Bigg Boss Kannada 8: ನಿನ್ನೆ ಬಿಗ್ ಬಾಸ್​ ಫಿನಾಲೆ ಪ್ರಸಾರದಲ್ಲಾಗಿತ್ತು ಅಡಚಣೆ: ಕಾರಣ ಕೊಟ್ಟ ಕಿಚ್ಚ ಸುದೀಪ್​..!

Bigg Boss Kannada 8: ನಿನ್ನೆ ಫಿನಾಲೆ ಸಂಚಿಕೆಯ ಪ್ರಸಾರದ ನಡುವೆ ಬರುತ್ತಿದ್ದ ಹೊಸ ಜಾಹೀರಾತುಗಳನ್ನು ನೋಡಿ ಸಾಕಷ್ಟು ಮಂದಿ ಅಸಮಾನಗೊಂಡಿದ್ದರು. ಈ ಕುರಿತಾಗಿ ತುಂಬಾ ಜನ ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರವನ್ನೂ ಹೊರ ಹಾಕಿದ್ದಾರೆ. ನಿನ್ನೆ ಕಾರ್ಯಕ್ರಮದಲ್ಲಾಗಿದ್ದ ಅಡಚಣೆಗೆ ಕಾರಣ ಏನೆಂದು ಸುದೀಪ್​ ತಿಳಿಸಿದ್ದಾರೆ.

ಬಿಗ್ ಬಾಸ್​ ಸೀಸನ್ 8ರ ಫಿನಾಲೆಯಲ್ಲಿ ಸುದೀಪ್​

ಬಿಗ್ ಬಾಸ್​ ಸೀಸನ್ 8ರ ಫಿನಾಲೆಯಲ್ಲಿ ಸುದೀಪ್​

  • Share this:
ಬಿಗ್ ಬಾಸ್​ ಕನ್ನಡ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆಯ (Bigg Boss Kannada Season 8 Finale) ಪ್ರಸಾರ ಬದಲಾದ ಸಮಯದಲ್ಲಿ ಆಗಲಿದೆ ಎಂದು ಮುಂಚಿತವಾಗಿಯೇ ಪ್ರಕಟಿಸಲಾಗಿತ್ತು. ಪ್ರತಿ ವಾರಾಂತ್ಯದ ಸಂಚಿಕೆಗಳು ರಾತ್ರಿ 9ಕ್ಕೆ ಪ್ರಸಾರವಾಗುತ್ತಿತ್ತು. ಆದರೆ ಫಿನಾಲೆ ಪ್ರಸಾರವನ್ನು ಸಂಜೆ 6ಕ್ಕೆ ಆರಂಭಿಸುವುದಾಗಿ ಬಿಗ್ ಬಾಸ್​ ತಂಡ ಹೇಳಿಕೊಂಡಿತ್ತು. ಬಿಗ್ ಬಾಸ್​ ವೀಕ್ಷಕರು ನಿನ್ನೆ ಸಂಜೆ ಇನ್ನೇನು ಫಿನಾಲೆ ಕಾರ್ಯಕ್ರಮ ಆರಂಭವಾಯ್ತು ಅಂತ ಕಾಯುತ್ತಿದ್ದರು. ಈಗ ಆಯ್ತು, ಆಗ ಆಯ್ತು ಅಂತ ಟಿವಿ ಮುಂದೆ ಕುಳಿತು ಕಾಯುತ್ತಿದ್ದರು. ಆದರೆ 6ಕ್ಕೆ ಆರಂಭವಾಗಬೇಕಿದ್ದ ಸಂಚಿಕೆ ಕಡೆಗೆ 6.30ಕ್ಕೆ ಆಯಿತು. ಅಂತೆಯೇ ರಾತ್ರಿ 11ಕ್ಕೆ ಮುಗಿಯಬೇಕಿದ್ದ ಸಂಚಿಕೆ 12ರವರೆಗೆ ಹೋಯಿತು. ಅಲ್ಲದೆ ಬಿಗ್ ಬಾಸ್​ ಫಿನಾಲೆ ಸಂಚಿಕೆ ಪ್ರಸಾರವಾಗುತ್ತಿದ್ದಾಗ ಬರುತ್ತಿದ್ದ ಜಾಹೀರಾತುಗಳು ಯಾವ ಕೊನೆಗೊಳ್ಳಲಿದೆ ಅನ್ನೋದು ಸಹ ತಿಳಿಯುತ್ತಿರಲಿಲ್ಲ. ಎಷ್ಟೋ ಜನರಿಗೆ ಇಂದಿನ ಸಂಚಿಕೆ ಮುಕ್ತಾಯವಾಯ್ತಾ ಅಥವಾ ಮುಂದುವರೆಯಲಿದಾ  ಅನ್ನೋದು ತಿಳಿಯದೆ ಹೋಗಿತ್ತು. 

ನಿನ್ನೆ ಫಿನಾಲೆ ಸಂಚಿಕೆಯ ಪ್ರಸಾರದ ನಡುವೆ ಬರುತ್ತಿದ್ದ ಹೊಸ ಜಾಹೀರಾತುಗಳನ್ನು ನೋಡಿ ಸಾಕಷ್ಟು ಮಂದಿ ಅಸಮಾನಗೊಂಡಿದ್ದರು. ಈ ಕುರಿತಾಗಿ ತುಂಬಾ ಜನ ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರವನ್ನೂ ಹೊರ ಹಾಕಿದ್ದಾರೆ. ಇದು ಬಿಗ್ ಬಾಸ್​ ಫಿನಾಲೆಯೋ ಅಥವಾ ಹೊಸ ಕಾರ್ಯಕ್ರಮಗಳ ಪ್ರಚಾರ ಮಾಡುವ ಸಂಚಿಕೆಯೋ ಎಂದೆಲ್ಲ ಬೇಸರ ವ್ಯಕ್ತಪಡಿಸಿದ್ದಾರೆ. ವೀಕ್ಷಕರು ನಿನ್ನೆಯ ಸಂಚಿಕೆಯಲ್ಲಿ ಎದುರಿಸಿದ ಸಮಸ್ಯೆಗೆ ಕಾರಣ ಏನೆಂದು ಸುದೀಪ್ ಅವರು ಇವತ್ತು ಹೇಳಿಕೊಂಡಿದ್ದಾರೆ.


ಬಿಗ್ ಬಾಸ್ ಫಿನಾಲೆಯ ಶೂಟಿಂಗ್​ ಅನ್ನು ಮೂರು ನಾಲ್ಕು ಗಂಟೆ ಮೊದಲೇ ಮಾಡಲಾಗಿರುತ್ತದೆ. ನಂತರ ಎಡಿಟ್ ಮಾಡಿ ಪ್ರಸಾರ ಮಾಡಲಾಗುತ್ತದೆ. ಆದರೆ ಶನಿವಾರ ಬಿಗ್ ಬಾಸ್​ ಶೂಟಿಂಗ್ ಸೆಟ್​ನಲ್ಲಿ ಇಂಟರ್​ನೆಟ್​ ಸಮಸ್ಯೆಯಿಂದಾಗಿ ಇಷ್ಟೆಲ್ಲ ಸಮಸ್ಯೆ ಆಗಿತ್ತು. ಶೂಟ್​ ಮಾಡಲಾಗಿದ್ದ ಎಪಿಸೋಡ್​ಗಳನ್ನು ನೋಯ್ಡಾಗೆ ಕಳುಹಿಸಲಾಗಿತ್ತದೆ. ನಂತರ ಅದು ವಾಪಸ್​ ಬಂದ ಮೇಲೂ ಸುಮಾರು ಕೆಲಸಗಳಿರುತ್ತವೆ. ಆದರೆ ತಾಂತ್ರಿಕ ಸಮಸ್ಯೆಗಳಿಂದ ನಿನ್ನೆ ಜಾಹೀರಾತುಗಳನ್ನು ಹಾಕಿಕೊಂಡು ಹೇಗೋಕಾರ್ಯಕ್ರಮವನ್ನು ಪ್ರಸಾರ ಮಾಡಿದೆವು. ಲಾಕ್​ಡೌನ್​ನಿಂದಾಗಿ ಅರ್ಧಕ್ಕೆ ನಿಂತಿದ್ದ ಕಾರ್ಯಕ್ರಮದ ಫಿನಾಲೆ ನಡೆಯುತ್ತೆ, ವೇದಿಕೆಯ ಮೇಲೆ ನಾವು ಇರುತ್ತೇವೆ ಎಂದೂ ಊಹೆಯೂ ಮಾಡಿರಲಿಲ್ಲ ಎಂದು ಸುದೀಪ್​ ಹೇಳಿದ್ದಾರೆ.

ಇದನ್ನೂ ಓದಿ: Shwetha Srivatsav: ಫೋಟೋಶೂಟ್​ನಲ್ಲಿ ಮಗಳ ಜೊತೆ ಮಿಂಚಿದ ಶ್ವೇತಾ ಶ್ರೀವಾತ್ಸವ

ಬಿಗ್ ಬಾಸ್​ ಕನ್ನಡ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆ... 17 ವಾರಗಳ ಕಾಲ ನಡೆದ 72 ದಿನಗಳ ಮೊದಲ ಇನ್ನಿಂಗ್ಸ್​ ಹಾಗೂ 48 ದಿನಗಳ ಸೆಕೆಂಡ್​​ ಇನ್ನಿಂಗ್ಸ್​ ಜರ್ನಿ, ಒಟ್ಟಾರೆ 120 ದಿನಗಳ ಭರ್ಜರಿ ಪ್ರಯಾಣ ಇಂದು ಕೊನೆಯಾಗಲಿದೆ. ಶನಿವಾರವೇ ಗ್ರ್ಯಾಂಡ್​ ಫಿನಾಲೆಗೆ ಚಾಲನೆ ಸಿಕ್ಕಿತ್ತು. ಬೆಂಗಳೂರಿನ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ನಿರ್ಮಾಣವಾಗಿರುವ ಅದ್ದೂರಿ ವೇದಿಕೆಯಲ್ಲಿ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆ ನಡೆಯುತ್ತಿದೆ. ನಿನ್ನೆ ರಾತ್ರಿಯ ಫಿನಾಲೆಯಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇದ್ದ ಟಾಪ್​ 5 ಸ್ಪರ್ಧಿಗಳಲ್ಲಿ ಪ್ರಶಾಂತ್ ಸಂಬರಗಿ, ಅರವಿಂದ್​ ಕೆ.ಪಿ, ಮಂಜು ಪಾವಗಡ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಗೌಡ ಇದ್ದರು. ಇವರಲ್ಲಿ ಪ್ರಶಾಂತ್​ ಸಂಬರಗಿ ಅವರು ಐದನೇ ಸ್ಥಾನ ಪಡೆದು ಹೊರ ಬಿದ್ದರೆ, ನಂತರ ನಾಲ್ಕನೇ ಎಲಿಮಿನೇಷನ್​ ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿತ್ತು.

ಇದನ್ನೂ ಓದಿ: Bigg Boss Kannada 8 Finale: ನಿನ್ನೆ ಗೈರಾಗಿದ್ದ ಧನುಶ್ರೀ -ಚಂದ್ರಕಲಾ ಇಂದು ಹಾಜರು

ಹೌದು, ವೈಷ್ಣವಿ ಗೌಡ ಅವರು ಪ್ರಶಾಂತ್ ನಂತರ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದರು. ಈ ಎವಿಕ್ಷನ್​ ನಿಜಕ್ಕೂ ಪ್ರೇಕ್ಷಕರು ಹಾಗೂ ಉಳಿದಿರುವ ಸ್ಪರ್ಧಿಗಳಿಗೆ ಶಾಕ್​ ಕೊಟ್ಟಿತ್ತು. ಊಹಿಸಲಾಗದ ಈ ಎಲಿಮಿನೇಷನ್​ನಿಂದಾಗಿ ಟಾಪ್​ 3ರಲ್ಲಿ ಇರುವ ಸ್ಪರ್ಧಿಗಳು ಆತಂಕದಲ್ಲಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ಯಾರು ಟ್ರೋಪಿ ಹಿಡಿಯಲಿದ್ದಾರೆ ಅನ್ನೋದು ಬಹಿರಂಗವಾಗಲಿದೆ.
Published by:Anitha E
First published: