Bigg Boss Session 9: ಒಟಿಟಿಗಂತೂ ಬರಲಿಲ್ಲ ಟಿವಿ ಬಿಗ್ ಬಾಸ್​ಗಾದ್ರೂ ಬಾರಪ್ಪಾ! ಕಾಫಿನಾಡು ಚಂದುಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ಬಿಗ್ ಬಾಸ್​ ಓಟಿಟಿಯಲ್ಲೇ ಕಾಫಿನಾಡು ಚಂದು ಕರೆತರುವಂತೆ ಅಭಿಮಾನಿಗಳು ಕೇಳಿಕೊಂಡ್ರು. ಆದ್ರೆ ಬಿಗ್ ಬಾಸ್​ ಓಟಿಟಿಯಲ್ಲಿ ಜನರಿಗೆ ನಿರಾಸೆಯಾಗಿತ್ತು. ಇದೀಗ ಬಿಗ್​ ಬಾಸ್​ ಸೀಸನ್​ 9 ಬರ್ತಿದೆ ಈಗಲಾದ್ರೂ ಚಂದು ಕರೆತನ್ನಿ ಎಂದು ಅಭಿಮಾನಿಗಳು ಪೋಸ್ಟ್ ಮಾಡ್ತಿದ್ದಾರೆ.

ಬಿಗ್​ ಬಾಸ್​ ಸೀಸನ್​ 9ಗೆ ಬರ್ತಾರಾ ಕಾಫಿನಾಡು ಚಂದು

ಬಿಗ್​ ಬಾಸ್​ ಸೀಸನ್​ 9ಗೆ ಬರ್ತಾರಾ ಕಾಫಿನಾಡು ಚಂದು

  • Share this:
ಬಿಗ್​ಬಾಸ್​​ ಸೀಸನ್​​ ಒಂಭತ್ತು (Bigg Boss Session 9) ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಓಟಿಟಿಯಲ್ಲಿ ಭಾರೀ ಜನಪ್ರಿಯರಾಗಿರೋ ಬಿಗ್​ ಬಾಸ್​ ಮುಕ್ತಾಯಗೊಳ್ಳಲು ಇನ್ನೂ ಎರಡು ವಾರ ಬಾಕಿ ಇದೆ.​ ಕಲರ್ಸ್​ ಕನ್ನಡ ವಾಹಿನಿ (Colours Kannada) ಪ್ರೇಕ್ಷಕರಿಗೆ ಗುಡ್​ ನ್ಯೂಸ್​ ಕೊಟ್ಟಿದೆ. ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಪ್ರೇಕ್ಷಕರು ಬಿಗ್ ಬಾಸ್​ ಹೊಸ ಸೀಸನ್ ನೋಡಬಹುದಾಗಿದೆ. ಓಟಿಟಿಯಲ್ಲಿ (OTT) ಎಲ್ಲರೂ ಬಿಗ್​ ಬಾಸ್​ ಸೀಸನ್ ನೋಡಲು ಸಾಧ್ಯವಾಗಿಲ್ಲ. ಇದೀಗ  ನಿಮ್ಮ ಮನೆಯ ಟಿವಿ ಪರದೆ ಮೇಲೆಯೇ ಸಖತ್ ಮನರಂಜನೆ (Entertainment) ಸಿಗಲಿದೆ. 

ಬಿಗ್​ ಬಾಸ್​​ ಸೀಸನ್​ 9 ಪ್ರೋಮೋ ರಿಲೀಸ್​​

ಬಿಗ್ ಬಾಸ್​ ಸೀಸನ್​ 9 ಪ್ರೋಮೋ ರಿಲೀಸ್​ ಆಗಿದೆ. ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್​ನಲ್ಲಿ ಸದ್ಯ 9 ಸ್ಪರ್ಧಿಗಳು ಇದ್ದಾರೆ. ಇವರ ಪೈಕಿ ಮೂವರು ಟಿವಿ ಸೀಸನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜತೆಗೆ ಹೊಸದಾಗಿ 13 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದಾರೆ. ಬಿಗ್​ ಬಾಸ್​ ಮನೆಗೆ ಯಾರೆಲ್ಲಾ ಎಂಟ್ರಿ ಕೊಡ್ತಿದ್ದಾರೆ ಅನ್ನೋದನ್ನು ಕಾದು ನೋಡ್ಬೇಕಿದೆ.

ಬಿಗ್​ಬಾಸ್​​ ಮನೆಗೆ ಬರ್ತಾರಾ ಕಾಫಿನಾಡು ಚಂದು

ಕಾಫಿನಾಡು ಚಂದುಗೆ ಅವಕಾಶ ನೀಡಿ ಎಂದು ಅಭಿಮಾನಿಗಳು ಕೋರಿಕೆ ಇಟ್ಟಿದ್ದಾರೆ. ಬಿಗ್ ಬಾಸ್​ ಓಟಿಟಿಯಲ್ಲೇ ಕಾಫಿನಾಡು ಚಂದು ಕರೆತರುವಂತೆ ಅಭಿಮಾನಿಗಳು ಕೇಳಿಕೊಂಡ್ರು. ಆದ್ರೆ ಬಿಗ್ ಬಾಸ್​ ಓಟಿಟಿಯಲ್ಲಿ ಜನರಿಗೆ ನಿರಾಸೆಯಾಗಿತ್ತು. ಇದೀಗ ಬಿಗ್​ ಬಾಸ್​ ಸೀಸನ್​ 9ರಲ್ಲಿ ಕಾಣಿಸಿಕೊಳ್ತಾರಾ ಅನ್ನೋದನ್ನು ಕಾದು ನೋಡ್ಬೇಕಿದೆ.






ಬದಲಾಗ್ತಿದೆ ಬಿಗ್​ ಬಾಸ್​ ಲೋಗೋ 

ಎಲ್ಲಾ ರಿಯಾಲಿಟಿ ಶೋಗಳ ಬಿಗ್‍‍ಬಾಸ್. ಬರ್ತಿದೆ ಸೀಸನ್ ಒಂಭತ್ತು ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಈ ಬಾರಿ ಬಿಗ್ ಬಾಸ್​ನ ಕಣ್ಣಿನ ಬಣ್ಣ ಹೊಸ ರೀತಿಯಲ್ಲಿ ಮೂಡಿ ಬಂದಿದೆ. ಹಳೆ ಸೀಸನ್​ಗಳ ಲೋಗೋಗಿಂತ ಈ ಲೋಗೋ ಭಿನ್ನವಾಗಿದೆ.

ಇದನ್ನೂ ಓದಿ: Sai Pallavi: ಫ್ಯಾಮಿಲಿ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ; ಕುಟುಂಬ ಜೊತೆ ಸಖತ್ ಪೋಸ್

ಕಿಚ್ಚ ಸುದೀಪ್​ ನಿರೂಪಣೆ

ಓಟಿಟಿಯಲ್ಲಿ ಪ್ರಸಾರವಾಗುವ ಮಿನಿ ಸೀಸನ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕೆಲ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಅವರು ಆಮೇಲೆ ಟಿವಿ ಶೋಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ರಾಜ್ಯದ ವಿವಿಧ ರಂಗದ ಕೆಲ ಸೆಲೆಬ್ರಿಟಿಗಳು ಕೂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಈ ಎರಡೂ ಸೀಸನ್‌ನ್ನು ಕಿಚ್ಚ ಸುದೀಪ್ (Kiccha Sudeep) ಅವರೇ ನಿರೂಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ಪುಷ್ಪ 2 ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಶ್ಮಿಕಾ ಮಂದಣ್ಣ!

ಬಿಗ್​ಬಾಸ್​ ಓಟಿಟಿಯಲ್ಲಿ 16 ಸ್ಪರ್ಧಿಗಳು

ಈ ಹಿಂದೆ ಓಟಿಟಿ ರಿಲಿಯಾಟಿ ಶೋಗೆ ಅದ್ಧೂರಿ ಚಾಲನೆ ಸಿಕ್ಕಿತ್ತು. ಕಿಚ್ಚ ಸುದೀಪ್ 16 ಸ್ಪರ್ಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ರು. ಈ ಸ್ಪರ್ಧಿಗಳಲ್ಲಿ ಸಂಖ್ಯಾಶಾಸ್ತ್ರ ಗುರೂಜಿ ಆರ್ಯವರ್ಧನ್ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರೆ, 2ನೇ ಸ್ಪರ್ಧಿಯಾಗಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಗೌಡ ಬಂದ್ರು. ಇನ್ನುಳಿದಂತೆ ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ತಿ ಗೌಡ, ಹಾಸ್ಯ ಕಲಾವಿದ ಲೋಕೇಶ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಉದಯ್ ಸೂರ್ಯ, ಸೋಮಣ್ಣ ಮಾಚಿಮಾಡ, ನಂದಿನಿ, ಜಸ್ವಂತ್ ಬೋಪಣ್ಣ, ಅರ್ಜುನ್ ರಮೇಶ್ ಮತ್ತು ಜಯಶ್ರೀ ಆರಾಧ್ಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ರು.

ಓಟಿಟಿಯಲ್ಲಿ ಯಾರು ವಿನ್ನರ್ ಆಗಬಹುದು!?

ಮೊದಲ ಬಾರಿಗೆ ಬಿಗ್ ಬಾಸ್ ಶೋ ಓಟಿಟಿನಲ್ಲಿ (Bigg boss ott) ಪ್ರಸಾರವಾಗಿದ್ದು, ಈ ಶೋ ಮುಕ್ತಾಯಗೊಳ್ಳಲು ಇನ್ನು ಎರಡು ವಾರ ಬಾಕಿಯಿದೆ. ಓಟಿಟಿಯಲ್ಲಿ ಯಾರು ವಿನ್ನರ್ ಆಗಬಹುದು ಎಂಬುದರ ಬಗ್ಗೆ ನೋಡುಗರಿಗೆ ಕುತೂಹಲವಿದೆ. ಓಟಿಟಿಯಲ್ಲಿ ಗಮನ ಸೆಳೆದ ಕೆಲ ಸ್ಪರ್ಧಿಗಳಿಗೆ ಬಿಗ್ ಬಾಸ್ ಸೀಸನ್ 9ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.
Published by:Pavana HS
First published: