HOME » NEWS » Entertainment » BIGG BOSS KANNADA SEASON 8 HERE IS THE DETALIS OF KANNADA BIGG BOSS 8 CONTESTANTS LIST AND STARTING DATE VB

Bigg Boss Kannada: ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಹೋಗುವವರು ಇವರೇನಾ..?

ಈಗಾಗಲೇ ಬಿಗ್ ಬಾಸ್ ಸೀಸನ್ 8 ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ಕೂಡ ಸಿಕ್ಕಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿ ದೊಡ್ಡ ಮನೆಗೆ ಹೋಗುವವರ ಕೆಲವೊಂದು ಹೆಸರು ಬೇಜಾನ್ ಹರಿದಾಡುತ್ತಿದೆ.

news18-kannada
Updated:January 1, 2021, 12:50 PM IST
Bigg Boss Kannada: ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಹೋಗುವವರು ಇವರೇನಾ..?
Bigg Boss Kannada
  • Share this:
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟುಹೊತ್ತಿಗೆ 'ಬಿಗ್ ಬಾಸ್ ಕನ್ನಡ ಸೀಸನ್ 8' ಆರಂಭವಾಗಿ ಮುಕ್ತಾಯವಾಗುತ್ತಿತ್ತು. ಆದರೆ, ಕೊರೋನಾ ವೈರಸ್ ಅದೆಷ್ಟೊ ಯೋಜನೆಗಳಿಗೆ ಅಡ್ಡವಾಗಿ ನಿಂತಿತು. ಈಗ ಬಿಗ್ ಬಾಸ್ ಆರಂಭಿಸುವ ಕುರಿತು ದೊಡ್ಡ ಮಟ್ಟದಲ್ಲಿ ತಯಾರಿ ನಡೆಯುತ್ತಿದೆ. ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂಬ ಬಗ್ಗೆ ಕಲರ್ಸ್​ ಕನ್ನಡದ​ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಕಿಚ್ಚನ ಜೊತೆಗಿರುವ ಫೋಟೋ ಹಂಚಿಕೊಂಡ ಅವರು ಬಿಗ್​ಬಾಸ್​ ಕಾರ್ಯಕ್ರಮದ ಸಿದ್ಧತೆ ಕುರಿತಾಗಿ ಸಿಹಿ ಸಿದ್ದು ನೀಡಿದ್ದರು. ಅಂತೂ ಪ್ರೇಕ್ಷಕರಿಗೆ ಬಿಗ್​ಬಾಸ್​ ಸೀಸನ್​ 8 ನಡಸೆಯಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಅದರ ಜೊತೆಗೆ ಬಿಗ್​ ಬಾಸ್​​ ಮನೆಯೊಳಕ್ಕೆ ಯಾವ ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ ಎಂಬ ಕೂತೂಹಲ ಹುಟ್ಟಿಕೊಂಡಿದೆ.

ಈಗಾಗಲೇ ಬಿಗ್ ಬಾಸ್ ಸೀಸನ್ 8 ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ಕೂಡ ಸಿಕ್ಕಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿ ದೊಡ್ಡ ಮನೆಗೆ ಹೋಗುವವರ ಕೆಲವೊಂದು ಹೆಸರು ಬೇಜಾನ್ ಹರಿದಾಡುತ್ತಿದೆ.

Yuvarathnaa Release Date: ಪುನೀತ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಏ.1ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದಾನೆ ಯುವರತ್ನ

ಇತ್ತ ಬೆಂಗಳೂರಿನ ಬಿಡದಿ ಬಳಿಯ ಇನ್ನೋವೆಟಿವ್ ಫಿಲ್ಮ್‌ ಸಿಟಿಯಲ್ಲಿ ಬಿಗ್ ಬಾಸ್ ಮನೆಯನ್ನು ಹೊಸದಾಗಿ ಕಟ್ಟಲಾಗುತ್ತಿದ್ದು ಬಹುತೇಕ ಎಲ್ಲ ಕಾರ್ಯಗಳು ಪೂರ್ಣಗೊಂಡಿವೆಯಂತೆ. ಅಲ್ಲದೆ ಈ ಬಾರಿ ವಿಶೇಷವಾಗಿ ಮನೆಯನ್ನು ಸಿದ್ಧಗೊಳಿಸಲಾಗುತ್ತಿದೆ.

ಜೊತೆಗೆ ಕ್ಯಾಮರಾಗಳನ್ನು ಫಿಕ್ಸ್ ಮಾಡಿ ಆಗಿದೆ. ಮನೆಯೊಳಗೆ ಕೆಲವು ತಾಂತ್ರಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಜನವರಿ ಅಂತ್ಯದ ಹೊತ್ತಿಗೆ ಎಲ್ಲ ಕೆಲಸ ಪೂರ್ಣಗೊಂಡು ಬಿಗ್ ಬಾಸ್ ಮನೆ ಸಂಪೂರ್ಣ ಸಜ್ಜಾಗಲಿದೆ. ಬಿಗ್ ಬಾಸ್ ಸೀಸನ್ 8ರಲ್ಲಿ ಸೆಲೆಬ್ರಿಟಿಗಳು ಮಾತ್ರ ಇರ್ತಾರಾ ಅಥವಾ ಕಾಮನ್ ವ್ಯಕ್ತಿಗಳೂ ಇರ್ತಾರಾ, ಗೊತ್ತಿಲ್ಲ. ಆದರೆ, ಕೆಲವೊಂದು ಪರಿಚಿತ ಮುಖಗಳನ್ನೂ ನೋಡಬಹುದು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪಟ್ಟಿಯಲ್ಲಿ ಜೊತೆ ಜೊತೆಯಲಿ ನಟ ಆರ್ಯವರ್ಧನ್, ನ್ಯೂಸ್‌ ರೀಡರ್‌ ರಾಧಾ ಹಿರೇಗೌಡರ್, ದಿವ್ಯಾ, ಡ್ರೋನ್ ಪ್ರತಾಪ್, ನಿತ್ಯಾನಂದ, ಟಿಕ್ ಟಾಕ್‌ ಚೆಲುವೆ ಸೋನು ಗೌಡ, ಬಿಂದು ಗೌಡ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದವರ ಅನೇಕ ಹೆಸರುಗಳಿವೆ. ಆದರೆ ಇವ್ಯಾವೂ ಅಧಿಕೃತ ಹೆಸರುಗಳಲ್ಲ.

Happy New Year: ಹೊಸ ವರ್ಷಕ್ಕೆ ವಿಶ್​ ಮಾಡಿದ ಸ್ಯಾಂಡಲ್​ವುಡ್ ಮಂದಿ: ಕೋರೊನಾ ದೂರಾಗಲಿ ಎಂದ ದರ್ಶನ್​..!ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಬಿಗ್ ಬಾಸ್ ಶೋನ ಎಂಟನೇ ಅವತರಣಿಕೆಗೆ ಈಗಾಗಲೇ ಸ್ಪರ್ಧಿಗಳನ್ನು ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ಸಂಭಂದಪಟ್ಟ ಕೆಲಸಗಳನ್ನೂ ಈಗಾಗಲೇ ಶುರುವಿಟ್ಟುಕೊಂಡಿದ್ದರಂತೆ. ಒಟ್ಟಿನಲ್ಲಿ ಎಲ್ಲ ಅಂದುಕೊಂಡಂತೆ ಆದರೆ ಫೆಬ್ರವರಿ ಆರಂಭದ ವೇಳೆಗೆ ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡೋದಂತೂ ಕನ್ಫರ್ಮ್.
Published by: Vinay Bhat
First published: January 1, 2021, 12:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories