• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bigg Boss Kannada Season 8: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ತುಂಟಾಟ: ಫಜಿತಿಗೆ ಸಿಲುಕಿದ್ದ ದಿವ್ಯಾ ಉರುಡುಗ..!

Bigg Boss Kannada Season 8: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ತುಂಟಾಟ: ಫಜಿತಿಗೆ ಸಿಲುಕಿದ್ದ ದಿವ್ಯಾ ಉರುಡುಗ..!

ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ

ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ

ಪ್ರಶಾಂತ್ ಸಂಬರಗಿ ಅವರು ಮಾಡಿರುವ ಆ ಒಂದು ಕೆಲಸದಿಂದ ಬಿಗ್ ಬಾಸ್​ ಮನೆಯ ಕ್ಯಾಪ್ಟನ್​ ದಿವ್ಯಾ ಉರುಡುಗ ಅವರು ತಲೆಕಡೆಸಿಕೊಂಡು ಒದ್ದಾಡಿದ್ದರು. ಅಷ್ಟಕ್ಕೂ ಪ್ರಶಾಂತ್ ಮಾಡಿದ್ದ ಆ ಕೆಲಸವಾದರು ಏನು ಅಂತೀರಾ..?

  • Share this:

ಬಿಗ್ ಬಾಸ್​ ಸೀಸನ್​ 8ರ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಬಿಗ್ ಬಾಸ್​ ಮನೆಯಲ್ಲಿ ಮೊದಲು ಇದ್ದ ತಮಾಷೆ ಹಾಗೂ ಖುಷಿಯ ವಾತಾವರಣ ಕ್ರಮೇಣ ಕಡಿಮೆಯಾಗುತ್ತಿದೆ. ಇನ್ನು ಬಿಗ್ ಬಾಸ್​ ಮನೆಯಲ್ಲಿ ಒಂದೇ ಒಂದು ವಾರ ಮಾತ್ರ ಕೂಗಾಡದೆ, ಜಗಳವಾಡದೆ ಇದ್ದ ಪ್ರಶಾಂತ್ ಅವರು ಈಗ ಮತ್ತೆ ಮನೆಯಲ್ಲಿ ಕೂಗಾಡ ಆರಂಭಿಸಿದ್ದಾರೆ. ಆದರೆ, ಅದರ ಜೊತೆಗೆ ಸಹ ಸ್ಪರ್ಧಿಗಳಿಗೆ ಸಖತ್ತಾಗಿಯೇ ಕಾಟ ಕೊಡುತ್ತಿದ್ದಾರೆ. ಅಂದರೆ ಸಹ ಸ್ಪರ್ಧಿಗಳ ಜೊತೆ ಪ್ರಶಾಂತ್​ ಸಂಬರಗಿ ಮಾಡುತ್ತಿರುವ ತುಂಟಾಟ ಕೊಂಚ ಹೆಚ್ಚಾಗುತ್ತಿದೆ. ಈ ಹಿಂದೆ ಶಮಂತ್​, ಚಕ್ರವರ್ತಿ ಅವರಿಗೆ ಮಾತ್ರ ಮೀಸಲಾಗಿದ್ದ ಈ ತುಂಟಾಟ ಈಗ ಬೇರೆ ಸ್ಪರ್ಧಿಗಳನ್ನೂ ತಲುಪುತ್ತಿದೆ. ಪ್ರಶಾಂತ್ ಅವರು ಜಗಳ ಆಡುವುದನ್ನು ನೋಡಿದ್ದ ಪ್ರೇಕ್ಷಕರಿಗೆ ಅವರ ಈ ತುಂಟತನದ ಮುಖ ಸಹ ಈಗ ಕಾಣಿಸುತ್ತಿದೆ.


ಹೌದು, ಪ್ರಶಾಂತ್ ಸಂಬರಗಿ ಅವರು ಮಾಡಿರುವ ಆ ಒಂದು ಕೆಲಸದಿಂದ ಬಿಗ್ ಬಾಸ್​ ಮನೆಯ ಕ್ಯಾಪ್ಟನ್​ ದಿವ್ಯಾ ಉರುಡುಗ ಅವರು ತಲೆಕಡೆಸಿಕೊಂಡು ಒದ್ದಾಡಿದ್ದರು. ಶುಕ್ರವಾರ ಪ್ರಶಾಂತ್ ಸಂಬರಗಿ ಅವರನ್ನು ಕಳಪೆ ಎಂದು ಪ್ರಕಟಿಸಿ, ಜೈಲಿಗೆ ಕಳುಹಿಸಲಾಗಿತ್ತು. ಪ್ರತಿ ಸಲ ಯಾರೇ ಕಳಪೆ ಪಟ್ಟ ಹೊತ್ತುಕೊಂಡರೂ ಅವರು ಒಂದು ರಾತರಿ ಜೈಲಿನಲ್ಲಿ ಕಳೆಯಲೇಬೇಕು. ಇನ್ನು ಜೈಲಿನ ಬೀಗವನ್ನು ಮನೆಯ ಕ್ಯಾಪ್ಟನ್​ ಇಟ್ಟುಕೊಳ್ಳಬೇಕು.
ದಿವ್ಯಾ ಉರುಡುಗ ಅವರು ಪ್ರಶಾಂತ್ ಸಂಬರಗಿ ಅವನರನ್ನು ಕಳಪೆ ಎಂದು ಘೋಷಿಸಿ, ಜೈಲಿಗೆ ಹಾಕಿ ಬೀಗ ಹಾಕುತ್ತಾರೆ. ನಂತರ ಆ ಬೀಗವನ್ನು ಅಲ್ಲೆ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಇಡುತ್ತಾರೆ. ಮರುದಿನ ಪ್ರಶಾಂತ್ ಅವರನ್ನು ಜೈಲಿನಿಂದ ರಿಲೀಸ್ ಮಾಡುವಂತೆ ಬಿಗ್ ಬಾಸ್​ ಪ್ರಕಟಿಸಿದಾಗ ದಿವ್ಯಾ ಉರುಡುಗ ಅವರಿಗೆ ಕೀ ಸಿಗುವುದಿಲ್ಲ.


ಇದನ್ನೂ ಓದಿ: ಚಕ್ರವರ್ತಿ ನಂತರ ಕಳಪೆ ಆಯ್ಕೆ ವಿಷಯದಲ್ಲಿ ತಕರಾರು ತೆಗೆದ ಪ್ರಶಾಂತ್ ಸಂಬರಗಿ..!


ದಿವ್ಯಾ ತಲೆಕಡೆಸಿಕೊಂಡು ಮನೆಯಲ್ಲ ಹುಡುಕಾಡುತ್ತಾರೆ. ಆದರೂ ಕೀ ಎಲ್ಲಿದೆ ಎಂದು ಯಾರಿಗೂ ತಿಳಿಯುವುದಿಲ್ಲ. ಮನೆಯಲ್ಲಿ ಕೆಲವರು ಮಂಜು ಪಾವಗಡ ಅವರ ಮೇಲೆ ಅನುಮಾನ ಪಡುತ್ತಾರೆ. ಬೆಳಗಾಗುತ್ತಿದ್ದಂತೆಯೇ, ಪ್ರಶಾಂತ್ ಸಂಬರಗಿ ದಿವ್ಯಾ ಅವರ ಮೇಲೆ ಕೂಡಾಗಡಲಾರಂಭಿಸುತ್ತಾರೆ. ನಾನು ತಡವಾಗಿ ಜೈಲಿಗೆ ಬಂದೆ ಅಂತ ಹೀಗೆ ಮಾಡಿ ಸೇಡು ತೀರಿಸಿಕೊಳ್ಳುತ್ತೀದ್ದಿಯಾ ಎಂದೆಲ್ಲ ಎಮೋಷನಲ್​ ಆಗಿ ಬ್ಲಾಕ್​ಮೇಲ್​ ಮಾಡುತ್ತಾರೆ.
ದಿವ್ಯಾ ಉರುಡುಗ ಈ ವಿಷಯವಾಗಿ ಕೀ ಎಲ್ಲಿ ಹೋಯಿತು ಎಂದು ತೆಲೆಗೆಡಿಸಿಕೊಂಡು ಕಣ್ಣೀರು ಸಹ ಇಡುತ್ತಾರೆ. ನಂತರ ಬಿಗ್ ಬಾಸ್​ ಬಳಿ ಹೋಗಿ ಮತ್ತೊಂದು ಕೀ ಕೊಡುವಂತೆ ಮನವಿ ಸಹ ಮಾಡುತ್ತಾರೆ. ಅರ್ಧ ಗಂಟೆ ಪ್ರಶಾಂತ್ ಅವರು ಆಟವಾಡಿಸಿ, ನಂತರ ತಾವೇ ಎತ್ತಿಟ್ಟುಕೊಂಡಿದ್ದ ಜೈಲಿನ ಕೀಯನ್ನು ಅರವಿಂದ್​ ಅವರಿಗೆ ಕೊಡುತ್ತಾರೆ.


ಇದನ್ನೂ ಓದಿ: Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!


ಜೈಲಿನಿಂದ ಹೊರ ಬಂದ ನಂತರ ಪ್ರಶಾಂತ್​, ದಿವ್ಯಾ ಉರುಡುಗ ಅವರನ್ನುಅಪ್ಪಿಕೊಂಡು ಸಾರಿ ಎನ್ನುತ್ತಾರೆ. ನಂತರ ಈ ವಿಷಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಗೆ ಬಂದಾಗ ಸುದೀಪ್​, ಪ್ರಶಾಂತ್ ಅವರನ್ನು ಹೀಗೆ ಮಾಡಿದ್ದೇಕೆ ಅಂತ ಕಾರಣ ಕೇಳುತ್ತಾರೆ. ಆಗ ಪ್ರಶಾಂತ್​, ಸರ್​ ಒಂದು ಕೀಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಅನ್ನೋದು ಕ್ಯಾಪ್ಟನ್ ಕರ್ತವ್ಯ. ಎರಡನೆಯದ್ದು ನನಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ್ದ ದಿವ್ಯಾ ಉರುಡುಗ ಅವರ ಮೇಲೆ ಕೊಂಚ ಸಿಟ್ಟಿತ್ತು. ಅದನ್ನು ತೀರಿಸಿಕೊಳ್ಳಲು ಹೀಗೆ ಮಾಡಿದೆ ಎನ್ನುತ್ತಾರೆ. ಒಟ್ಟಾರೆ ಪ್ರಶಾಂತ್​ ಅವರ ತುಂಟಾಟದಿಂದ ದಿವ್ಯಾ ಕೆಲ ಸಮಯ ಪರದಾಡಿದ್ದಂತೂ ಸತ್ಯ.

Published by:Anitha E
First published: