Bigg Boss Kannada Season 8: ತಾಳ್ಮೆ ಕಳೆದುಕೊಂಡು ಏರು ದನಿಯಲ್ಲಿ ಚಕ್ರವರ್ತಿ ಚಂದ್ರಚೂಡಗೆ ಖಡಕ್​ ವಾರ್ನಿಂಗ್​ ಕೊಟ್ಟ ಶಮಂತ್ ಗೌಡ

ಚಕ್ರವರ್ತಿ ಅವರಿಗೆ ಮತ್ತೊಮ್ಮೆ ಕಾರಣ ಕೊಟ್ಟು ಮನವೊಲಿಸಲು ಶಮಂತ್ ಹೊರತು ಪಡಿಸಿ ಮತ್ತಾರೂ ಒಪ್ಪುವುದಿಲ್ಲ. ಶಮಂತ್ ಬಂದು ತಾನು ಕಳಪೆ ಎಂದು ಹೇಳಿದ್ದಕ್ಕೆ ಕೊಟ್ಟ ಕಾರಣವನ್ನು ಸಮರ್ಥಿಸಿಕೊಳ್ಳಲಾರಂಭಿಸುತ್ತಾರೆ. ಆಗ ಚಕ್ರವರ್ತಿ ಅವರು ಹೇಳುವ ಒಂದು ಮಾತಿನಿಂದ ಶಮಂತ್ ಅವರು ತಾಳ್ಮೆ ಕಳೆದುಕೊಂಡು ಏರು ದನಿಯಲ್ಲಿ ವಾರ್ನಿಂಗ್​ ಕೊಡುತ್ತಾರೆ.

ಚಕ್ರವರ್ತಿಗೆ ಎಚ್ಚರಿಕೆ ಕೊಟ್ಟ ಶಮಂತ್ ಗೌಡ

ಚಕ್ರವರ್ತಿಗೆ ಎಚ್ಚರಿಕೆ ಕೊಟ್ಟ ಶಮಂತ್ ಗೌಡ

  • Share this:
ಚಕ್ರವರ್ತಿ ಚಂದ್ರಚೂಡ ಹಾಗೂ ಶಮಂತ್ ಗೌಡ ಅವರು ಮನೆಯಲ್ಲಿ ಎಷ್ಟು ಆತ್ಮೀಯವಾಗಿ ಇರುತ್ತಾರೆ ಅನ್ನೋದು ಗೊತ್ತೇ ಇದೆ. ಚಕ್ರವರ್ತಿ ಅವರು ಯಾವಾಗ ಪರೋಕ್ಷವಾಗಿ ಏನಾದರೂ ಹೇಳಿದರೂ ಶಮಂತ್​ ತಾಳ್ಮೆ ಕಳೆದುಕೊಳ್ಳದೆ ನಗುತ್ತಲೇ ಅವರಿಗೆ ಉತ್ತರಿಸುತ್ತಾ ಸುಮ್ಮನಾಗುತ್ತಿದ್ದರು. ಯಾರೇ ಟೀಕಿಸಿದರೂ ಅಥವಾ ಖಾರವಾಗಿ ನುಡಿದರೂ ಶಮಂತ್​ ಸಿಟ್ಟು ಮಾಡಿಕೊಳ್ಳದೆ ನಗು ಮುಖದಲ್ಲೇ ಎಲ್ಲವನ್ನೂ ನಿರ್ಲಕ್ಷ್ಯ ಮಾಡುವ ಮೂಲಕ ಜಗಳ ಅಥವಾ ಮನಸ್ತಾಪ ಆಗದಂತೆ ನೋಡಿಕೊಳ್ಳುತ್ತಿದ್ದರು. ಶಮಂತ್ ಅವರ ಈ ವರ್ತನೆ ಬಗ್ಗೆ ಚಕ್ರವರ್ತಿ ಅವರೇ ಈ ಹಿಂದೆ ಸಾಕಷ್ಟು ಸಲ ವ್ಯಂಗ್ಯ ಮಾಡುತ್ತಾ ಹೇಳಿದ್ದಾರೆ. ಮೊನ್ನೆಯ ಸಂಚಿಕೆಯಲ್ಲೂ ಶಮಂತ್​ ಹಾಗೂ ಪ್ರಿಯಾಂಕಾ ವಿಷಯದಲ್ಲಿ ಚಕ್ರವರ್ತಿ ಚುಚ್ಚು ಮಾತುಗಳನ್ನಾಡಿದ್ದರು. ಆಗಲೇ ಶಮಂತ್​ ಇನ್ನು ಮುಂದೆ  ಚಕ್ರವರ್ತಿ ಅವರು ಏನೇ ಹೇಳಿದರೂ ಅದಕ್ಕೆ ಉತ್ತರ ಕೊಡುವ ರೀತಿಯಲ್ಲೇ ಕೊಡೋ ಣ ಎಂದಿದ್ದರು. 

ಇಂದಿನ ಸಂಚಿಕೆಯಲ್ಲಿ ಕ್ಯಾಪ್ಟನ್​ ಆಯ್ಕೆಯ ಜೊತೆಗೆ ಮನೆಯಲ್ಲಿ ಉತ್ತಮ ಹಾಗೂ ಕಳಪೆ ಪ್ರದರ್ಶನದ ಬಗ್ಗೆಯೂ ಸ್ಪರ್ಧಿಗಳು ತೀರ್ಮಾನ ಮಾಡಿದರು. ಈ ವಾರ ಚಕ್ರವರ್ತಿ ಚಂದ್ರಚೂಡ ಅವರಿಗೆ ಐದು ಮಂದಿ ಸ್ಪರ್ಧಿಗಳು ಕಳಪೆ ಎಂದು ಮತ ಹಾಕಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಉರುಡುಗ​, ಶುಭಾ ಪೂಂಜಾ, ಶಮಂತ್​ ಗೌಡ ಹಾಗೂ ಪ್ರಶಾಂತ್​ ಸಂಬರಗಿ ಅವರು ಚಕ್ರವರ್ತಿ ಅವರಿಗೆ  ಕಳಪೆ ಎಂದಿದ್ದಾರೆ.



ಕಳಪೆ ಪಟ್ಟವನ್ನು ಸ್ವೀಕರಿಸಿದ ಚಕ್ರವರ್ತಿ ಚಂದ್ರಚೂಡ ಖೈದಿಯ ಡ್ರೆಸ್​ ತೊಟ್ಟು ಜೈಲಿನೊಳಗೆ ಹೋದರು. ಆದರೆ ಜೈಲಿನಲ್ಲಿ ಮಾಡಬೇಕಾದ ಕೆಲಸಗಳನ್ನು ತಾನು ಮಾಡುವುದಿಲ್ಲ ಎಂದು ಚಕ್ರವರ್ತಿ ಪ್ರತಿಭಟಿಸುತ್ತಿದ್ದಾರೆ.

ನಾನು ತಪ್ಪು ಮಾಡೋದಿಲ್ಲ ಅಂತ ಅಲ್ಲ. ಆದರೆ ಈ ಸಲ ಕಳಪೆ ಎಂದು ಪಟ್ಟ ಕೊಡಲು ಕೊಟ್ಟ ಕಾರಣಗಳು ನನಗೆ ಸರಿ ಎನಿಸಲಿಲ್ಲ. ಈಗ ಕಳಪೆಗೆ ನನ್ನ ಹೆಸರು  ಐದೂ ಮಂದಿ ಬಂದು ನನ್ನ ಮನವೊಲಿಸಬೇಕು. ಆಗಲೇ ನಾನು ತರಕಾರಿ ಕಟ್​ ಮಾಡಿ ಕೊಡುತ್ತೇನೆ. ಇಲ್ಲವಾದಲ್ಲಿ ನನ್ನ ಪ್ರತಿಭಟನೆ ಮುಂದುವರೆಯುತ್ತದೆ ಎಂದು ವೈಷ್ಣವಿ ಗೌಡ ಅವರ ಬಳಿ ಚಕ್ರವರ್ತಿ ಚಂದ್ರಚೂಡ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada Season 8: ಬಿಗ್ ಬಾಸ್ ಮನೆಯಲ್ಲಿ ಪ್ರತಿಭಟನೆ ಆರಂಭಿಸಿದ ಚಕ್ರವರ್ತಿ ಚಂದ್ರಚೂಡ..!

ಚಕ್ರವರ್ತಿ ಅವರಿಗೆ ಮತ್ತೊಮ್ಮೆ ಕಾರಣ ಕೊಟ್ಟು ಮನವೊಲಿಸಲು ಶಮಂತ್ ಹೊರತು ಪಡಿಸಿ ಮತ್ತಾರೂ ಒಪ್ಪುವುದಿಲ್ಲ. ಶಮಂತ್ ಬಂದು ತಾನು ಕಳಪೆ ಎಂದು ಹೇಳಿದ್ದಕ್ಕೆ ಕೊಟ್ಟ ಕಾರಣವನ್ನು ಸಮರ್ಥಿಸಿಕೊಳ್ಳಲಾರಂಭಿಸುತ್ತಾರೆ. ದಿವ್ಯಾ ಉರುಡುಗ ಅವರನ್ನು ಟಾಸ್ಕ್ ಆಡುವಾಗ ಚಕ್ರವರ್ತಿ ಹಿಡಿದುಕೊಂಡಿದ್ದೇ ಅವರಿಗೆ ಗಾಯವಾಗಲು ಕಾರಣ ಎಂದು ಹೇಳಲಾಗಿತ್ತು. ನಮ್ಮ ಟೀಮ್ ಅವರನ್ನು ಹಿಡಿದುಕೊಳ್ಳಬಾರದಿತ್ತು. ಅದು ಗೊತ್ತಿಲ್ಲದೇ ಆದರೂ ಸಹ ಅದು ಒಂದೇ ಕಾರಣಕ್ಕೆ ಕಳಪೆ ಅಂತ ನಾನು ಕೊಟ್ಟಿದ್ದು ಅಂತ ಶಮಂತ್​ ವಿವರಣೆ ಕೊಡುತ್ತಾರೆ.

ಶಮಂತ್ ಕೊಟ್ಟ ಕಾರಣವನ್ನು ಒಪ್ಪಿಕೊಳ್ಳದ ಚಕ್ರವರ್ತಿ, ಕಳಪೆ ಎಂದು ಮೊದಲೇ ನಿರ್ಧರಿಸಿ, ಬಿಗ್ ಬಾಸ್​ ಕೇಳಿದಾಗ ಅಲ್ಲಿ ಹೆಸರು ಹೇಳುತ್ತೀರಾ. ನನಗೆ ನೀವೆ ಕಳಪೆ ಆಗುಬಹುದು ಎಂದು ಮೊದಲೇ ಹೇಳಿದ್ದು ಸರಿಯೇ ಎಂದು ಚಕ್ರವರ್ತಿ ಕೇಳುತ್ತಾರೆ. ನೀನು ಮಾಡಿದ್ದು ಕುತ್ತುಗೆ ಕುಯ್ಯುವ ತರದ ಕೆಲಸ. ನೀವು ತಪ್ಪು ಮಾಡಿದಿರಿ ಅಂತ ಆಗಲೇ ಹೇಳಬಹುದಿತ್ತು.ಅದನ್ನು ಬಿಟ್ಟು ಕಳಪೆಗೆ ಕಾರಣ ಕೊಡಲೆಂದು ಇವತ್ತಿನ ವರೆಗೆ ಕಾಯುತ್ತಿದ್ದಾ ಎಂದು ಟೀಕಿಸಿದ್ದಾರೆ ಚಕ್ರವರ್ತಿ.




ನಂತರ ಯಾವ ಸ್ನೇಹಿತನ ಕತ್ತು ಬೇಕಾದರೂ ಕುಯ್ಯುತ್ತೀಯಾ ಎಂದ ಚಕ್ರವರ್ತಿ ಅವರ ಮಾತಿಗೆ ಶಮಂತ್ ಅವರ ಸಿಟ್ಟು ನೆತ್ತಿಗೇರಿ ಏರು ದನಿಯಲ್ಲಿ ಮಾತನಾಡಲಾರಂಭಿಸುತ್ತಾರೆ. ಕುತ್ತಿಗೆ ಕತ್ತರಿಸುವ ಮಾತು ಹಾಗೂ ಸ್ನೇಹಿತರ ಬಗ್ಗೆ ಮಾತನಾಡಬೇಡಿ. ನೀವು ನನಗೆ ಎಷ್ಟು ದಿನಗಳಿಂದ ಸ್ನೇಹಿತ. ನನ್ನ ಬಗ್ಗೆ ಎಷ್ಟು ಗೊತ್ತು ನಿಮಗೆ. ಗೊತ್ತಿಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಾ ಇಲ್ಲಸಲ್ಲದ ಅಭಿಪ್ರಾಯ ಮೂಡುವಂತೆ ಮಾಡಬೇಡಿ ಎಂದು ಚಕ್ರವರ್ತಿ ಅವರಿಗೆ ಖಡಕ್​ ಆಗಿ ವಾರ್ನಿಂಗ್​ ಕೊಟ್ಟಿದ್ದಾರೆ ಶಮಂತ್​. ಇದೇ ಮೊದಲ ಬಾರಿಗೆ ಶಮಂತ್ ತಾಳ್ಮೆ ಕಳೆದುಕೊಂಡು ಸಿಟ್ಟಿನಿಂದ ಈ ರೀತಿ ಬಿಗ್ ಬಾಸ್ ಮನೆಯಲ್ಲಿ ವರ್ತಿಸಿದ್ದು.

ಇದನ್ನೂ ಓದಿ: Bigg Boss Kannada Season 8: ಟಾಸ್ಕ್​ನಲ್ಲಿ ಗೆದ್ದು 2ನೇ ಮಹಿಳಾ ಕ್ಯಾಪ್ಟನ್​ ಆದ ದಿವ್ಯಾ ಸುರೇಶ್: ಅಮ್ಮುಗೆ ಸಿಕ್ತು ಭರ್ಜರಿ ಉಡುಗೊರೆ ​..!

ಚಕ್ರವರ್ತಿ ತರಕಾರಿ ಕತ್ತರಿಸಿ ಕೊಡುವವರೆಗೂ ಮನೆಯವರು ಅಡುಗೆ ಮಾಡುವಂತಿಲ್ಲ. ತಾವೇ ತರಕಾರಿ ಕಟ್​ ಮಾಡುವಂತಿಲ್ಲ. ಅದಕ್ಕೆ ತರಕಾರಿ ಇಲ್ಲದೆ ಹೇಗೆ ಅಡುಗೆ ಮಾಡಬಹುದು ಅನ್ನೋದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ತರಕಾರಿ ಇಲ್ಲದೆಯೇ ಒಂದು ವೇಳೆ ರಸಂ ಮಾಡಿಕೊಂಡು ಊಟ ಮಾಡಿದ್ದಾರೆ. ಇನ್ನು ಇಡೀ ದಿನವನ್ನು ತರಕಾರಿ ಕತ್ತರಿಸದೆಯೇ ಹೇಗೆ ಬೇಯಿಸಿ ಅಡುಗೆ ಮಡಬಹುದು ಅಂತ ಮಂಜು ಹಾಗೂ ಅರವಿಂದ್​ ಪ್ಲಾನ್​ ಮಾಡುತ್ತಿದ್ದಾರೆ. ತರಕಾರಿ ಕತ್ತರಿಸದೇ ಅಡುಗೆ ಮಾಡಿ ಊಟ ಮಾಡುತ್ತಾರಾ..? ಈ ವಿಷಯ ನಾಳೆಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಗೆ ಬರುವುದಂತೂ ಕಂಡಿತ.
Published by:Anitha E
First published: