• Home
  • »
  • News
  • »
  • entertainment
  • »
  • Bigg Boss Winner: ಬಿಗ್​ ಬಾಸ್ ಕನ್ನಡ ಸೀಸನ್​ 8ರ ವಿನ್ನರ್ ಇವರೇ ನೋಡಿ..!

Bigg Boss Winner: ಬಿಗ್​ ಬಾಸ್ ಕನ್ನಡ ಸೀಸನ್​ 8ರ ವಿನ್ನರ್ ಇವರೇ ನೋಡಿ..!

ಮಂಜು ಪಾವಗಡ, ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆ ಪಿ ಟಾಪ್​ 3ಯಲ್ಲಿರುವ ಸ್ಪರ್ಧಿಗಳು

ಮಂಜು ಪಾವಗಡ, ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆ ಪಿ ಟಾಪ್​ 3ಯಲ್ಲಿರುವ ಸ್ಪರ್ಧಿಗಳು

Bigg Boss Kannada Season 8 Winner: ವೈಷ್ಣವಿ ಗೌಡ ಅವರು ಪ್ರಶಾಂತ್ ನಂತರ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದರು. ಈ ಎವಿಕ್ಷನ್​ ನಿಜಕ್ಕೂ ಪ್ರೇಕ್ಷಕರು ಹಾಗೂ ಉಳಿದಿರುವ ಸ್ಪರ್ಧಿಗಳಿಗೆ ಶಾಕ್​ ಕೊಟ್ಟಿತ್ತು. ಊಹಿಸಲಾಗದ ಈ ಎಲಿಮಿನೇಷನ್​ನಿಂದಾಗಿ ಟಾಪ್​ 3ರಲ್ಲಿ ಇರುವ ಸ್ಪರ್ಧಿಗಳು ಆತಂಕದಲ್ಲಿದ್ದಾರೆ.

ಮುಂದೆ ಓದಿ ...
  • Share this:

ಬಿಗ್ ಬಾಸ್​ ಕನ್ನಡ ಸೀಸನ್​ 8ರ  (Bigg Boss Kannada Season 8 Finale)ಗ್ರ್ಯಾಂಡ್​ ಫಿನಾಲೆ...  17 ವಾರಗಳ ಕಾಲ ನಡೆದ  72 ದಿನಗಳ ಮೊದಲ ಇನ್ನಿಂಗ್ಸ್​ ಹಾಗೂ 48 ದಿನಗಳ ಸೆಕೆಂಡ್​​ ಇನ್ನಿಂಗ್ಸ್​ ಜರ್ನಿ, ಒಟ್ಟಾರೆ 120 ದಿನಗಳ ಭರ್ಜರಿ ಪ್ರಯಾಣ ಇಂದು ಕೊನೆಯಾಗಲಿದೆ. ಶನಿವಾರವೇ ಗ್ರ್ಯಾಂಡ್​ ಫಿನಾಲೆಗೆ ಚಾಲನೆ ಸಿಕ್ಕಿತ್ತು. ಬೆಂಗಳೂರಿನ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ನಿರ್ಮಾಣವಾಗಿರುವ ಅದ್ದೂರಿ ವೇದಿಕೆಯಲ್ಲಿ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆ ನಡೆಯುತ್ತಿದೆ. ನಿನ್ನೆ ರಾತ್ರಿಯ ಫಿನಾಲೆಯಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇದ್ದ ಟಾಪ್​ 5 ಸ್ಪರ್ಧಿಗಳಲ್ಲಿ ಪ್ರಶಾಂತ್ ಸಂಬರಗಿ (Prashanth Sambargi), ಅರವಿಂದ್​ ಕೆ.ಪಿ (Aravind K P), ಮಂಜು ಪಾವಗಡ (Manju Pavagada), ದಿವ್ಯಾ ಉರುಡುಗ (Divya Uruduga) ಹಾಗೂ ವೈಷ್ಣವಿ ಗೌಡ  ()ಇದ್ದರು. ಇವರಲ್ಲಿ ಪ್ರಶಾಂತ್​ ಸಂಬರಗಿ ಅವರು ಐದನೇ ಸ್ಥಾನ ಪಡೆದು ಹೊರ ಬಿದ್ದರೆ, ನಂತರ ನಾಲ್ಕನೇ ಎಲಿಮಿನೇಷನ್​ ನಿಜ್ಜಕ್ಕೂ ಎಲ್ಲರಿಗೂ ಶಾಕ್ ನೀಡಿತ್ತು.


ಹೌದು, ವೈಷ್ಣವಿ ಗೌಡ ಅವರು ಪ್ರಶಾಂತ್ ನಂತರ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದರು. ಈ ಎವಿಕ್ಷನ್​ ನಿಜಕ್ಕೂ ಪ್ರೇಕ್ಷಕರು ಹಾಗೂ ಉಳಿದಿರುವ ಸ್ಪರ್ಧಿಗಳಿಗೆ ಶಾಕ್​ ಕೊಟ್ಟಿತ್ತು. ಊಹಿಸಲಾಗದ ಈ ಎಲಿಮಿನೇಷನ್​ನಿಂದಾಗಿ ಟಾಪ್​ 3ರಲ್ಲಿ ಇರುವ ಸ್ಪರ್ಧಿಗಳು ಆತಂಕದಲ್ಲಿದ್ದಾರೆ.
ಟಾಪ್​ 3ಗೆ ಲಗ್ಗೆಯಿಟ್ಟಿರುವ ಮಂಜು ಪಾವಗಡ, ಅರವಿಂದ್​ ಕೆ.ಪಿ, ಹಾಗೂ ದಿವ್ಯಾ ಉರುಡುಗ ಅವರಲ್ಲಿ ಯಾರು ಈ ಸಲ ಗೆದ್ದು ಟ್ರೋಫಿ ಕೈಯಲ್ಲಿ ಹಿಡಿಯಲಿದ್ದಾರೆ ಅನ್ನೋದು ಈಗಿನ ಲೆಕ್ಕಾಚಾರ. ಈ ಮೂವರಲ್ಲಿ ಮೊದಲು ಮನೆಯಿಂದ ಹೊರ ನಡೆಯೋದು ದಿವ್ಯಾ ಉರುಡುಗ ಎಂದು ಹೇಳಲಾಗುತ್ತಿದೆ. 3ನೇ ಸ್ಥಾನ ಪಡೆದು ಇಂದು ದಿವ್ಯಾ ಉರುಡುಗ ಮೊದಲು ಮನೆಯಿಂದ ಹೊರ ಬಂದರೆ, ಉಳಿಯೋದು ಅರವಿಂದ್ ಹಾಗೂ ಮಂಜು ಪಾವಗಡ. ಇವರಲ್ಲಿ ಮಂಜು ವಿನ್ನರ್ ಆಗಿಲಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.


ಇದನ್ನೂ ಓದಿ: Bigg Boss Kannada Season 8 Finale: ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ವೈಷ್ಣವಿ ಗೌಡ

ಮಂಜು ಅವರು ಟಾಸ್ಕ್​, ಮನೋರಂಜನೆ ಹಾಗೂ ಮನೆಯಲ್ಲಿ ಎಲ್ಲರ ಜೊತೆ ಇದ್ದ ರೀತಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ಮಂಜು ಈ ಸಲ ವಿನ್ನರ್ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಅರವಿಂದ್​ ಟಾಸ್ಕ್​ ವಿಷಯಲ್ಲಿ ಉತ್ತಮ ಪ್ರದರ್ಶನ ತೋರಿದರೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿಂದೆ ಬಿದಿದ್ದಾರೆ. ಇನ್ನು ಜೊತೆಗೆ ಹೆಚ್ಚಿನ ಸಮಯ ದಿವ್ಯಾ ಉರುಡುಗ ಅವರೊಂದಿಗೆ ಕಳೆದಿದ್ದು ಅವರು ಕೊಂಚ ಹೊಡೆತ ಕೊಟ್ಟಿದೆ ಎಂದೂ ಹೇಳಲಾಗುತ್ತಿದೆ.


ಒಟ್ಟಾರೆ ಇಂದು ಯಾರು ಗೆದ್ದು ವಿಜಯ ಮಾಲೆ ಧರಿಸಲಿದ್ದಾರೆ ಅನ್ನೋದು ತಿಳಿಯೋಕೆ ಕೆಲವೇ ಗಂಟೆಗಳು ಬಾಕಿ ಇವೆ. ಇನ್ನು ನಿನ್ನೆ ಮನೆಯಿಂದ ಹೊರ ಬಂದ ವೈಷ್ಣವಿ ಅವರು ಇಂದು ಸುದೀಪ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.


ಇದನ್ನೂ ಓದಿ: Bigg Boss Winner: ಬಿಗ್ ಬಾಸ್​ ಫಿನಾಲೆಯಲ್ಲಿ ಮಿಂಚಿದ ಕುಚಿಕು ಗೆಳತಿಯರಾದ ದಿವ್ಯಾ ಸುರೇಶ್​-ಪ್ರಿಯಾಂಕಾ ತಿಮ್ಮೇಶ್​..!


ಸುದೀಪ್​ಗೆ ವಿಶೇಷ ಉಡುಗೊರೆ ಕೊಟ್ಟ ಬಿಗ್ ಬಾಸ್​


ನಿನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್​ ಕಿಚ್ಚ ಸುದೀಪ್ ಅವರಿಗೆ ವಿಶೇಷ ಕೊಡುಗೆ ನೀಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಬಿಗ್ ಬಾಸ್​ನ 8 ಸೀಸನ್​ಗಳನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಇದು ಕಾರ್ಯಕ್ರಮದ ಗೌರವನ್ನೂ ಹೆಚ್ಚಿಸಿದೆ. ಈ ಕಾರಣದಿಂದಾಗಿ ಈ ಸಲ ಫಿನಾಲೆಯಲ್ಲಿ ಪ್ರದರ್ಶನ ನೀಡಲಾಗುವ ಎಲ್ಲ ಹಾಡುಗಳು ಕಿಚ್ಚ ಸುದೀಪ್ ಅವರ ಅಭಿನಯದ ಸಿನಿಮಾದ್ದೇ ಆಗಿರುತ್ತವೆಯಂತೆ. ಈ ಪುಟ್ಟ ಉಡುಗೊರೆ ನೀಡುವ ಮೂಲಕ ಕಿಚ್ಚನಿಗೆ ಗೌರವ ಸಲ್ಲಿಸಲಾಯಿತು. ಬಿಗ್ ಬಾಸ್​ ಕೊಟ್ಟ ಗೌರವಕ್ಕೆ ತಲೆಬಾಗಿದ್ದಾರೆ ಸುದೀಪ್​.

Published by:Anitha E
First published: