ್ನೂ ಓದಿ: Kichcha Sudeep- Mahesh Babu: ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಕಿಚ್ಚ ಸುದೀಪ್​-ಮಹೇಶ್​ ಬಾಬು

ಇನ್ನು ಬಿಗ್ ಬಾಸ್​ ಮನೆಯಲ್ಲಿರುವ ಮಂದಿಗೆ ರಿಯಾಲಿಟಿ ಟಿವಿ ಮೂಲಕ ಹೊರ ಜಗತ್ತಿನಲ್ಲಿ ಆದ ಬೆಳವಣಿಗೆಗಳ ಬಗ್ಗೆ ತಿಳಿಸಲಾಯಿತು. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ಲಕ್ಷಣದ ಪ್ರಚಾರದ ಜೊತೆಗೆ ಸ್ಪರ್ಧಿಗಳಿಗೆ ಸುದ್ದಿ ಮುಟ್ಟಿಸುವ ಕೆಲಸ ಮಾಡಲಾಯಿತು. ಮೊದಲಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾದ ಸುದ್ದಿ ಕೊಡಲಾಯಿತು. ನಂತರ ಪಿಯುಸಿ ಫಲಿತಾಂಶ, ಮಾಜಿ ಸಂಸದ ಜಿ ಮಾದೇಗೌಡ ಅವರ ನಿಧನ ಹಾಗೂ ಹಿರಿಯ ಜಯಂತಿ ಅಗಲಿಕೆಯ ಬಗ್ಗೆ ತಿಳಿಸಲಾಯಿತು.
Published by:Anitha E
First published: