ನಟ, ಕಲಾವಿದ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ (Bigg Boss) ಸೀಸನ್ 9ರಲ್ಲಿ ಕಪ್ ಎತ್ತಿಕೊಂಡಿದ್ದಾರೆ. ನವೀನರು, ಪ್ರವೀಣರೂ ಇದ್ದ ಈ ಬಾರಿಯ ಸ್ಪೆಷಲ್ ಬಿಗ್ಬಾಸ್ ಸೀಸನ್ನಲ್ಲಿ ನಟ ನವೀನರಾಗಿ ವಿನ್ನರ್ ಆಗಿದ್ದಾರೆ. ಪ್ರಶಾಂತ್ ಸಂಬರ್ಗಿ (Prashanth Sambargi), ಆರ್ಯವರ್ಧನ್ ಗುರೂಜಿ, ಅರುಣ್ ಸಾಗರ್ (Arun Sagar) ಸೇರಿದಂತೆ ಬಹಳಷ್ಟು ಹಿರಿಯ ಮತ್ತು ಹಳೆಯ ಸ್ಪರ್ಧಿಗಳೂ ಇದ್ದ ಮನೆಯಲ್ಲಿ ರೂಪೇಶ್ ಕಪ್ ಗೆದ್ದಿದ್ದು ಸಣ್ಣ ವಿಚಾರ ಅಲ್ಲವೇ ಅಲ್ಲ.
ಸ್ವಲ್ಪ ಮಟ್ಟಿಗೆ ಸೈಲೆಂಟ್, ಹಿತ ಮಿತ ಮಾತಿನ ಮೂಲಕ ಎಲ್ಲರ ಮನಸು ಗೆದ್ದಿದ್ದ ರೂಪೇಶ್ ಶೆಟ್ಟಿ ಅವರು ಮನೆಯಲ್ಲಿದ್ದ ಎಲ್ಲರಿಗೂ ಆತ್ಮೀಯರಾಗಿದ್ದರು. ಬಹುತೇಕ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದಾರೆ.
ಬೆಸ್ಟ್ ಎನಿಸಿಕೊಂಡಿದ್ದು ಹೇಗೆ?
ರಾಕೇಶ್ ಅಡಿಗ ಅವರಿಗಿಂತ ಬೆಸ್ಟ್ ಎನಿಸಿಕೊಂಡು ಕಪ್ ಗೆದ್ದಿದ್ದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ರಾಕೇಶ್ ಅಡಿಗ ಅವರು ರೂಪೇಶ್ ಶೆಟ್ಟಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಸೈಲೆಂಟ್, ಹಾಗೆಯೇ ರೂಪೇಶ್ ಅವರಷ್ಟು ನಗು, ಮಾತು ರಾಕೇಶ್ ಅವರಲಿಲ್ಲ. ಆದರೆ ರೂಪೇಶ್ ಅವರ ಸ್ವಭಾವ ಮೊದಲಿನಿಂದಲೂ ಪ್ರೇಕ್ಷಕರಿಗೆ ಇಷ್ಟವಾಗುತ್ತಲೇ ಹೋಗಿತ್ತು.
ಪ್ಲಸ್ ಪಾಯಿಂಟ್ ಆಗಿದ್ದು ಲವ್ ಸ್ಟೋರಿ
ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಅವರ ಲವ್ ಸ್ಟೋರಿ ಸಖತ್ ಸುದ್ದಿಯಾಗಿದೆ. ರಾಕೇಶ್ ಅಡಿಗ ಅವರು ಕೂಡಾ ಅಮೂಲ್ಯ ಅವರೊಂದಿಗೆ ಆತ್ಮೀಯರಾಗಿದ್ದರು. ಆದರೆ ಅವರ ಜೋಡಿಗಿಂತ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಜೋಡಿ ಸಖತ್ ಹಿಟ್ ಆಯಿತು.
ಸಾನ್ಯಾ ಎಲಿಮಿನೇಷನ್ ಟೈಂನಲ್ಲಂತೂ ರೂಪೇಶ್ ಶೆಟ್ಟಿ ಅವರು ಮತ್ತಷ್ಟು ಫೇಮಸ್ ಆದರು. ಊಟ ಬಿಟ್ಟಿದ್ದು, ಸಾನ್ಯಾ ಪರವಾಗಿ ಎರಡು ತಟ್ಟೆ ಊಟ ಮಾಡಿದ್ದು, ಗೆಳತಿಯ ನೆನಪಲ್ಲಿ ಅವರು ಕೊರಗಿದ್ದು, ಪ್ರೀತಿಯಿಂದ ಪ್ರಾಮಾಣಿಕವಾಗಿ ಕಣ್ಣೀರಿಟ್ಟಿದ್ದು ಇದೆಲ್ಲವೂ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹತ್ತಿರ ಮಾಡಿತ್ತು.
ಇದನ್ನೂ ಓದಿ: BBK Grand Finale: ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9 ವಿನ್ನರ್; ರಾಕೇಶ್ ಅಡಿಗಗೆ ರನ್ನರ್ ಅಪ್ ಪಟ್ಟ
ಸ್ವಲ್ಪ ಟ್ರೋಲ್ ಕೂಡಾ ಆಗಿದ್ರು
ರೂಪೇಶ್ ಶೆಟ್ಟಿ ಸಾನ್ಯಾ ಅಯ್ಯರ್ ಎಲಿಮಿನೇಷನ್ ನಂತರ ಸ್ವಲ್ಪ ಮಟ್ಟಿಗೆ ಟ್ರೋಲ್ ಕೂಡಾ ಆಗಿದ್ದರು. ಒಂದೆರಡು ದಿನ ಓಕೆ, ಇದೇನು ಇವ್ರು ದೇವದಾಸ್ ಆಗ್ಬಿಟ್ರು ಎಂದು ನೆಟ್ಟಿಗರೆಲ್ಲ ಚರ್ಚೆ ಮಾಡಿಕೊಂಡು ಟ್ರೋಲ್ ಮಾಡಿದ್ದರು. ಆದರೆ ಯಾವುದೇ ರೀತಿಯಾದರೂ ರೂಪೇಶ್ ಶೆಟ್ಟಿ ಸದಾ ಪ್ರೇಕ್ಷಕರ ಮಧ್ಯೆ ಚರ್ಚೆಯಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದು ಅವರಿಗೆ ಪ್ಲಸ್ ಪಾಯಿಂಟ್.
ವಿವಾದವೂ ಆಗಿತ್ತು
ತುಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡು ರೂಪೇಶ್ ಶೆಟ್ಟಿ ಬಿಗ್ಬಾಸ್ ಮನೆಯಲ್ಲಿ ಸ್ವಲ್ಪ ವಿವಾದವನ್ನೂ ಮಾಡಿದ್ದರು. ತುಳು ಸಿನಿಮಾಗಳ ಮೂಲಕವೇ ಹಿಟ್ ಆಗಿರುವ ನಟ, ನಾನು ಗಡಿನಾಡ ಕನ್ನಡಿಗ ಎಂದು ಹೇಳಿದಾಗ ಭಾರೀ ಚರ್ಚೆಯಾಗಿತ್ತು.
ಬಿಗ್ ಬಾಸ್ ಸೀಸನ್ 9 ರಲ್ಲಿ ಕನ್ನಡ ರಾಜ್ಯೋತ್ಸವದಂದು ರೂಪೇಶ್ ಶೆಟ್ಟಿ, ನಾನು ಗಡಿನಾಡ ಕನ್ನಡಿಗ ಅಂತ ಹೇಳಿದ್ದರು. ತುಳುನಾಡಿನಲ್ಲಿ ಹೆಸರು ಗಳಿಸಿ, ಈಗ ಗಡಿನಾಡ ಕನ್ನಡಿಗ ಅಂತ ಹೇಳುತ್ತಿದ್ದೀರಾ ಎಂದು ತುಳು ಪ್ರೇಮಿಗಳು ಬೇಸರಗೊಂಡಿದ್ದರು. ಹಲವು ತುಳುವರು ರೂಪೇಶ್ ಶೆಟ್ಟಿ ವಿರುದ್ಧ ನಿಂತು ಕೇಸ್ ಕೂಡಾ ದಾಖಲಾಗಿತ್ತು.
ಆದರೆ ಇಂಥ ವಿವಾದವನ್ನು ಮೀರಿಯೂ ನಟ ಎಲ್ಲ ಪ್ರೇಕ್ಷಕರನ್ನು ರಂಜಿಸುವಲ್ಲಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದರಲ್ಲಿ ಸಕ್ಸಸ್ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ