Bigg Boss Kannada Season 8: ಪ್ರಶಾಂತ್ ಸಂಬರಗಿ ಸೇರಿದಂತೆ ನಾಲ್ಕು ಸ್ಪರ್ಧಿಗಳ ಮೇಲೆ ಎಲಿಮಿನೇಶನ್​​ ತೂಗುಗತ್ತಿ..!

ಮನೆಯಲ್ಲಿದ್ದ ಇತರೆ ಸ್ಪರ್ಧಿಗಳನ್ನು ಬಿಗ್ ಬಾಸ್​ ಖುದ್ದು ನಾಮಿನೇಟ್ ಮಾಡಿ, ಅದರಿಂದ ತಪ್ಪಿಸಿಕೊಳ್ಳಲು ದಂಡ ಯಾತ್ರೆ ಎಂಬ ಹೆಸರಿನ ಟಾಸ್ಕ್​ ಕೊಟ್ಟರು. ಈ ಟಾಸ್ಕ್​ನಲ್ಲಿ ಮಂಜು ಪಾವಗಡ ಅವರ ನೇತೃತ್ವದ ತಂಡ ಗೆದ್ದು ನಾಮಿನೇಶನ್​​ ಪ್ರಕ್ರಿಯೆಯಿಂದ ಪಾರಾಗಿದ್ದಾರೆ.

 ಬಿಗ್​ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್

ಬಿಗ್​ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್

  • Share this:
ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ಗೆ​ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಈಗಾಗಲೇ ನಿಧಿ ಸುಬ್ಬಯ್ಯ ಹಾಗೂ ರಘು ಗೌಡ ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ. ಹೀಗಿರುವಾಗಲೇ ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳ ನಡುವೆ ಸ್ಪರ್ಧೆ ಹೆಚ್ಚಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಮೂರನೇ ಎಲಿಮಿನೇಶನ್​ ಸಮಯ ಬಂದಿದೆ. ಕಳೆದ ಎರಡು ವಾರಗಳಲ್ಲಿ ಯಾರೂ ಊಹಿಸಿರದಂತಹ ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ. ಇದರಿಂದಾಗಿ ಈ ವಾರದ ಎಲಿಮಿನೇಶನ್​ ಪ್ರಕ್ರಿಯೆ ವೀಕ್ಷಕರು ಸೇರಿದಂತೆ ಬಿಗ್ ಬಾಸ್​ ಸ್ಪರ್ಧಿಗಳಲ್ಲಿ ಕುತೂಹಕ್ಕೆ ಕಾರಣವಾಗಿದೆ. ಈ ವಾರದ ಆರಂಭದಲ್ಲೇ ನಾಮಿನೇಶನ್​ ಪ್ರಕ್ರಿಯೆ ನಡೆಯಲಿದೆ ಅಂತ ಸ್ಪರ್ಧಿಗಳು ಕಾಯುತ್ತಿದ್ದರು. ಆದರೆ ಆಗಲೇ ಬಿಗ್ ಬಾಸ್​ ಈ ಪ್ರಕ್ರಿಯೆಗೆ ಒಂದು ಟ್ವಿಸ್ಟ್ ಕೊಡುವ ಮೂಲಕ ಮನೆಯ ಸ್ಪರ್ಧಿಗಳಿಗೆ ಶಾಕ್​ ಕೊಟ್ಟಿದ್ದರು. 

ಬಿಗ್ ಬಾಸ್​ ಮನೆಯಲ್ಲಿ ಆಗಷ್ಟೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಕೆ.ಪಿ. ಅರವಿಂದ್​ ಅವರನ್ನು ಹಾಗೂ ಶಮಂತ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ನಾಮಿನೇಶನ್​ ಮಾಡಲಾಗಿತ್ತು. ಶಮಂತ್​ ಗೌಡ ಅವರನ್ನು ಸ್ನೇಹಿತ ರೌಘು ಗೌಡ ಎಲಿಮಿನೇಟ್​ ಆಗಿ ಮನೆಯಿಂದ ಹೊರ ಹೋಗುವಾಗ ವಿಶೇಷ ಅಧಿಕಾರದಿಂದ ಸೇ​ಫ್​ ಮಾಡಿದ್ದರು. ಹೀಗಾಗಿಯೇ ಶಮಂತ್ ಈ ವಾರದ ಎಲಿಮಿನೇಶನ್​ ಪ್ರಕ್ರಿಯೆಯಿಂದ ಉಳಿದುಕೊಂಡರು.


ಇನ್ನು ಮನೆಯಲ್ಲಿದ್ದ ಇತರೆ ಸ್ಪರ್ಧಿಗಳನ್ನು ಬಿಗ್ ಬಾಸ್​ ಖುದ್ದು ನಾಮಿನೇಟ್ ಮಾಡಿ, ಅದರಿಂದ ತಪ್ಪಿಸಿಕೊಳ್ಳಲು ದಂಡ ಯಾತ್ರೆ ಎಂಬ ಹೆಸರಿನ ಟಾಸ್ಕ್​ ಕೊಟ್ಟರು. ಇಡೀ ವಾರದಲ್ಲಿ ಕೊಡಲಾಗುವ ವಿಭಿನ್ನ ಟಾಸ್ಕ್​ಗಳಲ್ಲಿ ಎಲ್ಲರೂ ಭಾಗಿಯಾಬೇಕು. ಅದಕ್ಕೂ ಮೊದಲು ಟಾಸ್ಕ್​ ಎರಡು ಗುಂಪುಗಳ ನಡುವೆ ನಡೆಯಲಿದ್ದು, ಅದಕ್ಕಾಗಿ ಇರುವ ಸ್ಪರ್ಧಿಗಳಲ್ಲೇ ಎರಡು ತಂಡಗಳನ್ನಾಗಿ ವಿಂಗಡಿಸಲಾಯಿತು.

ಇದನ್ನೂ ಓದಿ: Bigg Boss Kannada Season 8: ಬಿಗ್ ಬಾಸ್​ ಮನೆಯಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಪ್ರಶಾಂತ್ ಸಂಬರಗಿ..!

ಅರವಿಂದ್​ ನೇತೃತ್ವದ ತಂಡಕ್ಕೆ ವಿಜಯ ಯಾತ್ರೆ ಎಂದು ಹೆಸರಿಡಲಾಗಿತ್ತು. ಅದೇ ಮಂಜು ಪಾವಗಡ ಅವರ ತಂಡಕ್ಕೆ ನಿಂಗೈತೆ ಇರು  ಅನ್ನೋ ಹೆಸರು ಕೊಡಲಾಯಿತು. ದಂಡ ಯಾತ್ರೆ ಟಾಸ್ಕ್​ನಲ್ಲಿ ವಿಭಿನ್ನ ರೀತಿಯ ಟಾಸ್ಕ್​ಗಳನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಈ ಟಾಸ್ಕ್​ಗಳಲ್ಲಿ ಪ್ರತಿ ಸಲ ಗೆದ್ದಾಗಲೂ ಆ ತಂಡಕ್ಕೆ ಒಂದು ದಂಡವನ್ನು ನೀಡಲಾಗುತ್ತಿತ್ತು. ಈ ರೀತಿ ಕೊಡಲಾಗಿದ್ದ ಹತ್ತು ವಿಭಿನ್ನ ಟಾಸ್ಕ್​ಗಳಲ್ಲಿ ನಿಂಗೈತೆ ಇರು  ಹೆಚ್ಚು ದಂಡಗಳನ್ನು ಪಡೆಯುವ ಮೂಲಕ ಜಯಗಳಿಸಿದೆ.

ಮಂಜು ಪಾವಗಡ, ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಶಮಂತ್​ ಹಾಗೂ ಚಕ್ರವರ್ತಿ ಚಂದ್ರಚೂಡ ಅವರು ಇದ್ದರು. ಈಗ ಈ ತಂಡದ ಎಲ್ಲ ಸ್ಪರ್ಧಿಗಳು ಈ ವಾರದ ನಾಮಿನೇಶನ್​ ಪ್ರಕ್ರಿಯೆಯಿಂದ ಪಾರಾಗಿದ್ದು, ಖುಷಿಯಲ್ಲಿದ್ದಾರೆ.
ಇನ್ನು ಅರವಿಂದ್​ ಕೆ ಪಿ ಅವರ ನೇತೃತ್ವದ ವಿಜಯ ಯಾತ್ರೆ ತಂಡದಲ್ಲಿದ್ದ ಪ್ರಸಾಂತ್​ ಸಂಬರಗಿ, ಪ್ರಿಯಾಂಕಾ ತಿಮ್ಮೇಶ್​, ಶುಭಾ ಪೂಂಜಾ ಹಾಗೂ ವೈಷ್ಣವಿ ಗೌಡ ನಾಮಿನೇಟ್ ಆಗಿದ್ದಾರೆ. ಈ ವಾರಂತ್ಯದಲ್ಲಿ ಇವರಲ್ಲಿ ಒಬ್ಬರು ಬಿಗ್ ಬಾಸ್​ ಮನೆಯಿಂದ ಹೊರ ಹೋಗಲಿದ್ದಾರೆ.

ಇದನ್ನೂ ಓದಿ: Bigg Boss Kannada season 8: ಎಲ್ಲರ ಮುಂದೆ ಬೈಯಬೇಡ ಅಂತ ಮಂಜುಗೆ ಎಚ್ಚರಿಕೆ ಕೊಟ್ಟ ದಿವ್ಯಾ ಸುರೇಶ್​..!

ಪ್ರಶಾಂತ್​ ಸಂಬರಗಿ ಸುದೀಪ್​ ಅವರ ಬಳಿ ಬುದ್ಧಿಮಾತು ಹೇಳಿಸಿಕೊಂಡಾಗಿನಿಂದ ಅವರ ವರ್ತನೆಯಲ್ಲಿ ತುಂಬಾ ಬದಲಾವಣೆ ಮಾಡಿಕೊಂಡಿದ್ದಾರೆ. ಇಡೀ ವಾರ ಮನೆಯ ಇತರೆ ಸದಸ್ಯರ ಜೊತೆ ನಗುತ್ತಾ...ತಮಾಷೆ ಮಾಡತ್ತಾ ಕಾಲ ಕಳೆದಿದ್ದಾರೆ. ಜೊತೆಗೆ ಬಿಗ್ ಬಾಸ್​ ಕೊಟ್ಟ ಟಾಸ್ಕ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಷ್ಟೆಲ್ಲ ಮಾಡಿದರೂ ಪ್ರಶಾಂತ್ ಈ ವಾರ ಎಲಿಮಿನೇಶ್​ನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ ಅನ್ನೋ ಕೊರಗು ಅವರನ್ನು ಕಾಡುತ್ತಿದೆ.
Published by:Anitha E
First published: