Bigg Boss Kannada: ಎಲಿಮಿನೇಷನ್​ಗೆ ಸಖತ್​ ಟ್ವಿಸ್ಟ್​ ಕೊಟ್ಟ ಬಿಗ್ ಬಾಸ್​: ಪ್ರತಿ ಕ್ಷಣ ಆತಂಕದಲ್ಲಿ ಸ್ಪರ್ಧಿಗಳು..!

Bigg Boss Kannada: ಇಂದು ಶುಂಭಾ ಪೂಂಜಾ ಸಹ ಮನೆಯಿಂದ ಹೊರ ಹೋಗಲಿದ್ದೇನೆ ಎಂದುಕೊಂಡೇ ಸಖತ್​ ಗ್ರ್ಯಾಂಡ್ ಆಗಿ ಸಿದ್ಧರಾಗಿದ್ದರು. ಸೂಪರ್ ಸಂಡೇ ವಿಥ್​ ಸುದೀಪ ಸಂಚಿಕೆಯಲ್ಲಿ ವೇದಿಕೆ ಮೇಲೆ ಸುದೀಪ್ ಅವರ ಜತೆ ತಮ್ಮ ಜರ್ನಿಯ ವಿಡಿಯೋ ನೋಡುತ್ತೇನೆ ಎಂದು ಕಾತರರಾಗಿದ್ದರು. ಆದರೆ ಈ ಸಲವೂ ಎಲ್ಲರ ಊಹೆಗೆ ಸಿಗದಂತಹ ಒಂದು ತಿರುವನ್ನು ಬಿಗ್ ಬಾಸ್ ನೀಡಿದ್ದಾರೆ.

ಎಲಿಮಿನೇಷನ್​ಗೆ ಸಿಕ್ತು ಟ್ವಿಸ್ಟ್​

ಎಲಿಮಿನೇಷನ್​ಗೆ ಸಿಕ್ತು ಟ್ವಿಸ್ಟ್​

  • Share this:
ಬಿಗ್ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆಗೆ ಇನ್ನು ಎರಡು ವಾರ ಬಾಕಿ ಇದೆ. ದಿನದಿಂದ ದಿನಕ್ಕೆ ಮನೆಯ ವಾತಾವರಣ ಸಖತ್​ ಬಿಸಿಯಾಗಿದೆ. ಹೌದು, ಸದ್ಯ ಮನೆಯಲ್ಲಿ ಉಳಿದಿರುವ 9 ಮಂದಿ ಸ್ಪರ್ಧಿಗಳು ಫಿನಾಲೆಗೆ ಬರುವುದರೊಂದಿಗೆ ಆ ದಿನ ವೇದಿಕೆ ಮೇಲೆ ಸುದೀಪ್​ ಅವರ ಜತೆ ನಿಲ್ಲಲು ಅಗತ್ಯವಿರುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಸರಿಯಾಗಿ 14ನೇ ದಿನದಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಅದರಲ್ಲಿ ಕೇಲವ ಐದು ಮಂದಿ ಸ್ಪರ್ಧಿಗಳು ಮಾತ್ರ ಇರಲಿದ್ದಾರೆ. ಹೀಗಾಗಿಯೇ ಮನೆಯಿಂದ ಎರಡು ವಾರದಲ್ಲಿ ನಾಲ್ಕು ಮಂದಿ ಹೊರ ಹೋಗಬೇಕಿದೆ. ಹೀಗಿರುವಾಗ ಈ ವಾರಾಂತ್ಯದಲ್ಲಿ ಇಬ್ಬರು ಸ್ಪರ್ಧಿಗಳು ಮನೆಗೆ ಹೋಗಬೇಕಿತ್ತು. ಆದರೆ ಈ ವಾರ ಬಿಗ್ ಬಾಸ್​ ಮನೆಯಲ್ಲಿ ನಡೆಯಬೇಕಿದ್ದ ಎಲಿಮಿನೇಷನ್​ ಪ್ರಕ್ರಿಯೆಗೆ ಸಖತ್ತಾಗಿರುವ ತಿರುವುವನ್ನು ನೀಡಲಾಗಿದೆ. ಕಿಚ್ಚ ಸುದೀಪ್ ಅವರು ಎಲಿಮಿನೇಷನ್ ಕುರಿತಾಗಿ ಮಾಡಿದ ಪ್ರಕಟನೆಯಿಂದಾಗಿ ಸ್ಪರ್ಧಿಗಳ ನಿದ್ದೆ ಹಾಳಾಗಿದೆ.

ಈ ವಾರ ಮನೆಯಿಂದ ಹೊರ ಹೋಗಲು ಶುಭಾ ಪೂಂಜಾ, ಶಮಂತ್ ಗೌಡ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ ಅವರು ನಾಮಿನೇಟ್ ಆಗಿದ್ದರು. ಪ್ರಶಾಂತ್ ಸಂಬರಗಿ ಹಾಗೂ ಶಮಂತ್ ಗೌಡ ಮನೆಯಿಂದ ಹೋರ ಹೋಗುವ ಆತಂಕದಲ್ಲೇ ಇಡೀ ವಾರ ಕಳೆದಿದ್ದಾರೆ.
ಇಂದು ಶುಂಭಾ ಪೂಂಜಾ ಸಹ ಮನೆಯಿಂದ ಹೊರ ಹೋಗಲಿದ್ದೇನೆ ಎಂದುಕೊಂಡೇ ಸಖತ್​ ಗ್ರ್ಯಾಂಡ್ ಆಗಿ ಸಿದ್ಧರಾಗಿದ್ದರು. ಸೂಪರ್ ಸಂಡೇ ವಿಥ್​ ಸುದೀಪ ಸಂಚಿಕೆಯಲ್ಲಿ ವೇದಿಕೆ ಮೇಲೆ ಸುದೀಪ್ ಅವರ ಜತೆ ತಮ್ಮ ಜರ್ನಿಯ ವಿಡಿಯೋ ನೋಡುತ್ತೇನೆ ಎಂದು ಕಾತರರಾಗಿದ್ದರು. ಆದರೆ ಈ ಸಲವೂ ಎಲ್ಲರ ಊಹೆಗೆ ಸಿಗದಂತಹ ಒಂದು ತಿರುವನ್ನು ಬಿಗ್ ಬಾಸ್ ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada Season 8: ಶಮಂತ್ ಗೌಡ ಮಾಡಿರುವ ಕೆಲಸದಿಂದ ಕಷ್ಟಕ್ಕೆ ಸಿಲುಕಿದ ದಿವ್ಯಾ ಉರುಡುಗ

ಈ ವಾರ ಮನೆಯಿಂದ ಎಲಿಮಿನೇಟ್ ಆಗುವ ಆತಂಕದಲ್ಲಿದ್ದ ಸ್ಪರ್ಧಿಗಳಿಗೆ ಕೊಂಚ ನಿರಾಳವಾಯಿತು. ಕಾರಣ ಇವತ್ತು ಯಾರೂ ಮನೆಯಿಂದ ಹೊರ ಹೋಗುತ್ತಿಲ್ಲ ಎಂದು ಸುದೀಪ್​ ಹೇಳುತ್ತಿದ್ದಂತೆಯೇ ಸ್ಪರ್ಧಿಗಳ ಮುಖದಲ್ಲಿ ನಗು ಮೂಡಿತ್ತು. ಆದರೆ, ನಾಳೆಯಿಂದ ಯಾವ ಕ್ಷಣದಲ್ಲಿ ನಾಮಿನೇಟ್ ಆಗಿರುವವರಲ್ಲಿ ಯಾರು ಬೇಕಾದರೂ ಮನೆಯಿಂದ ಹೊರ ಹೋಗಬಹುದು ಅನ್ನೋ ಬಾಂಬ್ ಸಹ ಸಿಡಿಸಿದ್ದಾರೆ ಕಿಚ್ಚ.

ಅಂದರೆ ಮನೆಯಲ್ಲಿ ಈ ವಾರ ಒಬ್ಬರಿಗಿಂತ ಹೆಚ್ಚು ಜನರು ಮನೆಯಿಂದ ಹೊರ ಹೋಗುವ ಸಾಧ್ಯತೆ ಇದೆ. ಅದು, ಹೇಗೆ, ಯಾವಾಗ ಅನ್ನೋ ಮಾಹಿತಿ ಬಿಗ್ ಬಾಸ್​ ಬಿಟ್ಟರೆ ಮತ್ತಾರಿಗೂ ಇಲ್ಲ. ಇದರಿಂದಾಗಿಯೇ ಈಗ ಸ್ಪರ್ಧಿಗಳ ನಿದ್ದೆ ಹಾಳಾಗಿದ್ದು, ಯಾರು ಯಾವಾಗ ಮನೆಯಿಂದ ಹೊರ ಹೋಗಬಹುದು ಅಂತ ಕಾಯಲಾರಂಭಿಸಿದ್ದಾರೆ. ಅಲ್ಲದೆ ಮನೆಯಲ್ಲಿರುವ ಪ್ರತಿ ಕ್ಷಣವನ್ನು ತಮ್ಮದಾಗಿಸಿಕೊಳ್ಳಿ ಎಂದರೆ, ಅದನ್ನು ಆತಂಕದಲ್ಲಿ ಕಳೆಯಲಾರಂಭಿಸಿದ್ದಾರೆ.

ಇದನ್ನೂ ಓದಿ: ನ್ಯಾಚುರಲ್ ಸ್ಟಾರ್ ಆಗಿ ಹೊರಹೊಮ್ಮಿದ ಪ್ರಶಾಂತ್​ ಸಂಬರಗಿಗೆ ಸಿಕ್ತು ಕಿಚ್ಚನ ಚಪ್ಪಾಳೆ..!

ಇನ್ನು ಇರುವ 9 ಮಂದಿ ಸ್ಪರ್ಧಿಗಳಲ್ಲಿ ಫಿನಾಲೆಯಲ್ಲಿ 5 ಜನರು ಮಾತ್ರ ಇರುತ್ತಾರೆ. ಹೀಗಿರುವಾಗ ಮನೆಯಿಂದ ಈಗ ಒಟ್ಟು ನಾಲ್ಕು ಮಂದಿ ಹೊರ ಹೋಗಬೇಕಿದೆ. ಹೀಗಾಗಿ ಈ ವಾರ ಒಬ್ಬರಿಗಿಂತ ಹೆಚ್ಚು ಸ್ಪರ್ಧಿಗಳು ಮನೆಯಿಂದ ಹೊರ ನಡೆಯಲಿದ್ದಾರೆ. ಆದರೆ, ಈ ಸಲ ಮನೆಯಿಂದ ಹೊರ ಹೋಗುವವರಿಗೆ ಕಿಚ್ಚನ ಜೊತೆ ವೇದಿಕೆ ಹಂಚಿಕೊಂಡು, ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಅದೃಷ್ಟ ಇರುವುದಿಲ್ಲ.
Published by:Anitha E
First published: