• Home
  • »
  • News
  • »
  • entertainment
  • »
  • Bigg Boss Season 9: ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡೋಕೆ 18 ಕಂಟೆಸ್ಟೆಂಟ್ಸ್ ರೆಡಿ! ಕೆಲವ್ರಿಗೆ ಸಿಕ್ಕಾಪಟ್ಟೆ ಟೆಂಪರ್ ಇಶ್ಯೂ ಇದ್ಯಂತೆ

Bigg Boss Season 9: ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡೋಕೆ 18 ಕಂಟೆಸ್ಟೆಂಟ್ಸ್ ರೆಡಿ! ಕೆಲವ್ರಿಗೆ ಸಿಕ್ಕಾಪಟ್ಟೆ ಟೆಂಪರ್ ಇಶ್ಯೂ ಇದ್ಯಂತೆ

ಬಿಗ್ ಬಾಸ್ ಸೀಸನ್ 9

ಬಿಗ್ ಬಾಸ್ ಸೀಸನ್ 9

ಕಲರ್ಸ್ ಕನ್ನಡ ಬಿಗ್​ ಬಾಸ್ ಸೀಸನ್ 9ರ ಮತ್ತೊಂದು ಹೊಸ ಪ್ರೋಮೋ ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ ಸ್ಪರ್ಧಿಗಳ ಕುರಿತು ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ರಿವೀಲ್ ಆಗಿದೆ.

  • Share this:

ಬಿಗ್​ ಬಾಸ್ ಸೀಸನ್ 9 ಇಂದಿನಿಂದ ಶುರುವಾಗುತ್ತಿದ್ದು ಕಲರ್ಸ್ ಕನ್ನಡ (Colors Kannada) ಮತ್ತೊಂದು ಪ್ರೋಮೋ (Promo) ರಿಲೀಸ್ ಮಾಡಿದೆ. ಪ್ರೋಮೋ ಅಪ್​ಲೋಡ್ ಮಾಡಿದ್ದು ಇದರಲ್ಲಿ ಇಂಟ್ರೆಸ್ಟಿಂಗ್ ವಿಚಾರಗಳು ರಿವೀಲ್ ಆಗಿದೆ. ಒಂಭತ್ತು ಜನರ ಪ್ರವೀಣರ ಜೊತೆಗೆ ಮತ್ತೆ 9 ಜನ ಕಂಟೆಸ್ಟೆಂಟ್ ಸೇರಿಕೊಳ್ಳಲಿದ್ದು ಇದು ಸಖತ್ ಇಂಟ್ರೆಸ್ಟಿಂಗ್ ಆಗಿರಲಿದೆ. ಕಿಚ್ಚ ಸುದೀಪ್ ಅವರ ಮಾತಿನ ಕೆಲವೊಂದು ವಿಚಾರಗಳು ರಿವೀಲ್ ಆಗಿವೆ. ಕಿಚ್ಚ ಸುದೀಪ್ (Kichcha Sudeep) ಅವರು ಕೆಲವರಿಗೆ ಸಿಕ್ಕಾಪಟ್ಟೆ ಟೆಂಪರ್ ಇಶ್ಯೂ ಇದೆ ಎಂದು ಹೇಳಿದ್ದನ್ನು ಕೇಳಬಹುದು. ಹಣೆಬರಹಕ್ಕೆ ಹೊಣೆ ಯಾರು? ಒಳಗೆ ಹೋಗಿ ಇಲ್ಲಿ ಬೊಂಬೆ ಎಲ್ಲರು ಎಂದು ಕಿಚ್ಚ ಸುದೀಪ್ ಹೇಳುವುದನ್ನು ಕೇಳಬಹುದು. ಕಂಟೆಸ್ಟೆಂಟ್ ಒಬ್ಬರು ನನಗೆ ಬಿಪಿ, ಶುಗರ್ ಏನೂ ಇಲ್ಲ ಎಂದು ಹೇಳುವುದನ್ನು ಕೇಳಬಹುದು, ಆಗ ಅದಕ್ಕೆ ಉತ್ತರಿಸಿ ಕಿಚ್ಚ ಸುದೀಪ್ ಅದೆಲ್ಲಾ ನೀವಿದ್ರೆ ಉಳಿದವರಿಗೆ ಬರುತ್ತೆ ಎಂದು ಕಾಮಿಡಿ ಮಾಡಿದ್ದಾರೆ. ಇನ್ನೊಬ್ಬರು ಸ್ಪರ್ಧಿ ತಾನು ಅಪ್ಪನ ಬಳಿ ಹೋಗಿ 100 ದಿನ ಇರುತ್ತೇನೆ, 100 ಚಡ್ಡಿ ಕೊಡಿಸಿ ಎಂದು ಕೇಳಿದ್ದೆ. ಅಪ್ಪ 6 ಚಡ್ಡಿ ಕೊಡಿಸಿ ಹೋಗಿ ಬಾರಪ್ಪ ಎಂದ್ರು ಎಂದಿದ್ದಾರೆ. ಅಂತೂ ಮೊದಲ ದಿನ ಸಖತ್ ಇಂಟ್ರೆಸ್ಟಿಂಗ್ ಓಪನಿಂಗ್ ಇಂದು ಇರಲಿದೆ.


ಬಹಳಷ್ಟು ಅದ್ಧೂರಿತನ, ಗ್ರ್ಯಾಂಡ್ ಆಗಿ ನಡೆಯಲಿರುವ ಕನ್ನಡ ಬಿಗ್​ಬಾಸ್ ಸೀಸನ್ 9ರ ಪ್ರೋಮಗಳನ್ನು ಈಗಾಗಲೇ ಬಿಡಲಾಗಿದ್ದು ಇವು ಸೋಷಿಯಲ್ ಮೀಡಿಯಾದಲ್ಲಿ ವೈರಲ್  ಆಗಿದೆ. ಇತ್ತೀಚೆಗೆ ಇನ್ನೊಂದು ಪ್ರೋಮೋ ಶೇರ್ ಮಾಡಲಾಗಿದ್ದು ಇದರಲ್ಲಿ ಕಾರ್ಯಕ್ರಮದ ಸಂಪೂರ್ಣ ವೈಭದ ಕ್ವಿಕ್ ಆದ ದೃಶ್ಯ ನೀವು ಕಾಣಬಹುದು.




ಡ್ಯಾನ್ಸ್, ಮಾತು, ಮನರಂಜನೆ, ಫನ್, ನಗು, ತಮಾಷೆ ಎಲ್ಲವೂ ಒಳಗೊಂಡಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಸ್ಟೈಲಿಷ್ ಲುಕ್ ಕೂಡಾ ನೀವು ಕಾಣಬಹುದು. ಅದೇ ರೀತಿಯಾಗಿ ಪ್ರೋಮೋದಲ್ಲಿ ನಮ್ಮ ನೆಲದ ಕಲೆಗಳನ್ನು ಕೂಡಾ ವೇದಿಕೆಯಲ್ಲಿ ತೋರಿಸಲಾಗಿದ್ದು, ಚೆಂಡೆ ಮೇಳವನ್ನು ಕೂಡಾ ಕಾಣಬಹುದು.


ಅರವಿಂದ್ ಸ್ಪೆಷಲ್ ಎಂಟ್ರಿ, ಸಖತ್ ಡ್ಯಾನ್ಸ್


ಕಳೆದ ಸೀಸನ್​​ನಲ್ಲಿ ಮಿಂಚಿದ್ದ ಕರಾವಳಿ ಯುವಕ ಅರವಿಂದ್ ಈ ಬಾರಿ ಕಾರ್ಯಕ್ರಮದ ಆರಂಭದಲ್ಲಿ ಬೈಕ್​ನಲ್ಲಿ ಸ್ಟೈಲಾಗಿ ಬಂದು ಶೈನ್ ಆಗಿದ್ದಾರೆ. ಅದೇ ರೀತಿ ಅರವಿಂದ್ ಅವರ ಡ್ಯಾನ್ಸ್ ಕೂಡಾ ಈ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿರಲಿದೆ.


ಇದನ್ನೂ ಓದಿ: ಬಿಗ್​ಬಾಸ್​ ಸೀಸನ್​ 9ರ ಫಸ್ಟ್​ ಕಂಟೆಸ್ಟೆಂಟ್​ ಇವ್ರೇ, ಮತ್ತೆ ದೊಡ್ಮನೆ ಸೇರಿದ ಕಿಚ್ಚನ ಕ್ಲೋಸ್ ಫ್ರೆಂಡ್​!


5 ಹಳೆಯ ಸ್ಪರ್ಧಿಗಳು


ಈ ಬಾರಿಯ ಬಿಗ್ ಬಾಸ್ 9ರ ಸೀಸನ್‍ಗೆ ಹಳೆಯ 5 ಸ್ಪರ್ಧಿಗಳು ಬರಲಿದ್ದಾರಂತೆ. ಇದು ಬಿಗ್ ಬಾಸ್ ನಿರ್ಮಾಪಕರ ಹೊಸ ಥೀಮ್ ಆಗಿದೆ. ವಿವಾದಾತ್ಮಕ ಸ್ಪರ್ಧಿಗಳನ್ನು ಮರಳಿ ಈ ಸೀಸನ್‍ಗೆ ಕರೆತರುತ್ತಿದ್ದಾರೆ. ಈಗಾಗಲೇ ಅನುಪಮಾ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ ಪ್ರೋಮೋ ಬಿಟ್ಟಿದ್ದಾರೆ.


ಪ್ರೇಕ್ಷಕರ ವಿಭಾಗದಲ್ಲಿ ಆಯ್ಕೆ


ಕಲರ್ಸ್ ಕನ್ನಡ ಟ್ವಿಟರ್ ಪುಟದಲ್ಲಿ, ಪ್ರೇಕ್ಷಕರ ಒಂದು ವಿಭಾಗ ಮಾಡಲಾಗಿದೆ. ಅದರಲ್ಲಿ ಸ್ಪರ್ಧಿಗಳ ಆಯ್ಕೆಯ ಕುರಿತು ತಯಾರಕರಿಗೆ ಸಲಹೆಗಳನ್ನು ನೀಡುತ್ತಿದೆ. ಪ್ರೇಕ್ಷಕರು ಹೇಳಿದ ಸ್ಪರ್ಧಿಗಳು ಹಸ ಈ ಬಾರಿ ಬಿಗ್ ಬಾಸ್ ಸೀಸನ್ 9 ರಲ್ಲಿ ಇರಲಿದ್ದಾರೆ.


ಇದನ್ನೂ ಓದಿ: Bigg Boss Season 9: ಬಿಗ್​ ಬಾಸ್​ ಮನೆ ಸೇರಲಿರೋ ಸ್ಪರ್ಧಿಗಳು ಇವರೇ, ಹಳಬರ ಜೊತೆ ಹೊಸಬರ ಆಟ!


ಈಗಾಗಲೇ ಜನರು ಸೀಸನ್ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದು ತುಂಬಾ ಇಂಟ್ರೆಸ್ಟಿಂಗ್ ವೇಯಲ್ಲಿ ಪ್ರಸಾರವಾಗಲಿದೆ. ಬಿಗ್​ ಬಾಸ್ ಒಟಿಟಿ ಕೂಡಾ ತುಂಬಾ ಇಂಟ್ರೆಸ್ಟಿಂಗ್ ರೀತಿಯಲ್ಲಿ ಪ್ರಸಾರವಾಗಿತ್ತು, ಈಗ ಟಿವಿಯಲ್ಲಿ ರಿಯಾಲಿಟಿ ಶೋ ಪ್ರೇಕ್ಷಕನ್ನು ರಂಜಿಸುವುದರಲ್ಲಿ ನೋ ಡೌಟ್.

Published by:Divya D
First published: