• Home
  • »
  • News
  • »
  • entertainment
  • »
  • Bigg Boss Season 9: ಹೆಣ್ಮಕ್ಕಳ ಬಗ್ಗೆ ಕೆಟ್ಟ ಮಾತು! ಸಂಬರ್ಗಿ ವಿರುದ್ಧ ಸಿಡಿದೆದ್ದ ದರ್ಶ್

Bigg Boss Season 9: ಹೆಣ್ಮಕ್ಕಳ ಬಗ್ಗೆ ಕೆಟ್ಟ ಮಾತು! ಸಂಬರ್ಗಿ ವಿರುದ್ಧ ಸಿಡಿದೆದ್ದ ದರ್ಶ್

ದರ್ಶ್ ಚಂದ್ರಪ್ಪ - ಪ್ರಶಾಂತ್ ಸಂಬರ್ಗಿ

ದರ್ಶ್ ಚಂದ್ರಪ್ಪ - ಪ್ರಶಾಂತ್ ಸಂಬರ್ಗಿ

ಸಂಬರ್ಗಿಗೆ ಬ್ಯಾಡ್ ಟೈಂ ಶುರುವಾದ ಹಾಗಿದೆ. ಹೌದು ಏಕಾಏಕಿ ದರ್ಶ್ ಚಂದ್ರಪ್ಪ ಹಾಗೂ ಗುರೂಜಿ ಅವರಿಂದಲೂ ವಿರೋಧ ಕಟ್ಟಿಕೊಂಡಿದ್ದಾರೆ ಸಂಬರ್ಗಿ.

  • Share this:

ಬಿಗ್​ ಬಾಸ್ (Bigg Boss) ಮನೆಗೆ ಎಂಟ್ರಿ ಕೊಟ್ಟಿರೋ ಹ್ಯಾಂಡ್ಸಂ ಬಾಯ್ ದರ್ಶ್ ಚಂದ್ರಪ್ಪ (Darsh Chandrappa) ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಆರಂಭದ ದಿನವೇ ಜಗಳ ಶುರುವಾಗಿದೆ. ಪ್ರಶಾಂತ್ ಮೊದಲೇ ಬಾಸಿಸಂ ಸ್ವಭಾವದವರಾಗಿದ್ದು ಕಳೆದ ಬಾರಿ ಭಾರೀ ಗೇಮ್ (Game) ಪ್ಲೇ ಮಾಡಿದ್ದರು. ಆದರೆ ಈ ಬಾರಿ ಅವರಿಗೆ ಪಂಚ್ ಕೊಡೋಕೆ ಹಲವು ಸ್ಪರ್ಧಿಗಳು ರೆಡಿಯಾಗಿದ್ದಾರೆ. ಗುರೂಜಿ ಬಳಿ ಸುಮ್ಮನೆ ಕಾಲು ಕೆರೆದುಕೊಂಡು ಜಗಳ ಆರಂಭಿಸಿದ ಸಂಬರ್ಗಿಗೆ ಸಖತ್ತಾಗಿ ಟಾಂಗ್ ಕೊಟ್ಟಿದ್ದಾರೆ ದರ್ಶ್. ಹೌದು ಸೈಲೆಂಟಾಗಿಯೇ ಇದ್ದ ದರ್ಶ್ ಸಡನ್ನಾಗಿ ವೈಲೆಂಟ್ ಆಗಿದ್ದಾರೆ. ವೈಲೆಂಟ್ ಆಗಿಬಿಟ್ಟು ಏಕಾಏಕಿ ಸಂಬರ್ಗಿ ವಿರುದ್ಧ ವಾಗ್ದಾಳಿ ಶುರು ಮಾಡಿದ್ದಾರೆ. ಇದಕ್ಕೆ ಸಂಬರ್ಗಿಯೂ ತತ್ತರಿಸಿದ್ದಾರೆ. ಉತ್ತರಿಸಲಾಗದೆ ಎದ್ದು ಹೋಗಿದ್ದಾರೆ.


ಹೆಣ್ಮಕ್ಕಳ ಬಗ್ಗೆ ಕೆಟ್ಟ ಮಾತು


ಕಳೆದ ಸೀಸನ್​​ನಲ್ಲಿ ಹೆಣ್ಮಕ್ಕಳ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಸಂಬರ್ಗಿ ಟೀಕೆಯಾಗಿದ್ದು ಎಲ್ಲರಿಗೂ ಗೊತ್ತಿದೆ. ಈಗ ದರ್ಶ್ ತೆಗೆದದ್ದು ಅದೇ ವಿಚಾರ. ದಿವ್ಯಾ ಉರುಡುಗ ಜೊತೆ ಚೆನ್ನಾಗಿ ಇದ್ದು, ಮನೆಯಿಂದ ಒಗ್ಗಟ್ಟಾಗಿ ಹೊರಗೆ ಬಂದು ಇಲ್ಲಿ ಪಬ್ಲಿಕ್ ಆಗಿ ಮಾನಹಾನಿ ಮಾಡುವಂತಹ ಹೇಳಿಕೆಗಳನ್ನು ಕೊಟ್ದಿದ್ದಾರೆ ಎಂದು ದರ್ಶ್ ಆರೋಪಿಸಿದ್ದಾರೆ. ಹಿಂದಿನಿಂದ ಇರಿಯುವ ಕೆಲಸವನ್ನು ಸಂಬರ್ಗಿ ಮಾಡಿದ್ದಾರೆ ಎಂದು ಸಿಟ್ಟಾಗಿದ್ದಾರೆ.
ಇದಕ್ಕೆ ಪ್ರೂಫ್ ಕೇಳಿದಾಗ ದರ್ಶ್ ನಾನ್ಯಾಕೆ ಎಕ್ಸಾಂಪಲ್ ಕೊಡ್ಲಿ, ನಿಮ್ಮ ಜೊತೆಗಿದ್ದ ಸ್ಪರ್ಧಿಗಳಿದ್ದರಲ್ಲ, ಅವರೇ ಬಳಿಯೇ ಕೇಳಿ ನೋಡಿ ಎಂದು ಹೇಳಿದ್ದಾರೆ. ಆಗ ದಿವ್ಯಾ ಉರುಡುಗ ಬಳಿ ಪ್ರಶ್ನೆ ಮಾಡಲಾಗಿದೆ. ಆ ಸಂದರ್ಭ ದಿವ್ಯಾ ಅವರು ಹೌದು ದರ್ಶ್ ಹೇಳಿದ್ದು ನಿಜ ಎಂದಿದ್ದಾರೆ. ಈ ಸಂದರ್ಭ ಸಂಬರ್ಗಿ ಮುಖ ರಿವೀಲ್ ಆಗಿದೆ.


ಆ ನಂತರ ನನ್ನ ಒಪಿನಿಯನ್ ನಾನು ಹೇಳ್ತೀನಿ ಎಂದು ಉದ್ಧಟತನದಿಂದಲೇ ಮಾತನಾಡಿದ ಸಂಬರ್ಗಿ ಹೀಗಿದ್ದರೂ ತಪ್ಪು ಮಾತ್ರ ಒಪ್ಪಿಕೊಳ್ಳಲು ರೆಡಿ ಇಲ್ಲ. ತಮ್ಮ ಮೊದಲ ಸ್ವಭಾವವನ್ನೇ ರಿಪೀಟ್ ಮಾಡ್ತಾ ಮನೆಮಂದಿಗೆ ಇನ್ನಷ್ಟು ಇರಿಟೇಷನ್ ಕೊಡ್ತಾರಾ ಎನ್ನುವುದು ದಿನ ಕಳೆದಂತೆ ತಿಳಿಯಲಿದೆ.


ಇದನ್ನೂ ಓದಿ: Bigg Boss Season 9: ಸಂಬರ್ಗಿ ಅಲ್ಲ ಸಂಪಂಗಿ! ಗುರೂಜಿಯಿಂದ ನಾಮಕರಣ


ಆರ್ಯವರ್ಧನ್ ಗುರೂಜಿ ಜೊತೆಗೂ ಫೈಟ್


ಈ ಸೀಸನ್​ನಲ್ಲಿ (Season) ಹಳೇ ಚಾಳಿ ಶುರು ಮಾಡ್ತಾರೇನೋ ಎನ್ನುವ ಡೌಟ್ ಎಲ್ಲರಲ್ಲೂ ಇದೆ. ಬಾಸಿಸಂ ತೋರಿಸುವ ಸಂಬರ್ಗಿ ಯಾರಿಗೂ ಅಷ್ಟು ಪ್ರಿಯರೇನೂ ಅಲ್ಲ. ಜಾಲಿಯಾಗಿರೋ ಆರ್ಯವರ್ಧನ್ ಗುರೂಜಿಯನ್ನೂ (Aryavardhan Guruji) ಸುಮ್ಮನೆ ಬಿಟ್ಟಿಲ್ಲ ಸಂಬರ್ಗಿ. ಬೇಕು ಬೇಕೆಂದೇ ಕಾಲು ಕೆರೆದುಕೊಂಡು ಜಗಳ ಶುರು ಮಾಡಿದ್ದಾರೆ. ಅಬ್ಬಾ ಇದೇನು ಮೊದಲ ದಿನವೇ ಶುರು ಮಾಡ್ಕೊಂಡಿದ್ದಾರೆ ಎಂದು ವೀಕ್ಷಕರು ತಲೆ ಚಚ್ಚಿಕೊಳ್ಳುವಂತೆ ಮಾಡಿದ್ದಾರೆ ಸಂಬರ್ಗಿ. ಆದರೂ ಇದು ವಿಪರೀತ ಎನಿಸುವಷ್ಟು ಮುಂದೆ ಹೋಗಿತ್ತು. ಗುರೂಜಿ ಇದನ್ನು ಕೂಲ್ ಆಗಿಯೇ ಹ್ಯಾಂಡಲ್ ಮಾಡಿದರೂ ಪ್ರೇಕ್ಷಕರಿಗೆ ಮಾತ್ರ ಸಂಬರ್ಗಿ ಹಳೆ ಚಾಳಿ ನೀಟಾಗಿ ಅರ್ಥವಾಗಿದೆ.


ಇದನ್ನೂ ಓದಿ: BBK Season 9: ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು! ಆದರೆ ಈ ರೀತಿ ಕಮೆಂಟ್ ಮಾಡಬಾರದಿತ್ತು


ಸುಮ್ ಸುಮ್ನೆ ಜಗಳ


ಆರ್ಯವರ್ಧನ್ ಗುರೂಜಿ ಏನೋ ತಮ್ಮಷ್ಟಕ್ಕೇ ಜಾಲಿಯಾಗಿ ಮಾತಾಡುತ್ತಾ ಕುಳಿತಿದ್ದರು. ಇದರ ಮಧ್ಯೆ ಒಂದು ಪಾಯಿಂಟ್ ಹುಡುಕಿ ಬೇಕಂತಲೇ ಜಗಳ ಶುರು ಮಾಡಿದ್ದಾರೆ ಸಂಬರ್ಗಿ. ಇದು ಸ್ವಲ್ಪ ಅಲ್ಲ, ಜಾಸ್ತಿಯೇ ಓವರ್ ಆಗಿದೆ.

Published by:Divya D
First published: