Bigg Boss Kannada Season 8: ಬಿಗ್ ಬಾಸ್​ ಸೀಸನ್​ 8ರ ಫಿನಾಲೆಗೂ ಮುನ್ನ 2 ಲಕ್ಷ ಗೆಲ್ಲುವ ಅವಕಾಶ..!

ಬಿಗ್ ಬಾಸ್​ ಮನೆಯಲ್ಲಿ ಈಗ ಉಳಿದಿರುವ ಸ್ಪರ್ಧಿಗಳಾದ ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಅರವಿಂದ್ ಕೆ ಪಿ, ವೈಷ್ಣವಿ ಗೌಡ ಹಾಗೂ ಮಂಜು ಪಾವಗಡ ಅವರಿಗೆ ಬಂಪರ್ ಆಫರ್ ಸಿಕ್ಕಿದೆ. ಹೌದು, ಬಿಗ್​ ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳು 2 ಲಕ್ಷ ಗಳಿಸುವ ಅವಕಾಶವನ್ನು ಬಿಗ್ ಬಾಸ್​ ನೀಡಿದ್ದಾರೆ.

ಬಿಗ್ ಬಾಸ್​ ಮನೆಯಲ್ಲಿ ಹೊಸ ಟಾಸ್ಕ್​

ಬಿಗ್ ಬಾಸ್​ ಮನೆಯಲ್ಲಿ ಹೊಸ ಟಾಸ್ಕ್​

  • Share this:
ಬಿಗ್ ಬಾಸ್​ ಸೀಸನ್​ 8ರ ಫಿನಾಲೆಗೆ ದಿನ ಗಣನೆ ಆರಂಭವಾಗಿದೆ. ಮನೆಯಲ್ಲಿ ಉಳಿದಿರುವ ಆರು ಮಂದಿ ಸ್ಪರ್ಧಿಗಳ ಪರವಾಗಿ ಮತಯಾಚನೆ ಕಾರ್ಯ ಜೋರಾಗಿ ನಡೆಯುತ್ತಿದೆ. ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಮತ ಯಾಚಿಸುತ್ತಿದ್ದಾರೆ. ಇನ್ನು ಫಿನಾಲೆಗೆ ಒಂದು ವಾರ ಮಾತ್ರ ಬಾಕಿ ಇರುವ ಹಿನ್ನಲೆಯಲ್ಲಿ ಬಿಗ್ ಬಾಸ್​ ಮನೆಯಲ್ಲೂ ವಿಭಿನ್ನವಾದ ಚಟುವಟಿಕೆಗಳನ್ನು ನೀಡಲಾಗಿದೆ. ಮನೆಯಲ್ಲಿರುವ ಆರು ಮಂದಿ ಸ್ಪರ್ಧಿಗಳೂ ಈಗ ನಾಮಿನೇಟ್ ಆಗಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್​ ಕೊಡುತ್ತಿರುವ  ಟಾಸ್ಕ್​ಗಳಲ್ಲೂ ಬಾಗಿಯಾಗುತ್ತಿದ್ದಾರೆ. ಹೀಗಿರುವಾಗಲೇ ಬಿಗ್ ಬಾಸ್​ ಮನೆಯಲ್ಲಿ ಈಗ ಹಣ ಸಂಪಾದನೆ ಮಾಡುವ ಅವಕಾಶವನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ಹೌದು, ಮನೆಯಲ್ಲಿರುವ ಆರು ಮಂದಿಯಲ್ಲಿ ಯಾರಾದರೂ ಒಬ್ಬರು ಈಗ ಲಕ್ಷ ಲಕ್ಷ ದುಡಿಯುವ ಅವಕಾಶ ಸಿಕ್ಕಿದೆ. 

ಬಿಗ್ ಬಾಸ್​ ಮನೆಯಲ್ಲಿ ಈಗ ಉಳಿದಿರುವ ಸ್ಪರ್ಧಿಗಳಾದ ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಅರವಿಂದ್ ಕೆ ಪಿ, ವೈಷ್ಣವಿ ಗೌಡ ಹಾಗೂ ಮಂಜು ಪಾವಗಡ ಅವರಿಗೆ ಬಂಪರ್ ಆಫರ್ ಸಿಕ್ಕಿದೆ. ಹೌದು, ಬಿಗ್​ ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳು 2 ಲಕ್ಷ ಗಳಿಸುವ ಅವಕಾಶವನ್ನು ಬಿಗ್ ಬಾಸ್​ ನೀಡಿದ್ದಾರೆ.




ಬಿಗ್​ ಬಾಸ್​ ಮನೆಯಲ್ಲಿರುವ ಆರು ಮಂದಿಗೆ ಈಗ 2 ಲಕ್ಷ ಗಳಿಸಲು ವಿವಿಧ ಟಾಸ್ಕ್​ಗಳನ್ನು​ ನೀಡಲಾಗಿದೆ. ಈ ಟಾಸ್ಕ್​ಗಳಲ್ಲಿ ಗೆದ್ದು ಯಾರು ಹೆಚ್ಚು ಅಂಕ ಗಳಿಸುತ್ತಾರೋ ಅವರು ಈ 2 ಲಕ್ಷ ನಗದು ಹಣವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: BBK8: ಅರವಿಂದ್​ಗೆ ಸಿಕ್ತು ಹೇರ್​ ಕಟ್​ ಟಾಸ್ಕ್​: ದಿವ್ಯಾ ಉರುಡುಗ ಕೂದಲಿನ ಮೇಲೆ ನಡೆಯುತ್ತಾ ಕತ್ತರಿ ಪ್ರಯೋಗ..!

ಇನ್ನು, 2 ಲಕ್ಷ ಹಣ ಗಳಿಸಲು ಬಿಗ್ ಬಾಸ್​ ಅಷ್ಟು ಸುಲಭದ ಟಾಸ್ಕ್​ಗಳಂತೂ ನೀಡುವುದಿಲ್ಲ. ಸದ್ಯಕ್ಕೆ ರಿಲೀಸ್​ ಮಾಡಲಾಗಿರುವ ಪ್ರೋಮೋದಲ್ಲಿ ಸ್ಪರ್ಧಿಗಳು 2 ಲಕ್ಷ ಗೆಲ್ಲಲು ಮಾಡುತ್ತಿರುವ ಪ್ರಯತ್ನ ಕಾಣಿಸುತ್ತಿದೆ. ಈ ಟಾಸ್ಕ್​ನಲ್ಲಿ ಯಾರು ಹೆಚ್ಚು ಅಂಕ ಗಳಿಸಿ 2 ಲಕ್ಷವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಅನ್ನೋದು ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯಿಂದ ತಿಳಿಯಲಿದೆ.

ಮಿಡ್​ ವೀಕ್​ ಎಲಿಮಿನೇಷನ್​

ಕಳೆದ ಕೆಲ ದಿನಗಳಿಂದಲೇ ಬಿಗ್ ಬಾಸ್​ ಸೀಸನ್ 8ರ ವಿನ್ನರ್​ ಯಾರು ಆಗಲಿದ್ದಾರೆ ಅನ್ನೋ ಲೆಕ್ಕಾಚಾರ ಆರಂಭವಾಗಿದೆ. ಸದ್ಯ ಬಿಗ್ ಬಾಸ್​ ಮನೆಯಲ್ಲಿ ಉಳಿದಿರುವ ಆರು ಮಂದಿ ಸ್ಪರ್ಧಿಗಳಲ್ಲೇ ಒಬ್ಬರು ಈ ಸಲದ ವಿನ್ನರ್​ ಆಗೋದಂತು ಖಚಿತ. ಆದರೆ ಫಿನಾಲೆ ನಡೆಯುವ ಮುನ್ನ ಬಿಗ್ ಬಾಸ್​ ಮನೆಯಲ್ಲಿ ನಡೆಯಲಿರುವ ಎಲಿಮಿನೇಷನ್ ಈಗ ಇರುವ ಆರು ಮಂದಿ ಸ್ಪರ್ಧಿಗಳ ನಿದ್ದೆಗೆಡಿಸಿದೆ.

ಇದನ್ನೂ ಓದಿ: Shwetha Srivatsav: ವಿನ್ಯಾಸಿತ ಗೌನ್​ ತೊಟ್ಟ ಶ್ವೇತಾ ಶ್ರೀವಾತ್ಸವ: ಸೆಲೆಬ್ರಿಟಿ ಅಮ್ಮ-ಮಗಳ ಟ್ವಿನ್ನಿಂಗ್​..!

ಮೀಡ್​ ವೀಕ್​ ಎಲಿಮಿನೇಷನ್​ಗೆ ಉಳಿದಿರುವ ಆರೂ ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈಗ ಮನೆಯಲ್ಲಿ ಯರೂ ಸೇಫ್​ ಅಲ್ಲ. ಇಲ್ಲಿ ಯಾರೂ ಕ್ಯಾಪ್ಟನ್​ ಇಲ್ಲ. ಇವರಲ್ಲಿ ಯಾವ ಸಮಯದಲ್ಲಾದರೂ ಎಲಿಮಿನೇಟ್​ ಆಗಿ ತಮ್ಮ ಜರ್ನಿಯನ್ನು ಪೂರ್ಣಗೊಳಿಸದೆ ಬಿಗ್ ಬಾಸ್​ ಮನೆಯಿಂದ ಹೊರ ನಡೆಯಬಹುದು.

ಇನ್ನು ನಿನ್ನೆ ನಡೆದ ಎಲಿಮಿನೇಷನ್​ನಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ವೈಷ್ಣವಿ ಗೌಡ ಮೊದಲ ಸ್ಥಾನದಲ್ಲಿದ್ದರೆ, ಮಂಜು ಪಾವಗಡ ಎರಡನೇ ಸ್ಥಾನ ಹಾಗೂ ಅರವಿಂದ್ ಅವರು ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಸುರೇಶ್ ಇದ್ದಾರೆ. ಈ ವಾರದ ಎಲಿಮಿನೇಷನ್​ನಲ್ಲಿ ಪಾರಾದ ಕ್ರಮವನ್ನು ಗಮನಿಸಿದರೆ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಸದ್ಯ ವೀಕ್​ ಆಗಿರುವ ಸ್ಪರ್ಧಿಗಳು ಎನ್ನಲಾಗುತ್ತಿದೆ.

ಇದನ್ನೂ ಓದಿ: Dvitva: ದ್ವಿತ್ವ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ಗೆ ನಾಯಕಿಯಾದ ತ್ರಿಷಾ..!

ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಹಾಗೂ ಪ್ರಶಾಂತ್ ಸಂಬರಗಿ ಅವರಲ್ಲಿ ಯಾರಾದರೂ ಇಬ್ಬರು ಈ ಸಲದ ಮಿಡ್​ ವೀಕ್ ಎಲಿಮಿನೇಷನ್​ನಿಂದ ಹೊರ ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಇನ್ನು ವೈಷ್ಣವಿ ಗೌಡ, ಮಂಜು ಪಾವಗಡ ಹಾಗೂ ಅರವಿಂದ್ ಅವರು ಫಿನಾಲೆ ವಾರಕ್ಕೆ ಯಾವುದೇ ಭಯವಿಲ್ಲದೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.
Published by:Anitha E
First published: