• Home
  • »
  • News
  • »
  • entertainment
  • »
  • Bigg Boss Season 9: ಸಂಬರ್ಗಿ ಅಲ್ಲ ಸಂಪಂಗಿ! ಗುರೂಜಿಯಿಂದ ನಾಮಕರಣ

Bigg Boss Season 9: ಸಂಬರ್ಗಿ ಅಲ್ಲ ಸಂಪಂಗಿ! ಗುರೂಜಿಯಿಂದ ನಾಮಕರಣ

ಆರ್ಯವರ್ಧನ್ ಗುರೂಜಿ-ಪ್ರಶಾಂತ್ ಸಂಬರ್ಗಿ

ಆರ್ಯವರ್ಧನ್ ಗುರೂಜಿ-ಪ್ರಶಾಂತ್ ಸಂಬರ್ಗಿ

ಬಾಸಿಸಂ ತೋರಿಸುವ ಸಂಬರ್ಗಿ ಯಾರಿಗೂ ಅಷ್ಟು ಪ್ರಿಯರೇನೂ ಅಲ್ಲ. ಜಾಲಿಯಾಗಿರೋ ಆರ್ಯವರ್ಧನ್ ಗುರೂಜಿಯನ್ನೂ ಸುಮ್ಮನೆ ಬಿಟ್ಟಿಲ್ಲ ಸಂಬರ್ಗಿ. ಬೇಕು ಬೇಕೆಂದೇ ಕಾಲು ಕೆರೆದುಕೊಂಡು ಜಗಳ ಶುರು ಮಾಡಿದ್ದಾರೆ.

  • Share this:

ಬಿಗ್​ಬಾಸ್ ಸೀಸನ್ 9 ಶುರುವಾಗಿದೆ. ಕಳೆದ ಸೀಸನ್​ನಲ್ಲಿ (Season) ಪ್ರಶಾಂತ್ ಸಂಬರ್ಗಿಯನ್ನು ನೊಡಿದವರಿಗೆಲ್ಲ ಅವರ ಸ್ವಭಾಗ ಇದೇ ಎನ್ನುವುದು ಗೊತ್ತಿದೆ. ಮತ್ತೆ ಈ ಸೀಸನ್​ನಲ್ಲಿ (Season) ಹಳೇ ಚಾಳಿ ಶುರು ಮಾಡ್ತಾರೇನೋ ಎನ್ನುವ ಡೌಟ್ ಎಲ್ಲರಲ್ಲೂ ಇದೆ. ಬಾಸಿಸಂ ತೋರಿಸುವ ಸಂಬರ್ಗಿ ಯಾರಿಗೂ ಅಷ್ಟು ಪ್ರಿಯರೇನೂ ಅಲ್ಲ. ಜಾಲಿಯಾಗಿರೋ ಆರ್ಯವರ್ಧನ್ ಗುರೂಜಿಯನ್ನೂ (Aryavardhan Guruji) ಸುಮ್ಮನೆ ಬಿಟ್ಟಿಲ್ಲ ಸಂಬರ್ಗಿ. ಬೇಕು ಬೇಕೆಂದೇ ಕಾಲು ಕೆರೆದುಕೊಂಡು ಜಗಳ ಶುರು ಮಾಡಿದ್ದಾರೆ. ಅಬ್ಬಾ ಇದೇನು ಮೊದಲ ದಿನವೇ ಶುರು ಮಾಡ್ಕೊಂಡಿದ್ದಾರೆ ಎಂದು ವೀಕ್ಷಕರು ತಲೆ ಚಚ್ಚಿಕೊಳ್ಳುವಂತೆ ಮಾಡಿದ್ದಾರೆ ಸಂಬರ್ಗಿ. ಆದರೂ ಇದು ವಿಪರೀತ ಎನಿಸುವಷ್ಟು ಮುಂದೆ ಹೋಗಿತ್ತು. ಗುರೂಜಿ ಇದನ್ನು ಕೂಲ್ ಆಗಿಯೇ ಹ್ಯಾಂಡಲ್ ಮಾಡಿದರೂ ಪ್ರೇಕ್ಷಕರಿಗೆ ಮಾತ್ರ ಸಂಬರ್ಗಿ ಹಳೆ ಚಾಳಿ ನೀಟಾಗಿ ಅರ್ಥವಾಗಿದೆ.


ಸುಮ್ ಸುಮ್ನೆ ಜಗಳ


ಆರ್ಯವರ್ಧನ್ ಗುರೂಜಿ ಏನೋ ತಮ್ಮಷ್ಟಕ್ಕೇ ಜಾಲಿಯಾಗಿ ಮಾತಾಡುತ್ತಾ ಕುಳಿತಿದ್ದರು. ಇದರ ಮಧ್ಯೆ ಒಂದು ಪಾಯಿಂಟ್ ಹುಡುಕಿ ಬೇಕಂತಲೇ ಜಗಳ ಶುರು ಮಾಡಿದ್ದಾರೆ ಸಂಬರ್ಗಿ. ಇದು ಸ್ವಲ್ಪ ಅಲ್ಲ, ಜಾಸ್ತಿಯೇ ಓವರ್ ಆಗಿದೆ.




ಆಗ ಆರ್ಯವರ್ಧನ್ ಗುರೂಜಿ ನಾನು ಇಲ್ಲಿಯವರೆಗೂ 10 ಲಕ್ಷ ಜನರಿಗೆ ಜ್ಯೋತಿಷ್ಯ ಹೇಳಿರಬಹುದು ಎಂದು ಹೇಳುತ್ತಾರೆ. ಪ್ರಶಾಂತ್ ಸಂಬರ್ಗಿ ಗುರುಗಳೇ ಏನೇನೋ ಮಾತನಾಡಬೇಡಿ 10 ಲಕ್ಷ ಜನ ಅಂತೆಲ್ಲಾ ಅನ್ನುತ್ತಾರೆ. ಹುಟ್ಟದೇ ಇರೋರಿಗೆ ಬುದ್ಧಿ ಕಲಿಸೋಕೆ ಗೊತ್ತಿಲ್ವಾ? ಎಡಗಾಲಲ್ಲಿ ಗುದ್ದು ಹೋಗ್ತೀನಿ, ಎಂದು ಆರ್ಯವರ್ಧನ್ ಗುರೂಜಿ ಹೇಳ್ತಾರೆ. ನನ್ನ ಬಗ್ಗೆಯೇ ಮಾತನಾಡುತ್ತೀಯಾ ಎಂದು ಗುರೂಜಿಯೂ ಮೇಲೇಳುತ್ತಾರೆ. ಆಗ ಗಲಾಟೆ ಶುರುವಾಗುತ್ತೆ. ಮನೆಯವರೆಲ್ಲಾ ಬಿಡಿಸಲು ಹೋಗುತ್ತಾರೆ.


ಇದನ್ನೂ ಓದಿ: Bigg Boss Season 9: ಹೊಸ ಸೀಸನ್‍ನಲ್ಲಿ ಹಳೇ ವರಸೆ ಶುರು ಮಾಡಿದ ಪ್ರಶಾಂತ್ ಸಂಬರ್ಗಿ! ಕಿತ್ತಾಟ ಶುರು


ಜ್ಯೋತಿಷಿ ಆರ್ಯವರ್ಧನ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡ್ತಾರೆ


ಬಿಗ್ ಬಾಸ್ ಸೀಸನ್-09 ರಲ್ಲಿ ಜ್ಯೋಷಿತಿ ಆರ್ಯವರ್ಧನ್ ಕೂಡ ಪ್ರವೇಶ ಮಾಡುತ್ತಿದ್ದಾರೆ. ಓಟಿಟಿ ಬಿಗ್ ಬಾಸ್ ಮನೆಯಲ್ಲೂ ಆರ್ಯವರ್ಧನ್ ಪ್ರವೇಶ ಪಡೆದಿದ್ದರು. ತಮ್ಮ ವಿಶಿಷ್ಟ ಮನಸ್ಥಿತಿಯಿಂದಲೇ ಆರ್ಯವರ್ಧನ್ ಸಾಕಷ್ಟು ಗಮನ ಸೆಳೆದರು.


ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಸಖತ್ ಮಜಾ ಕೂಡ ಮಾಡಿದ್ದಾರೆ. ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡದ್ದು ಇದೇ ಓಟಿಟಿ ಬಿಗ್ ಬಾಸ್ ಮನೆಯಲ್ಲಿಯೇ, ಅದೇ ಹೊಸ ಲುಕ್ ನಲ್ಲೂ ಆರ್ಯವರ್ಧನ್ ಓಟಿಟಿ ಬಿಗ್ ಬಾಸ್ ಪ್ರಿಯರ ಗಮನ ಸೆಳೆದರು.


ಇದನ್ನೂ ಓದಿ: Bigg Boss Season 9: ಸಾನಿಯಾ ಎಂಬ ಹಾಟ್ ಹುಡುಗಿ, ರಾಕೇಶ್ ಎಂಬ ಸೂಪರ್ ಕೂಲ್ ಹುಡುಗ! ಬಿಗ್​ಬಾಸ್ ಮನೆಯಲ್ಲಿ ಹೇಗಿರುತ್ತೆ ಇವರ ಆಟ?


ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಇದೇ ಆರ್ಯವರ್ಧನ್ ಈಗಾಗಲೇ ತಾಲೀಮು ಪಡೆದುಕೊಂಡೇ ಬಂದಂತಿದೆ. ಹಾಗಾಗಿಯೇ ತುಂಬಾ ವಿಶ್ವಾಸದಲ್ಲಿಯೇ ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಎಂಟ್ರಿ ಕೊಡುತ್ತಿದ್ದಾರೆ.


ಓಟಿಟಿ ಬಿಗ್ ಮನೆಗೆ ಹೋಗುವ ಮೊದಲು, ಆರ್ಯವರ್ಧನ್ ಟಿವಿ ಚಾನಲ್​ಗಳಲ್ಲಿ ಜ್ಯೋತಿಷಿ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದ್ದರು. ತಮ್ಮದೇ ರೀತಿಯಲ್ಲಿಯೇ ಜ್ಯೋತಿಷಿ ಹೇಳುತ್ತಿದ್ದ ಆರ್ಯವರ್ಧನ್, ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಓಪನ್ ಆಗಿಯೇ ಇದ್ದರು. ಒಬ್ಬ ಜ್ಯೋತಿಷಿ ಅಂತ ತೋರಿಸಿಕೊಳ್ಳದೇ ವಿಭಿನ್ನವಾಗಿಯೇ ಕಾಣಿಸಿಕೊಂಡರು. ಅಂತೂ ಗುರೂಜಿ ಈ ಬಾರಿ ಸಂಬರ್ಗಿ ಬೆವರಿಳಿಸೋ ಎಲ್ಲ ಲಕ್ಷಣಗಳೂ ಮೊದಲ ದಿನವೇ ಕಾಣಿಸಿಕೊಂಡಿದೆ.

Published by:Divya D
First published: