ಬಿಗ್ ಬಾಸ್ ಮನೆಯಲ್ಲಿ ಒಟ್ಟಾರೆ 120 ದಿನ ಕಳೆದ ಸ್ಪರ್ಧಿಗಳ ಪಯಣ ಈಗ ಅಂತಿಮ ಘಟ್ಟ ತಲುಪಿದೆ. ಕೊರೋನಾ ಎರಡನೇ ಅಲೆಯಿಂದಾಗಿ ರದ್ದಾಗಿದ್ದ ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಆರಂಭವಾದ ಮೇಲೆ ಮತ್ತೆ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 43 ದಿನಗಳನ್ನು ಕಳೆದು ಬ್ರೇಕ್ ಪಡೆದ ನಂತರ ಮನೆಗೆ ಕಾಲಿಟ್ಟವರಲ್ಲಿ ಈಗ ಕೇವಲ ಐದು ಮಂದಿ ಉಳಿದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗ ಗ್ರ್ಯಾಂಡ್ ಫಿನಾಲೆ ಆರಂಭವಾಗಿದೆ. ಕನ್ನಡದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಡೆದ ಕಾರ್ಯಕ್ರಮ ಎನ್ನಬಹುದಾದ ಬಿಗ್ ಬಾಸ್ ಮನೆಯ ಜರ್ನಿ ಈಗ ಸ್ಪರ್ಧಿಗಳ ಪಾಲಿಗೆ ಅಂತ್ಯಗೊಳ್ಳಲಿದೆ. ಏಳು-ಬೀಳು, ಜಗಳ -ಸ್ನೇಹ, ಪ್ರೀತಿ-ಮುನಿಸುಹೀಗೆ ಎಲ್ಲ ರೀತಿಯ ಭಾವಗಳಿಗೆ ಸಾಕ್ಷಿಯಾಗಿದೆ ಈ ಬಿಗ್ ಬಾಸ್ ಮನೆ. ಇಂತಹ ಮನೆಯಿಂದ ಎಲ್ಲರೂ ತಮ್ಮ ತಮ್ಮ ಮನೆಗಳತ್ತ ತೆರಳುವ ತಯಾರಿಯಲ್ಲಿದ್ದಾರೆ. ಇದರ ನಡುವೆ ಇಂದು ಯಾರು ಎಲಿಮಿನೇಟ್ ಆಗಲಿದ್ದಾರೆ ಅನ್ನೋ ಆತಂಕ ಸಹ ಇದೆ.
ಇಂದು ಸಂಜೆ 6.30ರಿಂದ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಆರಂಭವಾಗಿದೆ. ಇದರಲ್ಲಿ ಮನೆಯಿಂದ ಹೊರ ಹೋದ ಸ್ಪರ್ಧಿಗಳೆಲ್ಲ ಬಂದಿದ್ದಾರೆ. ಇನ್ನು ಕೊನೆಯ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಎಲಿಮಿನೇಟ್ ಆಗಿದ್ದ ದಿವ್ಯಾ ಸುರೇಶ್ ಅವರು ಕೊನೆಗೂ ಕಿಚ್ಚನ ಜೊತೆ ವೇದಿಕೆ ಹಂಚಿಕೊಂಡರು. ಎಲಿಮಿನೇಟ್ ಆದಾಗ ಮನಸ್ಸಿನಲ್ಲಾದ ತಳಮಳವನ್ನು ಹಂಚಿಕೊಂಡಿದ್ದಾರೆ. ಕೈಗೆ ಬಂದ ತುತ್ತು ಯಾರೋ ಕಸಿದು ಕೊಂಡ ಅನುಭವಾಯಿತು ಎಂದಿದ್ದಾರೆ. ಜೊತೆಗೆ ತಮ್ಮ ಜರ್ನಿಯ ವಿಟಿ ಸಹ ನೋಡಿದ್ದಾರೆ.
View this post on Instagram
ಬಿಗ್ ಬಾಸ್ ಫಿನಾಲೆಗೆ ಬಂದಿರುವ ವೈಷ್ಣವಿ, ಪ್ರಶಾಂತ್ ಸಂಬರಗಿ, ಅರವಿಂದ್, ದಿವ್ಯಾ ಉರುಡುಗ ಹಾಗೂ ಮಂಜು ಪಾವಗಡ ಅವರಿಗೆ ಈ ಸಲ ಬಹುಮಾನ ಸಿಗಲಿದೆ. ಪ್ರತಿ ಸಲ ಬಿಗ್ ಬಾಸ್ನಲ್ಲಿ ಗೆದ್ದವರಿಗೆ ಹಾಗೂ ರನ್ನರ್ ಅಪ್ಗೆ ಮಾತ್ರ ಬಹುಮಾನ ಸಿಗುತ್ತಿತ್ತು. ಆದರೆ, ಈ ಸಲ ಬಿಗ್ ಬಾಸ್ ಸೀಸನ್ 8ರಲ್ಲಿ ಫಿನಾಲೆಗೆ ಬಂದಿರುವ ಐದೂ ಮಂದಿಗೆ ಖುಷಿಯ ಸುದ್ದಿಯೊಂದನ್ನು ಸುದೀಪ್ ನೀಡಿದ್ದಾರೆ.
ಇದನ್ನೂ ಓದಿ: Raj Kundra: ತಕ್ಷಣವೇ ಬಿಡುಗಡೆ ಮಾಡಿ ಎಂದು ಮನವಿ ಸಲ್ಲಿಸಿದ್ದ ರಾಜ್ ಕುಂದ್ರಾ: ಜಾಮೀನು ಅರ್ಜಿ ತಿರಸ್ಕರಿದ ನ್ಯಾಯಾಲಯ
ಗೆದ್ದವರಿಗೆ 53 ಲಕ್ಷ, ಎರಡನೇ ಸ್ಥಾನದಲ್ಲಿರುವವರಿಗೆ 11 ಲಕ್ಷ, ಮೂರನೆಯವರಿಗೆ 6 ಲಕ್ಷ, ನಾಲ್ಕನೇ ಸ್ಥಾನಕ್ಕೆ 3.5 ಲಕ್ಷ ಹಾಗೂ 5ನೇ ಸ್ಥಾನಕ್ಕೆ 2.5 ಲಕ್ಷ ಬಹುಮಾನ ಸಿಗಲಿದೆ ಎಂದು ಸುದೀಪ್ ಪ್ರಕಟಿಸಿದ್ದಾರೆ. ಹೀಗಾಗಿ ಸೋತವರು ಬೇಸರದಿಂದ ಖಾಲಿ ಕೈಯಲ್ಲಿ ಹೊರ ಹೋಗುವುದಿಲ್ಲ.
ಇದನ್ನೂ ಓದಿ: Kichcha Sudeep- Mahesh Babu: ಹೊಸ ಪ್ರಾಜೆಕ್ಟ್ಗಾಗಿ ಒಂದಾದ ಕಿಚ್ಚ ಸುದೀಪ್-ಮಹೇಶ್ ಬಾಬು
ಇನ್ನು ಬಿಗ್ ಬಾಸ್ ಮನೆಯಲ್ಲಿರುವ ಮಂದಿಗೆ ರಿಯಾಲಿಟಿ ಟಿವಿ ಮೂಲಕ ಹೊರ ಜಗತ್ತಿನಲ್ಲಿ ಆದ ಬೆಳವಣಿಗೆಗಳ ಬಗ್ಗೆ ತಿಳಿಸಲಾಯಿತು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ಲಕ್ಷಣದ ಪ್ರಚಾರದ ಜೊತೆಗೆ ಸ್ಪರ್ಧಿಗಳಿಗೆ ಸುದ್ದಿ ಮುಟ್ಟಿಸುವ ಕೆಲಸ ಮಾಡಲಾಯಿತು. ಮೊದಲಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾದ ಸುದ್ದಿ ಕೊಡಲಾಯಿತು. ನಂತರ ಪಿಯುಸಿ ಫಲಿತಾಂಶ, ಮಾಜಿ ಸಂಸದ ಜಿ ಮಾದೇಗೌಡ ಅವರ ನಿಧನ ಹಾಗೂ ಹಿರಿಯ ಜಯಂತಿ ಅಗಲಿಕೆಯ ಬಗ್ಗೆ ತಿಳಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ