ಬಿಗ್ ಬಾಸ್ ಮನೆಯಲ್ಲಿ ಈ ಸಲ ತಮ್ಮ ತುಂಟಾಟದಿಂದ ಸಹ ಸ್ಪರ್ಧಿಗಳು, ವೀಕ್ಷಕರು ಸೇರಿದಂತೆ ಬಿಗ್ ಬಾಸ್ ಅವರನ್ನೇ ರಂಜಿಸುತ್ತಿರುವ ಏಕೈಕ ವ್ಯಕ್ತಿ ಅಂದರೆ ಅದು ಶುಭಾ ಪೂಂಜಾ. ಶುಭಾ ತಮ್ಮ ತುಂಟಾಟ ಸ್ವಭಾವದಿಂದಲೇ ಮನೆಯವರ ಮನಸ್ಸು ಗೆದ್ದಿದ್ದಾರೆ. ಮನೆಯಲ್ಲಿ ಯಾರ ಬಗ್ಗೆಯೂ ಮಾತನಾಡದೆ, ತಾವಾಯಿತು, ತಮ್ಮ ಕೆಲಸವಾಯಿತು ಅಂತ ಇರುವ ಸ್ಪರ್ಧಿ ಎಂದೇ ಖ್ಯಾತರಾಗಿದ್ದಾರೆ. ಇನ್ನು ಮನರಂಜನೆಯ ವಿಷಯ ಬಂದರೆ ಮಂಜು ಪಾವಗಡ, ಶುಭಾ ಪೂಂಜಾ, ಶಮಂತ್ ಗೌಡ ಹಾಗೂ ಪ್ರಶಾಂತ್ ಸಂಬರಗಿ ಅವರು ತಮ್ಮದೇ ಆದ ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಅವರ ಮನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಹೀಗಿದ್ದರೂ ಸಹ ಶುಭಾ ಪೂಂಜಾ ಕಳೆದ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಜೊತೆಗೆ ಕೊಟ್ಟಿದ್ದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಸೋತಿದ್ದು ಈ ವಾರವೂ ಮನೆಯಿಂದ ಹೊರ ಹೋಗಲು ನೇರವಾಗಿ ನಾಮಿನೇಟ್ ಆಗಿದ್ದಾರೆ.
ಶುಭಾ ಪೂಂಜಾ, ಶಮಂತ್ ಗೌಡ, ಚಕ್ರವರ್ತಿ ಚಂದ್ರಚೂಡ, ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ಅವರು ಕಳೆದ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆದರೆ ನಿನ್ನೆ ಅಂದರೆ ಸೂಪರ್ ಸಂಡೆ ವಿಥ್ ಸುದೀಪ ಸಂಚಿಕೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆಗೆ ಸಖತ್ ಟ್ವಿಸ್ಟ್ ಕೊಡಲಾಗಿದೆ.
ಈ ವಾರ ಮನೆಯಿಂದ ಒಬ್ಬರಿಗಿಂತ ಹೆಚ್ಚು ಮಂದಿ ಎಲಿಮಿನೇಟ್ ಆಗಲಿದ್ದಾರೆ ಅನ್ನೋ ಶಾಕಿಂಗ್ ಸುದ್ದಿ ಕೊಟ್ಟ ಸುದೀಪ್, ಎಲಿಮಿನೇಷನ್ ಹೇಗೆ, ಯಾವಾಗ ಆಗಲಿದೆ ಅನ್ನೋದು ಸಹ ಸರ್ಪ್ರೈಸ್ ಎಂದಿದ್ದಾರೆ. ಹೌದು, ಸದ್ಯ ನಾಮಿನೇಟ್ ಆಗಿರುವವರಲ್ಲಿ ಯಾರು, ತಾವಾಗ ಹಾಗೂ ಹೇಗೆ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ ಅನ್ನೋದು ಗೊತ್ತಿಲ್ಲ. ಹೀಗಾಗಿಯೇ ಪ್ರತಿ ಸ್ಪರ್ಧಿಯೂ ಈ ವಾರ ಪ್ರತಿ ಕ್ಷಣವನ್ನು ಆತಂಕದಲ್ಲೇ ಕಳೆಯುವಂತಾಗಿದೆ.
ಇದನ್ನೂ ಓದಿ: RIP Jayanthi: ನೇತ್ರ ದಾನ: ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿರುವ ನಟಿ ಜಯಂತಿ..!
ಇನ್ನು ನಾಮಿನೇಟ್ ಆಗಿರುವ ಸ್ಪರ್ಧಿಗಳು ಮನೆಯಲ್ಲಿ ಇರುವಾಗಲೇ ಯಾರಿಗೂ ತಿಳಿಯದಂತೆ ಅವರನ್ನು ಮನೆಯಿಂದ ಹೊರಗೆ ಕರೆಸಿಕೊಳ್ಳಬಹುದು ಅನ್ನೋ ಅನುಮಾನ ಅವರನ್ನು ಕಾಡಲಾರಂಭಿಸಿದೆ. ಬಿಗ್ ಬಾಸ್ ಮನೆಯಲ್ಲಿ ಐದು ದ್ವಾರಗಳಿದ್ದು, ಯಾರನ್ನು ಯಾವ ದ್ವಾರದ ಮೂಲಕವಾದರೂ ಹೊರಗೆ ಕರೆಸಿಕೊಳ್ಳಬಹುದು ಎಂದು ನಾಮಿನೇಟ್ ಆಗಿರುವ ಸ್ಪರ್ಧಿಗಳು ಅಂದಾಜಿಸುತ್ತಿದ್ದಾರೆ.
ಮನೆಯ ತುಂಟಾಟದ ಹುಡುಗಿ ಶುಭಾ ಪೂಂಜಾ ಈಗ ಮನೆಯಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿದ್ದಾರೆ. ಮನೆಯ ಇತರ ಸ್ಪರ್ಧಿಗಳು ಶುಭಾ ಅವರನ್ನು ಹುಡುಕಾಡುತ್ತಿದ್ದು, ಅವರನ್ನು ಬಿಗ್ ಬಾಸ್ ಕರೆಸಿಕೊಂಡಿರುಬಹುದು ಅಂತ ಕೆಲವರು ಅಂದಾಜಿಸುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 8ರ ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಶುಭಾ ಮಿಸ್ಸಿಂಗ್ ಆಗಿರುವ ಕುರಿತು ವಿಷಯ ಬಹಿರಂಗಪಡಿಸಲಾಗಿದೆ.
ನಿನ್ನೆ ಎಲಿಮಿನೇಷನ್ ಇಲ್ಲ ಎಂದಾಗಲೇ ಶುಭಾ ಪೂಂಜಾ ಹಾಗೂ ಶಮಂತ್ ಅವರು ಮನೆಯಲ್ಲಿ ಅವಿತು ಕುಳಿತು ಎಲ್ಲರನ್ನೂ ಆಟ ಆಡಿಸುವ ಪ್ಲಾನ್ ಮಾಡಿದ್ದರು. ಅದರಂತೆಯೇ ಈಗ ಶುಭಾ ಮನೆಯಲ್ಲೇ ಅವಿತು ಕುಳಿತಿದ್ದು, ಮನೆಯವರನ್ನು ಆಟ ಆಡಿಸುತ್ತಿದ್ದಾರೆ. ಆದರೆ, ಶುಭಾ ಪೂಂಜಾ ಅವರ ಈ ಆಟ ನಿಜವಾಗುತ್ತದೆಯಾ ಅನ್ನೋ ಅನುಮಾನ ಪ್ರೋಮೋ ನೋಡಿದರೆ ಶುರುವಾಗುತ್ತದೆ.
ಇದನ್ನೂ ಓದಿ: Bigg Boss Kannada Season 8: ನ್ಯಾಚುರಲ್ ಸ್ಟಾರ್ ಆಗಿ ಹೊರಹೊಮ್ಮಿದ ಪ್ರಶಾಂತ್ ಸಂಬರಗಿಗೆ ಸಿಕ್ತು ಕಿಚ್ಚನ ಚಪ್ಪಾಳೆ..!
ಶುಭಾ ಪೂಂಜಾ ಅಡಗಿ ಕುಳಿತಿದ್ದ ಜಾಗದಲ್ಲೂ ಮನೆಯವರು ಹುಡುಕಿದರೆ ಅವರು ಸಿಗುವುದಿಲ್ಲ. ಒಂದು ವೇಳೆ ನಿಜಕ್ಕೂ ಶುಭಾ ಅವರು ಮನೆಯಿಂದ ಹೊರ ಹೋಗಿದ್ದಾರಾ..? ಅಥವಾ ಇನ್ನೂ ಮನೆಯಲ್ಲೇ ಇದ್ದಾರಾ ಅನ್ನೋದು ಇಂದಿನ ಸಂಚಿಕೆಯಿಂದ ತಿಳಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ