ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ಪ್ರಶಾಂತ್ ಸಂಬರಗಿ ಅವರಿಗೆ ಕಳೆದ ಕೆಲವು ದಿನಗಳ ಅದೃಷ್ಟ ಕೈ ಹಿಡಿದಿದೆ ಎಂದು ಅನಿಸುತ್ತಿದೆ. ಅವರಿಗೆ ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದೆ. ಅಂದರೆ, ವಾರಾಂತ್ಯದಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕಿತು. ನಂತರ ನಾಮಿನೇಷನ್ ಆಗಿದ್ದ ಪ್ರಶಾಂತ್ ನಾಲ್ಕನೆ ಎಲಿಮಿನೇಷನ್ನಲ್ಲಿ ಎಲಿಮಿನೇಟ್ ಆಗದೆ ಸೇಫ್ ಆಗಿದ್ದು. ಈಗ ಮನೆಯಲ್ಲಿ ಇಬ್ಬರು ಸ್ಪರ್ಧಿಗಳು ಮಾಡದ ಕೆಲಸವನ್ನು ಪ್ರಶಾಂತ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೌದು, ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ಆಗುವ ಮುಂಚೆಯೇ ಮನೆಯಲ್ಲಿ ಇಬ್ಬರು ಸ್ಪರ್ಧಿಗಳಿಗೆ ಒಂದು ಕೆಲಸ ಕೊಟ್ಟಿದ್ದರು. ಅದನ್ನು ಅವರು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ಅದಕ್ಕೆ ಬಿಗ್ ಬಾಸ್ ಆ ಕೆಲಸವನ್ನು ಪ್ರಶಾಂತ್ ಸಂಬರಗಿ ಅವರಿಗೆ ನೀಡುತ್ತಾರೆ. ಆ ಕೆಲಸವನ್ನು ಪ್ರಶಾಂತ್ ಸಂಬರಗಿ ಅವರು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ.
ಅಷ್ಟಕ್ಕೂ ಪ್ರಶಾಂತ್ ಸಂಬರಗಿ ಅವರಿಗೆ ಬಿಗ್ ಬಾಸ್ ಕೊಟ್ಟಿದ್ದ ಕೆಲಸವಾದರೂ ಏನು. ಆ ಕೆಲಸವನ್ನು ಮೊದಲು ಯಾರಿಗೆ ಕೊಟ್ಟಿದ್ದರು ಬಿಗ್ ಬಾಸ್ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡೋಜು ಸಹಜ. ಈ ಹಿಂದೆ ಅಂದರೆ ಮೊನ್ನೆ ನಾಮಿನೇಷನ್ ಆಗುವ ದಿನ ಬೆಳಿಗ್ಗೆ ಮನೆಯಲ್ಲಿ ಎಲಿಮಿನೇಷನ್ ಆತಂಕದಲ್ಲಿ ಕುಳಿತಿದ್ದ ಸ್ಪರ್ಧಿಗಳನ್ನು ಬ್ಯುಸಿಯಾಗಿಡಲು ನಾನಾ ರೀತಿಯ ಚಟುವಟಿಗಳನ್ನು ನೀಡಲಾಗಿತ್ತು.
ಹೀಗೆ ಬಿಗ್ ಬಾಸ್ ನೀಡಿದ್ದ ಚಟುವಟಿಕೆಗಳಲ್ಲಿ ಇದೂ ಸಹ ಒಂದು. ಅದು ಮನೆಯಲ್ಲಿ ಬಿಗ್ ಬಾಸ್ಗೆ ಸೇರಿದ ಪುಟ್ಟದಾದ ವಸ್ತುವೊಂದು ಸೃಇಕೊಂಡಿತ್ತು. ಅದನ್ನು ಕೈಗೆತ್ತಿಕೊಂಡರೆ ತುಂಬಾ ಸದ್ದು ಮಾಡುತ್ತದೆ. ಅದನ್ನು ಹುಡುಕಿ ತಂದು ಕೊಡುವಂತೆ ಮೊದಲು ವೈಷ್ಣವಿ ಹಾಗೂ ಶುಭಾ ಅವರಿಗೆ ನೀಡಲಾಗಿತ್ತು. ಈ ಇಬ್ಬರೂ ಸಹ ತಲೆ ಕೆಡಿಸಿಕೊಂಡು ಹುಡುಕುತ್ತಾರೆ. ಆದರೆ ಆ ವಸ್ತು ಯಾವುದು ಎಂದು ಅವರಿಗೆ ತಿಳಿಯುವುದೇ ಇಲ್ಲ.
ಇದನ್ನೂ ಓದಿ: Bigg Boss 8 Kannada: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಬಿಟ್ಟು ಉಳಿದವರೆಲ್ಲ ಮತ್ತೆ ನಾಮಿನೇಟ್ ಆದ್ರು..!
ನಂತರ ಬಿಗ್ ಬಾಸ್ ಕೊಟ್ಟಿರುವ ಈ ಕೆಲಸ ಮೈಂಡ್ ಗೇಮ್ ಅಂತ ಚಕ್ರವರ್ತಿ ಅವರು ಹೇಳುತ್ತಾರೆ. ಇದು ಸಮಯ ಇರಬೇಕು. ಹೋಗಿ ಬಿಗ್ ಬಾಸ್ ಬಳಿ ಅದನ್ನೇ ಹೇಳಿ ಎಂದು ಚಕ್ರವರ್ತಿ ಹೇಳುತ್ತಾರೆ. ಆದರೆ, ಅದು ಸರಿಯಾದ ಉತ್ತರವಲ್ಲ. ಇದೇ ಕೆಲಸವನ್ನು ಬಿಗ್ ಬಾಸ್ ನಂತರ ಕಾಲ್ ರಿಸೀವ್ ಮಾಡುವ ಪ್ರಶಾಂತ್ ಸಂಬರಗಿ ಅವರಿಗೆ ನೀಡುತ್ತಾರೆ. ಜೊತೆಗೆ ಶುಭಾ ಹಾಗೂ ವೈಷ್ಣವಿ ಅವರು ಈ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನೀವು ಈ ಕೆಲಸವನ್ನು ಮಾಡಿ ಎನ್ನುತ್ತಾರೆ.
ಬಿಗ್ ಬಾಸ್ ಆದೇಶ ಸಿಗುತ್ತಿದ್ದಂತೆಯೇ ಮನೆಯಲ್ಲಿ ಹುಡುಕಾಟ ಆರಂಭಿಸಿದ ಪ್ರಶಾಂತ್ ಅವರಿಗೆ ಕಡೆಗೂ ಆ ವಸ್ತು ಸಿಕ್ಕೇ ಬಿಡುತ್ತದೆ. ಅದು ಮುಟ್ಟಿದರೆ ಸದ್ದು ಮಾಡುವ ಬಾತು ಕೋಳಿ ಆಟಿಕೆ. ಈ ಕೆಲಸ ಮಾಡಿದ್ದಕ್ಕೆ ಬಿಗ್ ಬಾಸ್ ಪ್ರಶಾಂತ್ ಸಂಬರಗಿ ಅವರಿಗೆ ಒಂದು ಸಖತ್ ಉಡುಗೊರೆ ನೀಡಿದ್ದಾರೆ. ಅದು ಬೇಕೆಂದಾಗ 20 ನಿಮಿಷ ನಿದ್ದೆ ಮಾಡುವುದು.
ಇದನ್ನೂ ಓದಿ: Mouni Roy: ಹೈ ಸ್ಲಿಟ್ ಡ್ರೆಸ್ ತೊಟ್ಟು ಸ್ಮೋಕಿ ಲುಕ್ನಲ್ಲಿ ಕಾಣಿಸಿಕೊಂಡ ಮೌನಿ ರಾಯ್
ಹೌದು, ರಾತ್ರಿ ಅಂದರೆ ಮಲಗುವ ಸಮಯ ಬಿಟ್ಟು ಬೇರೆ ಸಮಯದಲ್ಲಿ ಯಾವ ಸ್ಪರ್ಧಿಗಳು ಈ ಮನೆಯಲ್ಲಿ ಮಲಗುವಂತಿಲ್ಲ. ಒಂದು ವೇಳೆ ಮಲಗಿದರೆ, ಎದ್ದೇಳು ಮಂಜುನಾಥ ಹಾಡು ಪ್ಲೇ ಆಗುತ್ತದೆ. ಈ ಹಾಡನ್ನು ಹೆಚ್ಚಾಗಿ ಪ್ಲೇ ಆಗುವಂತೆ ಮಾಡಿರುವುದು ಶುಭಾ ಪೂಂಜಾ ಎನ್ನಬಹುದು. ಹೀಗಾಗಿ ಈ ಉಡುಗೊರೆ ಬಿಗ್ ಬಾಸ್ ಮನೆಯಲ್ಲಿ ಮೊದಲು ಸಿಕ್ಕಿರುವುದು ಪ್ರಶಾಂತ್ ಅವರಿಗೆ. ಪ್ರಶಾಂತ್ ನಿದ್ದೆ ಮಾಡುವ ಮೊದಲು ಕ್ಯಾಮೆರಾ ಮುಂದೆ ಬಂದು ಹೇಳಿ 20 ನಿಮಿಷ ಬೇಕೆಂದಾಗ ಒಮ್ಮೆ ನಿದ್ದೆ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ