Bigg Boss Kannada Season 8 Finale: ಬಿಗ್ ಬಾಸ್​ ಸೀಸನ್​ 8ರ ಫಿನಾಲೆ: ವೇದಿಕೆಯಿಂದ ಹೊರ ಬಂದ ಪ್ರಶಾಂತ್ ಸಂಬರಗಿ

ಐದು ಮಂದಿಯಲ್ಲಿ ಮೊದಲಿಗೆ ದಿವ್ಯಾ ಉರುಡುಗ ಅವರು ಮನೆಯಿಂದ ಹೊರ ಬರಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಐದನೇ ಸ್ಥಾನ ಪಡೆಯುವ ಮೂಲಕ ಪ್ರಶಾಂತ್ ಸಂಬರಗಿ ಅವರು ಮೊದಲು ಮನೆಯಿಂದ ಹೊರ ಬಂದಿದ್ದಾರೆ. ಜೊತೆಗೆ 2.5 ಲಕ್ಷ ಬಹುಮಾನ ಸಹ ಗೆದ್ದಿದ್ದಾರೆ.

ಪ್ರಶಾಂತ್​ ಸಂಬರಗಿ

ಪ್ರಶಾಂತ್​ ಸಂಬರಗಿ

  • Share this:
ಬಿಗ್​ ಬಾಸ್​ ಕನ್ನಡ ಸೀಸನ್​ 8ರ 120 ದಿನಗಳ ಜರ್ನಿ ಕೊನೆಗೊಳ್ಳುವ ನಿಲ್ದಾಣ ಬಂದಿದೆ. ಸುದೀರ್ಘವಾದ ಪಯಣ ನಾಳೆ ಸಂಜೆ ಅಂತ್ಯಗೊಳ್ಳಲಿದೆ. ಬೆಂಗಳೂರಿನ ಬಿಡದಿ ಬಳಿ ಇರುವ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ನಿರ್ಮಾಣವಾಗಿರವ ಅದ್ದೂರಿ ವೇದಿಕೆಯಲ್ಲಿ ಬಿಗ್ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆ ಕಾರ್ಯಕ್ರಮದ ಚಿತ್ರೀಕರಣ ಮಾಡಲಾಗಿದೆ. ಫಿನಾಲೆ ಪ್ರಸಾರ ಈಗಾಗಲೇ ಆರಂಭವಾಗಿದ್ದು, ನಾಳೆ ಅಂದರೆ ಭಾನುವಾರ ಯಾರು ವಿನ್ನರ್ ಆಗಲಿದ್ದಾರೆ ಅನ್ನೋದು ಬಹಿರಂಗವಾಗಲಿದೆ. ಸಂಜೆ 6ರಿಂದ ಆರಂಭವಾಗುವ ಕಾರ್ಯಕ್ರಮ ರಾತ್ರಿ 11ರವರೆಗೆ ನಡೆಯಲಿದೆ. ಮೊದಲ ದಿನವಾದ ಇಂದು ಇಬ್ಬರು ಸ್ಪರ್ಧಿಗಳು ಆಟದಿಂದ ಹೊರ ಬಂದಿದ್ದಾರೆ. ಸದ್ಯ ಈ ಸೀಸನ್​ನ ಟಾಪ್​ 5ನಲ್ಲಿ ವೈಷ್ಣವಿ, ಮಂಜು ಪಾವಗಡ, ದಿವ್ಯಾ ಉರುಡುಗ, ಅರವಿಂದ್ ಹಾಗೂ ಪ್ರಶಾಂತ್​ ಸಂಬರಗಿ ಇದ್ದಾರೆ. ಇದರಲ್ಲಿ ಈಗ 5 ಹಾಗೂ 4ನೇ ಸ್ಥಾನದಲ್ಲಿರುವ ಇಬ್ಬರು ಸ್ಪರ್ಧಿಗಳು ಆಟದಿಂದ ಹೊರ ಬಂದಿದ್ದಾರೆ.

ಇರುವ ಐದು ಮಂದಿಯಲ್ಲಿ ಮೊದಲಿಗೆ ದಿವ್ಯಾ ಉರುಡುಗ ಅವರು ಮನೆಯಿಂದ ಹೊರ ಬರಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಐದನೇ ಸ್ಥಾನ ಪಡೆಯುವ ಮೂಲಕ ಪ್ರಶಾಂತ್ ಸಂಬರಗಿ ಅವರು ಮೊದಲು ಮನೆಯಿಂದ ಹೊರ ಬಂದಿದ್ದಾರೆ.






ಐದನೇ ಸ್ಥಾನಕ್ಕೆ 6 ಲಕ್ಷದ 69 ಸಾವಿರದ 20 ಮತಗಳು ಸಿಕ್ಕಿದೆ. ಇದು ಯಾವ ರೀತಿಯ ನೋಡಿದರೂ ಸಿಕ್ಕಿರುವ ಕಡಿಮೆ ಮತಗಳಲ್ಲ ಎಂದು ಸುದೀಪ್​ ಹೇಳಿದ್ದಾರೆ. ಐದನೇ ಸ್ಥಾನ ಪಡೆದ ಪ್ರಶಾಂತ್ ಸಂಬರಗಿ ಅವರು 2.5 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ.






ಐದೂ ಮಂದಿಗೆ ಸಿಗಲಿದೆ ಬಹುಮಾನ

ಬಿಗ್​ ಬಾಸ್​ ಫಿನಾಲೆಗೆ ಬಂದಿರುವ ವೈಷ್ಣವಿ, ಪ್ರಶಾಂತ್ ಸಂಬರಗಿ, ಅರವಿಂದ್​, ದಿವ್ಯಾ ಉರುಡುಗ ಹಾಗೂ ಮಂಜು ಪಾವಗಡ ಅವರಿಗೆ ಈ ಸಲ ಬಹುಮಾನ ಸಿಗಲಿದೆ. ಪ್ರತಿ ಸಲ ಬಿಗ್ ಬಾಸ್​ನಲ್ಲಿ ಗೆದ್ದವರಿಗೆ ಹಾಗೂ ರನ್ನರ್​ ಅಪ್​ಗೆ ಮಾತ್ರ ಬಹುಮಾನ ಸಿಗುತ್ತಿತ್ತು. ಆದರೆ, ಈ ಸಲ ಬಿಗ್ ಬಾಸ್​ ಸೀಸನ್​ 8ರಲ್ಲಿ ಫಿನಾಲೆಗೆ ಬಂದಿರುವ ಐದೂ ಮಂದಿಗೆ ಖುಷಿಯ ಸುದ್ದಿಯೊಂದನ್ನು ಸುದೀಪ್​ ನೀಡಿದ್ದಾರೆ.

ಗೆದ್ದವರಿಗೆ 53 ಲಕ್ಷ, ಎರಡನೇ ಸ್ಥಾನದಲ್ಲಿರುವವರಿಗೆ 11 ಲಕ್ಷ, ಮೂರನೆಯವರಿಗೆ 6 ಲಕ್ಷ, ನಾಲ್ಕನೇ ಸ್ಥಾನಕ್ಕೆ 3.5 ಲಕ್ಷ ಹಾಗೂ 5ನೇ ಸ್ಥಾನಕ್ಕೆ 2.5 ಲಕ್ಷ ಬಹುಮಾನ ಸಿಗಲಿದೆ ಎಂದು ಸುದೀಪ್ ಪ್ರಕಟಿಸಿದ್ದಾರೆ. ಹೀಗಾಗಿ ಸೋತವರು ಬೇಸರದಿಂದ ಖಾಲಿ ಕೈಯಲ್ಲಿ ಹೊರ ಹೋಗುವುದಿಲ್ಲ.

ಇದನ್ನೂ ಓದಿ: Kichcha Sudeep- Mahesh Babu: ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಕಿಚ್ಚ ಸುದೀಪ್​-ಮಹೇಶ್​ ಬಾಬು

ಇನ್ನು ಬಿಗ್ ಬಾಸ್​ ಮನೆಯಲ್ಲಿರುವ ಮಂದಿಗೆ ರಿಯಾಲಿಟಿ ಟಿವಿ ಮೂಲಕ ಹೊರ ಜಗತ್ತಿನಲ್ಲಿ ಆದ ಬೆಳವಣಿಗೆಗಳ ಬಗ್ಗೆ ತಿಳಿಸಲಾಯಿತು. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ಲಕ್ಷಣದ ಪ್ರಚಾರದ ಜೊತೆಗೆ ಸ್ಪರ್ಧಿಗಳಿಗೆ ಸುದ್ದಿ ಮುಟ್ಟಿಸುವ ಕೆಲಸ ಮಾಡಲಾಯಿತು. ಮೊದಲಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾದ ಸುದ್ದಿ ಕೊಡಲಾಯಿತು. ನಂತರ ಪಿಯುಸಿ ಫಲಿತಾಂಶ, ಮಾಜಿ ಸಂಸದ ಜಿ ಮಾದೇಗೌಡ ಅವರ ನಿಧನ ಹಾಗೂ ಹಿರಿಯ ಜಯಂತಿ ಅಗಲಿಕೆಯ ಬಗ್ಗೆ ತಿಳಿಸಲಾಯಿತು.

ಎದೆ ಬಡಿತ ಹೆಚ್ಚಿಸಿದ್ದ ಕೊನೆಯ ಎಲಿಮಿನೇಷನ್​

ಬಿಗ್ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್ ಅವರು ಎಲಿಮಿನೇಟ್ ಆಗಿ ಹೊರ ಬಂದ ಕ್ಷಣವನ್ನು ಸುದೀಪ್ ಅವರು ಇಂದಿನ ಸಂಚಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ. ಇದು ಈ ಹಿಂದೆಂದೂ ನಡೆಯದ ಎಲಿಮಿನೇಷನ್​ ಎಂದು ಸುದೀಪ್ ಹೇಳಿದ್ದಾರೆ. ಅದನ್ನು ಟಿವಿಯಲ್ಲಿ ನೋಡುವಾಗ ನನ್ನ ಮನಸ್ಸಿನಲ್ಲೇ ಒಂದು ರೀತಿಯ ಆತಂಕ ಮನೆ ಮಾಡಿತ್ತು ಎಂದಿದ್ದಾರೆ.

ಇಂತಹ ಎಲಿಮಿನೇಷನ್​ ಪ್ಲಾನ್ ಮಾಡಿದ ತಂಡಕ್ಕೆ ನನ್ನ ಧನ್ಯವಾದ ಎಂದ ಸುದೀಪ್ ಅವರು ಈ ಎಲಿಮಿನೇಷನ್​ ಬಗ್ಗೆ ಮೊದಲು ಮಂಜು ಅವರ ಅನುಭವ ಕೇಳುತ್ತಾರೆ. ಮಂಜು ಅವರು ಮಾತನಾಡಲಾರಂಭಿಸುತ್ತಿದ್ದಂತೆಯೇ ಆ ಎಲಿಮಿನೇಷನ್ ನಿಜಕ್ಕೂ ಗಲ್ಲಿಗೇರಿಸಿದ ಅನುಭವ ನೀಡಿತ್ತು. ಆತ್ಮೀಯವಾಗಿದ್ದ ದಿವ್ಯಾ ಸುರೇಶ್​ ಮನೆಯಿಂದ ಹೊರ ಹೋದಾಗ ಮನಸ್ಸಿಗೆ ನೋವಾಗಿತ್ತು. ಒಂದು ಕೋಣೆಯಲ್ಲಿ ಹೋಗಿ ಅವರು ಮತ್ತೆ ಬೈ ಹೇಳಲೂ ಬರುವುದಿಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: BBK8 Finale: ದಿವ್ಯಾ ಸುರೇಶ್​ ಎಲಿಮಿನೇಷನ್​: ಗಲ್ಲಿಗೇರಿಸಿದ ಅನುಭವ ನೀಡಿತ್ತು ಎಂದ ಮಂಜು ಪಾವಗಡ..!

ಇದೇ ಎಲಿಮಿನೇಷನ್​ ಬಗ್ಗೆ ದಿವ್ಯಾ ಸುರೇಶ್​ ಅವರೂ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ದಿವ್ಯಾ ಸುರೇಶ್​ ಎಲಿಮಿನೇಷನ್​ ಎಂದ ಕೂಡಲೇ ಅಬ್ಬಾ ಅದು ಗಲ್ಲಿಗೇರಿಸಿದಂತಾಗಿತ್ತು. ಕೈಗೆ ಬಂದ ತುತ್ತನ್ನು ಯಾರೋ ಕಸಿದಂತೆ ಅನುಭವ ಆಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Published by:Anitha E
First published: