ದಿವ್ಯಾ ಸುರೇಶ್​ ಕುಟುಂಬವನ್ನು ಭೇಟಿ ಮಾಡಿದ Bigg Boss Kannada Season 8ರ ವಿನ್ನರ್​ ಮಂಜು ಪಾವಗಡ

ಬಿಗ್ ಬಾಸ್ ಕಾರ್ಯಕ್ರಮ ಮುಗಿದು ಎಲ್ಲರೂ ಮನೆ ಸೇರಿದ್ದೂ ಆಯಿತು. ಈಗಲೂ ಸಹ ದಿವ್ಯಾ ಹಾಗೂ ಮಂಜು ಪಾವಗಡ ಅವರ ಸ್ನೇಹ ಹಾಗೆ ಇದೆ. ಈಗಲೂ ಆಗಾಗ ಇವರು ಭೇಟಿಯಾಗುತ್ತಿರುತ್ತಾರೆ. ಅಲ್ಲದೆ ದಿವ್ಯಾ ಸುರೇಶ್ ಅವರ ತಾಯಿ ಹಾಗೂ ಅಣ್ಣನನ್ನು ಮಂಜು ಪಾವಗಡ ಭೇಟಿಯಾಗಿದ್ದಾರೆ.

ದಿವ್ಯಾ ಸುರೇಶ್​, ಅವರ ಅಮ್ಮ ಹಾಗೂ ಅಣ್ಣನ ಜೊತೆ ಬಿಗ್​ ಬಾಸ್​ ಸೀಸನ್​8ರ ವಿನ್ನರ್​ ಮಂಜು ಪಾವಗಡ

ದಿವ್ಯಾ ಸುರೇಶ್​, ಅವರ ಅಮ್ಮ ಹಾಗೂ ಅಣ್ಣನ ಜೊತೆ ಬಿಗ್​ ಬಾಸ್​ ಸೀಸನ್​8ರ ವಿನ್ನರ್​ ಮಂಜು ಪಾವಗಡ

  • Share this:
ಕನ್ನಡ ಬಿಗ್ ಬಾಸ್​ ಸೀಸನ್​ 8ರ (Bigg Boss Kannada Season 8) ವಿನ್ನರ್​ ಮಂಜು ಪಾವಗಡ (Manju Pavagada) ಹಾಗೂ ದಿವ್ಯಾ ಸುರೇಶ್​ (Divya Suresh) ಅವರನ್ನು ವಿಶೇಷವಾಗಿ ಪರಿಷಯಿಸುವ ಅಗತ್ಯವಿಲ್ಲ. ಬಿಗ್ ಬಾಸ್ ​ಕನ್ನಡ ಸೀಸನ್​ 8ರಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ಅವರ ನಡುವೆ ಸ್ನೇಹ ಬೆಳೆದಿದ್ದು ಗೊತ್ತೇ ಇದೆ. ಈ ಜೋಡಿ ಸೀಸನ್​ 8ರಲ್ಲಿ ಹೆಚ್ಚು ಗಮನ ಸೆಳೆದ ಜೋಡಿಗಳಲ್ಲಿ ಒಂದು. ಇನ್ನು ಈ ಜೋಡಿ ಬಿಗ್ ಬಾಸ್​ ಮನೆಯಲ್ಲಿ ಎಷ್ಟು ಆತ್ಮೀಯವಾಗಿದ್ದರು ಹಾಗೂ ಇವರ ನಡುವೆ ಇದ್ದ ಬಾಂಡಿಂಗ್ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರು ಕೇವಲ ಬಿಗ್ ಬಾಸ್​ ಶೋಗಾಗಿ ಪ್ರೀತಿ ಹಾಗೂ ಸ್ನೇಹದ ನಾಟಕ ಆಡುತ್ತಿದ್ದರು ಎಂದು ಆಗ ಅವರ ಮೇಲೆ ಸಾಕಷ್ಟು ಆರೋಪಗಳು ಬಂದಿದ್ದವು. ಇದರಿಂದಾಗಿ ಮಂಜು ಹಾಗೂ ದಿವ್ಯಾ ಸುರೇಶ್ ಅವರು ಕಣ್ಣೀರಿಟ್ಟಿದ್ದೂ ಇದೆ.

ಬಿಗ್ ಬಾಸ್ ಕಾರ್ಯಕ್ರಮ ಮುಗಿದು ಎಲ್ಲರೂ ಮನೆ ಸೇರಿದ್ದೂ ಆಯಿತು. ಈಗಲೂ ಸಹ ದಿವ್ಯಾ ಹಾಗೂ ಮಂಜು ಪಾವಗಡ ಅವರ ಸ್ನೇಹ ಹಾಗೆ ಇದೆ. ಈಗಲೂ ಆಗಾಗ ಇವರು ಭೇಟಿಯಾಗುತ್ತಿರುತ್ತಾರೆ. ಅಲ್ಲದೆ ದಿವ್ಯಾ ಸುರೇಶ್ ಅವರ ತಾಯಿ ಹಾಗೂ ಅಣ್ಣನನ್ನು ಮಂಜು ಪಾವಗಡ ಭೇಟಿಯಾಗಿದ್ದಾರೆ.


ಹೌದು, ದಿವ್ಯಾ ಸುರೇಶ್​, ಅವರ ತಾಯಿ ಹಾಗೂ ಅಣ್ಣನ ಜೊತೆ ಮಂಜು ಪಾವಗಡ ಅವರು ಇರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಚಿತ್ರವನ್ನೂ ದಿವ್ಯಾ ಸುರೇಶ್​ ಸಹ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶಿಕ್ಷಕರ ದಿನದಂದು ಹಂಚಿಕೊಂಡಿದ್ದಾರೆ. ತಾನು ಜೀವನದಲ್ಲಿ ಅಮ್ಮ, ಅಣ್ಣ ಹಾಗೂ ಸ್ನೇಹಿತ ಮಂಜು ಅವರಿಂದ ಸಾಕಷ್ಟು ಕಲಿತಿದ್ದೇನೆ. ಇವರೇ ತನ್ನ ಜೀವನದ ಶಿಕ್ಷಕರು ಎಂದು ಬರೆದುಕೊಂಡಿದ್ದಾರೆ ದಿವ್ಯಾ ಸುರೇಶ್​.

ಇನ್ನು ಮಂಜು ಹಾಗೂ ದಿವ್ಯಾ ಸುರೇಶ್​ ತುಂಬಾ ಚೆನ್ನಾಗಿ ರೆಡಿಯಾಗಿದ್ದು, ಜೊತೆಗೆ ಕೆಲವು ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟಕ್ಕೂ ಮಂಜು ಅವರು ದಿವ್ಯಾ ಅವರ ಕುಟುಂಬವನ್ನು ಭೇಟಿಯಾಗಿದ್ದು ಎಲ್ಲಿ ಹಾಗೂ ಕಾರಣವೇನು ಅನ್ನೋ ಕುತೂಹಲ ಸಾಕಷ್ಟು ಮಂದಿಯನ್ನು ಕಾಡುತ್ತಿದೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್​ಮೆಂಟ್​ ಖರೀದಿಸಿದ Deepika Padukone..!

ಮಂಜು ಹಾಗೂ ದಿವ್ಯಾ ಸುರೇಶ್​ ಬಿಗ್ ಬಾಸ್​ನಿಂದ ಹೊರ ಬಂದ ನಂತರ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚೆಗೆ ಪ್ರಸಾರವಾದ ಬಿಗ್ ಬಾಸ್​ ಮಿನಿ ಸೀಸನ್​ನ ಫಿನಾಲೆಯಲ್ಲೂ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಅಷ್ಟೇಅಲ್ಲ ಸದ್ಯ ವೈರಲ್​ ಆಗುತ್ತಿರುವ ಚಿತ್ರಗಳನ್ನೂ ಸಹ ಕಲರ್ಸ್​ ಕನ್ನಡದ ಕಾರ್ಯಕ್ರಮವೊಂದರ ಸೆಟ್​ನಲ್ಲೇ ತೆಗೆಯಲಾಗಿದೆ. ಹೌದು, ಕಲರ್ಸ್​ ಕನ್ನಡ ವಾಹಿನಿ ಗಣೇಶ ಹಬ್ಬಕ್ಕೆಂದು ಬಿಗ್​ ಗಣೇಶೋತ್ಸವ ಎಂಬ ವಿಶೇಷ ಕಾರ್ಯಕ್ರಮವೊಂದನ್ನು ಶೂಟ್​ ಮಾಡಲಾಗಿದ್ದು, ಇದರ ಸೆಟ್​ನಲ್ಲೇ ಮಂಜು ಅವರು ದಿವ್ಯಾ ಅವರ ಅಮ್ಮ ಹಾಗೂ ಅಣ್ಣನನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ:Actress Leelavathi ಮನೆಗೆ ಭೇಟಿ ಕೊಟ್ಟು ಸಂತೋಷದಿಂದ ಕಾಲ ಕಳೆದ ಭಾರತಿ ವಿಷ್ಣುವರ್ಧನ್​-ಹೇಮಾ ಚೌಧರಿ

ಇನ್ನು ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಲುಕ್​ನಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್ ಅವರು ಕಾಣಿಸಿಕೊಂಡಿದ್ದು, ಅವರ ಲುಕ್​ನಿಂದಲೇ ಈ ಫೋಟೋಗಳು ವೈರಲ್​ ಆಗಿವೆ. ಈ ಬಿಗ್​ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬಿಗ್ ಬಾಸ್​ ಸೀಸನ್​8ರ ಇತರೆ ಸ್ಪರ್ಧಿಗಳೂ ಸಹ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮ ಶುಕ್ರವಾರ ಮಧ್ಯಾಹ್ನ ಒಂಧು ಗಂಟೆಗೆ ಪ್ರಸಾರವಾಗಲಿದೆ.
Published by:Anitha E
First published: