Bigg Boss Kannada 8: ಅರವಿಂದ್​-ವೈಷ್ಣವಿ ಬಿಟ್ಟು ಉಳಿದವರೆಲ್ಲ ಆದ್ರು ನಾಮಿನೇಟ್​ : ಹೊಸ ಟ್ವಿಸ್ಟ್​ಗಳೊಂದಿಗೆ ವಾರದ ಆರಂಭ..!

ನಾಮಿನೇಷನ್​ ಜೊತೆ ಕ್ಯಾಪ್ಟನ್ಸಿ ಟಾಸ್ಕ್​... ನಾಮಿನೇಟ್​ ಆದವರು ಮನೆಯಿಂದ ಹೊರ ಹೋಗದಂತೆ ಮಾಡಲು ಪ್ರಯತ್ನ ಪಡುವುದರೊಂದಿಗೆ ಮುಂದಿನ ವಾರ ಕ್ಯಾಪ್ಟನ್​ ಆಗಲು ಪ್ರಯತ್ನಿಸಬೇಕಾಗಿದೆ. ಉಳಿದಿರುವ ಮೂರು ವಾರದಲ್ಲಿ ಅಭ್ಯರ್ಥಿಗಳು ವೈಯಕ್ತಿಕ ಆಟವನ್ನು ಬಿಗಿಗೊಳಿಸಿಕೊಳ್ಳಬೇಕಾಗಿದೆ.

ಬಿಗ್ ಬಾಸ್​ ಮನೆಯಲ್ಲಿ ನಾಮಿನೇಷನ್​ ಪ್ರಕ್ರಿಯೆ

ಬಿಗ್ ಬಾಸ್​ ಮನೆಯಲ್ಲಿ ನಾಮಿನೇಷನ್​ ಪ್ರಕ್ರಿಯೆ

  • Share this:
ಬಿಗ್ ಬಾಸ್​ ಮನೆಯಲ್ಲಿ ಸೀಸನ್ 8ರ ಸ್ಪರ್ಧಿಗಳು 90ಕ್ಕೂ ಹೆಚ್ಚು ದಿನಗಳನ್ನು ಕಳೆದಿದ್ದಾರೆ. ತುಂಬಿದ ಮನೆಯಲ್ಲಿ ಈಗ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲರೂ ವೈಯಕ್ತಿಕ ಆಟವನ್ನು ಬಿಗಿಯಾಗಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಬಿಗ್ ಬಾಸ್​ ಮನೆಯಲ್ಲಿ ಸಾಕಷ್ಟು ತಿರುವುಗಳು ಎದುರಾಗುತ್ತಿವೆ. ಒಂದು ಕಡೆ ನಾಮಿನೇಷನ್​ ತೂಗುಗತ್ತಿ, ಮತ್ತೊಂದು ಕಡೆ ಕ್ಯಾಪ್ಟನ್ಸಿಗಾಗಿ ಹೋರಾಟ. ಇವೆರೆಡರ ನಡುವೆ ಸ್ಪರ್ಧಿಗಳು ಸಾಕಷ್ಟು ಒತ್ತಡದಲ್ಲಿದ್ದಾರೆ. ಕಳೆದ ವಾರವೇ ನಾಮಿನೇಷನ್​ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಮನೆಯವರು ಶಕ್ತಿ ಮೀರಿ ಪ್ರಯತ್ನಿಸಿದ್ದರು. ಸಾಲದಕ್ಕೆ ಈ  ವಾರ ಎಷ್ಟು ಒತ್ತಡದಿಂದ ಕೂಡಿತ್ತು ಎಂದು ಹೇಳಿಕೊಂಡಿದ್ದರು. ಈ ವಾರವೂ ಸಹ ಕಳೆದ ವಾರಕ್ಕಿಂತ ಕಡಿಮೆಯೇನಿಲ್ಲ.ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮನೆಯಲ್ಲಿ ಈ ವಾರ ಮೂರು ಮಂದಿಯನ್ನು ಬಿಟ್ಟು ಉಳಿದವರೆಲ್ಲ ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್​ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್​ ಕೊನೆಗೊಳ್ಳಲು ಉಳಿದಿರುವುದು ಮೂರೇ ವಾರ. ಈ ವಾರ ಮನೆಯಲ್ಲಿ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ. ಅರವಿಂದ್​, ವೈಷ್ಣವಿ ಹಾಗೂ ಮನೆಯ ಕ್ಯಾಪ್ಟನ್​ ದಿವ್ಯಾ ಸುರೇಶ್​ ಹೊರತು ಪಡಿಸಿ ಉಳಿದ ಸದಸ್ಯರೆಲ್ಲ ನಾಮಿನೇಟ್​ ಆಗಿದ್ದರು. ಎಂದಿನಂತೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಇಬ್ಬರೂ ಮಂಜು ಹಾಗೂ ಪ್ರಶಾಂತ್​ ಸಂಬರಗಿ ಅವರನ್ನು ನಾಮಿನೇಟ್​ ಮಾಡಿದರು.





ಎಲ್ಲರ ಜೊತೆ ಮಂಜು ಪಾವಗಡ ಅವರು ಸಹ ನಾಮಿನೇಟ್ ಆಗಿದ್ದರು. ಆದರೆ ಮನೆಯ ಕ್ಯಾಪ್ಟನ್​ ದಿವ್ಯಾ ಸುರೇಶ್ ಅವರಿಗೆ ಈ ವಾರ ಬಿಗ್ ಬಾಸ್​ ವಿಶೇಷ ಅಧಿಕಾರ ನೀಡಿ, ನಾಮಿನೇಟ್ ಆಗಿರುವವರಲ್ಲಿ ಒಬ್ಬರನ್ನು ಕಾಪಾಡಲು ತಿಳಿಸಿದ್ದರು. ಆದರೆ ಅದಕ್ಕೆ ಸೂಕ್ತ ಕಾರಣ ನೀಡಬೇಕಾಗಿಯೂ ಹೇಳಿದ್ದರು. ದಿವ್ಯಾ ಸುರೇಶ್​ ಅವರು ಮನೆಯಲ್ಲಿ ತಮ್ಮ ಆತ್ಮೀಯ ಸ್ನೇಹಿತನಾಗಿರುವ ಮಂಜು ಪಾವಗಡ ಅವರನ್ನು ಕಾಪಾಡಿದ್ದಾರೆ.

ಇದನ್ನೂ ಓದಿ: ಚಕ್ರವರ್ತಿಯನ್ನು ಮನೆಯಿಂದ ಹೊರ ಕಳುಹಿಸಿ: ಅಭಿಯಾನ ಆರಂಭಿಸಿದ ನೆಟ್ಟಿಗರು

ಇನ್ನು ಉಳಿದಂತೆ ಚಕ್ರವರ್ತಿ ಅವರು ನೇರವಾಗಿ ಈ ವಾರ ಪ್ರಿಯಾಂಕಾ ಅವರಿಂದ ನಾಮಿನೇಟ್​ ಆದರೆ, ಪ್ರಶಾಂತ್​ ಸಂಬರಗಿ, ಶಮಂತ್​, ದಿವ್ಯಾ ಉರುಡುಗ ಹಾಗೂ ಶುಭಾ ಪೂಂಜಾ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದಾರೆ. ದಿವ್ಯಾ ಉರುಡುಗ ಅವರು ಅರವಿಂದ್ ಅವರ ಮೇಲೆ ಅವಲಂಬಿತರಾಗಿದ್ದಾರೆ ಹಾಗೂ ವೀಕ್​ ಎಂಬ ಕಾರಣಕ್ಕೆ ಈ ವಾರ ನಾಮಿನೇಟ್​ ಆಗಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಹೊಸ ಟ್ವಿಸ್ಟ್​

ಈ ವಾರವೂ ಕ್ಯಾಪ್ಟನ್ಸಿಗಾಗಿ ಬಿಗ್​ ಬಾಸ್​ ನೀನಾ ನಾನಾ ಎಂಬ ಟಾಸ್ಕ್​ ಕೊಟ್ಟಿದ್ದಾರೆ. ಈ ವಾರ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗಿ ಹೆಚ್ಚಿನ ಅಂಕ ಪಡೆಯುವ ಅಭ್ಯರ್ಥಿಗಳಲ್ಲಿ ಐದು ಮಂದಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತಾರೆ. ಸೋಲುವ ಒಬ್ಬರು ಮುಂದಿನ ವಾರ ಮನೆಯಿಂದ ಹೊರ ಹೋಗಲು ನೇರವಾಗಿ ನಾಮಿನೇಟ್ ಆಗಲಿದ್ದಾರೆ. ಇದೇ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿರುವ ಟ್ವಿಸ್ಟ್​. ಈ ಸಲ ಯಾರು ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗುತ್ತಾರೆ ಹಾಗೂ ಯಾರು ಮನೆಯಿಂದ ಹೊರ ಹೋಗಲು ನಾಮಿನೇಟ್​ ಆಗುತ್ತಾರೆ ಅನ್ನೋದು ಮುಂದಿನ ಸಂಚಿಕೆಗಳಿಂದ ಗೊತ್ತಾಗಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Anitha E
First published: