HOME » NEWS » Entertainment » BIGG BOSS KANNADA SEASON 8 TO GRAND LAUNCH SOON HOST SUDEEP HERE IS THE DATE VENUE AND SCHEDULES DETAILS VB

Bigg Boss Kannada: ಕನ್ನಡ ಬಿಗ್ ಬಾಸ್ ಸೀಸನ್ 8ಕ್ಕೆ ಮುಹೂರ್ತ ಫಿಕ್ಸ್: ಯಾವಾಗ ಆರಂಭ?, ಇಲ್ಲಿದೆ ಮಾಹಿತಿ

ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, 2021ರ ಆರಂಭದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಚಾಲನೆ ಸಿಗಲಿದೆ. ಆದರೆ, ಈ ಬಾರಿ ಯಾವ ಚಾನೆಲ್​ನಲ್ಲಿ ಪ್ರಸಾರವಾಗಲಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

news18-kannada
Updated:November 20, 2020, 10:38 AM IST
Bigg Boss Kannada: ಕನ್ನಡ ಬಿಗ್ ಬಾಸ್ ಸೀಸನ್ 8ಕ್ಕೆ ಮುಹೂರ್ತ ಫಿಕ್ಸ್: ಯಾವಾಗ ಆರಂಭ?, ಇಲ್ಲಿದೆ ಮಾಹಿತಿ
ಬಿಗ್ ಬಾಸ್
  • Share this:
ಭಾರತದ ವಿವಿಧ ಭಾಷೆಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸುತ್ತಿರುವ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸರಣಿಗಳು ಜನರನ್ನು ಸೆಳೆಯುತ್ತಲೆ ಇವೆ. ಈಗಾಗಲೇ ತಮಿಳು, ತೆಲುಗು, ಹಿಂದಿ ಭಾಷೆಯ ಬಿಗ್ ಬಾಸ್ ಕಾರ್ಯಕ್ರಮ ಆರಂಭಗೊಂಡಿವೆ. ಆದರೆ, ಕನ್ನಡ ಬಿಗ್ ಬಾಸ್ ಮಾತ್ರ ಇನ್ನೂ ಶುರುವಾಗಿಲ್ಲ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ಸಪ್ಟೆಂಬರ್ ತಿಂಗಳಲ್ಲಿ ಕನ್ನಡ ಬಿಗ್ ಬಾಸ್ ಸೀಸನ್ 8 ಆರಂಭವಾಗಬೇಕಿತ್ತು. ಆದರೆ, ಮಾರಕ ಕೊರೋನಾ ವೈರಸ್‌ ಕಾರಣದಿಂದ ಈ ಹಿಂದಿನ ಎಲ್ಲ ಯೋಜನೆಗಳು ತಲೆಕೆಳಗಾದವು.

ಹೀಗಿರುವಾಗ ಬಿಗ್ ಬಾಸ್ ಅಭಿಮಾನಿಗಳಿಗೆ ಖುಷಿಯ ವಿಚಾರ ಹೊರಬಿದ್ದಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 8ರ ಆರಂಭಕ್ಕೆ ಭರ್ಜರಿ ಸಿದ್ಧತೆ ಶುರುವಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಬಿಡದಿ ಬಳಿಯ ಇನ್ನೋವೆಟಿವ್ ಫಿಲ್ಮ್‌ ಸಿಟಿಯಲ್ಲಿ ಬಿಗ್ ಬಾಸ್ ಮನೆಯನ್ನು ಹೊಸದಾಗಿ ಕಟ್ಟಲು ಪ್ರಾರಂಭಿಸಿದ್ದಾರಂತೆ. ಅಲ್ಲದೆ ಈ ಬಾರಿ ವಿಶೇಷವಾಗಿ ಮನೆಯನ್ನು ಸಿದ್ಧಗೊಳಿಸಲಾಗುತ್ತಿದೆ.

Act 1978 Review: ಆಕ್ಟ್-1978 ಚಿತ್ರ ವಿಮರ್ಶೆ; ಇದೊಂದು ಎಮೋಷನಲ್ ಥ್ರಿಲ್ಲಿಂಗ್ ಜರ್ನಿ!

ಈ ಕಾರ್ಯ ಪೂರ್ಣಗೊಂಡ ಬೆನ್ನಲ್ಲೆ ಶೀಘ್ರದಲ್ಲೇ ಕ್ಯಾಮರಾಗಳನ್ನು ಫಿಕ್ಸ್ ಮಾಡುವ ಕೆಲಸವೂ ಆರಂಭಗೊಳ್ಳಲಿದೆಯಂತೆ. ಇದರ ಜೊತೆಗೆ ಮನೆಯೊಳಗೆ ಕೆಲವು ತಾಂತ್ರಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಡಿಸೆಂಬರ್ ಅಂತ್ಯದ ಹೊತ್ತಿಗೆ ಎಲ್ಲ ಕೆಲಸ ಪೂರ್ಣಗೊಂಡು ಬಿಗ್ ಬಾಸ್ ಮನೆ ಸಂಪೂರ್ಣ ಸಜ್ಜಾಗಲಿದೆ.

ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, 2021ರ ಆರಂಭದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಚಾಲನೆ ಸಿಗಲಿದೆ. ಆದರೆ, ಈ ಬಾರಿ ಯಾವ ಚಾನೆಲ್​ನಲ್ಲಿ ಪ್ರಸಾರವಾಗಲಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಶೋ ಆರಂಭದ ಬಗ್ಗೆ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಜೊತೆಗೆ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆಯುವ ಸೆಲೆಬ್ರಿಟಿಗಳ ಹುಡುಕಾಟವನ್ನು ಬಿಗ್ ಬಾಸ್ ತಂಡ ನಡೆಸುತ್ತಿದೆಯಂತೆ.

HBD Sushmita Sen: 45ನೇ ವಸಂತಕ್ಕೆ ಕಾಲಿಟ್ಟ ಸುಶ್ಮಿತಾ ಸೇನ್​: ಮಕ್ಕಳು ಕೊಟ್ಟ ಸರ್ಪ್ರೈಸ್​ ಹೇಗಿತ್ತು ಗೊತ್ತಾ..?

ಇನ್ನೂ ಈ ಬಾರಿ ಕೂಡ ಸುದೀಪ್‌ ಅವರ ನಿರೂಪಣೆಯಲ್ಲೇ ಬಿಗ್‌ ಬಾಸ್‌ ಶೋ ನಡೆಯಲಿದೆ. ಸದ್ಯ ಕಿಚ್ಚ ಹೈದರಾಬಾದ್‌ನಲ್ಲಿ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಕೋಟಿಗೊಬ್ಬ 3 ರಿಲೀಸ್‌ಗೆ ರೆಡಿಯಾಗಿದೆ.
Published by: Vinay Bhat
First published: November 20, 2020, 10:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading