BBK8: ತಾನಾಗಿಯೇ ಟಾಸ್ಕ್​ನಲ್ಲಿ ಆಡಬೇಕೆಂದಿದ್ದ ಪ್ರಶಾಂತ್​ ನಂತರ ಉಲ್ಟಾ ಹೊಡೆದಿದ್ದೇಕೆ ಗೊತ್ತಾ..?

ಇಡೀ ದಿನ ಏನೂ ಆಟವಾಡಿಲ್ಲ ಅಂತ ಪ್ರಶಾಂತ್ ಸಂಬರಗಿ ಅವರು ವೈಷ್ಣವಿ ಅವರ ಬಳಿ ಈ ಸಲ ಆಟವಾಡಲು ಅವಕಾಶ ಸಿಕ್ಕರೆ ನನ್ನನ್ನೇ ಆಯ್ಕೆ ಮಾಡಿ ಎಂದು ಹೇಳಿದ್ದರಂತೆ. ಪ್ರಶಾಂತ್ ಅವರು ಹೇಳಿದ್ದ ಕಾರಣಕ್ಕೆ ಕಾಲ್ ರಿಸೀವ್​ ಮಾಡಿದ ವೈಷ್ಣವಿ ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರೆ.

ಪ್ರಶಾಂತ್ ಸಂಬರಗಿ

ಪ್ರಶಾಂತ್ ಸಂಬರಗಿ

  • Share this:
    ಬಿಗ್ ಬಾಸ್​ ಕನ್ನಡ ಸೀಸನ್​ 8ಕ್ಕೆ 11 ದಿನಗಳು ಮಾತ್ರ ಬಾಕಿ ಇದೆ. 11ನೇ ದಿನ ಗ್ರ್ಯಾಂಡ್​ ಫಿನಾಲೆಯಲ್ಲಿ ಕೇವಲ ಐದು ಮಂದಿ ಮಾತ್ರ ಇರುತ್ತಾರೆ. ಫಿನಾಲೆಯಲ್ಲಿ ಇರುವ ಆ ಐದು ಜನ ಸ್ಪರ್ಧಿಗಳು ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ಈ ಸ್ಥಾನಕ್ಕಾಗಿಯೇ ಮನೆಯಲ್ಲಿರುವ 8 ಮಂದಿ ಈಗ ಪೈಪೋಟಿ ನಡೆಸುತ್ತಿದ್ದಾರೆ. ಮನೆಯಲ್ಲಿ ಈಗ ಉಳಿದಿರುವ ಸ್ಪರ್ಧಿಗಳೆಂದರೆ  ದಿವ್ಯಾ ಉರುಡುಗ, ವೈಷ್ಣವಿ ಗೌಡ, ಅರವಿಂದ್ ಕೆ ಪಿ, ಶಮಂತ್ ಗೌಡ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್​, ಮಂಜು ಪಾವಗಡ ಹಾಗೂ ಶುಭಾ ಪೂಂಜಾ. ಇವರಲ್ಲಿ ಕ್ಯಾಪ್ಟನ್ ಆಗಿರುವ ದಿವ್ಯಾ ಉರುಡುಗ ಶನಿವಾರದವರೆಗೆ ನಡೆಯಲಿರುವ ನಾಮಿನೇಷನ್​ನಿಂದ ಪಾರಾಗಿದ್ದಾರೆ. ಮನೆಯಲ್ಲಿ ಸದದ್ಯರ ಸಂಖ್ಯೆ ಕಡಿಮೆಯಾದಂತೆಯೇ ಗ್ರೂಪ್ ಟಾಸ್ಕ್​ ಬಿಟ್ಟು ಇಬ್ಬರು ಮಾಡುವ ಚಟುವಟಿಕೆಗಳನ್ನೇ ನೀಡಲಾಗುತ್ತಿದೆ. ಯಾರು ಕಾಲ್ ರಿಸೀವ್​ ಮಾಡುತ್ತಾರೋ ಅವರಿಗೆ ಬಿಗ್ ಬಾಸ್​ ಆಟವಾಡಲು ಅವಕಾಶ ಕೊಡುತ್ತಾರೆ. 

    ಇಡೀ ದಿನ ಏನೂ ಆಟವಾಡಿಲ್ಲ ಅಂತ ಪ್ರಶಾಂತ್ ಸಂಬರಗಿ ಅವರು ವೈಷ್ಣವಿ ಅವರ ಬಳಿ ಈ ಸಲ ಆಟವಾಡಲು ಅವಕಾಶ ಸಿಕ್ಕರೆ ನನ್ನನ್ನೇ ಆಯ್ಕೆ ಮಾಡಿ ಎಂದು ಹೇಳಿದ್ದರಂತೆ. ಪ್ರಶಾಂತ್ ಅವರು ಹೇಳಿದ್ದ ಕಾರಣಕ್ಕೆ ಕಾಲ್ ರಿಸೀವ್​ ಮಾಡಿದ ವೈಷ್ಣವಿ ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರೆ.






    ಬಿಗ್​ ಬಾಸ್​ ಎಲ್ಲರಿಗೂ ಸುಲಭವಾದ ಆಟವನ್ನು ಆಡಲು ಕೊಡುತ್ತಿದ್ದಾರೆ ಎಂದು ತಿಳಿದು ಪ್ರಶಾಂತ್​ ತನ್ನನ್ನು ಪ್ರತಿಸ್ಪರ್ಧಿಯಾಗಿ ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತಾರೆ. ಆದರೆ ವೈಷ್ಣವಿ ಅವರ ಜೊತೆ ಆಡಬೇಕಾದ ಆಟ ಯಾವುದು ಎಂದು ತಿಳಿಯುತ್ತಿದ್ದಂತೆಯೇ ಪ್ರಶಾಂತ್ ಅವರ ಮುಖ ಚಿಕ್ಕದಾಗುತ್ತದೆ. ಹಗ್ಗದ ಮೇಲೆ ನಿಂತು ಬ್ಯಾಲೆನ್ಸ್ ಮಾಡುತ್ತಾ ಮೇಲೆ ತೂಗಿ ಬಿಟ್ಟಿರುವ ಹಗ್ಗವನ್ನು ಕೈಯಲ್ಲಿ ಹಿಡಿದುಕೊಂಡಿರಬೇಕು. ಈ ಟಾಸ್ಕ್​ನಲ್ಲಿ ಕೈ ನೋವು ಬರುವುದು ಖಂಡಿತ ಅಂತ ತಿಳಿಯುತ್ತಿದ್ದಂತೆಯೇ ಪ್ರಶಾಂತ್ ಅವರು ಹೇಳಿದ ಮಾತು ನಿಜಕ್ಕೂ ನೋಡುಗರ ಮುಖದ ಮೇಲೆ ನಗು ತರಿಸದೆ ಇರದು.

    ಇದನ್ನೂ ಓದಿ:Trisha Marriage: ನಿರ್ದೇಶಕರ ಜೊತೆ ನಟಿ ತ್ರಿಷಾ ಮದುವೆಯಂತೆ..!

    ಪ್ರಶಾಂತ್ ಸಂಬರಗಿ ಅವರು ಕೆಲವೊಮ್ಮೆ ಸಖತ್ ಕಾಮಿಡಿ ಮಾಡ್ತಾ ಇರುತ್ತಾರೆ. ಮತ್ತೆ ಕೆಲವೊಮ್ಮೆ ಅವರು ನಡೆದುಕೊಳ್ಳುವ ರೀತಿಯೇ ನೋಡುಗರಿಗೆ ತಮಾಷೆ ಅನಿಸುತ್ತದೆ. ಆಟವಾಡಲು ತನ್ನನ್ನು ಆಯ್ಕೆ ಮಾಡು ಎಂದು ತಮಾಷೆಗೆ ಹೇಳಿದ್ದೆ ಎಂದು ಶಮಂತ್​ ಬಳಿ ಒಮ್ಮೆ ಹೇಳುತ್ತಾರೆ ಪ್ರಶಾಂತ್ ಸಂಬರಗಿ. ಆದರೆ, ನಂತರ ಕೊಟ್ಟಿದ್ದ ಟಾಸ್ಕ್ ತುಂಬಾ ಸುಲಭದ್ದಾಗಿರುತ್ತೆ ಎಂದು ಕೊಂಡು ನನ್ನ ಹೆಸರು ಹೇಳುವಂತೆ ಹೇಳಿದೆ ಎಂದು ನಿಜ ಒಪ್ಪಿಕೊಳ್ಳುತ್ತಾರೆ.

    ಇದನ್ನೂ ಓದಿ: Bigg Boss 8 Kannada: ಐಸ್​ಕ್ರೀಂಗಾಗಿ ಬಿಗ್ ಬಾಸ್ ಕೊಟ್ಟ ಆ ಕೆಲಸ ಮಾಡಿದ ವೈಷ್ಣವಿ..!

    ಎಷ್ಟೇ ಬೇಸರದಿಂದ ಆಡಿದರೂ ಪ್ರಶಾಂತ್​ ಕೊಟ್ಟಿದ್ದ ಆಟದಲ್ಲಿ ಮೂರೂ ಹಂತಗಳನ್ನು ದಾಟುತ್ತಾರೆ. ವೈಷ್ಣವಿ ಹಾಗೂ ಪ್ರಶಾಂತ್ ಇಬ್ಬರೂ ಸೋಲನ್ನಪ್ಪುವುದಿಲ್ಲ. ಸತತ ಮೂರು ಗಂಟೆ 4 ನಿಮಿಷಗಳ ಕಾಲ ತೂಗಿಬಿಟ್ಟ ಹಗ್ಗವನ್ನು ಹಿಡಿದು ಕೆಳಗೆ ಕಟ್ಟಲಾಗಿದ್ದ ಮತ್ತೊಂದು ಹಗ್ಗದ ಮೇಲೆ ನಿಂತಿದ್ದ ಪ್ರಶಾಂತ್ ಆಟದಿಂದ ಹಿಂದೆ ಸರಿಯುತ್ತಾರೆ. ಈ ಟಾಸ್ಕ್​ನಲ್ಲಿ ಗೆದ್ದ ವೈಷ್ಣವಿ ಗೆಲ್ಲುತ್ತಾರೆ. ಇನ್ನು ವೈಷ್ಣವಿ ಇಂದು ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್​ನಲ್ಲೂ ಗೆದ್ದು ಐಸ್​ಕ್ರೀಂ ಅನ್ನು ಗೆಲ್ಲುತ್ತಾರೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:Anitha E
    First published: