ಬಿಗ್ ಬಾಸ್ ರಿಯಾಲಿಟಿ ಶೋ ಹೊಸ ಇತಿಹಾಸ ಸೃಷ್ಟಿಸಿದೆ. ಕೊರೋನಾ ಎರಡನೇ ಅಲೆ ಕಾರಣದಿಂದ ಕಾರ್ಯಕ್ರಮ ಅರ್ಧಕ್ಕೆ ನಿಂತು ಮನೆಯಲ್ಲಿದ್ದ ಸ್ಪರ್ಧಿಗಳು ತಮ್ಮ ತಮ್ಮ ಮನೆಗಳಿಗೆ ತೆರೆಳಿದ್ದರು. ನಂತರ ಅರ್ಧಕ್ಕೆ ನಿಂತಿದ್ದ ಕಾರ್ಯಕ್ರಮವನ್ನು ಎಲ್ಲಿಗೆ ನಿಲ್ಲಿಸಲಾಗಿತ್ತೋ ಅಲ್ಲಿಂದಲೇ ಮತ್ತೆ ಆರಂಭಿಸಲಾಯಿತು. ಸೆಕೆಂಡ್ ಇನ್ನಿಂಗ್ಸ್ ಹೆಸರಿನಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ಯಾಂಡ್ ಫಿನಾಲೆಗೆ ಕ್ಷಣ ಗಣನೆ ಆರಂಭವಾಗಿದೆ. ರಿಯಾಲಿಟ ಶೋನಲ್ಲಿ ಫೈನಲ್ಸ್ಗೆ ತಲುಪಿರುವ ಐದು ಮಂದಿ ಸ್ಪರ್ಧಿಗಳ ಹೃದಯದ ಬಡಿತ ಹೆಚ್ಚಾಗಿದೆ. ಈ ಸಲದ ಬಿಗ್ ಬಾಸ್ನಲ್ಲಿ ಗೆದ್ದು ಟ್ರೋಪಿ ಕೈಯಲ್ಲಿ ಹಿಡಿಯೋರು ಯಾರು ಅನ್ನೋ ಕುತೂಹಲ ಸ್ಪರ್ಧಿಗಳ ಜೊತೆಗೆ ವೀಕ್ಷಕರಲ್ಲೂ ಮನೆ ಮಾಡಿದೆ. ಇನ್ನು ಕಾರ್ಯಕ್ರಮದ ಫಿನಾಲೆಗೆ ಅದ್ದೂರಿ ವೇದಿಕೆ ಸಹ ಸಜ್ಜಾಗಿದೆ. ಈಗಾಗಲೇ ಈ ಸೀಸನ್ನ ಫಿನಾಲೆಯ ಪ್ರೋಮೋಗಳನ್ನು ಬಿಡುಗಡೆ ಮಾಡಲಾಗಿದೆ.
ಎಲ್ಲ ಭಾವನೆಗಳಿಗೆ ಸಾಕ್ಷಿಯಾದ ಬಿಗ್ ಬಾಸ್ ಮನೆ ನಾಳೆ ಸಂಪೂರ್ಣ ಖಾಲಿಯಾಗಲಿದೆ. ಕೊನೆಯ ರಿಯಾಲಿಟಿ ಸಂಚಿಕೆ ನಿನ್ನೆ ಪ್ರಸಾರವಾಯಿತು. 20 ವ್ಯಕ್ತಿತ್ವಗಳು ಓಡಾಡಿದ ಮನೆಯಲ್ಲಿ ಈಗ ಉಳಿದಿರುವುದು ಕೇವಲ 5 ಐದು ಮಂದಿ.
View this post on Instagram
ಕಡೆಯ ರಿಯಾಲಿಟಿ ಸಂಚಿಕೆಯ ವಿಶೇಷತೆಗಳು
ಕಡೆಯ ರಿಯಾಲಿಟಿ ಸಂಚಿಕೆ ನಿನ್ನೆ ಪ್ರಸಾರವಾಯಿತು. ಈ ಸಂಚಿಕೆಯಲ್ಲೇ ಬಿಗ್ ಬಾಸ್ ಕೊಟ್ಟಿದ್ದ 2 ಲಕ್ಷ ಗೆಲ್ಲುವ ಟಾಸ್ಕ್ ಸಹ ಕೊನೆಗೊಂಡಿತು. ಈ ಟಾಸ್ಕ್ನಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಅರವಿಂದ್ ಕೆ ಪಿ 2 ಲಕ್ಷ ನಗದು ಬಹುಮಾನ ಪಡೆದಿದ್ದಾರೆ. ಫಿನಾಲೆಗೂ ಮುನ್ನವೇ ಅರವಿಂದ್ ಬಹುಮಾನ ಪಡೆದಿರುವುದು ಅವರ ಆತ್ಮವಿಶ್ವಾಸ ಹೆಚ್ಚಿಸಿದೆ ಎನ್ನಬಹುದು.
ಇದನ್ನೂ ಓದಿ: Priyanka Timmesh: ತುಂಡುಡುಗೆಯಲ್ಲಿ ಪ್ರಿಯಾಂಕಾ ತಿಮ್ಮೇಶ್: ಬಿಗ್ ಬಾಸ್ ಫಿನಾಲೆಯಲ್ಲಿ ಮಿಂಚಲಿರುವ ಪಿಂಕಿ..!
ಇನ್ನು ಫಿನಾಲೆಗೆ ಕಾಲಿಟ್ಟಿರುವ ಬಿಗ್ ಬಾಸ್ ಮನೆಯಲ್ಲಿರುವ ಐದು ಮಂದಿಗೆ ಸಖತ್ ಪ್ಯಾಂಪರ್ ಮಾಡಲಾಗಿದೆ. ಅವರಿಗೆ ಮನೆಯೊಳಗೆ ಸ್ಟೈಲಿಸ್ಟ್ ಹಾಗೂ ಬ್ಯೂಟಿಷಿಯನ್ಗಳನ್ನು ಕಳುಹಿಸಿ ಅವರಿಷ್ಟದ ಹೇರ್ ಸ್ಟೈಲ್ ಹಾಗೂ ಫೇಶಿಯಲ್ಗಳನ್ನು ಮಾಡಿಸಲಾಯಿತು.
View this post on Instagram
ಇದನ್ನೂ ಓದಿ: Divya Suresh: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ರೆಬೆಲ್ ಬೇಬಿ ದಿವ್ಯಾ ಸುರೇಶ್..!
ಇನ್ನು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣ ಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್ ಅವರ ಲುಕ್ ಸಹ ಈಗ ರಿವೀಲ್ ಆಗಿದೆ. ಇಂದಿನ ಸಂಚಿಕೆ ಸಂಜೆ 6ಕ್ಕೆ ಪ್ರಸಾರವಾಗಲಿದ್ದು, ಅದ್ದೂರಿ ವೇದಿಕೆ ಸಹ ಸಜ್ಜಾಗಿದೆ.ಈ ಕಾರ್ಯಕ್ರಮದಲ್ಲಿ ಈ ಹಿಂದಿನ ಸಂಚಿಕೆಗಳಲ್ಲಿದ್ದ ಕೆಲವು ಸೆಲೆಬ್ರಿಟಿ ಸ್ಪರ್ಧಿಗಳೂ ಇದರಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಎಲಿಮಿನೇಟ್ ಆಗಿರುವ ಎಲ್ಲ ಸ್ಪರ್ಧಿಗಳನ್ನೂ ನೋಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ